ನಿಮಗೆ ಗೊತ್ತೇ ?

೧. ಸಂಗೀತಕ್ಕೆ ರೋಗದಮನ ಶಕ್ತಿ ಇದೆ.
ಸಂದು ನೋವಿಗೆ——-ಭೈರವಿ.
ತಲೆ ನೋವಿಗೆ ———-ದರ್ಬಾರಿ ಕಾನಡಾ.
ಕೆಮ್ಮಿಗೆ ——————ಗುಜಾರಿ ತೋಡಿ.
ಕರುಳಿನ ವಾಯು ಪ್ರಕೋಪಕ್ಕೆ —ಮಾಲ ಕಂಸ.
ಅಜೀರ್ಣಕ್ಕೆ ————-ದೀಪಕ.
ಕ್ಷುಧಾನಾಶಕ್ಕೆ ———–ಚಂದ್ರ ಕಂಸ.
ಮಲಬದ್ಧತೆಗೆ ————ಜೌನ್ ಪುರಿ.
ಅತಿಸಾರಕ್ಕೆ ————–ಜೈ ಜೈವಂತಿ ರಾಗ —–ಶಮನಕಾರಿ.
–ಕೊಳಲು ವಾದಕ ರೋಹಿತ್ ಆನಂದ್ -Hindustan Times.
೨. ”ವೀಸಾ” ಎಂಬುದು French ಪದ. ವಿದೇಶ ಪ್ರಯಾಣ
ಅನುಮತಿ ಪತ್ರ ಎಂದು ಅರ್ಥ.
೩. ರೋಮನ್ ಸಾಮ್ರಾಟ್ ಚಾರ್ಲ್ಸ್, ಸುಧಾರಣಾವಾದಿ ಮಾರ್ಟಿನ್
ಲೂಥರ್ ನನ್ನು ಜರ್ಮನ್ ಅರಸರಲ್ಲಿ ಯಾರೂ ಬೆಂಬಲಿಸ
ಬಾರದೆಂದು ೧೫೨೯ರಲ್ಲಿ ಆದೇಶ ನೀಡಿದ. ಅದನ್ನೊಪ್ಪದ
ಅವರೆಲ್ಲ ಒಟ್ಟಾಗಿ ಒಂದು ಪ್ರತಿಭಟನೆಯನ್ನು ಚಕ್ರವರ್ತಿಗೆ
ಸಲ್ಲಿಸಿದರು. ಆ ಬಳಿಕ ಮಾರ್ಟಿನ್ ಲೂಥರ್ ನನ್ನು ಬೆಂಬಲಿಸಿ
ದವರಿಗೆಲ್ಲProtestants ಎಂಬ ಹೆಸರು ಬಂತು.
೪.Greek ದೊರೆ ಅಲೆಕ್ಸಾಂಡರ್ ಗೆ ದೃಷ್ಟಿ ದೋಷವಿತ್ತು.
ಯಾವುದೋ ಯುದ್ಧದಲ್ಲಿ ಕಣ್ಣಿಗಾದ ಘಾಯದಿಂದಾಗಿ ನೇರವಾಗಿ
ನೋಡಲಾರದವನಾಗಿದ್ದ. ಲಂಡನ್ ನ Western ಆಸ್ಪತ್ರೆಯ
ಕಣ್ಣಿನ ತಜ್ಞರು ಈತನ ಕಣ್ಣು ತಿರುಚಿದೆಯೆಂದು ವೈಜ್ಞಾನಿಕವಾಗಿ
ನಿರೂಪಿಸಿದ್ದಾರೆ. ಶಿಲ್ಪಿ ಅಸಿಪಸ್ ವಿನ್ಯಾಸಗೊಳಿಸಿದ ಪ್ರತಿಮೆ
ಈ ನಿರ್ಧಾರಕ್ಕೆ ಕಾರಣ.
೫. Soya Beans ನ್ನು ಆಹಾರಕ್ಕಾಗಿ, ಗೋಂದು, Paint, Plastic
ಹಾಗು ಸ್ಫೋಟಕದ ತಯಾರಿಕೆಯಲ್ಲಿ ಬಳಸುತ್ತಾರೆ.
೬. ನಮ್ಮ ದೇಹದಿಂದ ಹೊರ ಬೀಳುವ ಶಾಖದ ಅರ್ಧ ಭಾಗ
ತಲೆಯಿಂದಲೇ ಹೊರಕ್ಕೆ ಹೋಗುತ್ತದೆ.
೭. ಕೈಫಿಯತ್ತು-ಅರಬ್ಬೀ ಶಬ್ದ-ಅಂದರೆ ಸ್ಥಳ ಪುರಾಣ ಕುರಿತ ಲಿಖಿತ
ದಾಖಲೆ.
೮. ಬಿಳಿ ಬಣ್ಣದ ವಸ್ತುವಿನ ಮೇಲೆ ಬಿಸಿಲು ಬಿದ್ದಾಗ ಕಿರಣಗಳು ವಾಪಸ್
ಪ್ರತಿಫಲನ ಗೊಳ್ಳುತ್ತವೆ. ಆದರೆ ಕಪ್ಪು ಬಣ್ಣ ಹೊಂದಿರುವ ವಸ್ತುವಿನ
ಮೇಲೆ ಬೀಳುವ ಕಿರಣಗಳು ಹೀರಲ್ಪಡುತ್ತವೆ. ಈ ಕಾರಣದಿಂದಾಗಿ
ಕಪ್ಪು ಬಟ್ಟೆ ಧರಿಸಿದರೆ ಸೆಖೆ ಜಾಸ್ತಿ.
೯. ”ಚೀರ” ಎಂಬ ಸಂಸ್ಕೃತ ಪದದ ತದ್ಭವ ರೂಪವೇ ”ಸೀರೆ ”.
”ಚಿ ”ಅಂದರೆ ಜೋಡಿಸು, ”ನೇಯು ” ಎಂದು ಅರ್ಥ.
೧o. ಎಲ್ಲಿಯ ವರೆಗೆ ನಾವು ಗುರುತ್ವಾಕರ್ಷಣ ಬಲಕ್ಕೆ ವಿರುದ್ಧವಾಗಿ
ಬಲ ಪ್ರಯೋಗಿಸಲು ಯಶಸ್ವಿಯಾಗುತ್ತೇವೆಯೋ ಅಲ್ಲಿಯವರೆಗೆ
ಮಾತ್ರ ನಾವು ಅಷ್ಟೇ ಪ್ರಮಾಣದ ಭಾರವನ್ನು ಎತ್ತಲು ಸಾಧ್ಯ.
ಅದಕ್ಕೂ ಮೀರಿದ ಭಾರದ ವಸ್ತುವನ್ನು ಎತ್ತಲು ಯತ್ನಿಸಿದರೆ
ಕುಸಿದು ಬೀಳ ಬೇಕಾಗುತ್ತದೆ.
ಮೂಲ:ಸಂಗ್ರಹ.

