ಪ್ರಾಣಿ ಪ್ರಪಂಚ.

೧. Kiwi(national bird of New Zealand) ಎಂಬ ಹಕ್ಕಿ ಗಳಿಗೆ ಕಣ್ಣು ಕಾಣಿಸದ್ದರಿಂದ ವಾಸನೆಯಿಂದಲೇ ದೈನಂದಿನ ಕಾರ್ಯ ನಿರ್ವಹಿಸುತ್ತವೆ.
೨. ಸೊಳ್ಳೆಗಳಿಗೆ ಒಟ್ಟು ೪೭ ಹಲ್ಲುಗಳಿರುತ್ತವೆ.ಉಳಿದ ಬಣ್ಣಗಳಿಗಿಂತ ನೀಲಿ ಬಣ್ಣಕ್ಕೆ ಅವು ಹೆಚ್ಚು ಆಕರ್ಷಿತವಾಗುತ್ತವೆ.
೩.Blue Whale ನ ನಾಲಗೆಯ ತೂಕ ಆನೆಯ ತೂಕಕ್ಕಿಂತಲೂ ಅಧಿಕವಾಗಿರುತ್ತದೆ.
೪. ಚಿರತೆ ಗಂಟೆಗೆ ೭೦ ಮೈಲಿಗಳಷ್ಟುವೇಗದಲ್ಲಿ ಓಡುತ್ತದೆ.
೫. Electric ಈಲ್ /ವಿದ್ಯುತ್ ಮೀನು /ಹಾವು ಮೀನು ೬೫೦ vault ವರೆಗೆ ಶಾಕ್ ಉತ್ಪತ್ತಿ ಮಾಡಬಲ್ಲವು.
೬. ನವಜಾತ Kangaroo ಒಂದು ಇಂಚು ಉದ್ದವಿರುತ್ತದೆ.
೭. Grey Hound /ಬೇಟೆ ನಾಯಿಗಳು ೨೭ ಅಡಿ ದೂರದಿಂದ jump ಮಾಡ ಬಲ್ಲವು.
೮. ಯಾಕ್ ಪ್ರಾಣಿಯ ಹಾಲಿನ ಬಣ್ಣ ಗುಲಾಬಿ.
೯. ಹಿಮ ಸಾರಂಗದ ಹಾಲು ದನದ ಹಾಲಿಗಿಂತ ಹೆಚ್ಚಿನ ಕೊಬ್ಬಿನಾಂಶ ಹೊಂದಿರುತ್ತದೆ.
೧೦. ಆನೆಗಳು ೩ ಮೈಲು ದೂರದಿಂದಲೇ ನೀರಿನ ಪರಿಮಳವನ್ನು ಗ್ರಹಿಸ ಬಲ್ಲದು.
೧೧.ಡಾಲ್ಫಿನ್ ಗಳು ನಿದ್ರಿಸುವಾಗಲೂ ಒಂದು ಕಣ್ಣನ್ನು ತೆರೆದಿರುತ್ತವೆ.
೧೨. ಜಿಂಕೆಗಳಲ್ಲಿ ೬೦ಕ್ಕೂ ಹೆಚ್ಚು ಪ್ರಭೇದ ಗಳಿವೆ. ಒಂದು ಜಾತಿಯ ಜಿಂಕೆ –ಕಸ್ತೂರಿ ಮೃಗ.
ಸದಾ ಏಕಾಂತದಲ್ಲಿರುವ ಒಂದು ಚಿಕ್ಕ ಪ್ರಾಣಿ. ಗಂಡು ಕಸ್ತೂರಿ ಮೃಗದ ಕಿಬ್ಬೊಟ್ಟೆಯ ತ್ವಚೆಯೊಳಗೆ
ಒಂದು ಚೀಲವಿರುತ್ತದೆ. ಈ ಚೀಲದಲ್ಲಿ ಕಸ್ತೂರಿ ಉತ್ಪತ್ತಿಯಾಗುತ್ತಿರುತ್ತದೆ.ಕಸ್ತೂರಿಯನ್ನು
ಸಾಬೂನು ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಸ್ತೂರಿ ಮೃಗಕ್ಕೆ
