Face Book Quotes.

1.Distance doesn’t separate people…Silence does.

2.Some people hurt by words, some by action and some by

silence. But the biggest hurt is that someone ignoring us,

when we value them a  lot.

3.Adjustments with right  people is better than argument with

wrong people. A meaningful silence is always better than

meaningless  words.

4. Sitting alone and enjoying your own company is better than

being surrounded by fake people.

5. Smiling is the best way to face every problem, to crush every

fear and to hide every pain.

6. You are responsible for your own happiness.If you expect others

to make you happy, you will always be disappointed.

7. If you want to know someone’s mind, listen to their words.

If you want to know their heart, watch their actions.

8. Life is about balance. Be kind but don’t let people abuse you.

Trust but don’t be deceived. Be content but never stop

improving yourself.

9.Falling in love is easy but staying in love is very special.

10. Anger doesn’t solve anything. It builds nothing but it

can destroy everything.

11.A satisfied life is better than a successful life because

our success is measured by  others. But our satisfaction is

measured by  our own soul, mind and heart.

12. Three main rules in relationships: Don’t lie, don’t cheat

and don’t make promises you can’t keep.

13.PAINS=Positive Attitude In Negative Situation.

14.The tongue has no bones but is strong enough to break

a heart. So, be careful with your words.

15. For you to be happy, you must follow the F.A.C.T.S.

F–Forget the past.

A–Accept your mistakes.

C–Cry and move on.

T–Thank God.

S-Smile always.

Source:Collection.

Advertisements

ಧನ್ವಂತರಿ.

೧. ಈರುಳ್ಳಿ ರಸವನ್ನು ತಲೆಗೆ ಲೇಪಿಸಿದರೆ ತಲೆಯಲ್ಲಿರುವ
ಹೇನುಗಳು ಸಾಯುತ್ತವೆ.
೨. ಕರಿಬೇವಿನ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲಿಗೆ
ಹೊಳಪು ಬರುತ್ತದೆ.
೩. ಊಟದ ನಂತರ ಏಲಕ್ಕಿ ಸೇವಿಸಿದರೆ ಬಾಯಿಯ ದುರ್ಗಂಧ
ದೂರವಾಗುತ್ತದೆ.
೪. ಪಪಾಯಿ ಹಣ್ಣಿನ Face Pack ಮಾಡಿ ಮುಖಕ್ಕೆ ಹಚ್ಚಿದರೆ
ಮೊಡವೆಗಳು ಕಡಿಮೆಯಾಗುತ್ತವೆ.
೫. ಕೊತ್ತಂಬರಿ ಬೀಜ ಹಾಕಿ ಕುದಿಸಿದ ನೀರಿನಿಂದ ಬಾಯಿ
ಮುಕ್ಕಳಿಸಿದರೆ ಬಾಯಿ ಹುಣ್ಣು ವಾಸಿಯಾಗುತ್ತದೆ.
೬. ಪ್ರಯಾಣಕ್ಕಿಂತ ಮುಂಚೆ ಹಸಿ ಶುಂಠಿಯನ್ನು ಸೇವಿಸಿದರೆ
ವಾಂತಿಯನ್ನು ತಡೆಗಟ್ಟಬಹುದು.
೭. ಊಟದ ನಂತರ ಜೀರಿಗೆ ಸೇವಿಸಿದರೆ ಅಜೀರ್ಣ ಸಮಸ್ಯೆ
ಉಂಟಾಗುವುದಿಲ್ಲ.
೮. ಏಲಕ್ಕಿ, ಶುಂಠಿ, ಲವಂಗ ಮತ್ತು ಜೀರಿಗೆಯನ್ನು ಸಮ
ಪ್ರಮಾಣದಲ್ಲಿ ಬೆರೆಸಿ ಚೂರ್ಣಮಾಡಿ ಊಟದ ನಂತರ
ಸೇವಿಸಿದರೆ ಆಹಾರ ಜೀರ್ಣವಾಗುತ್ತದೆ.
೯. ಅರಸಿನ ಪುಡಿಗೆ ಜೇನು ತುಪ್ಪ ಬೆರೆಸಿ ಸೇವಿಸಿದರೆ ಕೆಮ್ಮು,
ಕಫ ನಿವಾರಣೆಯಾಗುತ್ತದೆ.
೧೦. Tomato ರಸದಲ್ಲಿ ಕೊಬ್ಬರಿ ಎಣ್ಣೆ ಬೆರೆಸಿ ಹಚ್ಚಿದರೆ
ತುರಿಕೆ ಗುಣವಾಗುತ್ತದೆ.
೧೧.ತೆಂಗಿನ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ
ಕಾಂತಿಯುತ ವಾಗುತ್ತದೆ.
೧೨. ಕಾಲು ಉಳುಕಿ ಊದಿಕೊಂಡಿದ್ದರೆ ನಿಂಬೆ ಎಲೆಯನ್ನು
ಬೆಣ್ಣೆಯೊಂದಿಗೆ ಅರೆದು ಲೇಪಿಸಬೇಕು.
೧೩. ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ನಿಧಾನವಾಗಿ
ರಸ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
೧೪. ಗೆಣಸಿನಲ್ಲಿರುವ ನಾರಿನಂಶವು ಜೀರ್ಣ ಕ್ರಿಯೆಯನ್ನು
ಸರಾಗ ಗೊಳಿಸುತ್ತದೆ.
೧೫. ಬಾದಾಮಿ ಸೇವನೆಯಿಂದ ಮೂಳೆ ಮತ್ತು ಹಲ್ಲುಗಳು
ಗಟ್ಟಿಯಾಗುತ್ತವೆ.
೧೬. ಗಾಯದ ಮೇಲೆ ಅರಸಿನ ಪುಡಿ ಹಾಕಿದರೆ ರಕ್ತ ಸ್ರಾವ
ತಕ್ಷಣ ನಿಲ್ಲುತ್ತದೆ.
೧೭. ಆಲೂಗಡ್ಡೆಯ ಸಿಪ್ಪೆ ತೆಗೆಯದೇ ಅಡುಗೆಗೆ ಉಪಯೋಗಿಸಿದರೆ
ದೇಹಕ್ಕೆ ಬೇಕಾದ ಖನಿಜಾಂಶಗಳು ದೊರೆಯುತ್ತವೆ.
೧೮. ನಿಂಬೆರಸ ಮತ್ತು ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ
ಚರ್ಮ ಕಾಂತಿಯುತವಾಗುತ್ತದೆ.
೧೯. ಅನಿಮೀಯಾ(Anaemia)ದಿಂದ ಬಳಲುತ್ತಿರುವವರು ಪ್ರತಿದಿನ ಬೆಳಗ್ಗೆ
ಒಂದು ಲೋಟ beetroot juice ಸೇವಿಸಬೇಕು.
೨೦. cherry ಹಣ್ಣಿನ ಸೇವನೆಯಿಂದ Alzheimer’s ಕಾಯಿಲೆಯನ್ನು
ದೂರವಿಡಬಹುದು.
ಮೂಲ :ಸಂಗ್ರಹ.

