ನಗೆ ಬುಗ್ಗೆ.

೧. ಗುಂಡನಿಗೆ traffic police ಕೆಲಸ ಸಿಕ್ಕಿತು. ಮೊದಲ ದಿನ
ನಗರದ circle ಒಂದರ ಬಳಿ duty ಮಾಡಿದ ವಿಪರ್ಯಾಸ
ವೆಂದರೆ ಮೊದಲ ದಿನವೇ ಅವನನ್ನು ಕೆಲಸದಿಂದ ಅಮಾನತು
ಮಾಡಲಾಯಿತು. ಯಾಕೆಂದರೆ ಆತ Ambulance ಒಂದನ್ನು
ತಡೆದು ನಿಲ್ಲಿಸಿ over speed case ಹಾಕಿದ್ದ.
೨. ಆತ :ನೀನು office ನಲ್ಲಿ ಸಿಂಹದ ಹಾಗೆ ಇರ್ತೀಯಾ.. ಆದರೆ
ಮನೆಗೆ ಹೋದಮೇಲೆ ಏನಾಗುತ್ತೋ ನಿಂಗೆ ?
ಈತ:ಮನೆಯಲ್ಲಿ ಕೂಡಾ ನಾನು ಸಿಂಹಾನೇ. ಆದರೆ ಸಿಂಹದ ಮೇಲೆ
ದುರ್ಗೆ ಕೂತಿರ್ತಾಳೆ ಅಷ್ಟೆ.
೩. ಗುಂಡ ಮತ್ತು ತಿಮ್ಮ ರಾತ್ರಿ ಹೊತ್ತು ನಡೆದುಕೊಂಡು ಹೋಗ್ತಾ
ಇದ್ರು. ದೂರದಲ್ಲಿ ಒಂದು mobile tower . ಅದರ ತುದಿಯಲ್ಲಿ
red light. ಅದನ್ನು ನೋಡಿದ ಗುಂಡ ಹೇಳ್ತಾನೆ:”ನಮ್ಮ ದೇಶ ಭಾರೀ
improve ಆಗಿದೆ ಕಣಯ್ಯಾ…. ಅಲ್ನೋಡು ವಿಮಾನಗಳಿಗೂ
traffic signal ಹಾಕಿದ್ದಾರೆ.
೪. ಒಬ್ಬನಿಗೆ ಕಷ್ಟ ಬಂದಾಗ ಮನೆಮಂದಿ, ಸ್ನೇಹಿತರೆಲ್ಲಾ ಒಟ್ಟಿಗೆ
ನಿಲ್ಲುತ್ತಾರೆ. ಇದಕ್ಕೆ ಒಳ್ಳೆಯ ನಿದರ್ಶನ ಬೇಕು ಅಂದ್ರೆ ಮದುವೆ Album
ನೋಡಬಹುದು.
೫.. ಕೆಲವರು ಸ್ವಲ್ಪ ಜನರನ್ನು ಮಾತ್ರ ಕತ್ತಲೆಯಲ್ಲಿಡಬಲ್ಲರು. ಆದರೆ
ಇಂಧನ ಸಚಿವರು ಇಡೀ ರಾಜ್ಯವನ್ನು ಇಡಬಲ್ಲರು.
೬. ಸೈನ್ಯಕ್ಕೆ ಸಂಬಂಧಿಸಿದಂತೆ ಒಂದು ಮಾತಿದೆ :”ಯೋಧನ ಮಿದುಳು
ಕಿತ್ತುಕೊಂಡು ಅವನ ಕೈಗೆ ಬಂದೂಕನ್ನು ಕೊಡುವ ಸೈನ್ಯ, ಅವನು
ನಿವೃತ್ತನಾದಾಗ ಬಂದೂಕನ್ನು ಕಿತ್ತುಕೊಂಡು ಬಿಡುತ್ತದೆ ಆದರೆ
