ನಗೆ ಹನಿ.

೧. ಭಿಕ್ಷುಕ:ಅಮ್ಮಾ ತಾಯೀ, ಹಸಿವು; ಭಿಕ್ಷೆ ಹಾಕಿ.
ಮಹಿಳೆ:ಅಡುಗೆ ಇನ್ನೂ ಆಗಿಲ್ಲ. ಸ್ವಲ್ಪ ಹೊತ್ತು ಬಿಟ್ಟು
ಬರ್ತೀಯಾ ?
ಭಿಕ್ಷುಕ :ನಿಮ್ಮ ಅಡುಗೆ ರೆಡಿ ಆಗ್ತಾ ಇದ್ದ ಹಾಗೆ ನಂಗೊಂದು
miss call ಕೊಡಿ . ಬರ್ತೀನಿ.
೨. ಹುಡುಗ:”ಒಡೆದ ಹೃದಯದಿಂದ ಪ್ರೀತಿಸಲೇ ? ಹೃದಯ
ಒಡೆಯುವವರೆಗೆ ಪ್ರೀತಿಸಲೇ ?
ಹುಡುಗಿ:ಹರಿದ ಚಪ್ಪಲಿಯಿಂದ ಬಾರಿಸಲೇ ?ಚಪ್ಪಲಿ
ಹರಿಯುವ ವರೆಗೆ ಬಾರಿಸಲೇ?
೩. ಪತ್ನಿ :ನಾನೊಂದು ವೇಳೆ ತಪ್ಪಿಸಿ ಕೊಂಡರೆ ನೀವೇನು
ಮಾಡುತ್ತೀರಿ?
ಪತಿ :ಪತ್ರಿಕೆಯಲ್ಲಿ ಮರುದಿನವೇ ಜಾಹೀರಾತು ಹಾಕ್ತೀನಿ.
ಪತ್ನಿ:ವಾಹ್, how sweet you —–ಅದ್ಸರಿ, ಏನೆಂದು ಹಾಕ್ತೀರಿ ?
ಪತಿ :ಎಲ್ಲೇ ಇರು. ಹೇಗೇ ಇರು , ನೀ ಅಲ್ಲೇ ಇರು.
೪. ಪ್ರೇಮಿ:ನಿನ್ನ ನೋಟ ಮಿಂಚಿನಂತೆ. ನಿನ್ನ ಮಾತು ಗುಡುಗಿನಂತೆ.
ನಿನ್ನ ಪ್ರೀತಿ ಮಳೆಯಂತೆ. ನಿನ್ನ ನೆನಪು ಸ್ವಾತಿಯ ಹನಿಯಂತೆ.
ನಿನ್ನ ವಿರಹದ ಛಾಯೆ ದಟ್ಟೈಸಿದ ಕಾರ್ಮೋಡದಂತೆ. ..
ಪ್ರಿಯತಮೆ:Stupid,ಇದೇನು love letter ಅಥವಾ ಹವಾಮಾನ ವರದಿಯಾ ?
೫. Doctor :ನಿಮ್ಮ ಮೂರು ಹಲ್ಲು ಕೂಡಾ ಒಮ್ಮೆಲೇ
ಹೇಗೆ ಹೋಯಿತು ?
ಗುಂಡ:ನನ್ನ ಹೆಂಡತಿ ಮಾಡಿದ ಮೈಸೂರು ಪಾಕ್ ತಿಂದ ಕಾರಣ.
Doctor :ತಿನ್ನೋದಿಲ್ಲ ಅಂತ ಹೇಳ್ಬೇಕಾಗಿತ್ತು.
ಗುಂಡ :ತಿಂದು ”ಚೆನ್ನಾಗಿಲ್ಲ ” ಅಂದಿದ್ದಕ್ಕೆ ಮೂರು ಹಲ್ಲು ಹೋಯಿತು.
ತಿನ್ನೋದಿಲ್ಲ ಅಂತಿದ್ರೆ ಎಲ್ಲ ೩೨ ಹಲ್ಲು ಕೂಡ ಹೋಗ್ತಿತ್ತು.
೬.ಗುಂಡ :ನಾನು ಅಮೆರಿಕಾಕ್ಕೆ ಹೋಗಿ ಬರಬೇಕು ಎಂದು ಆಲೋಚನೆ
ಮಾಡ್ತಾ ಇದ್ದೇನೆ.
ತಿಮ್ಮ :ಹೌದಾ, ಎಷ್ಟು ಹಣ ಬೇಕು ಮಾರಾಯಾ… ಅಷ್ಟೊಂದು ಹಣ
ನಿನ್ನಲ್ಲಿದೆಯಾ ?
ಗುಂಡ ಯೋಚನೆ ಮಾಡೋಕೆ ಹಣ ಯಾಕೆ ಬೇಕು ಮಾರಾಯಾ?
೭.A : Do you want to hear a dirty joke ?
B:ಓ. ಕೆ.
A :A white horse fell in the mud.
೮. ೧೯೮೪ರ ಚುನಾವಣೆ ಸಂದರ್ಭದ ಘಟನೆ ಇದು. ಕೂಳೂರು ಎಂಬಲ್ಲಿ
ಬೃಹತ್ ಬ್ಯಾನರ್ ನಲ್ಲಿ ಓರ್ವ ಅಭ್ಯರ್ಥಿಯ ಪರ ಹೀಗೆ ಬರೆಯಲಾಗಿತ್ತು :
”ನಿಮ್ಮ ಅಮೂಲ್ಯವಾದ ಮತಗಳನ್ನು ….. ಅವರಿಗೇ ಕೊಡಿ ”.
ವಾರದೊಳಗೆ ಯಾರೋ ಈ ಬ್ಯಾನರ್ ನಲ್ಲಿದ್ದ ”ತ ”ಎಂಬ ಅಕ್ಷರವನ್ನು
ಅಳಿಸಿ ಹಾಕಿದ್ದರು.
ಮೂಲ:ಸಂಗ್ರಹ.