ಕನ್ನಡ ಸೌರಭ.

ನಗು
ನಗುವಿಗೆ ಹಣ ನೀಡ ಬೇಕಿಲ್ಲ.
ಕೊಟ್ಟಷ್ಟು ಖಾಲಿ ಆಗುವುದಿಲ್ಲ.
ನಗು ಸಾಮಾಜಿಕ ಆಸ್ತಿ .
ಕೆಟ್ಟ ನಗು ವ್ಯಕ್ತಿಯ ಭವಿಷ್ಯವನ್ನೇ ಹಾಳು ಮಾಡುತ್ತದೆ.
ಮಂದಹಾಸ, ಅಟ್ಟಹಾಸ,ಮೊನಾಲಿಸಾ ನಗು (ನಿಗೂಢ ನಗು )
ವಿಕೃತ ನಗು, ವಿಕಟಾಟ್ಟಹಾಸ, ವ್ಯಂಗ್ಯ ನಗು, ಹುಚ್ಚು ನಗು ,
ಚುಚ್ಚುನಗು ಹೀಗೆ ನಗುವಿನಲ್ಲೂ ಎಷ್ಟೊಂದು ವಿಧಗಳಿವೆ !
೨. ನಮ್ಮ ಭಾರತದಲ್ಲಿ ”ಗ ” ಕಾರ ಗಳಿಗೆ ಬಹಳ ಪವಿತ್ರ ಸ್ಥಾನ
ಕೊಟ್ಟಿದ್ದಾರೆ. ಅವು ಯಾವುದೆಂದರೆ ಗಂಗಾ, ಗೀತೆ, ಗಾಯತ್ರಿ ,
ಗೋವು ಮತ್ತು ಗೋವಿಂದ. ಇವು ಐದನ್ನು ಸ್ಮರಣೆಯಲ್ಲಿಟ್ಟು
ಕೊಂಡರೆ ನಮ್ಮ ಸಂಸ್ಕೃತಿ ಉಳಿದೀತೆಂಬ ಭಾವನೆ ನಮ್ಮ
ಹಿರಿಯರದ್ದು.
೩. ಪಂಚ ಲಿಂಗಗಳು -ಆಚಾರ ಲಿಂಗ,ಗುರುಲಿಂಗ,ಶಿವಲಿಂಗ,
ಜಂಗಮ ಲಿಂಗ, ಪ್ರಸಾದ ಲಿಂಗ,
ಪಂಚ ಪರಮೇಷ್ಠಿಗಳು -ಅರ್ಹತ್,ಸಿದ್ಧ,ಆಚಾರ್ಯ,ಉಪಾಧ್ಯಾಯ,
ಸರ್ವ ಸಾಧುಗಳು.
ಪಂಚ ಕೋಶಗಳು -ಅನ್ನಮಯ, ಪ್ರಾಣಮಯ, ಮನೋಮಯ,
ವಿಜ್ಞಾನಮಯ,ಆನಂದಮಯ.
೪. ಕನ್ನಡಕ್ಕರ ಚೆನ್ನ। ಕನ್ನಡದ ನುಡಿ ಚೆನ್ನ।
ಕನ್ನಡಿಗರೊಡನಾಟ ಬಲು ಚೆನ್ನ।
ಇಲ್ಲೆ ಎತ್ತಿದೆ ಜನ್ಮ ।ಎನಗೇತರದು ಬನ್ನ ।
ಕನ್ನಡವೆ ಹಾಲನ್ನ ಏಕೆ ಅನ್ಯ ?
೫. ಅಪ್ರಿಯ ಸತ್ಯವನ್ನು ಹೇಳಬಾರದು. ಪ್ರಿಯವಾದ
ಅಸತ್ಯವನ್ನೂ ಹೇಳಬಾರದು. ಇದೇ ಸನಾತನ ಧರ್ಮ.
ತನ್ನಲ್ಲಿರುವ ಕೆಡುಕುಗಳ ಮೇಲೆ ಜಯ ಸಾಧಿಸುವುದೇ
ಮನುಷ್ಯನ ಗುರಿ. ಈ ರೀತಿ ವಿಜಯ ಸಾಧಿಸುವುದನ್ನು
ಮತ ನಮಗೆ ಕಲಿಸದಿದ್ದರೆ ಅದು ಏನನ್ನೂ ಕಲಿಸುವುದಿಲ್ಲ
ಎನ್ನ ಬೇಕಾಗುತ್ತದೆ.
ಮೂಲ :ಸಂಗ್ರಹ.