Advertisements

ಚಿಂತನ.

೧. ಧರ್ಮ ಇರುವುದು ಪ್ರೀತಿಸುವುದಕ್ಕೆ ಹೊರತು ದ್ವೇಷಿಸುವುದಕ್ಕಲ್ಲ.
ಆದರೆ ವರ್ತಮಾನದಲ್ಲಿ ನಾವು ಕಾಣುವುದು ತದ್ವಿರುದ್ಧವಾಗಿದೆ.
ಹೊಸ ತಲೆಮಾರಿನ, ಕಿರಿಯರ ಮಾತು ಹಾಗಿರಲಿ, ಹಿರಿಯರು ಎಂಬವರಿಗೂ
ಸಹ ಸನಾತನವಾದ ಭಾರತೀಯ ಸಂಸ್ಕೃತಿ, ಪರಂಪರೆಗಳ ನಿಜವಾದ
ಪರಿಚಯ ಇಲ್ಲದಿರುವುದೇ ಇಂದಿನ ವಿಚಾರ ಮಾಲಿನ್ಯ ಹಾಗೂ ಆಚಾರಗಳ
ಅಪಮೌಲ್ಯಕ್ಕೂ ಕಾರಣ. -ಸ್ವಾಮೀ ಜಗದಾತ್ಮಾನಂದಜಿ.
೨. ಕತ್ತಿ, ಕೋವಿ, ಕಠಾರಿಗಳು ಕೊಂದಿರುವುದಕ್ಕಿಂತ ಹೆಚ್ಚು ಜನರನ್ನು
ಹಣ ಕೊಂದಿದೆ. –ಅನಾಮಿಕ.
೩. ಆತ್ಮ ವಿಶ್ವಾಸವಿಲ್ಲದ ಆಸ್ತಿಕನಿಗಿಂತ ಆತ್ಮ ವಿಶ್ವಾಸವುಳ್ಳ ನಾಸ್ತಿಕ
ಮೇಲು. -ಸ್ವಾಮಿ ವಿವೇಕಾನಂದ.
೪. ತಿರಂಗಾ–ತ್ರಿವರ್ಣ ಧ್ವಜದ ೩ ಬಣ್ಣಗಳು ೩ ದೇವಿಯರ ಪ್ರತೀಕ.
ಅನ್ನಪೂರ್ಣೆಯಾಗಿ ನಮ್ಮೆಲ್ಲರಿಗೆ ಅನ್ನ , ಲಕ್ಷ್ಮಿಯಾಗಿ ಬಡತನ
ನಿವಾರಣೆ ಮತ್ತು ದುರ್ಗೆಯಾಗಿ ನಮ್ಮೆಲ್ಲರಿಗೆ ರಕ್ಷಣೆ ದೊರೆಯು
ವಂತಾಗಬೇಕು. — ಸಾಧ್ವಿ ಉಮಾ ಭಾರತಿ.
೫. ಹಣವನ್ನು ನೀರಿನಂತೆ ಗಳಿಸಿ, ದೇವರ ತೀರ್ಥದಂತೆ ಬಳಸಿ. -ಗಾದೆ.
೬. ಹಬ್ಬ ಹರಿದಿನಗಳನ್ನು ಆಚರಿಸುವ ಉದ್ದೇಶ -ದೈವೀಶಕ್ತಿಯ
ಚಿಂತನೆ ಹುಟ್ಟಿಸುವುದು. ಬದುಕಿಗೆ ಚೇತನ ತುಂಬುವ ಉನ್ನತ
ಮೌಲ್ಯಗಳನ್ನು ಬೋಧಿಸುವುದು. ಜನಜೀವನಕ್ಕೆ ಪೂರಕವಾಗುವ
ಮನನೀಯ ಸಂದೇಶಗಳನ್ನು ಸಾರುವುದು. –ಒಡಿಯೂರು ಶ್ರೀ