ಕವಲೊಡೆದ ಕೊಂಬುಗಳಿರುವುದಿಲ್ಲ. ಸೈಬೀರಿಯಾದಿಂದ ಹಿಮಾಲಯದ ವರೆಗಿರುವ
ಪರ್ವತ ಪ್ರದೇಶಗಳಲ್ಲಿ ಇವು ಕಂಡು ಬರುತ್ತವೆ.
೧೩. Ostrich ಪಕ್ಷಿಯ ಕಣ್ಣು ಅದರ ಮೆದುಳಿಗಿಂತ ದೊಡ್ಡದಾಗಿರುತ್ತದೆ.
೧೪. Glassy Frog ನ ದೇಹದ ಪ್ರತಿಯೊಂದು ಭಾಗವೂ ಕಾಣಿಸುವಂಥ ನುಣುಪಾದ
ಚರ್ಮವನ್ನು ಹೊಂದಿದೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಇಂಥಹ ಕಪ್ಪೆಗಳನ್ನು
ನೋಡಬಹುದು. ವಿಶ್ವದಲ್ಲಿ ಸುಮಾರು ೨೫ಸಾವಿರ ಜಾತಿಗಳಿಗೆ ಸೇರಿದ ಕಪ್ಪೆಗಳಿವೆ.
೧೫. Lemming ಬೂದು ಬಣ್ಣದ ಇಲಿಯನ್ನು ಹೋಲುವ ಚಿಕ್ಕ ಪ್ರಾಣಿ. ಇವು ಪ್ರತಿ
೩-೪ ವರ್ಷಗಳ ಹೊತ್ತಿಗೆ ಒಟ್ಟಿಗೆ ಸಮುದ್ರದತ್ತ ಹೋಗಿ ನೀರಿಗೆ ಹಾರಿ ಸಾಮೂಹಿಕ
ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಹೆಣ್ಣು ಲೆಮಿಂಗ್ ವರ್ಷಕ್ಕೆ ಎರಡು ಸಲ ಮರಿಗಳನ್ನು
ಹಾಕುತ್ತದೆ. ೩-೪ವರ್ಷಗಳ ಹೊತ್ತಿಗೆ ಇವುಗಳ ಸಂಖ್ಯೆ ಮಿತಿ ಮೀರುತ್ತದೆ ಆಗ ಆಹಾರದ
ಕೊರತೆಯಾಗಿ ಬದುಕು ದುಸ್ತರವಾಗುತ್ತದೆ. ಅವು ಸಸ್ಯಗಳನ್ನು ತಿನ್ನುವುದರಿಂದ ಆ ಪ್ರದೇಶವೇ
ಬರಿದಾಗುತ್ತದೆ. ಹೀಗಾಗಿ ಅವು ಗುಂಪು ಗುಂಪಾಗಿ ವಲಸೆ ಹೋಗುತ್ತವೆ. ಕಡೆಯಲ್ಲಿ
ಸಮುದ್ರವನ್ನು ತಲುಪಿ ಅಲ್ಲಿ ನೀರಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತವೆ.
ಇವು ಉತ್ತರಾರ್ಧ ಗೋಳದ ಶೀತ ಪ್ರದೇಶದಲ್ಲಿ (Alaska,Canada,Norway,Sweden ಮುಂತಾದೆಡೆ)
ಕಂಡು ಬರುತ್ತವೆ.
ಮೂಲ :ಸಂಗ್ರಹ.