ಮಿದುಳನ್ನು ಹಿಂತಿರುಗಿಸುವುದಿಲ್ಲ. ”
೭. ಒಬ್ಬ Quality Engineer ಒಬ್ಬ ಸಾಧಾರಣ ಹುಡುಗಿಯನ್ನು
ಮದುವೆಯಾದ.ಒಂದು ವರ್ಷದ ನಂತರ ಅವಳೊಡನೆ ಇನ್ನು
ಏಗುವುದು ಸಾಧ್ಯವಿಲ್ಲವೆಂದೆನಿಸಿ ಕೋಪದಿಂದ ಮಾವನಿಗೆ ಒಂದು
S M S ಕಳುಹಿಸಿದ:”ನಿಮ್ಮ product ನನ್ನ ಆವಶ್ಯಕತೆಗೆ ತಕ್ಕಂತೆ ಇಲ್ಲ.”
ಕಿಲಾಡಿ ಮಾವನಿಂದ ತಕ್ಷಣ ಉತ್ತರ ಬಂತು:”Warranty expired”
ಈಗ ಏನಾದರೂ ತಯಾರಕರು ಜವಾಬ್ದಾರರಲ್ಲ”.
೮. ”ಹಾಡುತ್ತಿದ್ದಳು ಹುಡುಗಿ ” ಗಗನವು ಎಲ್ಲೋ ಭೂಮಿಯು ಎಲ್ಲೋ ”
ಹೌದು, ಪ್ರೇಮದ ಕಾಮಾಲೆ ಕಣ್ಣಿಗೆ ಎಲ್ಲವೂYellow .
-H. Dundiraj .
೯. ಗೃಹಸ್ಥನೊಬ್ಬನಿದ್ದ. ಲೆಕ್ಕಾಚಾರದಲ್ಲಿ ಘಾಟಿ ಮನುಷ್ಯ.
ಕೊಂಕಣಿ ಆತನ ಮಾತೃಭಾಷೆ. ಯಾರಾದರೂ ಏನನ್ನಾದರೂ
ನೀಡಿದರೆ ಮಾತ್ರ ಅದಕ್ಕೆ ಪ್ರತಿಫಲವಾಗಿ ತಾನು ನೀಡುತ್ತಿದ್ದ.
ಅವರು ನೀಡಿರದಿದ್ದರೆ ತಾನು ನೀಡಲಾರ. ಒಂದು ದಿನ ಆತನ
ಮನೆಗೆ ಸ್ನೇಹಿತನೋರ್ವ ಬಂದ. ಆತನಿಗೆ coffee ನೀಡಬೇಕು.
ಆದರೆ ಈತ ಅವನ ಮನೆಗೆ ಹೋದಾಗ ಅಲ್ಲಿ coffee ನೀಡಿರಲಿಲ್ಲ.
ಇಂತಹ ಸಂದರ್ಭದಲ್ಲಿ ಗಂಡ -ಹೆಂಡತಿ ನಡುವೆ ನಾಟ್ಯ ಭಾಷೆಯಲ್ಲಿ
code word ಸಂಭಾಷಣೆ ನಡೆಯಿತು. ಅದು ಹೀಗಿತ್ತು. ಹೆಂಡತಿ
ಕೇಳಿದಳು ”ದಿತ್ತಾ, ದಿತ್ತಾ” ಗಂಡ ಹೇಳಿದ ”ತಕ ದೀ ನಕ, ತಕ ದೀ ನಕ”
ಹೆಂಡತಿ:”ಕಿತೆಂ ಕಿತೆಂ ” ಗಂಡ:”ವೊ ಮಕ ದೀ ನಕ , ತೂ ತಕ ದೀ ನಕ ”
ಬಂದ ಸ್ನೇಹಿತ ಸುಸ್ತಾದ .
ಮೂಲ :ಸಂಗ್ರಹ.