A Visit To Bhuvaneshwara.

Bhuvaneshwara is a revered pilgrimage centre, referred to in the

Brahma Purana. Lingaraja temple here was built by  the ruler Yayati

Kesari in the 7th century. It is an outstanding specimen of the Orissa

style of temple building.

Bhuvaneshwar, Puri and Konark constitute the Golden Triangle of Orissa,

visited in large numbers by pilgrim and tourists.

Parasurameshwara temple at Bhuvaneshwar dates back to the middle of

the 8th century.

Shanthi Stupa of Dhauligiri is also known as the Peace Pagoda.

Dhauligiri lies at a distance of 7 Km from Bhuvaneshwar, located on the

banks of the river Daya. Dhauli hill is presumed to be the area where

the Kalinga war was fought.

Konark Sun Temple is ( 13th century CE.) about 35 kilometres northeast

from Puri, on the coastline of Odisha/Orissa. The temple is attributed to

king Narasimhadeva 1 of the Eastern Ganga Dynasty about 1250 C E .

Sun temple of Konark is the UNESCO’s World Heritage Site.

Kona=Corner; Arka= Sun. The main attraction of the temple is it’s

12 pairs of wheels located at the base of  the temple. These wheels

are not ordinary wheels but tell times as well. The  spokes of the wheels

create a sundial. One can calculate the precise time of the day by just

looking at the shadows cast by these spokes.

The ISKCON TEMPLE  in Bhuvaneshwar was founded by Srila Prabhupada.

It was the 108th and the last branch of ISKCON. It is dedicated to Lord Krishna.

This temple is listed as a UNESCO World heritage site.

 

ಅಧ್ಯಾತ್ಮ ಸಂಪದ.

