ಕನ್ನಡ ಸುಭಾಷಿತಗಳು.

೧.ಕಾಣಬಾರದೆಂದು ಕಣ್ಣನ್ನು ಮುಚ್ಚಿಕೊಳ್ಳಬಹುದು.
ಆದರೆ ನೆನಪಾಗಬಾರದೆಂದು ಮನಸ್ಸನ್ನು ಮುಚ್ಚಿಕೊಳ್ಳಲು
ಸಾಧ್ಯವಿಲ್ಲ.
೨. ಅನಿಸಿದ್ದನ್ನೆಲ್ಲ ಆಡುವುದು ಅನವಶ್ಯಕ ತೊಂದರೆಗಳಿಗೆ
ಆಹ್ವಾನ.
೩. ಅತಿಯಾದರೆ ಅಮೃತವೂ ವಿಷ ಅನ್ನೋ ಮಾತು ನಿಜ
ಅನ್ನಿಸೋದು ಯಾವಾಗ ಅಂದ್ರೆ ಅತಿಯಾದ ಒಳ್ಳೆಯತನವೇ
ನಮಗೆ ಕುತ್ತಾದಾಗ.
೪. ಗುಡಿಸಿದರೆ ಕಸವಿರಬಾರದು. ಬಡಿಸಿದರೆ ಹಸಿವಿರಬಾರದು.
ಪ್ರೀತಿ ಮಾಡಿದರೆ ಮೋಸವಿರಬಾರದು. ಸ್ನೇಹ ಮಾಡಿದರೆ
ಜೀವ ಇರೋವರೆಗೂ ಬಿಡಬಾರದು.
೫. ಮನಕೆ ನೋವಾಗಿದೆ ಎಂದು ಇಂದೇ ಕಣ್ಣೀರು ಖಾಲಿಮಾಡಿದರೆ
ಮುಂದೊಂದು ದಿನ ಬರುವ ಆನಂದ ಬಾಷ್ಪಕ್ಕೆ ನೀರೆಲ್ಲಿ?
೬. ಸಮುದ್ರವು ತನ್ನ ಒಡಲಲ್ಲಿ ಅಮೂಲ್ಯವಾದ ಮುತ್ತು, ರತ್ನಗಳನ್ನು
ಹುದುಗಿಸಿಕೊಳ್ಳುತ್ತದೆ. ಕೆಲಸಕ್ಕೆ ಬಾರದ ಕಪ್ಪೆ ಚಿಪ್ಪುಗಳನ್ನು ದಡಕ್ಕೆ
ಎಸೆಯುತ್ತದೆ. ನಾವು ಒಳ್ಳೆಯ ಚಿಂತನೆಗಳನ್ನು ಮಾತ್ರ ನಮ್ಮೊಳಗೆ
ಪೋಷಿಸಿಕೊಳ್ಳಬೇಕು. ಕೆಟ್ಟ ಚಿಂತೆಗಳನ್ನು ದೂರ ಮಾಡಬೇಕು.
೭. ಸಿಹಿನೀರಿನ ಕೊಳ ಮೌನವಾಗಿರುತ್ತದೆ. ಉಪ್ಪುನೀರಿನ ಸಮುದ್ರ
ಗರ್ಜಿಸುತ್ತದೆ. ಅಜ್ಞಾನಿ ಹರಟೆ ಹೊಡೆಯುತ್ತಾನೆ. ಜ್ಞಾನಿ ಮೌನವಾಗಿರುತ್ತಾನೆ.
೮. ಮರಳಿನ ಮೇಲೆ ಮೂಡುವ ಹೆಜ್ಜೆ ಗುರುತುಗಳನ್ನು ಅಳಿಸಬಹುದು.
ಆದರೆ ಮನಸ್ಸಿನ ಮೇಲೆ ಮೂಡಿರುವ ನೆನಪುಗಳ ಗುರುತನ್ನು
ಅಳಿಸುವುದು ಕಷ್ಟ.
೯. ಕಳೆದು ಹೋದ ವ್ಯಕ್ತಿಯನ್ನು ಹುಡುಕಬಹುದು. ಆದರೆ ಬದಲಾದ
ವ್ಯಕ್ತಿಯಲ್ಲಿ ಲುಪ್ತವಾಗಿ ಹೋದ ವ್ಯಕ್ತಿಯನ್ನು ಹುಡುಕುವುದು ಕಷ್ಟಸಾಧ್ಯ.
೧೦. ಈ ಪ್ರೀತಿಯ ಖುಷಿ ಅಂಗೈ ಮೇಲಿನ ಮದರಂಗಿ ತರ ಹೆಚ್ಚು ದಿನ
ಉಳಿಯೋದಿಲ್ಲ…. !ಆದರೆ ಸಿಗೋ ನೋವು ಮಾತ್ರ ಮೈ ಮೇಲಿನ ಮಚ್ಛೆ
ತರ ಎಷ್ಟೇ ಅಳಿಸಿದರೂ ಹೋಗೋಲ್ಲ.
ಮೂಲ :Face Book Quotes.

