ನಿಮಗೆ ಗೊತ್ತೇ?

೧.ರಾವಣನ ಸಹೋದರ ಖರಾಸುರ ಸ್ವರ್ಗದ ಆಧಿಪತ್ಯಕ್ಕಾಗಿ
ಶಿವನನ್ನು ಒಲಿಸಿ ಕೊಳ್ಳಲು ತಪಸ್ಸು ಕೈ ಕೊಂಡಾಗ, ”ಕೈಲಾದಷ್ಟು
ಶಿವಲಿಂಗಗಳನ್ನು ಪಾತಾಳದಿಂದ ನಿನ್ನ ಊರಾದ ಲಂಕೆಗೆ ತೆಗೆದು
ಕೊಂಡು ಹೋಗಿ ಪ್ರತಿಷ್ಠಾಪಿಸಿದರೆ ನಿನ್ನ ಬಯಕೆ ಸಿದ್ಧಿಸುತ್ತದೆ”
ಎಂದು ಶಿವ ತಥಾಸ್ತು ಎಂದಿದ್ದ. ಅದರಂತೆ ಪಾತಾಳದಿಂದ ಮೂರು
ಶಿವಲಿಂಗಗಳನ್ನು ಹಿಡಿದುಕೊಂಡು ಬರುತ್ತಿದ್ದಾಗ ಗಣಪತಿ
ಎದುರಾಗಿದ್ದ. ಅವನೊಂದಿಗೆ ಯುದ್ಧಕ್ಕೆಂದು ಶಿವಲಿಂಗಗಳನ್ನು
ಭೂಮಿಯ ಮೇಲಿಟ್ಟಾಗ, ಅದು ಇದ್ದಲ್ಲೇ ಪ್ರತಿಷ್ಠಾಪನೆಯಾಗುತ್ತದೆ.
ಸೋಮ ಭಾಗ (ಎಡ ಭುಜ )ದಲ್ಲಿನ ಲಿಂಗ ಇಟ್ಟ ಸ್ಥಳ ಸೋಮೇಶ್ವರ,
ಶಿರ (ತಲೆ)ದಲ್ಲಿದ್ದ ಲಿಂಗ ಪ್ರತಿಷ್ಠಾಪಿಸಿದ ಊರು ಶಿರದಕಲ್ಲು(ಸುರತ್ಕಲ್)
ಹಾಗೂ ಕೊನೆಯ ಲಿಂಗ ಬಲ ಭುಜ ಅಂದರೆ ಉಚ್ಚ ಭಾಗದಲ್ಲಿದ್ದ
ಲಿಂಗ ಪ್ರತಿಷ್ಠಾಪಿಸಿದ ಜಾಗ ಉಚ್ಛಶಿಲಾ (ಉಚ್ಚಿಲ)ಎಂಬ ಹೆಸರು
ಪಡೆಯಿತು ಎನ್ನುತ್ತದೆ ಪುರಾಣ.
೨. ಶುಕ್ರಾಚಾರ್ಯರು ರಾಕ್ಷಸರ ಗುರು. ಅವರ ಹೆಸರಿನಿಂದಲೇ ಶುಕ್ರವಾರ
ಎಂಬ ಹೆಸರು ಬಂದಿದೆ. ಶುಕ್ರಾಚಾರ್ಯರ ತಂದೆ ಭ್ರಗು ಮಹರ್ಷಿಗಳು
ಬ್ರಹ್ಮ ದೇವರ ಸಂತಾನದಲ್ಲಿ ಒಬ್ಬರು. ಈ ಭ್ರಗು ಮಹರ್ಷಿಗಳು
ಲಕ್ಷ್ಮೀ ದೇವಿಯ ತಂದೆಯೂ ಹೌದು. ಅದಕ್ಕೇ ಲಕ್ಷ್ಮೀ ದೇವಿಗೆ ”ಭಾರ್ಗವಿ”
ಎನ್ನುವ ಹೆಸರು ಸಹ ಇದೆ. ಶುಕ್ರಾಚಾರ್ಯರು ಲಕ್ಷ್ಮೀ ದೇವಿಗೆ ಸಹೋದರರು.
ಅದಕ್ಕೆ ಶುಕ್ರವಾರ ಎಂದರೆ ಲಕ್ಷ್ಮಿಗೆ ಅಚ್ಚುಮೆಚ್ಚು. ಲಕ್ಷ್ಮಿ ದೇವಿಗೆ ಕೆಂಪು
(ಶಕ್ತಿಯ ಸಂಕೇತ) ಮತ್ತು ಹಸಿರು ಬಣ್ಣ (ಸಮೃದ್ಧಿ ಮತ್ತು ಪೃಕೃತಿಯ
ಸಂಕೇತ) ಅಂದರೆ ತುಂಬಾ ಇಷ್ಟ. ಇನ್ನೊಂದು ಅರ್ಥದಲ್ಲಿ ಕೆಂಪು ಬಣ್ಣ