Advertisements

Do You Know ?

1.Honey is made by honey bees from flower nectar.

Bees sip the nectar from the blossoms and carry into

their hives. In the bees pouch, where nectar is stored,

the same is broken down by a process called inversion

into two simple sugars called fructose and glucose. After

the bees deposit the nectar in the hire, they allow most

of the water to evaporate and the liquid thickens.  Bees

also add enzymes which enhance the flavour. Honey can

be preserved for a long time due to the presence of sugar,

a natural preservative.

2.The slogan of vijaya Bank which has changed over the

years, reflects the customer centric attitude  of the Bank.

At the time of Silver Jubilee,-”The bank of your choice.”

At the time of Golden Jubilee,-”Your partner in progress.”

At the time of  Platinum Jubilee,-”A friend you can bank upon.”

3.There are 195 countries in the world today. 193 countries are

member states  of the United Nations and two countries are

non-member states: the Holy See and the State of Palestine.

4.Mughal ruler Shah Jahan built Red Fort at  Shahjahanabad

(in present day old Delhi). The construction of the Red Fort

by the sandstone of red colour in large scale, gave it the name

”Red Fort.” The construction took nearly a decade  to complete.

5. Propensity of raccoons to dip food in water has little to do

with washing it. It’s all about making their paws more

sensitive to touch.

Source:Collection.

ನಿಮಗೆ ಗೊತ್ತೇ ?