Advertisements

Do You Know?

Francois Viete was a French mathematician. He introduced

the first systematic algebraic notation  in his book ”In Artem Analyticam Isagoge”

2.Dyslexia means a disorder manifested by difficulty in learning to read.

One of the characteristics of dyslexia is problem with direction(up and down)

and time (before and after; yesterday and tomorrow).

3.Jagadish Chandra Bose discovered Crescograph which is a device of measuring

growth in plants.

4. Snakes live on every continent except Antarctica. It can be found not only

on or under the ground but also in lakes, rivers and oceans.

5. 33 vedic gods explained by Yajnavalkya in Brihadaranyaka Upanishad are

Vasus-8; Rudras-11; Adityas-12;Indra and Prajapati.

6.Chinese EmpressHsi Ling Shi, wife of Emperor Huang Ti, was the first

person to accidentally discover silk as weavable fiber.

7. The names of earth in Sanskrit are –Medini, Mahi, Dhara, Prithvi,

Bhuh,Dharani, Vasudha, Kshama,Ksithi,Vasundhara, Avani,Jagat,

Dharitri,Vishvambhara,Kashyapi,Sthira, Bhugola,Samsarah,Marthya,

ILa, Anantha, Bhuvanam,Sarvamsaha,Ratnagarbha.

8. West Indies is a group of several island nations lying in the North

Atlantic Ocean.They are located between the U.S.A. and South America.

The West Indies is a sporting confederation of 15 mainly English speaking

Caribbean countries and territories many of which historically formed

the British West Indies.

Source:Collection.

 

ಚಿಂತನ.

೧. ಒಬ್ಬ ಗುರು ತನ್ನ ಶಿಷ್ಯರನ್ನು ಕರೆದು ಹೇಳಿದ ”ಈ ಲೋಕದಲ್ಲಿ
ಬದುಕಬೇಕಾದರೆ ೨ ಗುಣಗಳು ಅತ್ಯಗತ್ಯ. ಒಂದು, ದುರ್ಗಂಧವನ್ನು
ಸಹಿಸಿಕೊಳ್ಳುವುದು. ಎರಡು, ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವುದು. ”
”ಸರಿ, ಗುರುಗಳೇ ” ಎಂದು ಶಿಷ್ಯರು ಕೂಗಿದರು. ಗುರುಗಳು ಶಿಷ್ಯರನ್ನು