Advertisements

ಪ್ರಾಣಿ ಪ್ರಪಂಚ.

೧ ಹೆಚ್ಚು ಎತ್ತರಕ್ಕೆ ಹಾರಬಲ್ಲ ಪಕ್ಷಿ –ಹದ್ದು.
೨. ಕೋಗಿಲೆ -ತನ್ನ ಗೂಡನ್ನು ಕಟ್ಟುವುದಿಲ್ಲ.
೩. ಅತ್ಯಂತ ಚಿಕ್ಕ ಪಕ್ಷಿ -Humming Bird.
೪. ನವಿಲು -ಭಾರತದ ರಾಷ್ಟ್ರೀಯ ಪಕ್ಷಿ.
೫. ಮರ ಕುಟಿಗ -ವಿಶ್ವದ ಪ್ರಥಮ ಬಡಗಿ.
೬. ಭೂಮಿಯ ಮೇಲೆ ಕುದುರೆಗಿಂತ ವೇಗವಾಗಿ ಓಡ ಬಲ್ಲ ಪಕ್ಷಿ -ostrich.
೭. ಪಕ್ಷಿಗಳಲ್ಲಿ ಅತ್ಯಂತ ಬುದ್ಧಿವಂತ -ಗೂಬೆ.
೮. ಮನುಷ್ಯನ ಧ್ವನಿಯನ್ನು ಅನುಕರಿಸಬಲ್ಲ ೨ ಪಕ್ಷಿಗಳು –ಗಿಳಿ ಮತ್ತು ಮೈನಾ.
೯. ಅಮೆರಿಕಾದ ರಾಷ್ಟ್ರೀಯ ಲಾಂಛನದಲ್ಲಿರುವ ಪಕ್ಷಿ-ಹದ್ದು.
೧೦. ಬೆಂಕಿಯಲ್ಲಿ ತನ್ನನ್ನು ಸುಟ್ಟುಕೊಂಡು ಅದರ ಬೂದಿಯಿಂದಲೇ ಪುನಃ ಹುಟ್ಟಿ
ಬರುತ್ತದೆ ಎಂದು ನಂಬಲಾಗಿರುವ ಕಾಲ್ಪನಿಕ ಪಕ್ಷಿ –Pheonix.
೧೧. ಟಿಟ್ಟಿಭ ಎಂಬ ಪಕ್ಷಿ ಕೂಗಿದರೆ ಮರಣ ಸಂಭವಿಸುತ್ತದೆ ಎಂಬ ನಂಬಿಕೆ ಇದೆ.
೧೨. ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಲಾಂಛನದಲ್ಲಿರುವ ಕಾಲ್ಪನಿಕ ಪಕ್ಷಿ
–ಗಂಡ ಭೇರುಂಡ.
೧೩. ಮುತ್ತುಗಳನ್ನು ತಿನ್ನುತ್ತದೆ ಎಂದು ನಂಬಲಾಗಿರುವ ಪಕ್ಷಿ –ಹಂಸ.
೧೪. ರಾತ್ರಿಯ ಹೊತ್ತಿನಲ್ಲಿ ಒಂದನ್ನೊಂದು ಅಗಲುವ ಪಕ್ಷಿ –ಚಕ್ರವಾಕ.
೧೫.ಚಂದ್ರನನ್ನು ಪ್ರೀತಿಸುತ್ತದೆ ಎಂದು ಕವಿಗಳು ನಂಬಿರುವ ಪಕ್ಷಿ –ಚಕೋರ.
೧೬. ಶಕುನದ ಪಕ್ಷಿ ಎಂದು ಪರಿಗಣಿಸಲ್ಪಡುವ ಹಕ್ಕಿ -ನೀಲಕಂಠ.
೧೭. ಒಂಟಿ ಕಾಲಿನ ಮೇಲೆ ನಿಂತು ಕೊಂಡು ಕಣ್ಣು ಮುಚ್ಚಿಕೊಂಡು ತಪಸ್ವಿಗಳಂತೆ
ತಪಸ್ಸು ಮಾಡುವ ಪಕ್ಷಿ–ಕೊಕ್ಕರೆ.
೧೮. ಒಂದು ಕಾಲದಲ್ಲಿ ಲಿಖಿತ ಸಂದೇಶಗಳನ್ನು ಸಾಗಿಸಲು ಬಳಸುತ್ತಿದ್ದ ಪಕ್ಷಿ-ಪಾರಿವಾಳ.
೧೯. ಅರಸರು ಶಿಕಾರಿಗಾಗಿ ಬಳಸುತ್ತಿದ್ದ ಪಕ್ಷಿ –ಗಿಡುಗ.
೨೦. ಒಂದು ಕಾಲದಲ್ಲಿ ಭೂಮಿಯ ಮೇಲೆ ಜೀವಿಸಿದ್ದು ಈಗ ಸಂಪೂರ್ಣವಾಗಿ ವಿನಾಶ
ಹೊಂದಿರುವ ಪಕ್ಷಿ ಸಂಕುಲ –Dodo.

ಅರ್ಜುನನ ಹತ್ತು ಹೆಸರುಗಳು.