೧.2-77,232,917-1 ಎಂಬ ಸಂಖ್ಯೆ, ಇದುವರೆಗೆ ಗೊತ್ತಾಗಿರೋ
ಅತಿ ದೊಡ್ಡ Prime (ಅವಿಭಾಜ್ಯ)ಸಂಖ್ಯೆ. ಅಂದರೆ ಇದನ್ನು ಇದೇ ಸಂಖ್ಯೆ
ಮತ್ತು ಕೇವಲ ೧ರಿಂದ ಮಾತ್ರ ವಿಭಜಿಸಬಹುದು.
೨. ಭಾರತದ ಪ್ರಥಮ ಬಜೆಟನ್ನು ಓರ್ವ ತಮಿಳು ವಿತ್ತ ಸಚಿವ ಆರ್. ಕೆ.
ಷಣ್ಮುಗಂ ಚೆಟ್ಟಿ ಅವರು ೧೯೪೭ರ ನವೆಂಬರ್ ೨೬ ರಂದು ಮಂಡಿಸಿದ್ದರು.
೩. ಭಾರತದ ಮೊದಲ ಮಹಿಳಾ ಮುಖ್ಯ ಮಂತ್ರಿ –ಸುಚೇತಾ ಕೃಪಲಾನಿ.
೪. ಭಾರತದ ಮೊದಲ ಮಹಿಳಾ ವೈದ್ಯೆ –ಆನಂದಿ ಗೋಪಾಲನ್.
೫. ಭಾರತದ ಮೊದಲ ಮಹಿಳಾ ರಾಜ್ಯಪಾಲರು -ಸರೋಜಿನಿ ನಾಯ್ಡು.
೬. ವಿಶ್ವದ ಮೊದಲ ಮಹಿಳಾ ಪ್ರಧಾನಿ –ಸಿರಿಮಾವೋ ಭಂಡಾರ ನಾಯಕಿ.
೭. ಪ್ರಥಮ ಮಹಿಳಾ ಬಾಹ್ಯಾಕಾಶ ಯಾತ್ರಿ -ವಾಲೆಂಟಿನಾ ತೆರೆಸ್ಕೋವಾ.
೮. ಎವರೆಸ್ಟ್ ಏರಿದ ಮೊದಲ ಮಹಿಳೆ -ಜಂಕೋತಾಬೆ.
೯. ಮಹಿಳೆಯರಿಗಾಗಿಯೇ ಪ್ರಾರಂಭವಾದ ಮೊದಲ ಕನ್ನಡ ಪತ್ರಿಕೆ -ಸರಸ್ವತಿ.
೧೦. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ
ಮಹಿಳಾ ಅಧ್ಯಕ್ಷೆ -ಜಯದೇವಿ ತಾಯಿ ಲಿಗಾಡೆ.
೧೧. ಊರ್ವಶಿ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟಿ –ನಂದಿನಿ ಭಕ್ತ ವತ್ಸಲ.
೧೨. ಕರ್ನಾಟಕದ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿಯ
ಮೊದಲ ವಿಜೇತೆ -H.V.Savitramma.
೧೩. ಈ ಭೂಮಿಯನ್ನು ಸದಾ ಹಾಯುತ್ತಿರುವ Cosmic Rays ಬೆಳಕನ್ನೂ
ಮೀರಿಸುವ ವೇಗವನ್ನು ಹೊಂದಿವೆ. ಆಕಾಶ ಗಂಗೆಯ ನಿಗೂಢ ಸ್ಥಾನಗಳಿಂದ
ಈ ಕಿರಣಗಳು ಬರುತ್ತಿವೆ ಎಂಬುದನ್ನು ವಿಜ್ಞಾನಿಗಳು ಗಮನಿಸುತ್ತಿದ್ದಾರೆ.
೧೪. ೫,೦೦೦ಕ್ಕೂ ಮಿಕ್ಕಿದ ಭಾಷೆಗಳಿಗೆ ಲಿಪಿ ಇಲ್ಲ. ಬರೇ ೧೫೭ ಭಾಷೆಗಳು
ಲಿಪಿಗೆ ಬದ್ಧ.
೧೫. ನೀರಿನ ಮಥನದಿಂದ ಶಕ್ತಿ ಉತ್ಪಾದನೆಯಾಗುತ್ತದೆ ಎಂಬ ವಿಚಾರ
ಋಗ್ವೇದದಲ್ಲಿದೆ. ಗಾಳಿಯಿಂದಲೂ ನೀರಿನ ಉತ್ಪಾದನೆ ಸಾಧ್ಯ. Fridge ನಲ್ಲಿಟ್ಟ
Bottle ಒಂದನ್ನು ಮೇಜಿನ ಮೇಲಿರಿಸಿದಾಗ ಅದರ ಸುತ್ತಲೂ ಸೇರುವ
ನೀರಿನ ಹನಿಗಳಿಂದ ಅದು ತಿಳಿಯುತ್ತದೆ.
ಮೂಲ:ಸಂಗ್ರಹ.