ಪರೀಕ್ಷಿಸಲು ಮುಂದಾದರು. ತನ್ನ ತೋರು ಬೆರಳನ್ನು ದುರ್ಗಂಧ ಭರಿತ
ದ್ರಾವಣದಲ್ಲಿ ಮುಳುಗಿಸಿ ಮೂಗಿನ ಬಳಿ ತಂದು ಮೂಸಿದರು. ”ನೀವೂ
ಹೀಗೆಯೇ ಮಾಡಿ”ಎಂದರು. ಶಿಷ್ಯರು ಆ ಹೇಸಿಗೆಯ ದ್ರಾವಣದಲ್ಲಿ
ತೋರ್ಬೆರಳನ್ನು ಮುಳುಗಿಸಿದಂತೆ ನಟಿಸಿ ಅದೇ ಬೆರಳನ್ನು ಮೂಗಿನೆದುರು
ತಂದು, ”ಅಬ್ಬಬ್ಬಾ ದುರ್ವಾಸನೆಯೇ ” ಎಂದು ಸುಮ್ಮ ಸುಮ್ಮನೇ
ಉದ್ಗರಿಸತೊಡಗಿದರು. ಗುರುಗಳು ನಕ್ಕು ಹೇಳಿದರು, ”ನಿಮಗೆ ಇನ್ನೊಂದು
ಪರೀಕ್ಷೆ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ, ನೀವು ದುರ್ಗಂಧದ
ದ್ರಾವಣದಲ್ಲಿ ಬೆರಳು ಮುಳುಗಿಸಲಿಲ್ಲ ಎಂಬ ಕಾರಣಕ್ಕಾಗಿ ಅಲ್ಲ.
ಸೂಕ್ಷ್ಮವಾಗಿ ಅವಲೋಕಿಸಲಿಲ್ಲ ಎಂಬ ಕಾರಣಕ್ಕಾಗಿ.” ಶಿಷ್ಯರಿಗೆ
ಅರ್ಥವಾಗಲಿಲ್ಲ. ಗುರುಗಳೇ ಹೇಳಿದರು ”ನಾನು ದುರ್ಗಂಧದ ದ್ರಾವಣಕ್ಕೆ
ಮುಳುಗಿಸಿದ್ದು ತೋರು ಬೆರಳನ್ನು. ಮೂಗಿನ ಬಳಿ ಹಿಡಿದದ್ದು
ಮಧ್ಯದ ಬೆರಳನ್ನು. ”
೨. ಯುವ ಜೀವನದ ಸಾರ್ಥಕತೆಗೆ ದಶ ಸೂತ್ರ ಗಳು —
೧. ಉತ್ಸಾಹಿಯಾಗು ಆದರೆ ದುಡುಕಬೇಡ.
೨. ಕರುಣೆ ತೋರಿಸು ಆದರೆ ಮೋಸಹೋಗಬೇಡ.
೩. ಶೂರನಾಗು ಆದರೆ ಕಟುಕನಾಗಬೇಡ.
೪. ದಾನಿಯಾಗು ಆದರೆ ದರಿದ್ರನಾಗಬೇಡ.
೫. ತ್ಯಾಗಿಯಾಗು ಆದರೆ ಕಾಡಿಗೆ ಹೋಗಬೇಡ.
೬. ಮಿತವ್ಯಯಮಾಡು. ಆದರೆ ಜಿಪುಣನಾಗಬೇಡ.
೭.ಮಧುರವಾಗಿರು ಆದರೆ ಗುಲಾಮನಾಗಬೇಡ.
೮.ಲಾಭ ಗಳಿಸು ಆದರೆ ಲೋಭಿಯಾಗಬೇಡ.
೯. ಸೇವೆಮಾಡು ಆದರೆ ಸ್ವಾರ್ಥಿಯಾಗಬೇಡ.
೩. ಜೀವನವನ್ನು ಹೇಗೆ ಸ್ವೀಕರಿಸುತ್ತಿ ಎಂಬುದಕ್ಕಿಂತ,
ಜೀವನವನ್ನು ಹೇಗೆ ರೂಪಿಸುತ್ತಿ ಎಂಬುದು ಮುಖ್ಯ.
೪.ಮೊಟ್ಟೆ ಎಸೆದರೆ ಅವಮರ್ಯಾದೆ. ಟೊಮೇಟೊ
ಹೊಡೆದರೆ ಪ್ರತಿಭಟನೆ. ಆದರೆ ರಥಕ್ಕೆ ಹೊಡೆದ ಲಿಂಬೆಹಣ್ಣು
ಮಾತ್ರ ಪೂಜೆ. ಅದು ಶರಬತ್ತಿಗೂ ಸರಿ . ಮೆಣಸಿನ ಜೊತೆ
ತೂಗಾಡಿಸಿದರೆ ದೃಷ್ಟಿ ನಿವಾರಕ. ರಸ್ತೆ ಮೇಲೆ ಇರಿಸಿ
ಮೇಲಿಂದ ಚಕ್ರ ಓಡಿಸಿದರೆ ವಾಹನಕ್ಕೆ ಮುಂದೆ
ಅಪಘಾತವಾಗದು. ಯಾವ ವಿಧದಲ್ಲಿ ತಾನು ಮುಗಿದು
ಹೋಗುತ್ತೇನೆಂಬ ಕಲ್ಪನೆ ಲಿಂಬೆಗಿಲ್ಲ. ”ಸಂಭವಿಸುವುದಕ್ಕೆ
ತೆರೆದುಕೋ ” ಎಂಬ ತತ್ತ್ವ ಲಿಂಬೆಯದು. —ಮಹಾಲಿಂಗ.
೫. ವ್ಯಾಪಾರಿಯೊಬ್ಬ ”ಇಲ್ಲಿ ಇಂಗು ಮಾರಾಟಕ್ಕಿದೆ” ಎಂದು
ನಾಮ ಫಲಕ ಹಾಕಿದ. ಒಬ್ಬ -”ಇಂಗು ಮಾರಾಟಕ್ಕಲ್ಲದೆ
ದಾನ ಕೊಡುತ್ತೀಯಾ? ಆ ಶಬ್ದ(ಮಾರಾಟಕ್ಕಿದೆ)ಅನಗತ್ಯ ”
ಎಂದನು. ಇನ್ನೊಬ್ಬ ”ಇಂಗು ಇಲ್ಲಿ ತೋರಿಸಿ ಮತ್ತೆಲ್ಲೋ
ಮಾರುತ್ತೀಯೇನು ?”ಇಲ್ಲಿ” ಶಬ್ದ ಬೇಡ ಎಂದನು. ಮತ್ತೊಬ್ಬ
” ವಾಸನೆಯಿಂದಲೇ ಇಂಗು ಎಂದು ತಿಳಿಯುತ್ತದೆ. ”ಇಂಗು ”
ಶಬ್ದ ಏಕೆ?” ಎಂದ. ಈ ಮೂವರ ಮಾತು ಕೇಳಿದ ವ್ಯಾಪಾರಿ
ನಾಮ ಫಲಕ ತೆಗೆದು ಹಾಕಿ ನಷ್ಟ ಅನುಭವಿಸಬೇಕಾಯಿತು.
ಮೂಲ :ಸಂಗ್ರಹ.