ಗುರುದೇವಾನಂದ ಸ್ವಾಮೀಜಿ.
೭. ಮಾನವ ಕೆಟ್ಟ ಕೆಲಸ ಮಾಡಲು ಯೋಚಿಸುವುದಿಲ್ಲ. ಆದರೆ
ಒಳ್ಳೆಯ ಕೆಲಸ ಮಾಡಲು ಯೋಚಿಸುತ್ತಾನೆ. ಎಲ್ಲ ಮತಗಳು
ಮಾನವೀಯತೆಯನ್ನು ಬೋಧಿಸಿವೆ. ಮತಗಳ ಆಚರಣೆಯಲ್ಲಿ
ಭಿನ್ನತೆ ಇರಬಹುದು. ಆದರೆ ಭಿನ್ನತೆಗಿಂತ ಹೆಚ್ಚು ಸಮಾನ
ಅಂಶಗಳಿವೆ ಎಂಬುದನ್ನು ಗಮನಿಸ ಬೇಕು. -ಪೇಜಾವರ ಶ್ರೀ
ವಿಶ್ವೇಶ ತೀರ್ಥರು.
೮. ಕೇಳುವ ಕಿವಿ ಇಲ್ಲದಾಗ ಶಬ್ದವೊಂದು ಶಬ್ದ ವಾಗುವುದಿಲ್ಲವೇ ?
ಯಾರೂ ಕೇಳುವವರು ಇಲ್ಲವೆಂದು ಸದ್ದಿಲ್ಲದೇ ಮರ ಉರುಳುವುದೇ ?
ಕೇಳುವ ಕಿವಿಗಾಗಿ, ನೋಡುವ ಕಣ್ಣಿಗಾಗಿಯೇ ಎಲ್ಲವೂ ನಡೆಯುವುದಿಲ್ಲ.
೯. ಸಂತೋಷವೆಂದರೆ ಮದ್ಯಪಾನ ಸೇರಿದಂತೆ ಇನ್ನಿತರ ದುಶ್ಚಟಗಳಿಂದ
ಬರುವಂತಹದ್ದಲ್ಲ. ಅದು ವಿಕೃತ ಸಂತೋಷ. ನೃತ್ಯ , ಶಿಲ್ಪ, ನಾಟ್ಯ
ಕಲೆಗಳಿಂದ ಪ್ರಾಪ್ತಿಯಾಗುವುದು ಸಾತ್ವಿಕ ಸಂತೋಷ. ನೃತ್ಯ ಕಲೆ -ಸಂಗೀತ
ಕಲೆಗಳಲ್ಲಿ ನಮ್ಮನ್ನು ತೊಡಗಿಸಿ ಕೊಂಡಾಗ ದೈಹಿಕ, ಮಾನಸಿಕ
ವ್ಯಾಯಾಮವಾಗಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.
ನೃತ್ಯ , ಸಂಗೀತ ಸಮಾಜಕ್ಕೆ ಅಲಂಕಾರ. -ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ.
೧೦. ಎಷ್ಟೇ ಎತ್ತರಕ್ಕೇರಿದರೂ, ಹಾರಿದರೂ ಕೊನೆಗೊಮ್ಮೆ ಎಲ್ಲಿಂದ ಬಂದೆವೋ
ಅಲ್ಲಿಗೇ ಬರಬೇಕು. ಗುರುತ್ತ್ವಾಕರ್ಷಣೆಯ ಸಂದೇಶವೇ ಅದು.
ಮೂಲ:ಸಂಗ್ರಹ.

ಸುಭಾಷಿತಗಳು.