ನಗೆ ಬುಗ್ಗೆ.

೧. ಗಂಡ:Hypnotism ಎಂದರೇನು?
ಹೆಂಡತಿ:ಇನ್ನೊಬ್ಬರನ್ನು ವಶೀಕರಣಮಾಡಿ ಅವರಿಂದ
ತಮಗೆ ಬೇಕಾದ ಕೆಲಸ ಮಾಡಿಸಿ ಕೊಳ್ಳುವುದು.
ಗಂಡ:ಅದು Hypnotism ಅಲ್ಲ, ಮದುವೆ ಕಣೆ!
೨. ಪ್ರಶ್ನೆ:ಸೈಕಲ್ ಓಡಿಸಿದರೆ ಬಡ ಸಂಚಾರಿ. ಬೈಕ್ ಓಡಿಸಿದರೆ?
ಉತ್ತರ :ಎಡ ಸಂಚಾರಿ.
೩. ಆತ:Pin ಚುಚ್ಚಿದ ಕೂಡಲೇ ರಕ್ತ ಯಾಕೆ ಬರುತ್ತದೆ ?
ಈತ:ಯಾಕೆಂದರೆ ಚುಚ್ಚಿದ್ದು ಯಾರು ಎಂದು ನೋಡೋದಿಕ್ಕೆ.
೪. ಗುಂಡ ಪರೀಕ್ಷೆ ಬರೆಯಲು ಕೂತ. ಅದರಲ್ಲಿ ಒಂದು ಪ್ರಶ್ನೆ
ಹೀಗಿತ್ತು:”challenge” ಗೆ ಒಂದು ಉದಾಹರಣೆ ಕೊಡಿ ”
ಪ್ರಶ್ನೆ ಓದಿದ ಗುಂಡ ಏನು ಮಾಡಿದ ಗೊತ್ತಾ? ಇಡೀ ಉತ್ತರ
ಪತ್ರಿಕೆ ಖಾಲಿ ಬಿಟ್ಟ. ಕೊನೆಗೆ ಬರೆದ-”ಧಮ್ ಇದ್ರೆ ನನ್ನನ್ನು
pass ಮಾಡು ನೋಡೋಣ ”.
೫. ಜಗವೇ ಒಂದು ನಾಟಕ ಶಾಲೆಯಾದರೆ ಪ್ರೇಕ್ಷಕರು
ಕೂರುವುದು ಎಲ್ಲಿ ?
೬. ಕಷ್ಟ ಪಟ್ಟು ಬೆವರು ಸುರಿಸಿದರೆ ಸಿಗೋದು?
–ದುರ್ಗಂಧ.
೭. ಪ್ರ . ಎಲ್ಲಾ ಓ.ಕೆ. ಲಂಚ ಯಾಕೆ ?
– ಉ:ಸರಕಾರದ ಕೆಲಸ ಎಂದರೆ ದೇವರ ಕೆಲಸ.
ಅದಕ್ಕಾಗಿಯೇ ದಕ್ಷಿಣೆ,ಪ್ರದಕ್ಷಿಣೆ.
೮. ಗುಂಡನಿಗೆ ರಾತ್ರಿ ಕನಸು ಬಿತ್ತು. ಯಾರೋ ಗುಂಡು ಹಾರಿಸಿ