ನಗೆಗುಳಿಗೆ.

೧. ಮೇಸ್ಟ್ರು:ಗಾಂಧೀಜಿ, ಬಸವಣ್ಣ,ಮಹಾವೀರ, ಬುದ್ಧ ಇವರೆಲ್ಲರ ಮಧ್ಯೆ
ಒಂದು ಸಾಮ್ಯತೆ ಇದೆ. ಏನದು?
ಗುಂಡ:ಇವರೆಲ್ಲ ಸರ್ಕಾರಿ ರಜಾದಿನದಂದೇ ಹುಟ್ಟಿದ್ದಾರೆ.
೨.ಪ್ರ: ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರುವುದೇಕೆ ?
ಉ:ಪಕ್ಷಪಾತದ ದೃಷ್ಟಿ ಬೇಡಾಂತ.
೩. ಪ್ರ:”ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ?” ಎಂದ ಒಬ್ಬ.
”ಕತ್ತೆಗೆ ಇರೋ ಬುದ್ಧಿ ನಿನಗಿಲ್ಲ” ವೆಂದ ಮಗದೊಬ್ಬ. ಈ ಇಬ್ಬರೊಳಗೆ
ಬುದ್ಧಿವಂತನಾರು ?
ಉ:ಕತ್ತೆಗಳೇ ಮೇಲು.
೪. ಹೆಂಡತಿ :ಹಣದುಬ್ಬರ ಅಂದ್ರೇನು ?
ಗಂಡ :ಮೊದಲು ನೀನು ೩೬-೨೪-೩೬(slim )ಆಗಿದ್ದೆ. ಈಗ ೪೦-೪೨-೪೮(fat )
ಆಗಿದ್ದಿ. ನೀನು ಮೊದಲಿಗಿಂತ ದಪ್ಪ ಆಗಿರಬಹುದು ಆದರೆ ನಿನ್ನ value
”down” ಆಗಿದೆ. ಹಾಗೇ ಹಣದುಬ್ಬರ.
೫. ರಾಜಕಾರಣಿ:ಕರ್ನಾಟಕವನ್ನು ಮಾಡುವೆ ನಾ ಮಾದರಿ ರಾಜ್ಯ.
ಮತದಾರ:ಕರ್ನಾಟಕ ಈಗಾಗಲೇ ಆಗಿದೆ ”ಮಾರಿದ ರಾಜ್ಯ ”.
೬. ದೇವರ ಲೀಲೆ -ತೆಂಗಿನ ಕಾಯಲ್ಲಿ ನೀರು ;
ವ್ಯಾಪಾರಿಯ ಲೀಲೆ–ಹಾಲಿನಲ್ಲಿ ನೀರು.
೭. ಸಭೆಗಳಲ್ಲಿ ಮಾತನಾಡುವವರು ”ಎರಡು ಮಾತು ”ಎನ್ನುವುದು
ಜಗತ್ತಿನ ಅತ್ಯಂತ ದೊಡ್ಡ ಸುಳ್ಳು. ಆರಂಭದಲ್ಲಿ ಹೇಳುತ್ತಾರೆ ”ಎರಡೇ
ಎರಡು ಮಾತು” ಮುಗಿಸುವಾಗ ಆಗುವುದು ಎರಡೂ ಕಿವಿ ತೂತು. ”
— H. Dundiraj .
೮. ಒಂದು ಕೆಲಸವನ್ನು ಒಬ್ಬಳೇ ಹೆಂಗಸು ಒಂದು ಗಂಟೆಯಲ್ಲಿ
ಮಾಡಿ ಮುಗಿಸುತ್ತಾಳೆ. ಅದೇ ಕೆಲಸ ಬೇಗ ಆಗಲಿ ಎಂದು ನೀವು
ನಾಲ್ಕು ಹೆಂಗಸರನ್ನು ನೇಮಿಸಿದರೆ ಆ ಕೆಲಸ ಮುಗಿಯಲು ನಾಲ್ಕು
ಗಂಟೆ ಬೇಕಾಗುತ್ತದೆ.
೯.ಹೀಗೊಂದು ಜಾಹೀರಾತು:”ನಮ್ಮ ಅಂಗಡಿಯ Sales counter ನಲ್ಲಿ
ಕೆಲಸ ಮಾಡಲು ಜನ ಬೇಕಾಗಿದ್ದಾರೆ. ಸಕ್ಕರೆ ಕಾಯಿಲೆ ಇರುವವರಿಗೆ
ಆದ್ಯತೆ ನೀಡಲಾಗುವುದು. ಸಂಪರ್ಕಿಸಿ :Manager, ರಾಘವೇಂದ್ರ Sweet Mart ”
೧೦. ಕಿಲಾಡಿ ವೈದ್ಯನೊಬ್ಬ ತನ್ನ clinic ಮುಂದೆ ಹೀಗೆ ಬರೆಸಿ ಕೊಂಡಿದ್ದ:
”ಮಹಿಳೆ ಮತ್ತು ಇತರ ರೋಗಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತೆ. ”
ಮೂಲ :ಸಂಗ್ರಹ.