೧. ಧನಂಜಯ -ಭೂ ಮಂಡಲದ ದಿಗ್ವಿಜಯಕ್ಕಾಗಿ ಹೊರಟು ಅಪಾರ
ಐಶ್ವ್ಯರ್ಯ ಗಳನ್ನು ತಂದು ಯುಧಿಷ್ಠಿರನ ಖಜಾನೆಯನ್ನು ತುಂಬಿಸಿದ್ದನು.
೨. ವಿಜಯ -ಶತ್ರು ರಾಜರ ಜೊತೆಗೆ ಯುದ್ಧ ಮಾಡುವಾಗ ಎಂದಿಗೂ ಸೋತು
ಹಿಂದಿರುಗಿ ಬಂದಿದ್ದೇ ಇಲ್ಲ. ಈ ಕಾರಣಕ್ಕಾಗಿ ”ವಿಜಯ ” ಎಂಬ ಹೆಸರು ಸೇರಿ ಕೊಂಡಿತು.
೩.ಶ್ವೇತವಾಹನ –ರಥಕ್ಕೆ ಸ್ವರ್ಣಾಭರಣಗಳಿಂದ ಅಲಂಕೃತ ಗೊಂಡಿರುವ ಬಿಳಿಯ
ವರ್ಣದ ಕುದುರೆಗಳನ್ನೇ ರಥಕ್ಕೆ ಕಟ್ಟಲಾಗುತ್ತಿತ್ತು.
೪. ಫಲ್ಗುಣಿ-ಹಿಮಾಲಯದ ತಪ್ಪಲಿನಲ್ಲಿ ಹರಿವ ಫಲ್ಗುಣೀ ನದಿಯ ತೀರದಲ್ಲಿ ಹಗಲಿನ
ವೇಳೆ ಉತ್ತರಾ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದ್ದ ಕಾರಣದಿಂದ.
೫. ಕಿರೀಟಿ –ದೇವತೆಗಳ ಪರವಾಗಿ ದಾನವರ ವಿರುದ್ಧ ಯುದ್ಧ ಮಾಡಿದ್ದಕ್ಕಾಗಿ
ವಜ್ರಖಚಿತ ಸುವರ್ಣಮಯ ಕಿರೀಟವನ್ನು ದೇವೇಂದ್ರ ತೊಡಿಸಿದ್ದರಿಂದ.
೬. ವಿಭತ್ಸು –ಯುದ್ಧ ಧರ್ಮವನ್ನು , ನೀತಿಯನ್ನು ಮೀರಿ ಅನ್ಯಾಯ ಮಾರ್ಗದಲ್ಲಿ
ನಡೆಯದ ಕಾರಣ.
೭. ಸವ್ಯ ಸಾಚಿ –ಗಾಂಢೀವ ಧನುಸ್ಸನ್ನೆತ್ತಿ ಎರಡೂ ಕೈಗಳಿಂದ ಬಾಣ ಪ್ರಯೋಗ
ಮಾಡ ಬಲ್ಲವನಾದುದರಿಂದ.
೮. ಜಿಷ್ಣು –ಶತ್ರುಗಳು ಸನಿಹ ಬರಲು ಭಯ ಪಡುತ್ತಾರೆ. ಸದಾ ಕಾಲ ಗೆಲವು ಸಾಧಿಸುತ್ತಾನೆ
ಎಂಬುದರಿಂದ.
೯. ಪಾರ್ಥ –ಶತ್ರುಗಳ ವಿರುದ್ಧ ಸದಾ ಜಯಗಳಿಸುತ್ತಾನೆ ಎಂಬುದರಿಂದಾಗಿ.
೧೦. ಗುಡಾಕೇಶ–ಗುಡಾಕ ಎಂದರೆ ನಿದ್ರೆ. ನಿದ್ರೆಯ ಮೇಲೆ ಗೆಲುವು ಸಾಧಿಸಿದ್ದನೆಂಬುದರಿಂದಾಗಿ.
ಮೂಲ:ಸಂಗ್ರಹ.

Money.

Money can give you–

Bed-but not Sleep.

Books-but not Brains.

Cloth-but not Beauty.

Food-but not Appetite.

House-but not Home.

Luxuries-but not Happiness.

Medicine-but not Health.