ಕೊಲೆ ಮಾಡುವ ದೃಶ್ಯ ತೋರಿತು. ಮರುದಿನ ಬೆಳಗ್ಗೆ ಎದ್ದವನೇ
ಮೊದಲು ಮಾಡಿದ ಕೆಲಸವೆಂದರೆ ತನ್ನ ಬ್ಯಾಂಕ್ ಖಾತೆಯನ್ನು
close ಮಾಡಿದ್ದು. ಯಾಕೆ ಗೊತ್ತಾ ?ಆ bank ನ ಘೋಷ ವಾಕ್ಯ
ಹೀಗಿತ್ತು :”ನಿಮ್ಮ ಕನಸನ್ನು ನಾವು ನಿಜ ಗೊಳಿಸುತ್ತೇವೆ”.
೯. K.E.B. =ಕತ್ತಲೆ ಇರಲಿ ಬಿಡಿ.
೧೦. ಪ್ರ :ಮೆದುಳು ಓಡಿದರೂ ಕೈ ಕಾಲು ಓಡದ ಸ್ಥಿತಿಗೆ ಬಂದಿದ್ದಾನೆ
ಮಾನವ. ನಿಜವೇ ?
ಉ:Hard work ಅಂದರೆ ಈಗ Body (ಶರೀರ ಶ್ರಮ)ಗೆ ಅಲ್ಲ,Brain (ಮೆದುಳಿ)ಗೆ.
ಮೂಲ :ಸಂಗ್ರಹ.

ನಗೆ ಹನಿ

೧. ಎಷ್ಟು ಜನ ನಿಮ್ಮನ್ನೇ ಗಮನವಿಟ್ಟು ನೋಡುತ್ತಿದ್ದಾರೆ
ಎನ್ನುವುದು ನೀವು ಮಾಡುತ್ತಿರುವ ಕೆಲಸ ಎಷ್ಟು ಮೂರ್ಖತನದ್ದು
ಎನ್ನುವುದನ್ನು ಅವಲಂಬಿಸುತ್ತದೆ.
೨. ಅವಳಿಗೆ ಸಿಟ್ಟು ಬಂದು ಅವನ ಹೊಸ ಜುಬ್ಬ,ಪಾಯಿಜಾಮವನ್ನು
ಹೊರಕ್ಕೆಸೆದಳು. ಆಗ ಅವನು ಅದರೊಳಗೇ ಇದ್ದ.
೩. ತಮ್ಮ ನಿಜವಾದ ವಯಸ್ಸನ್ನು ಮರೆಮಾಚದೆ ಹೇಳುವ ಹೆಂಗಸರು
ಅಪರೂಪ. ಹಾಗೆಯೇ, ತಮ್ಮ ನಿಜವಾದ ವಯಸ್ಸಿಗೆ ತಕ್ಕಂತೆ ನಡೆದು
ಕೊಳ್ಳುವ ಗಂಡಸರೂ ಅಪರೂಪ.
೪.ಪ್ರ :ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಗಂಡೊಂದು
ಕಲಿತರೆ ?
ಉ:ಶಾಲೆಗೆ Headmaster.
೫.ಪ್ರ: ಹುಡುಗಿಯರಿಗೆ ಕೋಪ ಬೇಗ ಬರಲು ಕಾರಣವೇನು ?
ಉ:ರಮಿಸುವವರಿದ್ದರೆ ಹುಸಿ ಮುನಿಸು ಧಾರಾಳ.
೬. ಗುಂಡ ಸಿಕ್ಕಾಪಟ್ಟೆ ಕುಡಿದು ದೇಹದ ಸಮತೋಲನ ಕಳೆದುಕೊಂಡು