೧. ನಮ್ಮ ಭೂಮಿ ಸೂರ್ಯನಿಂದ ೧೫೦ಮಿಲಿಯ ಕಿ.ಮೀ. ದೂರದಲ್ಲಿ
ಸೂರ್ಯನನ್ನು ಸುತ್ತುತ್ತಲೇ ಇದೆ. ಆ ಸೂರ್ಯನಾದರೋ ೬೦೦೦*C
ಮೇಲ್ಮೈ ಉಷ್ಣತೆ ಇರುವ ಉರಿಯುವ ಅನಿಲಗಳ ಬೃಹತ್ ಗೋಲ.
ಒಂದೊಮ್ಮೆ ಭೂಮಿಯೇ ಇನ್ನಷ್ಟು ಸಮೀಪದಲ್ಲಿರುತ್ತಿದ್ದರೆ ಅಥವಾ
ಸೂರ್ಯನ ಉಷ್ಣತೆಯೇ ಇನ್ನಷ್ಟು ಹೆಚ್ಚಾಗಿರುತ್ತಿದ್ದರೆ, ಸೂರ್ಯನ
ತಾಪ ತಾಳಲಾರದೆ ಜೀವಿಗಳೆಲ್ಲ ಬೆಂದು ಕರಟಿಯೇ ಹೋಗುತ್ತಿದ್ದವು.
ಹಾಗಲ್ಲದೆ ಭೂಮಿಯೇ ಇನ್ನಷ್ಟು ದೂರದಲ್ಲಿರುತ್ತಿದ್ದರೆ ಅಥವಾ
ಸೂರ್ಯನಉಷ್ಣತೆಯೇ ಇನ್ನಷ್ಟು ಕಡಿಮೆಯಾಗಿರುತ್ತಿದ್ದರೆ ಕೊರೆವ
ಚಳಿಯನ್ನು ತಾಳಲಾರದೆ ಜೀವಿಗಳೆಲ್ಲ ಮರಗಟ್ಟಿ ಚಿರುಟಿಯೇ
ಹೋಗುತ್ತಿದ್ದವು. ಮೊದಲ ಸಂದರ್ಭದಲ್ಲಿ ನೀರೆಲ್ಲ ಆವಿಯಾಗಿ
ಬಾಯಾರಿ ಬಸವಳಿಯಬೇಕಾದ ಪರಿಸ್ಥಿತಿ ಆದರೆ, ಎರಡನೇ ಸಂದರ್ಭದಲ್ಲಿ
ನೀರೆಲ್ಲ ಮಂಜುಗಡ್ಡೆಯಾಗಿ ಬಾಯಿಗೆ ಬರಲಾಗದ ಪರಿಸ್ಥಿತಿ. ಆದರೆ,
ಅಂತಹ ವೈಪರೀತ್ಯಗಳಿಗೆ ಅವಕಾಶವೀಯದೆ ಭೂಮಿಯಲ್ಲಿ ಜೀವಿಗಳ
ಬದುಕಿಗೆ ಹಿತಮಿತವಾದ ಶಾಖವಿದ್ದು,ನೀರೂ ಕುಡಿಯಲಾಗುವಂತೆ
ದ್ರವರೂಪದಲ್ಲೇ ಅಥವಾ ದ್ರವರೂಪಕ್ಕೆ ತರಲಾಗುವಂತೆಯೇ ಇರುವುದು
ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೨. ನಮ್ಮ ಭೂಮಿಯ ವ್ಯಾಸ ೧೨,೭೫೦ ಕಿ.ಮೀ. ವಿಮೋಚನಾ ವೇಗ
೧೧ ಕಿ.ಮೀ./ಸೆ. ಒಂದೊಮ್ಮೆ ಈ ತೊಗಟೆಯ ದಪ್ಪ ಕಡಿಮೆಯಾಗಿರುತ್ತಿದ್ದಲ್ಲಿ
ಗುರುತ್ತ್ವಾಕರ್ಷಣ ಶಕ್ತಿ ಕಡಿಮೆಯಾಗಿ ವಿಮೋಚನಾ ವೇಗವೂ ಕುಸಿದು
ವಾತಾವರಣದಲ್ಲಿರುವ ಆಮ್ಲಜನಕವೆಲ್ಲ ಭೂಮಿಯಿಂದ ತಪ್ಪಿಸಿಕೊಂಡು
ಹೋಗಿ ಜೀವಿಗಳು ಬದುಕುವುದೇ ಅಸಾಧ್ಯವಾಗುತ್ತಿತ್ತು. ಹಾಗಾಗದಂತೆ
ಆಮ್ಲಜನಕವನ್ನು ವಾತಾವರಣದಲ್ಲಿ ಹಿಡಿದಿಟ್ಟುಕೊಳ್ಳುವಷ್ಟು ಗುರುತ್ತ್ವ
ಶಕ್ತಿ ಭೂಮಿಗಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೩. ಭೂಮಿ ತನ್ನ ಅಕ್ಷದ ಸುತ್ತ ೨೪ ಗಂಟೆಗೊಮ್ಮೆ ಅಥವಾ ದಿನಕ್ಕೊಮ್ಮೆ