ಸುಭಾಷಿತಗಳು.

೧. ಹೃದಯದಲ್ಲಿ ಪ್ರೀತಿಯೇ ತುಂಬಿದ್ದರೆ ವೈರಿಗಳೂ ಪ್ರೇಮಿಗಳಾಗುತ್ತಾರೆ.
ಮನದಲ್ಲಿ ದ್ವೇಷವೇ ತುಂಬಿದ್ದರೆ ಪ್ರೇಮಿಗಳೂ ವೈರಿಯಾಗುತ್ತಾರೆ.
೨.ಮದುವೆಯ ”ಮುಂಚಿನ” ಹೆಣ್ಣಿನ ಒಂಟಿತನಕ್ಕಿಂತ ಮದುವೆಯಾದ
”ನಂತರದ ”ಹೆಣ್ಣಿನ ಒಂಟಿತನ ಅತ್ಯಂತ ಕಠೋರವಾದದ್ದು.
೩. ಹೊಂದಿ ಕೊಳ್ಳದಿದ್ದರೆ ನಾವು ಕಾಲದ ಬಿಸಿಯಲ್ಲಿ ಕರಗಿ ಹೋಗುತ್ತೇವೆ.
೪. ಕವಿ,ಋಷಿಗಳು ಒಂಟಿತನದಲ್ಲಿದ್ದಾಗ ”ಜಗತ್ತು ಎಷ್ಟು ಸುಂದರ ”ಎಂದು
ಖುಷಿಯಿಂದ ವರ್ಣಿಸುತ್ತಾರೆ. ಆದರೆ ಒಂದು ಹೆಣ್ಣು ಒಂಟಿತನದಲ್ಲಿದ್ದಾಗ
”ಜಗತ್ತು ಎಷ್ಟು ಕ್ರೂರವಾಗಿದೆ ” ಎಂದು ನೋವು ಅನುಭವಿಸುತ್ತಾಳೆ.
೫. ಜೀವನದಲ್ಲಿ ನಮಗೆ ಆಯ್ಕೆಗಳೇ ಇಲ್ಲ ಎಂಬುವುದಿದ್ದರೆ ಅದು
ಹುಟ್ಟು ಮತ್ತು ಸಾವಿನಲ್ಲಿ ಮಾತ್ರ.
೬. ನೂರು ಗ್ರಂಥಗಳನ್ನು ಓದಿ ಕಲಿತರೂ ನಿಜವಾದ ಪಾಠ ಅರ್ಥವಾಗುವುದು
ಅನುಭವದಿಂದ.
೭. ಎಲ್ಲರಿಗೂ ಇಷ್ಟ ಆಗಿರುವುದಕ್ಕಿಂತ, ಎಲ್ಲರಿಗೂ ಅನಿಷ್ಟ ಆಗಿರುವುದಕ್ಕಿಂತ
ಒಳ್ಳೆಯವರಿಗೆಲ್ಲ ಇಷ್ಟವಾಗಿ ಕೆಟ್ಟವರಿಗೆಲ್ಲ ಅನಿಷ್ಟವಾಗಿರುವುದು ಲೇಸು.
೮. ನಡೆದುಕೊಂಡು ಹೋಗುವವನಿಗಲ್ಲದೆ ರಥ (car )ದಲ್ಲಿ ಪಯಣಿಸುವವನಿಗೆ
ಮಾರ್ಗದ ಸೊಗಸು ದಕ್ಕುವುದಿಲ್ಲ
೯.”ಅನ್ನಕ್ಕೆ ಬಣ್ಣ ಹಚ್ಚದಿರಿ ಅಣ್ಣಗಳಿರಾ”…. ಅನ್ನದಿಂದ ಧಾತುಗೊಂಡ
ಮನುಜಕುಲಕ್ಕೆ ತರತಮದ ಬಣ್ಣವಿಲ್ಲ. ಬಣ್ಣ ಹಚ್ಚುವ ಸಣ್ಣ ಮನವ
ಮಾಡುವುದೂ ಸಲ್ಲ. ಮನುಜ ಕುಲದಲ್ಲಿ ಪ್ರಾಕೃತಿಕವಾಗಿ ಯಾವುದೇ ವ್ಯತ್ಯಾಸವಿಲ್ಲ.
ಇರುವ ವ್ಯತ್ಯಾಸ ಸಾಂಸ್ಕೃತಿಕವಾದುದು.
೧೦. ಉತ್ಸಾಹ ಕಳೆದು ಕೊಂಡವನಷ್ಟು ದಿವಾಳಿ ಮನುಷ್ಯ ಪ್ರಪಂಚದಲ್ಲಿ
ಇನ್ನೊಬ್ಬನಿಲ್ಲ
ಮೂಲ:ಸಂಗ್ರಹ .