೧. ದೋಣಿಗೆ ನೀರು ನುಗ್ಗದ ಹೊರತು ಮುಳುಗಲು ಸಾಧ್ಯವಿಲ್ಲ.
ಹಾಗೆಯೇ ನಕಾರಾತ್ಮಕ ಭಾವನೆಗಳು ನುಗ್ಗದಂತೆ ಎಚ್ಚರಿಕೆ ವಹಿಸಿ.
೨. ನೀವು ಧೈರ್ಯದಿಂದ ಇದ್ದಷ್ಟೂ ಜೀವನ ಅರಳುತ್ತದೆ.
ಧೈರ್ಯಗುಂದಿದರೆ ಬದುಕು ಕೂಡ ಮುದುಡುತ್ತದೆ.
೩ಸ್ವಾವಲಂಬನೆ ಸುಖಕರ, ಪರಾವಲಂಬನೆ ದುಃಖಕರವಾಗಿದೆ.
೪. ಮಲವಿರದ ಮೈ ಯಿರದು, ಕೊಳೆ ಇರದ ಮನವಿರದು. -ಡಿ. ವಿ. ಜಿ.
೫. ಈ ಜಗತ್ತಿಗೆ ಬಿಸಿ ತಲೆಗಳಿಗಿಂತ ತಂಪಾದ ಹೃದಯಗಳ
ಅಗತ್ಯ ಹೆಚ್ಚಾಗಿದೆ.
೬. ಜೋರಾಗಿ ಮಾತಾಡಿದಾಗ ಸುಮ್ಮನಿರು ಅಂದವರೇ, ಸುಮ್ಮನಿದ್ದಾಗ
ಏನಾಗಿದೆ ಅಂತ ಕೇಳ್ತಾರೆ.
೭. ಕಡಲಿನ ಎದುರಿಗೆ ಹನಿಗೆ ಅದೆಂಥಾ ಪ್ರದರ್ಶನ ?
೮. ಅಂದಿನವರು ”ಗುರುವೇ ನಮಃ” ಎನ್ನುತ್ತಿದ್ದರು. ಈಗಿನವರು
”ಗುರು ಏನು ಮಹಾ?” ಅಂತಾರೆ.
೯. ಮಾತಿಗೆ ಮಾತು ಸೇರಿದರೆ ನುಡಿ; ತಾಕಿದರೆ ಕಿಡಿ . ನೆನಪಿಡಿ.
೧೦. ನಗು ಮತ್ತು ಮೌನ ಪ್ರಭಾವಿ ಅಸ್ತ್ರ. ನಗು ಸಮಸ್ಯೆಯನ್ನು
ಪರಿಹರಿಸುತ್ತದೆ. ಮೌನ ಸಮಸ್ಯೆಯನ್ನು ತಪ್ಪಿಸುತ್ತದೆ.
೧೧. ಮನುಷ್ಯ ಆನಂದಮಯವಾಗಿ ಜೀವಿಸಲು ಭುವಿಗೆ ಬಂದಿದ್ದಾನೆ.
ಹಾಗಾಗಿ ಬದುಕನ್ನು ಸಂತಸದಿಂದ ಸಾಗಿಸಬೇಕು. -ಡಾ. S. ರಾಧಾಕೃಷ್ಣನ್.
೧೨. ರೂಢಿಯಲ್ಲಿರುವ ಪ್ರತಿಯೊಂದು ಸಂಸ್ಕಾರದ ಹಿಂದೆಯೂ
ಒಂದು ವಿಜ್ಞಾನವಿದೆ. ಅದನ್ನು ಅರ್ಥಮಾಡಿಕೊಂಡಾಗ ಮಾತ್ರವೇ
ಆಚರಣೆಗೆ ಬೆಲೆ ಬರುತ್ತದೆ.
೧೩. ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ ?
೧೪. ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿಸಿ ಮನುಷ್ಯತ್ವ
ನಿರ್ಮಾಣ ಮಾಡುವುದೇ ನಿಜವಾದ ವಿದ್ಯಾಭ್ಯಾಸ. .
೧೫.ಸುತ್ತಿಗೆಯನ್ನು ಮಾತ್ರ ಹಿಡಿದು ಹೊರಟವನಿಗೆ ಪ್ರಪಂಚದ
ಎಲ್ಲ ವಸ್ತುಗಳೂ ಮೊಳೆಗಳಂತೆಯೇ ಕಾಣುತ್ತವಂತೆ.
೧೬. ರಾಮನಿಗಿದ್ದುದು ಲೋಕಾರಾಧನೆಯ ಚಿಂತೆ; ಇಂದಿನವರಿಗೋ
ಪೀಠಾರಾಧನೆಯ ಚಿಂತೆ.
೧೭.ಇರುವುದು ಒಂದೇ ಧರ್ಮ; ಅದುವೇ ಪ್ರೇಮ ಧರ್ಮ– ಪುಟ್ಟುಪರ್ತಿ
ಸಾಯಿಬಾಬ
೧೮. ನಮ್ಮ ಯೋಚನೆಗಳು ವಾಸ್ತವಕ್ಕೆ ತೆರೆದು ಕೊಳ್ಳುವಂತಿರಬೇಕು.
ಅತಿಯಾದ ನಿರೀಕ್ಷೆ ನಿರಾಸೆಯ ಮೊತ್ತವನ್ನು ಹೆಚ್ಚಿಸುತ್ತದೆ.
೧೯. ಹಠದಿಂದ ಬುದ್ಧಿ ಕುಂಠಿತ.
೨೦. ಕೋಪ ಬಂದಾಗ ಕೈಗೊಳ್ಳುವ ನಿರ್ಧಾರಗಳು, ಬಿರುಗಾಳಿ ಎದ್ದಾಗ
ದೋಣಿಯಲ್ಲಿ ಸಮುದ್ರಯಾನ ಕೈಗೊಂಡಂತೆ.
ಮೂಲ:ಸಂಗ್ರಹ. .