Money can’t buy back your youth, when you’re old.

Things that money can’t buy–Time, Manners, Character, Integrity,Patience,Trust, Morals, Respect,Love, Inner Peace,Dignity, Common sense,Inspiring thinking. If you want to feel rich, count all the things you have, that money can’t buy.We should check up once in a while that we haven’t lost the things that money can’t buy.

If you want to improve your relationship with money,raise your prosperity consciousness and enjoy the fruits of your thoughts.

”Money is like an arm or a leg-use it or lose it.”-Henry Ford.

Source:Collection.

Collection of Quotes.

1.Let your smile change the world; but don’t let the world change your smile.

2.A bad mood is never an excuse to use cruel words. Never. Moods pass, but cruel words wound the soul.

3. Always pray to have eyes that see the best, a heart that forgives the worst and mind that forgets the bad and a soul that never looses faith.

4. I am in competition with no one. I have no desire to play the game of being better than anyone. I am simply trying to be better than the person I was yesterday.

5. Stop trying to make everybody happy.You aren’t chocolate.

6. Anyone in this world is neither born as our friend nor as enemy. Our act, attitude and approach makes them become either one—!

7. Life is an echo. What you send out, comes back. What you sow, you reap. What you give, you get. What you see in others exists in you. Remember, life is an echo. It always gets back to you.

8. Make time for people who make you feel extra special.

9. Life is too short to worry about what others say or think about you. So just enjoy life, have fun and give them something to talk about.

10.You are responsible for your own happiness.If you expect others to make you happy, you will always be disappointed.

11. Before going to sleep every night, forgive  everyone and sleep with a clean heart.

12. As you get older, you will start to understand more and more that in life, it’s not  about what you look like or what you own. It’s all about the person you’ve become.

13.Friendship isn’t about whom you’ve known the longest. It’s about who came and never left your side.

14. Before you assume, learn the facts. Before you judge, understand why. Before you hurt  someone, feel. Before you speak, think.

15. Sometimes you just have to stay silent because no words can explain what’s going on in your mind and heart.

16. Look at everything as though you were seeing it for either the first or last time……then your time on earth will be filled with glory.—–Betty Smith.

17. Don’t be afraid to change. You may lose something good but you may gain something better.

18. Worrying doesn’t take away tomorrow’s troubles.It takes away today’s peace.

19.Spending time with children is more important than spending money on children.

20. Death is not the greatest loss in life, the greatest loss is what dies inside us while we live.

Source:Collection.

ಭಾರತ —-ಗ್ರೀಸ್.

ನಮ್ಮ ದೇವತೆಗಳು ಹಿಮಾಲಯದ ಸ್ವರ್ಗದಲ್ಲಿದ್ದರೆ ಗ್ರೀಕರ ದೇವತೆಗಳು ಹಿಮಾಚ್ಚಾದಿತವಾದ ಒಲಿಂಪಸ್ ಎಂಬ ಬೆಟ್ಟದಲ್ಲಿರುತ್ತಾರೆ.
ಭಾರತ ದೇವತೆ ಗಳು —————————————————————ಗ್ರೀಕ್ ದೇವತೆಗಳು.
ಇಂದ್ರ Zeus.
ಇಂದ್ರಾಣಿ (wife of Zeus )———————————————————Hera.
ವರುಣ (God of the Sea)———————————————————Poseidon.
Athena (daughter of Zeus)—————————————————–ಮಹಾ ಸರಸ್ವತಿ.
ರತಿ (daughter of Zeus & Dione)————————————————Aphrodite.
ಅಗ್ನಿ(God of fire ) —————————————————————–Hephaestus.
ಮನ್ಮಥ (God of love)————————————————————-Eros.
Hellas /ಗ್ರೀಸ್ ಎಂಬುದು ಹಲವಾರು ದ್ವೀಪಗಳ ಸಮೂಹ. Athens —ಇಂದಿನ ರಾಜಧಾನಿ ಹಾಗೂ ಹಿಂದಿನ ರಾಜಕೀಯ ಕೇಂದ್ರವಾಗಿದ್ದ ನಗರ.
ಮೂಲ:ಸಂಗ್ರಹ.