What the legends say.

1.Ravana was married to Mandodari, the daughter of

the celestial architect Maya, Dhanyamalini and a third wife.

He had 7 sons from his 3 wives.

Atikaya was the son of Ravana and Dhanyamalini.

Akshaya kumara was the youngest son of Ravana.

He was killed by Hanumaan. Narantaka was killed by

Dadhibal,son of Sugreeva. Devantaka was killed by

Hanuman during the war. Trishira was killed by Rama.

Prahasta was killed by Lakshmana.

2.Sita is  daughter  of Ravana and  his wife Mandodari.

Astrologers predicted that she will become the reason

for Ravana’s death. To save his life Ravana threw the

child into the sea. Varuni, the sea goddess gave the

child to earth goddess Pritvi. Pritvi gave her to king

Janaka. As per Ramayana, Sita was found by King Janaka

while ploughing  a field.

3. Ravana’s  ten  heads represent his knowledge of the

six shastras and the four vedas.

4. Meghanaada was the eldest son of demon king Ravana.

He got the name Indrajit after he defeated Indra.

5.Direction——————————————-Mantra

North————————————————–Om Sam Kuberaya namah.

South————————————————–Om Mam  Yamaya  namah.

East—————————————————–Om  Lam Indraya namah.

West—————————————————Om Vam Varunaaya Namah.

Kubera is God of wealth and success.

Yama is the God of justice, the deity of Dharma and Lord of death.

Indra is the king of swarga and the Devas. He is the God of rains,

lightning, thunder, storms and river flows. His son is Jayanth

and sister is Jayanti.

Varuna and Saturn are respectively the directional Lord and

planetary Lord of west.

Source:Collection.

ಸುಭಾಷಿತಗಳು.