ರಸ್ತೆಯಲ್ಲಿ ಬಿದ್ದಿದ್ದ. ಗೆಳೆಯ ಬಂದು ಗುಂಡನನ್ನು ತಟ್ಟಿ ಎಬ್ಬಿಸಿದ.
”ಲೇ ಗುಂಡ, ಏಳೋ ರಸ್ತೆಯಲ್ಲಿ ಬಿದ್ದಿದ್ದೀಯಲ್ಲಾ .. ಬಸ್ ಬರುವ
ಹೊತ್ತಾಯಿತು. ಅದು ನಿನ್ನ ಮೇಲೆ ಹರಿದು ಹೋದೀತು. ಬೇಗ ಏಳು”
ಎಂದ. ಗುಂಡ:”ಅಯ್ಯೋ ಮಂಕೇ,… ಅಷ್ಟು ದೊಡ್ಡ ವಿಮಾನವೇ
ನನಗೇನೂ ಮಾಡದೆ ನನ್ನ ಮೇಲೆ ಹಾರಿ ಹೋಯಿತು. ಇನ್ನು ಇಷ್ಟು
ಸಣ್ಣ ಬಸ್ಸಿಗೆ ಕಾಣುವುದಿಲ್ವಾ ? ಬೇಕಾದರೆ ಅದೂ ಹಾರಿ ಹೋಗಲಿ ”.
೭. ದೇವರ ಲೀಲೆ -ತೆಂಗಿನ ಕಾಯಲ್ಲಿ ನೀರು ,
ವ್ಯಾಪಾರಿಯ ಲೀಲೆ -ಹಾಲಿನಲ್ಲಿ ನೀರು.
೮. Beetroot ತಿಂದರೆ ರಕ್ತ ಜಾಸ್ತಿಯಾಗುತ್ತೆ ಅಂತಾರಲ್ಲಾ ?ಹಾಗಾದರೆ
Beetroot ನ್ನೇ ದಾನ ಮಾಡಬಹುದು. ರಕ್ತದಾನದ ಅಗತ್ಯ ಏನಿದೆ ?
೯. ಹೆಂಡತಿಗೂ ಹೆಂಡಕ್ಕೂ ಇರುವ ವ್ಯತ್ಯಾಸ ಏನೆಂದರೆ ಹೆಂಡ ಕುಡಿದರೆ
ಅಮಲು ತಲೆಗೇರುತ್ತೆ. ಹೆಂಡತಿ ಕುಡಿದರೆ -ತಲೆಗೇರಿದ ಅಮಲು ಇಳಿಯುತ್ತೆ.
೧೦. ಬಿಳಿ ಸೀರೆ ಉಟ್ಟು ಕೊಂಡವರನ್ನು ”ಮೋಹಿನಿ”ಅನ್ನೋದಾದರೆ
ಬಿಳೀ ಟಿ -ಶರ್ಟ್ , ಪ್ಯಾಂಟ್ ಹಾಕಿ ಕೊಂಡವರನ್ನು ”ಮೋಹನ ”ಅನ್ನ ಬೇಕಾ ?
ಮೂಲ:ಸಂಗ್ರಹ.

ಕನ್ನಡ ಸೂಕ್ತಿ ಸಂಗ್ರಹ.