ನಗೆ ಹನಿ

೧. ಪ್ರಶ್ನೆ:ಎಲ್ಲಾ ತತ್ತ್ವ ಜ್ಞಾನಿಗಳು ಜೀವನದಲ್ಲಿ ”ಮುಂದೆ ಬನ್ನಿ” ಅಂತ ಹೇಳಿದ್ರೆ ಬಸ್ ನಲ್ಲಿ ಕಂಡಕ್ಟರುಗಳು ”ಹಿಂದೆ ಹೋಗಿ ”ಅಂತಾರಲ್ಲ ?
ಉ : ಮುಂದಾಗಲಿ, ಹಿಂದಾಗಲಿ ತೊಂದರೆ ಇಲ್ಲ. ”ಮೇಲೆ ಹೋಗಿ” ಅನ್ನದಿದ್ದರಾಯಿತು.
೨. ಮಂಕ:ಅಪ್ಪ,ಒಂದು ವೇಳೆ ನಿಮ್ಮ ಪಕ್ಷದ ಯಾರಾದರೂ ಬೇರೆ ಪಕ್ಷಕ್ಕೆ ಸೇರಿದರೆ ಏನು ಹೇಳ್ತೀರಿ?
ರಾಜಕಾರಣಿ:ವಂಚನೆ.
ಮಂಕ:ಒಂದು ವೇಳೆ ಬೇರೆ ಪಕ್ಷದ ವ್ಯಕ್ತಿ ನಿಮ್ಮ ಪಕ್ಷಕ್ಕೆ ಸೇರಿಕೊಂಡರೆ ?
ರಾಜಕಾರಣಿ:ಮನಃ ಪರಿವರ್ತನೆ.
೩. ಪ್ರ :ಹಣ ಮರದಲ್ಲಿ ಬೆಳೆಯುವಂತಿದ್ದರೆ ?
ಉ:ಶಾಖಾ ವ್ಯವಸ್ಥಾಪಕ (Branch Manager)ಎನ್ನಿಸಿಕೊಳ್ಳಲು ಟೊಂಗೆಯ (Branch)ಮೇಲೆ ಕೂಡ್ರ ಬೇಕಾಗುತ್ತಿತ್ತು.
೪. ಪ್ರ:ಜಿಡ್ಡಿನ ಅಂಶ ಇಲ್ಲದಿದ್ದರೂ ಹೆಂಡವನ್ನೇಕೆ ”ಎಣ್ಣೆ”ಅಂತ ಕರೀತಾರೆ ?
ಉ:ಸೇವಿಸಿದವರನ್ನು ಜಾರಿಸುವ ಗುಣವಿರುವುದರಿಂದ, ಅದು ”ಎಣ್ಣೆ” ಅನಿಸಿಕೊಂಡಿದೆ.
೫. ಪ್ರಶ್ನೆ:ತಲೆ ಉಪಯೋಗಿಸದೆ ಮಾಡ ಬಹುದಾದ ದೊಡ್ಡ ಕೆಲಸವೇನಾದರೂ ಇದೆಯೇ ?
ಉ:ಬಂಡೆ ಒಡೆಯಲಿಕ್ಕೆ ತಲೆ ಉಪಯೋಗಿಸಬಾರದು.
೬. ಮಹಾಸಾಗರದಲ್ಲಿ ಒಂದು ಹಡಗು ಮುಳುಗುತ್ತಿತ್ತು. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಕೇಳಿದ:”ಇಲ್ಲಿಂದ ನೆಲ ಎಷ್ಟು ದೂರದಲ್ಲಿದೆ ?
ಇನ್ನೊಬ್ಬನೆಂದ:”ಮೂರು ಕಿಲೋಮೀಟರ್”. ಕೂಡಲೇ ಆ ವ್ಯಕ್ತಿ ಸಾಗರಕ್ಕೆ ಹಾರಿ ಮತ್ತೆ ಕೇಳಿದ :”ಯಾವ ದಿಕ್ಕಿಗೆ ?”
ಇನ್ನೊಬ್ಬ ಉತ್ತರಿಸಿದ:”ಕೆಳಕ್ಕೆ . ”
೭. ಪ್ರ :ತಿನ್ನಲಾಗದ jam ಯಾವುದು?
ಉ:Traffic jam.
ಮೂಲ:ಸಂಗ್ರಹ.