ತಿರುಗುವುದರಿಂದ ಹಗಲು ರಾತ್ರಿ ಗಳಾಗುತ್ತವೆ. ಆ ರೀತಿ ತಿರುಗುವಾಗಲೂ
ಅದು ೧೮೦೦ಕಿ.ಮೀ. /ಗಂ. ವೇಗದಲ್ಲಿ ತಿರುಗುತ್ತಿದೆ. ಈ ವೇಗವೇನಾದರೂ
ಕೇವಲ ೧೮೦ ಕಿ. ಮೀ. /ಗಂ. ಆಗಿರುತ್ತಿದ್ದಲ್ಲಿ ದಿನದ ಅವಧಿ ೨೪೦ ಗಂಟೆ ಆಗಿ
ಆ ಸುದೀರ್ಘ ಹಗಲಿನ ಬಿರು ಬಿಸಿಲನ್ನೂ ಸುದೀರ್ಘ ರಾತ್ರಿಯ ಕೊರೆವ
ಚಳಿಯನ್ನೂ ತಾಳಲಾರದೆ ಜೀವಿಗಳು ಕೊನೆಯುಸಿರೆಳೆಯುತ್ತಿದ್ದವು.
ಹಾಗಾಗದಂತೆ ದಿನಕ್ಕೊಮ್ಮೆ ಭೂಮಿ ಸೂಕ್ತ ವೇಗದಿಂದ ಪರಿಭ್ರಮಿಸುತ್ತಿರುವುದು
ವ್ಯವಸ್ಥಾಪಕನ ಕೈವಾಡವಲ್ಲವೇ ?
೪. ಭೂಮಿಯ ಅಕ್ಷವು ಪಥಕ್ಕೆಳೆದ ಲಂಬಕ್ಕೆ ೨೩ವರೆ ಡಿಗ್ರಿ ಮಾಲಿಕೊಂಡೇ
ಇರುವಂತೆ ಭೂಮಿ ಸೂರ್ಯನ ಸುತ್ತ ಬರುತ್ತಿದೆ. ಪರಿಣಾಮವಾಗಿ
ಋತು ಭೇದಗಳು ಉಂಟಾಗುತ್ತಿವೆ. ಬೇಸಿಗೆಯ ಬಿಸಿಲು ಕಳೆದು ಮಳೆ
ಸುರಿದು ಚಳಿ ಕೊರೆದು ಪುನಃ ಬೇಸಿಗೆ ಬರುತ್ತಿದೆ. ಒಂದೊಮ್ಮೆ ಈ ರೀತಿ
ಭೂಮಿ ಮಾಲಿ ಕೊಂಡಿರದೇ ಇರುತ್ತಿದ್ದಲ್ಲಿ ಆ ರೀತಿ ಆಗುತ್ತಲೇ ಇರಲಿಲ್ಲ.
ಕೆಲವೆಡೆ ಸದಾ ಬೇಸಗೆ , ಇನ್ನು ಕೆಲವೆಡೆ ಸದಾ ಮಳೆ, ಇತರೆಡೆ ಸದಾ
ಚಳಿ ಇರುತ್ತಿತ್ತು. ಆದರೆ ಹಾಗಾಗದಂತೆ ಹವಾಮಾನದ ಸಮತೋಲನವನ್ನು
ಕಾಪಾಡಿಕೊಂಡು ಬರಲಾಗಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೫. ಭೂಮಿಯನ್ನು ಆವರಿಸಿ ಸುಮಾರು ೬೦೦ ಕಿ . ಮೀ. ಎತ್ತರದ ವರೆಗೂ
ವಾಯುಮಂಡಲವಿದೆ. ಅದರಲ್ಲೇ ಸೂರ್ಯ ವಿಕಿರಣದ ನೇರಳಾತೀತ
ಕಿರಣಗಳಿಂದರಕ್ಷಿಸುವ ಓಝೋನ್(ozone) ಪದರ ಕೂಡಾ ಇದೆ. ಅಷ್ಟು
ದಪ್ಪದ ವಾಯುವಿನ ರಕ್ಷಕ ಹೊದಿಕೆ ಇರುವುದರಿಂದ ದಿನ ದಿನವೂ
ಭೂಮಿಯೆಡೆಗೆ ಆಕರ್ಷಿಸಲ್ಪಡುತ್ತಿರುವ ಲಕ್ಷಾಂತರ ಉಲ್ಕೆಗಳು
ವಾತಾವರಣ ನೀಡುವ ಘರ್ಷಣೆಯಿಂದ ಉರಿದು ಸುಟ್ಟು ಭಸ್ಮವಾಗುತ್ತಿವೆ.
ಒಂದೊಮ್ಮೆವಾಯು ಮಂಡಲದ ಪದರವೇನಾದರೂ ತೆಳ್ಳಗಿರುತ್ತಿದ್ದರೆ,
ಓಜೋನ್ ಪದರವೂ ಇಲದಿರುತ್ತಿದ್ದರೆ, ಬೀಳುವ ಉಲ್ಕೆಗಳು ಉರಿಯುತ್ತಲೇ
