ಸ್ಥಳ ಪುರಾಣ.

೧. ಚಿಕ್ಕ ಮಗಳೂರು –‘ಕಿರಿಯ ಮುಗುಳು’ ಎಂಬ ಗಿಡ ಮೂಲಿಕೆಯಿಂದ
ಈ ಹೆಸರು ಬಂದಿದೆ. ‘ಕಿರಿ ಮುಗುಳು’ ಆ ಮೇಲೆ ‘ಚಿಕ್ಕಮುಗುಳು’ಆಯಿತು.
ಅನಂತರ ಚಿಕ್ಕ ಮಗಳೂರು ಆಯಿತು.
೨. ಬಾಬಾ ಬುಡಾನ್ ಗಿರಿ -ರಾಮಾಯಣದಲ್ಲಿ ಬರುವ ಸಂಜೀವಿನೀ
ಪರ್ವತ. ಹಿಮಾಲಯದ ವೃಷಭಗಿರಿ ಹತ್ತಿರವೂ ಸಂಜೀವಿನಿ ಪರ್ವತವಿದೆ.
ಮಾರುತಿ ಸಂಜೀವಿನಿ ಪರ್ವತವನ್ನು ತಿರುಗಿ ತಂದು ಇಡುವಾಗ ಬುಡ
ಮೇಲಾಗಿ ಇಟ್ಟು ಬಿಟ್ಟನು. ಆದುದರಿಂದಲೇ ಬಾಬಾಬುಡಾನ್ ಗಿರಿಯನ್ನು
”ಜಲ ಮೇಲು ಗಿರಿ ” ಎಂದು ಕರೆಯುತ್ತಾರೆ. ಗಿರಿಯ ಅಂತರ್ಭಾಗದಲ್ಲಿ
ದತ್ತಾತ್ರೇಯ ಗುರುವಿನ ಗುಹೆ ಇದೆ. ಗುಹೆಯ ಮೇಲ್ಚಾವಣಿಯಿಂದ
ಒಂದೇ ಸವನೆ ತೀರ್ಥದ ಹಾಗೆ ನೀರು ಹನಿಯುತ್ತದೆ. ಮಾರುತಿಯ
ಅವಸರ ಪ್ರವೃತ್ತಿಯಿಂದಾಗಿ ಭೂಮಿಯ ಒಳಗಿರುವ ಜಲ ಮೂಲ
ಗಳೆಲ್ಲಾ ಶಿಖರದ ತಲೆಯ ಮೇಲೆ ಬಂದು ಬಿಟ್ಟಿದೆ. ಅಷ್ಟಲ್ಲದೆ
”ಆತುರಗೆಟ್ಟ ಆಂಜನೇಯ”ಎಂಬ ರೂಢಿಯ ಮಾತು
ಬಳಕೆಯಲ್ಲಿ ಬಂದಿದೆಯೇ ? –ಡಾ. H.S. ವೆಂಕಟೇಶ್ವರ ಮೂರ್ತಿ.
೩. ರಾಮೇಶ್ವರದಲ್ಲಿ ರಾಮ ಪ್ರತಿಷ್ಠಾಪಿಸಿದ ಶಿವಲಿಂಗ ಇದೆ.
೪.ಪೂರ್ವಕ್ಕೆ ಇರೋದರಿಂದ ಜಪಾನ್ ಗೆ ಹೆಸರು -”ಉದಯ
ಸೂರ್ಯನ ನಾಡು. ”
೫. ಹೊಯ್ಸಳರ ರಾಜಧಾನಿ ದೋರ ಸಮುದ್ರದ ಇಂದಿನ ಹೆಸರು-
ಹಳೇಬೀಡು.
೬. ಭಾಗ್ಯನಗರ -ಭಾಗ್ಮತಿಗೆ ಒಲಿದ ಗೋಲ್ಕೊಂಡದ ಬಾದಷಾಹ
ಇಬ್ರಾಹಿಂಷಾನ ಮಗ, ಕುಲೀ ಕುತುಬ್ ಷಾ, ತನ್ನ ಪ್ರಿಯತಮೆಯನ್ನು
ಹೈದರಮಹಲ್ ಎಂದು ಹೆಸರಿಸಿ ಭಾಗ್ಯನಗರವನ್ನು ಹೈದರಾಬಾದ್
ಎಂದು ಕರೆದ. ಆಕೆಯ ನೆನಪಿನಲ್ಲಿ ಕುತುಬ್ ಷಾ ಗಜಲ್, ರುಬಾಯತ್,
ಖಸೀದ, ಮಸ್ನವೀ,ಮರ್ಸಿಹಾ ಮುಂತಾದ ಐವತ್ತುಸಾವಿರ ಕವಿತೆಗಳನ್ನು
ರಚಿಸಿದ್ದಾನೆ. ಈತನ ತಾಯಿ ಭಾಗೀರಥಿ.
೭. ಆಗ್ರಾದ ನಿರ್ಮಾಪಕ -ಸಿಕಂದರ್ ಲೋದಿ.
೮. ಕೇತಾಸ್ ಮಂದಿರ ಪಾಕಿಸ್ತಾನದಲ್ಲಿದೆ. ಶಿವನು ಪಾರ್ವತಿಯನ್ನು
ಕಳೆದುಕೊಂಡಾಗ, ಆತನ ಕಣ್ಣಿನಿಂದ ಬಿದ್ದ ಹನಿಗಳಿಂದ
ಎರಡು ಕೆರೆಗಳಾದವಂತೆ. ರಾಜಸ್ಥಾನದ ಪುಷ್ಕರದಲ್ಲಿ ಒಂದಾದರೆ
ಇನ್ನೊಂದು ಕೇತಾಸ್ (ಪಾಕಿಸ್ತಾನ)ನಲ್ಲಿದೆ. ಅಲ್ಲಿ ಭವ್ಯ ಶಿವದೇವಾಲಯ
ಕೂಡಾ ಇದೆ. ಇದೇ ಕೇತಾಸ್ ಕೆರೆಯ ದಡದಲ್ಲಿ ಯಮನು ಪಂಚ
ಪಾಂಡವರಿಗೆ ಯಕ್ಷ ಪ್ರಶ್ನೆಗಳನ್ನು ಹಾಕಿದ್ದನಂತೆ. ಆ ಕೆರೆಯ
ದಡದಲ್ಲಿಯೇ ನಾಲ್ವರು ಪಾಂಡವರೂ ಮೂರ್ಛೆ ಹೋಗಿದ್ದು,
ಯುಧಿಷ್ಠಿರ ತನ್ನ ಧೀರ ಉತ್ತರಗಳಿಂದ ತನ್ನ ಸಹೋದರರ
ಪ್ರಾಣ ಉಳಿಸಿದನಂತೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s