೧. ಹಟದ ಮಗುವನ್ನಾಳುವಂತೆ ಮನವನ್ನಾಳುವುದು ಕಷ್ಟ.
-ಡಿ. ವಿ. ಜಿ.
೨. ಹುಸಿ ನಗುತ ಬಂದೇವ, ನಸು ನಗುತ ಬಾಳೋಣ;
ತುಸು ನಗುತ ತೆರಳೋಣ.
–ಬೇಂದ್ರೆ.
೩. ಮಕ್ಕಳು ಅಂದರೆ ಗಿಡಗಳು. ಗಿಡಗಳನ್ನು ಬಗ್ಗಿಸ ಬಾರದು.
ಗಿಡವಾಗಿರುವಾಗ ಬಗ್ಗಿಸಿ ಬಿಟ್ಟರೆ ಮರವಾದ ಮೇಲೂ
ಬಗ್ಗಿಯೇ ಇರುತ್ತವೆ. ಅವು ಬಳ್ಳಿಗಳಲ್ಲ. ಅವಕ್ಕೆ ಹಬ್ಬುವುದಕ್ಕೆ
ಅಂತ ಕೋಲುಗಳನ್ನು ಒದಗಿಸಬಾರದು.
–ನಾ. ಕಸ್ತೂರಿ.
೪. ದೇವರು ಕೇವಲ ಗುಡಿಯ ಗರ್ಭದಲ್ಲಿ ಅಥವಾ ವಿಶ್ವ ಗರ್ಭದಲ್ಲಿ
ಮಾತ್ರ ನೆಲೆಸಿಲ್ಲ. ಮಾನವರ ಹೃದಯಗರ್ಭದಲ್ಲೂ ಕೂಡ ದೇವರು
ನೆಲೆಸಿದ್ದಾನೆ..
ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ-ರಾಮಚಂದ್ರಾಪುರ ಮಠ.
೫. ನಾವು ಯಾರನ್ನೂ ಸೋಲಿಸಲು ಯತ್ನಿಸಬಾರದು. ಅದು
ನಕಾರಾತ್ಮಕ ಧೋರಣೆ. ಅವರನ್ನು ಗೆಲ್ಲಲು ಯತ್ನಿಸಬೇಕು. ಅದು
ಸಕಾರಾತ್ಮಕ ಧೋರಣೆ.
೬. ನಾವು ಸರಿಯಾದ ಸಮಯದಲ್ಲಿ ಪಾಠ ಕಲಿಯದಿದ್ದರೆ ನಿಸರ್ಗವು
ತಪ್ಪು ಸಮಯದಲ್ಲಿ ನಮಗೆ ಪಾಠ ಕಲಿಸುತ್ತದೆ.
೭. ಮನುಕುಲದ ಚಿತ್ತ ವ್ಯಾಕುಲತೆ ನಿಗ್ರಹಿಸುವ ಸುಲಭ ಸಾಧನ -ದೇವರ
ನಾಮ ಸಂಕೀರ್ತನೆ. ರಕ್ತದೊತ್ತಡ ಕಾಯಿಲೆ ಶಮನವಾಗಲು ಭಜನೆ
ಹಾಡಬೇಕು . ಇಲ್ಲವೇ ಆಲಿಸಬೇಕು.
-ಅದಮಾರು ಶ್ರೀಪಾದರು.
೮.ನಾವು ದೇವರ ಆಕೃತಿಯನ್ನು ನೋಡಿದರೆ, ದೇವರು ನಮ್ಮ ಕೃತಿಯನ್ನು
ನೋಡುತ್ತಾನೆ.
–ಶ್ರೀ ವೀರೇಂದ್ರ ಹೆಗ್ಗಡೆ.
೯. ಮತ ವೈಯಕ್ತಿಕ, ಧರ್ಮ ಸಾರ್ವತ್ರಿಕ.– ಡಾ. ಸಿ. ಹೊಸಬೆಟ್ಟು.
೧೦.”ನಾನು ಸರಿ, ಇತರರು ನರಿ” ಎಂಬ ನಂಬುಗೆ ಅಹಂಭಾವದ್ದು.
ಮೂಲ:ಸಂಗ್ರಹ.

Fun with the words.

Words having double meaning.

1.Sound (noise)—-Sound(peace) eg: sound sleep means peacefully asleep.

2. Fast(swift)—–Fast(abstain from food)

3.Patient(having the capacity to endure.)—-Patient(sick person)

4.Fine(excellent)—-Fine(penalty imposed for an offence)

Words which differ in meaning and spelling but pronunciation

is the same.

1.Root–Route.

2.Floor–Flour.

3.Cast–Caste.

4.Ice—Eyes.

5.Break–Brake.

6. Heart–Hurt.

7.Story–Storey.

8.No—–Know.

9.Where—Wear,were.

10.Wise–Vice.

11.Two-To.

12.Discreet(prudent)—Discrete(distinct)

13.Bear–Bare.

14.Birth-Berth.

15.Buy–Bye.

16.Diary-Dairy.

17.Knot-Not.

Do you know?

S.R.=Yes Sir.

Fly=Family.

–Vani Hegde.