ಭೂಮಿಗೆರಗಿ ಅನಾಹುತವನ್ನುಂಟು ಮಾಡುತ್ತಿದ್ದವು. ನೇರಳಾತೀತ
ಕಿರಣಗಳೂ ಸಲೀಸಾಗಿ ಭೂಮಿಯನ್ನು ಸೇರಿ ಜೀವಿಗಳ ಬದುಕಿಗೆ ಮಾರಕ
ಆಗುತ್ತಿದ್ದವು. ಹಾಗಾಗದಂತೆ ಜೀವಿಗಳೆಲ್ಲ ರಕ್ಷಿಸಲ್ಪಟ್ಟು ಸುರಕ್ಷಿತವಾಗಿರುವುದು
ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೬. ಭೂಮಿಯ ಉಪಗ್ರಹವಾದ ಚಂದ್ರ ಭೂಮಿಯಿಂದ ೩,೮೪,೦೦೦ಕಿ. ಮೀ .
ದೂರದಲ್ಲಿದ್ದಾನೆ. ಒಂದೊಮ್ಮೆ ಆ ಚಂದ್ರನೇನಾದರೂ ಇದರ ಅರ್ಧಾ೦ಶದಷ್ಟು
ದೂರದಲ್ಲಿರುತ್ತಿದ್ದರೆ, ದಿನ ದಿನವೂ ಭರತ ಕಾಣಿಸುವ ಪ್ರದೇಶದಲ್ಲಿನ
ಭೂಮಿಯೆಲ್ಲ ಜಲಾವೃತವಾಗಿ ಜೀವಿಗಳೆಲ್ಲ ಜಲಸಮಾಧಿಯಾಗಿ ಬಿಡುತ್ತಿದ್ದವು.
ಪರ್ವತಗಳೆಲ್ಲ ಕೊಚ್ಚಿ ಹೋಗುತ್ತಿದ್ದವು. ಹಾಗಾಗದಂತೆ ಚಂದ್ರನ ಸ್ಥಾನ
ನಿಗದಿಯಾಗಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
೭. ಇನ್ನು ಭೂಮಿಯ ಜೀವ -ಜೀವನ ವಿಲಾಸ ವೈಭವಗಳಿಗೆಲ್ಲ ಪಾರವಿದೆಯೇ ?
ವಿವಿಧ ಆಕಾರ, ಬಣ್ಣ, ಗಾತ್ರ, ರುಚಿ, ಪರಿಮಳ, ಇಂಚರ,ಸೌಂದರ್ಯಗಳ
ಸಸ್ಯ, ಪ್ರಾಣಿ ಪ್ರಪಂಚ, ಹಾಗೂ ಫಲ -ಪುಷ್ಪ ವೈವಿಧ್ಯಗಳಿರುವುದು
ವ್ಯವಸ್ಥಾಪಕನ ಕೈವಾಡವೇ ಅಲ್ಲವೇ ?ಮೊಟ್ಟೆ ಇಡುವ ಸಲುವಾಗಿ
ಸಾವಿರಾರು ಕಿ. ಮೀ. ದೂರ ಚಲಿಸಿ ಪುನಃ ತವರು ನೆಲೆಯನ್ನೇ ತಲುಪುವ
ಸಲ್ಮಾನ್ ಮೀನಿಗಿರಲಿ, ಈಲ್ ಮಿನಿಗಿರಲಿ, ಉತ್ತರ ಧ್ರುವದಿಂದ ೪೦ಸಾವಿರ
ಕಿ. ಮೀ. ದೂರ ಚಲಿಸಿ ದಕ್ಷಿಣ ಧ್ರುವಕ್ಕೆ ವಲಸೆ ಹೋಗಿ ನಂತರ ಮೊದಲಿನ
ಪ್ರದೇಶಕ್ಕೇ ಹಿಂತಿರುಗುವ ಚೋಟುದ್ದದ ಟರ್ನ್ ಪಕ್ಷಿಗಿರಲಿ, ದಿಗ್ದರ್ಶನ
ಮಾಡಿ ದಾರಿ ತೋರುತ್ತಿರುವುದು ವ್ಯವಸ್ಥಾಪಕನ ಕೈವಾಡ ಅಲ್ಲವೇ ?
ಆ ವ್ಯವಸ್ಥಾಪಕ ಶಕ್ತಿಯನ್ನೇ ದೇವರು ಎಂದು ಕರೆದಲ್ಲಿ, ಯಾರಿಗೇ
ಆದರೂ ಈ ವ್ಯವಸ್ಥೆಗಳನ್ನು ಕಂಡಾಗ ದೇವರಲ್ಲಿ ನಂಬಿಕೆ ಬರದೇನು ?
ಮೂಲ :Seven reasons why a scientist believes in God -Readers
Digest ೧೯೪೯.