Divine Corner.

 1. God knows the heart of each person and one’s innermost needs, feelings and fears. It’s in His power to give each person exactly what he or she needs.
 2. Troubles, like a washing machine, twist us and knock us around, and in the end, we come out brighter and better than before.
 3. To  see and understand the big picture, you’ve got to meet the Master Painter.
 4. Keep your face toward the light and the darkness will never be able to close in on you.
 5. Relax and enjoy life. You’ll never live this day again.
 6. Though God’s ways of operating may perplex us at times, if we trust Him, in due time we will understand.
 7. The way to be happy is to make someone happy. Past is history. Future is mystery. Live in the real.We are often lost in the world of becoming and not living in the world of being. Live the moment with totality. Tomorrow may never come. God is not in the future but in the present.
 8. Make God your partner in every undertaking. It’s only when we act to the best of our ability and also ask God to act through us, that we draw His power.
 9.  O,God! Give me health, wealth and longevity; and above all, the wisdom to cling to YOU till eternity.-”A Prayer” by Dr.Venkataramana K.V.
 10. Oh Almighty! may Thy compassion and grace pervade all souls and bring down the pains and wipe away the tears.
 11. Source:Collection.

ನಿಮಗೆ ಗೊತ್ತೇ ?

೧. ಆಯುರ್ವೇದದಲ್ಲಿ ”ರಸ ಶಾಸ್ತ್ರ” ಎಂಬ ವಿಭಾಗದಲ್ಲಿ
೯ ಬಗೆಯ ಹರಳುಗಳ ಬಗ್ಗೆ ವ್ಯಾಖ್ಯಾನವಿದೆ.
ಹರಳು ————————————–ಗ್ರಹ
ಮಾಣಿಕ್ಯ—ಸೂರ್ಯ .

ಮುತ್ತು– ಚಂದ್ರ .
ಪ್ರವಾಳ –ಮಂಗಳ.
ತಾರ್ಕ್ಸ್ಯ –ಬುಧ.
ಪುಷ್ಯರಾಗ– ಗುರು.
ಹೀರಕ –ಶುಕ್ರ.
ನೀಲಮಣಿ– ಶನಿ.
ಗೋಮೇಧಿಕ– ರಾಹು.
ವಿದೂರಕ –ಕೇತು.
ಈ ೯ ಹರಳುಗಳು ನವಗ್ರಹಗಳ ಮೇಲೆ ತಮ್ಮದೇ ಆದ
ಪ್ರಭಾವ ಹೊಂದಿವೆ.
ಹರಳುಗಳು ಹಾರದ ಬಂಧನದಲ್ಲಿ ಉಪಯೋಗಿಸಲ್ಪಡುತ್ತವೆ.
ಮಾತ್ರವಲ್ಲದೆ ಶರೀರದ ಸಮಸ್ಥಿತಿಯನ್ನು ಕಾಪಾಡುತ್ತವೆ.
ದೇಹದ ವ್ಯಾಧಿ, ಮುಪ್ಪನ್ನು ಹೋಗಲಾಡಿಸುವಲ್ಲಿ ಸಹಕರಿಸುತ್ತವೆ.
ನಮ್ಮ ಗ್ರಹಗಳಿಗೆ ಅನುಸಾರವಾಗಿ ಅದಕ್ಕೆ ತಕ್ಕಂತಹ ಹರಳುಗಳನ್ನು
ಉಂಗುರ /ಸರದ ರೂಪದಲ್ಲಿ ಧರಿಸುವುದರಿಂದ ಗ್ರಹಗಳು ಸೂಸುವ
ಕೆಟ್ಟ ಶಕ್ತಿಗಳನ್ನು ತಮ್ಮ ಶಕ್ತಿಗಳಿಂದ ನಿಷ್ಕ್ರಿಯ ಗೊಳಿಸುತ್ತವೆ
ಹಾಗೂ ಅದೃಷ್ಟವನ್ನು ಬದಲಾಯಿಸುತ್ತವೆ.
೨. ಗಾಂಧೀಜಿ ನಡೆಸುತ್ತಿದ್ದ ”ಹರಿಜನ” ಪತ್ರಿಕೆಯ ಕನ್ನಡ ಅನುವಾದಕರು
–ಸಾಹಿತಿ ಸಿದ್ಧವನಹಳ್ಳಿ ಕೃಷ್ಣ ವರ್ಮರು.
೩. ಬ್ರಿಟಿಷರ ಆಳ್ವಿಕೆಯಲ್ಲಿ ದಿಲ್ಲಿ ಭಾರತದ ರಾಜಧಾನಿ ಆದುದು
೧೯೧೨ರಲ್ಲಿ . ಇದಕ್ಕೂ ಮುಂಚೆ ಕಲ್ಕತ್ತಾ ಬ್ರಿಟಿಷರ ರಾಜಧಾನಿಯಾಗಿತ್ತು.
೪. ಚಿನ್ನ ಆಪತ್ಕಾಲದ ಆಪದ್ಬಾಂಧವ. ಮಕ್ಕಳಿಗೆ ಕಿವಿ ಚುಚ್ಚುವುದರಿಂದ