Advertisements

Face Book Quotes.

 1. Respect the old, when you are young;Help the weak, when you are strong; Confess the fault, when you are wrong; because, one day in life you will be old, weak and wrong.
 2. God said:Don’t look around, you will be impressed;Don’t look down, you will be depressed;Just look at me, you will be blessed.
 3. Shiva is Beside me;Before me;Behind me;Within me;Above me.
 4. Minimum requirements and maximum adjustments are the two wonderful steps for happy and successful life.
 5. Accept both compliments and criticism.It takes both sun and rain for a flower to grow.
 6. People reveal themselves through their actions.
 7. Whatever happens, do not lose hold of the two main ropes of life–hope and faith.
 8. A fool is known by his speech and a wise man by his silence.–Pythagoras.
 9. The most painful tears are not the ones that fall from your eyes and cover your face. They’re the ones that fall from your heart and cover your soul.
 10. Honesty needs no disguise or ornament; be plain.
 11. Relationship with a nice person is like a sugarcane; you break it, crush it, squeeze it, even beat or grind it; still you will  get only sweetness.
 12. When you go in search of honey, you must expect to be stung by bees.
 13. Knowledge when stored is vain; when shared is gain.
 14. The best dreams happen when you’re awake.
 15. If God moves you from January to December, He will move you from shame to fame,insult to result, sorrow to glory, disgrace to His grace, labour to favour, mockery to victory.

Daily Prayer.

1.Om Namah Shivay—Monday.

2.Om Durgayai Namah and Subrahmanya Swamiye Namah–Tuesday.

3.Om Gan Ganapataye Namaha and Om Namo Bhagavate Vasudevaya–Wednesday.

4.Om Shri Dattatreyaya Namah-Thursday.

5.Om Shri Maha Lakshmye Namaha–Friday.

6.Om Namo Bhagavate Anjaneyaya Namaha and Om Namo Venkateshaaya and

Om Shan Shanaishcharaya Namaha.—Saturday.

7.Aum Adityaya Namaha—-Sunday.

Source-Collection.

Do You Know?

1.According to Government of India, there are 247 total islands of India officially.204 islands in Bay of Bengal and 43 in Arabian sea.

2.Planets—————————————————Gems.(corresponding astrological gemstone)

Sun———————————————————–Ruby.

Moon——————————————————–Pearl.

Mercury—————————————————Emerald.

Mars——————————————————–Red Coral.

Venus——————————————————Diamond.

Saturn—————————————————-Blue sapphire.

Jupiter—————————————————Yellow sapphire.

Rahu——————————————————Hessonite.

Ketu——————————————————Cat’s Eye.

3.There is only one temple dedicated  to Lord Brahma-the Pushkar temple in Rajasthan.

4.Archaeopteryx is the earliest known bird. Discovered in  1860 in Germany, it’s sometimes referred to as Urvogel, the  German word for original bird or first bird.

5.Birbal’s name was Mahesh Das Bhatt(B:1582). Akbar gave him the name ”Raja Birbal”He was a poet and singer in the court of Akbar.

6.Chanakya (350-275 BCE)was a Sharma Brahmin from modern day Patna. Kautilya and Vishnu Gupta are his other names. He was the Prime Minister of Chandra Gupta, the first ruler of Mauryan Empire.He wrote ”Artha Shastra”, a treatise on Economics with the pen name of Kautilya.

7.Baisakhi-Punjab New Year.–April  14.

Ugadi/Bisu Parba—Tulu New Year.–April 14.

Vishu—-Malayali New Year.–April 14.

Cheiraoba–Manipur New  Year.April 8.

Puthandu–Tamil New Year.—April 14.

Bohag Bihu-Assamese New Year.April 15.

Pohela Boishakh—Bengali New Year.–April 15.

Source:Collection.

ಶಿವನಾಮ ಸ್ಮರಣೆ.

ಹರನಂ ಶಂಕರನಂ ಶಶಾಂಕ ಧರನಂ
ಕಾಪಾಲಿಯಂ ಕಾಲಸಂ ಹರನಂ
ಶೂಲಿಯನೀಶನಂ ಗಿರೀಶನಂ
ಭಾಳಾಕ್ಷನಂ ನೀಲಿಕಂ ಧರನಂ
ಭರ್ಗನನುಗ್ರನಂ ಪರಮಾನಂ

ಸರ್ವಜ್ಞನಂ ಶಂಭುವಂ
ಗಿರಿಜಾವಲ್ಲಭನಂ ಮನೋಜಹರನಂ
ಕಂಡೆ೦ ವಿರೂಪಾಕ್ಷನಂ.
ಮೂಲ :ಕವಿ ಹರಿಹರನ ಶತಕ ಕಾವ್ಯ-ವಿರೂಪಾಕ್ಷ.