ಸುಭಾಷಿತಗಳು.

೧.ಸಿಟ್ಟು ಬಾರದವನು ಕಡು ಮೂರ್ಖ; ಆದರೆ ಸಿಟ್ಟಿಗೇಳದವನು
ಕಡು ಜಾಣ.
೨. ಪರರನ್ನು ಅರಿತವನು ಜಾಣ. ತನ್ನನ್ನು ಅರಿತವನು ಜ್ಞಾನಿ.
೩. ”ಹರಕೆ ತೀರಿಸಲು ೧೨ ವರ್ಷದ ಅವಧಿ ” ಎಂಬ ಪ್ರತೀತಿ ಇದೆ.
೪. ರತ್ನದಿಂದ ಅಲಂಕೃತವಾದರೂ ಹಾವು ಭಯವನ್ನೇ
ಹುಟ್ಟಿಸುತ್ತದೆ.
೫. ದಡ್ಡರಾದರೂ ಧಾಂಡಿಗರಾಗಿರಬೇಕು.
೬. ಜೇನು ಹೂವಿನಲ್ಲಿದ್ದರೆ ಮಕರಂದ ಎನ್ನುತ್ತಾರೆ. ಗೂಡಿನಲ್ಲಿದ್ದರೆ
ಜೇನು ಎನ್ನುತ್ತಾರೆ.
೭. ನೊಂದು ಬಾಳುವ ಬದುಕಿಗೂ ಹೊಂದಿ ಬಾಳುವ ಬದುಕಿಗೂ
ಕಾರಣ ಮನೋಸ್ಥಿತಿ.
೮. ಒಳ್ಳೆಯ ಮಾತುಗಳನ್ನು ಆಡುವುದು ಸಹ ಉಪಾಸನೆಯಿದ್ದಂತೆ.
೯. ಉರಿಯೊಳಗಣ ಕರ್ಪೂರಕ್ಕೆ ಕರಿಯುಂಟೆ ಅಯ್ಯಾ ?
೧೦. ಸಜ್ಜನರಿಗೆ ತಲೆ ಬಾಗುವುದು ವಿನಯ; ದುರ್ಜನರೆದುರು
ತಲೆಯೆತ್ತಿ ನಿಲ್ಲುವುದು ಧೈರ್ಯ.
೧೧.ಸಾಹಿತ್ಯ , ಕವನ, ಕಲೆ ಮನುಷ್ಯನ ಸೃಜನಶೀಲ ಮುಖ ;
ಬದುಕಿನ ಗೊಂದಲ, ಸಂಕಟ ಪರಿಹರಿಸುವ ದಿವ್ಯ ಮಂತ್ರ.
೧೨. ನಾವು ಅನ್ಯರಿಂದ ವಂಚಿತರಾಗುವುದಿಲ್ಲ. ನಮ್ಮನ್ನು
ನಾವೇ ವಂಚಿಸಿಕೊಳ್ಳುತ್ತೇವೆ.
೧೩. ಕಾಡು ಉರಿಯಲು ಒಂದು ಕಿಡಿ ಬೇಕು ;ಸಮಾಜ
ಉರಿಯಲು ಒಂದು ದ್ವೇಷಾಗ್ನಿ ಸಾಕು.
೧೪. ನಾವು ಸಮಾನ ಅವಕಾಶಗಳನ್ನು ಸೃಷ್ಟಿಸಬಹುದು;
ಆದರೆ ಸಮಾನತೆ (ಎಲ್ಲರನ್ನೂ ಒಂದೇ ಹಂತಕ್ಕೆ ಮೊಟಕು
ಗೊಳಿಸುವುದು )ಯನ್ನಲ್ಲ. ಅದು ಎಂದಿಗೂ ಸಾಧ್ಯವಿಲ್ಲ.
೧೫. ಸಂಗಾತಿ ಇರದ ವಯಸ್ಸು,ಪ್ರೀತಿಯಿರದ ಮನಸ್ಸು ವ್ಯರ್ಥ.
೧೬. ಅಖಂಡ ಪ್ರಪಂಚಕ್ಕೆ ಶುದ್ಧ ಮಾನವೀಯ ದೀಕ್ಷೆ
ಕೊಡುವುದೇ ಸಾಹಿತ್ಯದ ಮೂಲಗುರಿ.
೧೭. ಹುಟ್ಟು, ಸಾವು ಗಳಿಂದ ಅತೀತವಾಗಿರುವ ಒಂದು
ತತ್ತ್ವವುಂಟು. ಇದನ್ನೇ ವೇದಾಂತ ದರ್ಶನವು ಬ್ರಹ್ಮ, ಆತ್ಮ
ಎಂದೆಲ್ಲ ಕರೆಯುವುದು.
೧೮. ಆಪತ್ತಿನಿಂದ ಪಡೆಯುವ ಅನುಭವವು ಯಾವ
ವಿದ್ಯಾಲಯದಲ್ಲೂ ಸಿಗಲಾರದು.
೧೯. ”ಲಿಂಗ” ಎಂಬ ಶಬ್ದದಲ್ಲಿನ ”ಲಿ ” ಕಾರವು ಲಯವನ್ನು ,
ಬಿಂದು(ಅನುಸ್ವಾರ =೦)ವು ಸ್ಥಿತಿಯನ್ನು ಮತ್ತು ”ಗ’ಕಾರವು
ಸೃಷ್ಟಿಯನ್ನು ಸೂಚಿಸುತ್ತವೆ. ಹೀಗೆ ”ಲಿಂಗ ”ವು ಜಗತ್ತಿನ
ಸೃಷ್ಟಿ, ಸ್ಥಿತಿ , ಲಯಗಳಿಗೆ ಕಾರಣವಾದುದು ಎಂದು
ಸೂಕ್ಷ್ಮಾಗಮ, ”ಲಿಂಗ ”ಶಬ್ದದ ನಿರ್ವಚನವನ್ನು ನೀಡಿದೆ.
೨೦. ನಮ್ಮ ಹೃದಯವೆಂಬ ಗ್ರಂಥವನ್ನು ಓದಲು ಕಲಿಯುವ
ತನಕ ಎಲ್ಲ ಗ್ರಂಥಗಳೂ ನಿರುಪಯೋಗಿ.
ಮೂಲ:ಸಂಗ್ರಹ.