ಆರೋಗ್ಯ ರಕ್ಷಣೆಯಾಗುತ್ತದೆ. ಹೆಣ್ಮಕ್ಕಳಿಗೆ ಮೂಗು ಚುಚ್ಚುವುದರಿಂದ
ಚಿತ್ತವನ್ನು ಸ್ಥಿಮಿತದಲ್ಲಿರಿಸಿ ಕೊಳ್ಳಲು ಸಹಾಯಕ ವಾಗುತ್ತದೆ
ಎಂಬ ನಂಬಿಕೆಯಿದೆ.
೫. ಪಂಚ ಲೋಹಗಳು -ಸ್ವರ್ಣ, ರಜತ,ತಾಮ್ರ, ಸೀಸ, ಕಬ್ಬಿಣ.
ಮೂಲ:ಸಂಗ್ರಹ .

ಧನ್ವಂತರಿ.

 

೧. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮೂತ್ರ ಕೋಶದಲ್ಲಿರುವ
ಕಲ್ಲುಗಳನ್ನು ನಿವಾರಿಸಬಹುದು.
೨. ಹರಳೆಣ್ಣೆಯನ್ನು ತೆಂಗಿನೆಣ್ಣೆ ಜೊತೆ ಸೇರಿಸಿ ತಲೆಗೆ ಹಚ್ಚಿದರೆ
ಕೂದಲು ಚೆನ್ನಾಗಿ ಬೆಳೆಯುತ್ತದೆ.
೩. ಸೀತಾಫಲ ಹಣ್ಣಿನ ಸೇವನೆಯು Type -೨ diabetes ನಿಂದ
ರಕ್ಸಿಸುತ್ತದೆ.
೪. ಮೂಗಿನಿಂದ ರಕ್ತಸ್ರಾವ ವಾಗುತ್ತಿದ್ದರೆ ಈರುಳ್ಳಿಯ ರಸವನ್ನು
ಮೂಸಬೇಕು ಹಾಗೂ ಹಸಿ ಈರುಳ್ಳಿಯನ್ನು ಸೇವಿಸಬೇಕು.
೫. ಚೇಳು ಅಥವಾ ಜೇನುಹುಳ ಕಡಿತಕ್ಕೆ ಉಪ್ಪುನೀರು ಹಾಕಿ ಉಜ್ಜಿದರೆ
ನೋವು ಶಮನವಾಗುತ್ತದೆ.
೬.ಶುಂಠಿ ರಸವನ್ನು ತುಪ್ಪದೊಂದಿಗೆ ಬೆರೆಸಿ ಕುಡಿದರೆ ಬೆನ್ನು ನೋವು
ಗುಣವಾಗುತ್ತದೆ.
೭. ಕಾರಿನಲ್ಲಿ ಹೆಚ್ಚು ಕಾಲ ಇಟ್ಟಿರುವ ಬಾಟಲಿಯಿಂದ ನೀರು
ಕುಡಿಯ ಬಾರದು. ಕಾರಿನ ಉಷ್ಣಾoಶ ವನ್ನು ಹೀರಿಕೊಂಡ ಬಾಟಲಿ
ನೀರಿಗೆ dioxin ಎನ್ನುವ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ.
ಇದು ಸ್ತನ cancer ಗೆ ಕಾರಣವಾಗುವ ಬಹು ಮುಖ್ಯ ಅಂಶಗಳಲ್ಲಿ ಒಂದು.
೮. ನಿಯಮಿತವಾಗಿ ಬಾದಾಮಿ ಹಾಲನ್ನು ಕುಡಿಯುವುದರಿಂದ
ಮೂಳೆಗಳು ದೃಢವಾಗುತ್ತವೆ. ಹಾಗೂ ರೋಗ ನಿರೋಧಕ ಶಕ್ತಿಯೂ
ಹೆಚ್ಚುತ್ತದೆ.
೯. ಬಸಳೆ ಸೊಪ್ಪನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ
ರಕ್ತಹೀನತೆಯನ್ನು ನಿವಾರಿಸ ಬಹುದು.
೧೦.Vitamin E ಜೀವಸತ್ತ್ವವನ್ನು ಹೊಂದಿರುವ ಬಾದಾಮಿ , ಗೋಡಂಬಿ,
ಮುಂತಾದ ಒಣಹಣ್ಣು ಗಳನ್ನು ನಿಯಮಿತವಾಗಿ ಸೇವಿಸುವುದರಿಂದ
ನೆನಪಿನ ಶಕ್ತಿ ಹೆಚ್ಚುತ್ತದೆ.
೧೧. ಸಪೋಟ ಹಣ್ಣಿನ ನಿಯಮಿತ ಸೇವನೆಯಿಂದ ನಿದ್ರಾಹೀನತೆಯನ್ನು
ತಡೆಯಬಹುದು.
೧೨. ಹಾಗಲಕಾಯಿಯ ರಸ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರಸಿ
ಸೇವಿಸುವುದರಿಂದ ರಕ್ತ ಶುದ್ಧ ಗೊಳ್ಳುತ್ತದೆ.
೧೩.ಅರ್ಧ ಚಮಚ ನೆಲ್ಲಿಕಾಯಿಯ ಪುಡಿಗೆ ಅರ್ಧ ಚಮಚ ಜೇನುತುಪ್ಪವನ್ನು
ಬೆರೆಸಿಕೊಂಡು ಪ್ರತಿದಿನ ಮುಂಜಾನೆ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.
೧೪.ನಿಂಬೆಯ ರಸವನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ಅಲರ್ಜಿಯನ್ನು
ಗುಣಪಡಿಸಬಹುದು.
೧೫. ಒಣದ್ರಾಕ್ಷಿಯ ನಿಯಮಿತ ಸೇವನೆಯಿಂದ ಮೂತ್ರಕೋಶದಲ್ಲಿ
ಕಲ್ಲು ಉಂಟಾಗುವುದನ್ನು ತಡೆಯಬಹುದು.
ಮೂಲ :ಸಂಗ್ರಹ.