೧. ಅತಿಯಾದ ನಿರೀಕ್ಷೆಯಿಂದ ತುಂಬಾ ನಿರಾಸೆಯಾಗುತ್ತೆ.
ಅತಿಯಾದ ನಂಬಿಕೆಯಿಂದ ತುಂಬಾ ಮೋಸವಾಗುತ್ತೆ.
ಅತಿಯಾದ ಪ್ರೀತಿಯಿಂದ ತುಂಬಾ ದುಃಖವಾಗುತ್ತೆ.
ಅತಿಯಾದರೆ ಅಮೃತ ಕೂಡಾ ವಿಷವೇ.
೨. ಟೀಕೆ ಮಾಡುವುದು ಒಳ್ಳೆಯದಲ್ಲ. ಎಲ್ಲರ ಸ್ವಭಾವವೂ
ಒಂದೇ ರೀತಿ ಇರುವುದಿಲ್ಲ. ಕೆಲವರು ಟೀಕೆಯನ್ನು ಹಾಸ್ಯ
ಮಯವಾಗಿ ತೆಗೆದು ಕೊಳ್ಳಬಹುದು. ಮತ್ತೆ ಕೆಲವರು ತಿರುಗಿ
ಉತ್ತರ ನೀಡಬಹುದು. ಇನ್ನಷ್ಟು ಮಂದಿ ನೊಂದುಕೊಳ್ಳಬಹುದು.
೩. ಒಬ್ಬರಿಗೆ ಸಹಾಯಮಾಡಿ ನೀವು ಒಳ್ಳೆಯದನ್ನು ಬಯಸಿದರೂ
ಅವರು ನಿಮಗೆ ಕೆಟ್ಟದ್ದು ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ.
ಜನ ಯಾವತ್ತೂ ಕಲ್ಲು ಎಸೆಯುವುದು ಮಾವಿನ ಮರಕ್ಕೆ, ಬೇವಿನ
ಮರಕ್ಕಲ್ಲ.
೪. ಕನ್ನಡಿಯನ್ನು ಒಡೆಯಲು ಒಂದು ಕಲ್ಲು ಸಾಕು. ಮನಸ್ಸನ್ನು
ಒಡೆಯಲು ಒಂದು ಮಾತು ಸಾಕು.
೫. ಪರಿಚಿತರು ಅಪರಿಚಿತರಂತೆ ವರ್ತಿಸುತ್ತಿದ್ದಾರೆ ಎಂದರೆ ಅವರಿಗೆ
ನಮ್ಮ ಆವಶ್ಯಕತೆ ಮುಗಿದಿದೆ ಎಂದು ಅರ್ಥ.
೬. ನಿಮ್ಮ ಖುಷಿಯನ್ನು ಎಲ್ಲರ ಹತ್ತಿರ ಹಂಚಿಕೊಳ್ಳಿ. ಆದರೆ ನಿಮ್ಮ
ನೋವನ್ನು ಕೆಲವರ ಬಳಿ ಮಾತ್ರ ಹಂಚಿಕೊಳ್ಳಿ. ಏಕೆಂದರೆ ಗಾಯದ
ಔಷಧಿ ಎಲ್ಲರ ಮನೇಲಿ ಇರುವುದಿಲ್ಲ. ಆದರೆ ಉಪ್ಪು ಎಲ್ಲರ ಮನೇಲೂ
ಇರುತ್ತದೆ. ಗಾಯಕ್ಕೆ ಔಷಧಿ ಹಚ್ಚುವವರಿಗಿಂತ ಉಪ್ಪು ಹಾಕುವವರೇ ಜಾಸ್ತಿ.
ನಿಮ್ಮ ನೋವಿಗೆ ಸ್ಪಂದಿಸುವವರಿಗಿಂತ ನೋವು ಕೊಡುವವರೆ ಜಾಸ್ತಿ.
೭. ಪ್ರೀತಿ ಮತ್ತು ಸ್ನೇಹ ಅತ್ಯಮೂಲ್ಯವಾದದ್ದು. ಅದನ್ನು ಯೋಗ್ಯತೆ
ಇದ್ದವರಿಗೆ ಮಾತ್ರ ಕೊಡಿ.
೮. ಸುಂದರವಾದ ಗುಲಾಬಿಗೆ ಮುಳ್ಳುಗಳಿರುವಂತೆ ಸುಂದರವಾದ
ಮನಸ್ಸಿಗೆ ನೋವು ಗಳಿರುತ್ತವೆ.
೯. ಜಗತ್ತಿನ ಎಲ್ಲಾ ದ್ರವಗಳಲ್ಲಿ ಮಿಗಿಲಾದುದೆಂದರೆ ಕಣ್ಣೀರು.
ಕಾರಣ ಅದರಲ್ಲಿ ೧%ನೀರು ಹಾಗೂ ೯೯%ಭಾವನೆ ಇರುತ್ತದೆ.
೧೦. ಪ್ರ:ತಾಯಿ ಮತ್ತು ಪತ್ನಿಗಿರುವ ವ್ಯತ್ಯಾಸವೇನು ?
ಉ :ತಾಯಿ ಮಾತನಾಡಲು ಕಲಿಸುತ್ತಾಳೆ. ಪತ್ನಿ ಮೌನವಾಗಿರಲು
ಕಲಿಸುತ್ತಾಳೆ.
೧೧. ಕಬ್ಬಿಣದ ನಾಶಕ್ಕೆ ಅದಕ್ಕೆ ಹಿಡಿಯುವ ತುಕ್ಕು ಕಾರಣವೇ ಹೊರತು
ಬೇರೆ ಏನಲ್ಲ. ಅಂತೆಯೇ ಮನುಷ್ಯನ ನಾಶಕ್ಕೆ ಅವನ ಮನಸ್ಸೇ ಕಾರಣ
ಹೊರತು ಬೇರೆಯವರಲ್ಲ.
೧೨. ಹೆಂಡತಿ, ಮಕ್ಕಳು ಅಥವಾ ಸ್ನೇಹಿತರು ಯಾರೇ ಇರಬಹುದು…
ನಮಗೆ ಪರಿಪೂರ್ಣರಾದವರು ಸಿಗುವುದಿಲ್ಲ. ಅವರಿಗೆ ತಕ್ಕ ಹಾಗೆ
ನಾವೇ ನಮ್ಮ ನಡೆ, ನುಡಿ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಬೇರೆಯವರಲ್ಲಿ ಬದಲಾವಣೆ ಕಾಣುವ ಬದಲು ನಮ್ಮಲ್ಲಿಯೇ
ಬದಲಾವಣೆಯನ್ನು ಕಂಡು ಕೊಳ್ಳೋಣ.
ಮೂಲ:Facebook Quotes.