ನಿಮಗೆ ಗೊತ್ತೇ?

೧. ಪರ್ಷಿಯಾದ ಸಾಂಪ್ರದಾಯಿಕ ಸಂಗೀತದಲ್ಲಿ ಕಲ್ಯಾಣಿ (ರಾಗ)
ಮೊದಲು ಉಸಿರುಕಂಡಿದ್ದು. ಗ್ರೀಕರ ಕಾಲದಿಂದಲೂ ಕಲ್ಯಾಣಿ
ಬದುಕಿದ್ದಾಳೆ.
೨. ಚಿತ್ರಕಾರ Leonardo da Vinci, dyslexia ಕಾಯಿಲೆಯಿಂದ
ಬಳಲುತ್ತಿದ್ದುದರಿಂದ ಕೆಲವೊಮ್ಮೆ ಹಿಮ್ಮುಖವಾಗಿ ಬರೆಯುತ್ತಿದ್ದ.
೩. ಕ್ರೇಯಾನ್ ಕಂಡು ಹಿಡಿದವರು -Edwin Binney ಮತ್ತು Herold
Smith.ಮೇಣವನ್ನು ಮೂಲವಾಗಿಟ್ಟುಕೊಂಡು ಅದಕ್ಕೆ ಬೇರೆ ಬೇರೆ
ಬಣ್ಣಗಳನ್ನು ಸೇರಿಸಿ ೧೯೦೩ ರಲ್ಲಿ Crayons ಗಳನ್ನು ತಯಾರಿಸಿದ್ರು.
೪. ಹೆಸರು ಲಕ್ಷದ್ವೀಪ ಎಂದು ಹೇಳಿದರೂ ಇಲ್ಲಿರುವುದು ೩೬ ದ್ವೀಪಗಳು
ಮಾತ್ರ. ಅದರಲ್ಲೂ ಜನವಸತಿಯಿರುವುದು ಕೇವಲ ಹತ್ತರಲ್ಲಿ.
೫. ತಿರುವಳ್ಳುವರ್ -ಸಂತ ನೇಕಾರ. ಈತ ರಚಿಸಿದ ”ತಿರುಕ್ಕುರಳ್ ”
ಎಂಬ ಗ್ರಂಥ ”ತಮಿಳರ ವೇದ ” ಎಂದೇ ಜನಪ್ರಿಯವಾಗಿದೆ.
೬. Mongolia ದ ರಾಜಧಾನಿ Ulan Batore ಜಗತ್ತಿನಲ್ಲಿಯೇ
ಅತಿ ಹೆಚ್ಚು ಚಳಿಯಿರುವ ರಾಜಧಾನಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
೭. ಉಕ್ಕಿನ ಸೂಜಿಗಳನ್ನು ಮೊದಲು ತಯಾರಿಸಿದವರು ಚೀನಿಯರು.
೮. ಮೊಸಳೆಗಳು ನದೀ ತೀರದ ಮರಳಿನಲ್ಲಿ ಹಳ್ಳ ತೋಡಿ ಅದರಲ್ಲಿ
ಮೊಟ್ಟೆಯನ್ನಿಟ್ಟು ಮುಚ್ಚಿ ಬಿಡುತ್ತವೆ.
೯. ಉಸಿರಾಡಲು ಯೋಗ್ಯವಾದ ಗಾಳಿಯಲ್ಲಿ ಸಾರಜನಕ ೭೮%,
ಆಮ್ಲಜನಕ ೨೧%,ಆರ್ಗಾನ್ ೦.೯೪% ಹಾಗೂ carbon dioxide
೦. ೦೪% ಇರಬೇಕು.
೧೦. ಇರಾಕ್ ನ ಮಹಮ್ಮದ್ ಖಾಸಿಮ್ (ಕ್ರಿ. ಶ. ೭೧೨) ಭಾರತದ
ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಂ ದೊರೆ.
ಮೂಲ :ಸಂಗ್ರಹ.