ಸೂಕ್ತಿ ಸಂಗ್ರಹ.

೧. ಕಣ್ಣು ಇಷ್ಟ ಪಟ್ಟು ನೋಡಿದವರನ್ನು ಮರೀಬೋದು.
ಆದರೆ ಮನಸ್ಸು ಇಷ್ಟ ಪಟ್ಟು ಒಪ್ಪಿದವರನ್ನು ಮರೆಯೋಕಾಗೋಲ್ಲ.
ಯಾಕಂದ್ರೆ ಕಣ್ಣಿಗೆ ನೂರಾರು ಮುಖ, ಆದ್ರೆ ಮನಸ್ಸಿಗೆ ಒಂದೇ ಮುಖ.
೨. ಒಬ್ಬರಿಗೆ ನೋವು ಮಾಡೋದೆಂದರೆ ಮರವನ್ನು ಕಡಿದು
ಉರುಳಿಸಿದಂತೆ ಕೆಲವೇ ನಿಮಿಷಗಳ ಕೆಲಸ… ಒಬ್ಬರನ್ನು ಸಂತೋಷ
ಪಡಿಸುವುದೆಂದರೆ ಗಿಡವನ್ನು ನೆಟ್ಟು ಮರವಾಗಿ ಬೆಳೆಸಿದಂತೆ
ತುಂಬಾ ಸಮಯ,ಪ್ರೀತಿ, ತಾಳ್ಮೆ , ಕಾಳಜಿಯ ಅಗತ್ಯವಿರುತ್ತದೆ.
೩. ಬದುಕು ಯಾವತ್ತೂ ನಮ್ಮ ಆಲೋಚನೆಗಳ ಪ್ರತಿಬಿಂಬ.
ಹಾಗಾಗಿ ಒಳ್ಳೆಯ ವಿಷಯಗಳನ್ನೇ ಯೋಚಿಸಿ.
೪. ಕಣ್ಣೀರು ಸುರಿಸುವುದರಿಂದ ಜೀವನ ನಡೆಸಲು ಸಾಧ್ಯವಿಲ್ಲ.
ಬೆವರ ಹನಿ ಸುರಿಸುವುದರಿಂದ ಮಾತ್ರ ಜೀವನ ನಡೆಸಲು ಸಾಧ್ಯ.
೫. ಎಲ್ಲರಿಗೂ ಬೇಕಾಗುವ ”ಹಣ್ಣು ”ಕೈ ಸೇರುತ್ತದೆ. ಯಾರಿಗೂ
ಬೇಡವಾದ ಬೀಜ ಭೂಮಿ ಸೇರುತ್ತದೆ. ಬೇಡವಾದ ಬೀಜದೊಳಗೆ
ಸಾವಿರಾರು ಹಣ್ಣುಗಳು ಬಿಡುವ ಕಾಲ ಬಾರದೆ ಇರದು.
ತಿರಸ್ಕರಿಸುವವರೇ ಪುರಸ್ಕರಿಸುವಂಥ ಕಾಲವೇ ಸಾಧನೆಯ ಬದುಕು.
೬. ಕನಿಕರ ಇರೋರಿಗೆ ಕಷ್ಟ ಜಾಸ್ತಿ. ಒಳ್ಳೆ ಮನಸ್ಸು ಇರೋರಿಗೆ
ದುಃಖ ಜಾಸ್ತಿ.
೭. ಪ್ರಪಂಚದಲ್ಲಿ ಕಣ್ಣೀರ ಹನಿಗಿಂತ ಬೆವರ ಹನಿ ಶ್ರೇಷ್ಠ.
ಕಣ್ಣೀರು ಬರುವ ಹಾಗೆ ನಟಿಸಬಹುದು. ಬೆವರ ಹನಿ ಬರುವ ಹಾಗೆ
ನಟಿಸಲಾಗದು.
೮. ಪ್ರೀತಿ, ಪ್ರೇಮಗಳು ಬಾಂಧವ್ಯಗಳನ್ನು ಕಟ್ಟುತ್ತವೆ. ಕಟುನುಡಿಗಳು
ಅದನ್ನು ತುಂಡರಿಸುತ್ತವೆ. ”ಕಟ್ಟು”ವುದೋ ಅಥವಾ cut ಮಾಡುವುದೋ