ಕನ್ನಡ ನುಡಿಗಟ್ಟುಗಳು ಮತ್ತು ಗಾದೆಗಳು.

ಒಮ್ಮೆ ಮಾಡಿದರೆ ಪ್ರಮಾದ;ಮತ್ತೆ ಮತ್ತೆ ಮಾಡಿದರೆ ಅಪರಾಧ.
೨. ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುದೇ ?
೩. ಧರ್ಮ ಪಾಲಕರಾಗಿ; ಧರ್ಮ ದ್ವೇಷಿಗಳಲ್ಲ.
೪. ಕಥೆಗಳು ಕಬ್ಬಿಣದ ಕಡಲೆಗಳಾಗದೆ ಬೆಲ್ಲದ ಅಚ್ಚಿನಂತಿರ ಬೇಕು.
೫. ನೆನಪು ಮಸ್ತಕದಲ್ಲಿ ;ಲೆಕ್ಕ ಪುಸ್ತಕದಲ್ಲಿ.
೬.ವಾಮನನಾದವನು ವಿರಾಟನಾಗಬೇಕಾದರೆ ಆತ್ಮ ದರ್ಶನದ
ಆಧ್ಯಾತ್ಮಿಕ ವಿದ್ಯೆ ಬೇಕು.
೭. ದೀಪ ಆರಿತೆಂದು ಹಣತೆಯನ್ನು ಎಸೆಯುತ್ತಾರೆಯೇ ?
ಹೂವು ಬಾಡಿತೆಂದು ಗಿಡವನ್ನು ಕಿತ್ತು ಹಾಕುತ್ತಾರೆಯೇ ?
೮. ಮಾತು ಬಿಟ್ಟಾಗ ಮೌನವೇ ಆಸರೆ; ಆದರೆ ಮನಸ್ಸು ಕೆಟ್ಟಾಗ
ನೆನಪುಗಳೇ ಆಸರೆ.
೯. ಮಾತಿಗಿದ್ದರೆ ತೂಕ ಅದೇ ರಸಪಾಕ.
೧೦. ಪುಸ್ತಕಂ ಹಸ್ತ ಭೂಷಣಂ.
೧೧. ಭಕ್ತಿಯ ಅಭಿವ್ಯಕ್ತಿಯೇ ಪ್ರಾರ್ಥನೆ.
೧೨. ಸೂರ್ಯನಂತೆ ನೀವು ಬೆಳಗಬೇಕಾದರೆ, ಮೊದಲು
ಸೂರ್ಯನಂತೆ ಉರಿಯಬೇಕು.
ಮೂಲ:ಸಂಗ್ರಹ.

ಭೂಮಿಯ ವಿವಿಧ ಹೆಸರುಗಳು.

ಧರಣಿ, ಅವನಿ, ಇಳಾ, ಪೃಥ್ವಿ ,ಕ್ಷಿತಿ, ಭೂಮಿ,
ಧರಿತ್ರಿ,ಸ್ಥಿರಾ, ಧರಾ,ವಸುಧಾ, ಮಹಿ,ಧರಣಿ,
ಮೇದಿನಿ,ಉರ್ವಿ, ಕ್ಷಮಾ, ಜಗತೀ , ವಿಶ್ವ ಧಾರಿಣಿ,
ವಸುಂಧರಾ,ವಸುಮತಿ,ಧಾತ್ರಿ, ಭೂ ಮಂಡಲ,
ಭೂಗೋಲ, ಭೂಲೋಕ,ವಿಶ್ವ೦ಭರ,ಧಾರಯಿತ್ರಿ,
ರಸಾ, ಗೌ,ಅಚಲಾ,ಅನಂತಾ, ಮರ್ತ್ಯ,ಕಾಶ್ಯಪಿ,
ರತ್ನ ಗರ್ಭಾ,ಸರ್ವಂ ಸಹಾ, ಸಂಸಾರಃ, ಸಮುದ್ರ ವಸನೆ,
ಇಲಾ ಗೋಲಂ,ವಿಶ್ವ ಗಂಧಾ, ನೃತೂ , ಗಿರಿ ಕರ್ಣಿಕಾ,
ಭುವನಂ, ನರಾಧಾರ,ದೈತ್ಯಮೇದಜ, ಗೋತ್ರ.
ಮೂಲ:ಸಂಗ್ರಹ.