ನಮ್ಮ ಕೈಲೇ ಇದೆ ಅಲ್ಲವೇ ?
೯. ಬೀಗವನ್ನು ತಯಾರಿಸುವಾಗ ಕೀಲಿ ಕೈಯನ್ನೂ ತಯಾರಿಸಲಾಗುತ್ತದೆ.
ಸಮಸ್ಯೆ ಬಂದಾಗ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ. ಆದ್ದರಿಂದ
ಕಷ್ಟಗಳು ಬಂದಾಗ ನಿರಾಶರಾಗದಿರಿ. ಧೈರ್ಯದಿಂದ ಎದುರಿಸಿ.
ನಿಮ್ಮ ಕಷ್ಟಕ್ಕೆ ಪರಿಹಾರ ಇದ್ದೇ ಇದೆ ಎಂಬುದು ತಿಳಿದಿರಲಿ.
೧೦. ದಿಲ್ಲಿಯ kutub minaar, ಅದರ ಎತ್ತರದ ಮುಂದೆ ನಾನು ಯಾವ
ಲೆಕ್ಕ ಗೆಳೆಯಾ?
ಅದರ ಹತ್ತಿರದಿಂದ ಸ್ವಲ್ಪ ದೂರಬನ್ನಿ, ಅದರ ಸರಿಸಮಾನಾಗ್ತೀರಿ.
೧೧. ನಾವು ಜೀವಂತವಾಗಿರುವಾಗ ಸತ್ತವರಂತೆ ಬದುಕುವುದು
ಸಾವಿಗಿಂತಲೂ ಕೆಟ್ಟದಾಗಿರುತ್ತದೆ.
೧೨. ಕೆಲವು ಮನುಷ್ಯರು ಮೋಡಗಳಿದ್ದಂತೆ. ಅವರು ನಿಮ್ಮಿಂದ
ದೂರವಾದಾಗ ನಿಮ್ಮ ದಿನಪ್ರಕಾಶಮಾನವಾಗುತ್ತದೆ. ಅಂಥ
ಜನರಿಂದ ಆದಷ್ಟು ಅಂತರ ಕಾಪಾಡಿಕೊಳ್ಳಿ.
೧೩. ಅವಶ್ಯವಿದ್ದಷ್ಟು ಮಾತ್ರ ಐಶ್ವರ್ಯ … ಉತ್ತಮ ಸಂಸ್ಕಾರವೇ
ಸೌoದರ್ಯ… ಮಧುರ ನುಡಿಗಳೇ ಮಾಧುರ್ಯ … ಹೃದಯ
ವೈಶಾಲ್ಯವೇ ಔದಾರ್ಯ…. ಕೇಡು ಬಯಸದಿರುವುದೇ ಸತ್ಕಾರ್ಯ
ಹೀಗಿರಲಿ ನಮ್ಮ ಆಂತರ್ಯ.
೧೪. ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ.
ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ
ಇದು ಪೃಕೃತಿ ನಿಯಮ.
೧೫. ಧನಾತ್ಮಕ ಚಿಂತನೆ ಮಾಡುವವರ ಅರ್ಧ ಘಂಟೆ ಸಹವಾಸದಲ್ಲಿ
ಜೀವನದಲ್ಲಿ ಉತ್ಸಾಹ ಪಡೆದು ಆಯುಷ್ಯವು ಹತ್ತು ವರ್ಷ ಜಾಸ್ತಿ
ಯಾಗುವುದು.
ಮೂಲ:Facebook quotes.