ಕುಂಕುಮದ ಪ್ರತೀಕ ಹಾಗು ಹಸಿರು ಬಣ್ಣ ಹಸಿರು ಬಳೆಗಳನ್ನು ಸಹ
ಸೂಚಿಸುತ್ತದೆ.
೩. ವಿಶ್ವ ವಂದಿತ ಗಣಪತಿ:ಜಪಾನಿನ ಪ್ರಾಚೀನ ಸಂಸ್ಕೃತಿಯಲ್ಲಿ ಗಣಪನು
ಹರ್ಷ ಮತ್ತು ಸಮತ್ವದ ದೇವತೆ. ಈತ ಬೌದ್ಧರ ಅವಲೋಕಿತೇಶ್ವರ.
ಮಂಗೋಲಿಯಾದಲ್ಲಿ ನೃತ್ಯ ಗಣಪತಿಯ ಪರಿಕಲ್ಪನೆ ಹೆಚ್ಚು ಪ್ರಿಯ.

ವಿದ್ಯೆ ಮತ್ತು ಶ್ರೇಷ್ಠತೆಯ ದೇವನಾಗಿಯೂ ಗಣಪನಿಲ್ಲಿ ವಿರಾಜಮಾನ.
ಥೈಲ್ಯಾಂಡಿನ ೭ನೇ ಶತಮಾನದ ಹಿಂದೂ ದೇವಾಲಯದಲ್ಲಿ ತನ್ನ
ಮುರಿದ ದಂತದಿಂದ ಮಹಾಭಾರತವನ್ನು ಬರೆದು ಕೊಳ್ಳುತ್ತಿರುವ
ವಿನಾಯಕನ ವಿಗ್ರಹವಿದೆ.
ಮೂಲ:ಸಂಗ್ರಹ.

Advertisements

ಪ್ರಾಣಿ ಪ್ರಪಂಚ.

೧. ಮೊಲಗಳಿಗೇಕೆ ದೊಡ್ಡ ಕಿವಿ ?
ಶತ್ರುಗಳನ್ನು ಪತ್ತೆಹಚ್ಚಿ ಸುರಕ್ಷತೆಗಾಗಿ ಓಡಿ ಹೋಗಲು ಈ ದೊಡ್ಡ
ಕಿವಿಗಳು ತುಂಬ ನೆರವಾಗುತ್ತವೆ. ಗಾಳಿಯಲ್ಲಿ ಬರುವ ಶಬ್ದತರಂಗಗಳು
ಕಿವಿಯೊಳಗೆ ತುಂಬ ಹೆಚ್ಚಾಗಿ ಪ್ರವೇಶಿಸುತ್ತವೆ . ಅತಿ ಸೂಕ್ಷ್ಮ ಧ್ವನಿಯೂ
ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಪೃಕೃತಿ ಅದಕ್ಕೆ ದೊಡ್ಡ ಕಿವಿಗಳನ್ನು
ಕೊಟ್ಟಿದೆ. ಮೊಲವು ಬಲಹೀನ ಹಾಗೂ ಪುಕ್ಕಲು ಪ್ರಾಣಿ. ಅವುಗಳಿಗೆ
ವಾಸನಾಶಕ್ತಿ ತುಂಬಾ ಇರುತ್ತದೆ. ಅವುಗಳ ಹಿಂಗಾಲು ಉದ್ದವಾಗಿರುತ್ತವೆ.
ಆದ್ದರಿಂದ ಅವು ತುಂಬಾ ವೇಗದಲ್ಲಿ ಓಡುತ್ತವೆ. ಮೊಲ ಒಂದು ತಾಸಿಗೆ
೬೫ ಕಿ. ಮೀ. ಓಡಬಲ್ಲುದು. ಪ್ರತಿ ವರ್ಷ ಸರಾಸರಿ ೧೦ ರಿಂದ ೧೨ ಮರಿ
ಗಳನ್ನು ಒಂದು ಮೊಲ ಹಾಕುತ್ತದೆ.
೨. ಜಿರಾಫೆಗಳು ೨೧ ಇಂಚು ಉದ್ದದ ನಾಲಗೆಯನ್ನು ಹೊಂದಿದೆ.
ಇದು ಎತ್ತರದಲ್ಲಿರುವ ವಸ್ತುಗಳನ್ನು ತಿನ್ನಲು ಸಹಕಾರಿ.
೩. ಕೋಗಿಲೆ ಮಾತ್ರವಲ್ಲ cow bird ಹೆಸರಿನ ಪಕ್ಷಿಯೂ ಕಾಗೆ ಹಾಗೂ
ಇತರ ಪಕ್ಷಿಗಳ ಗೂಡುಗಳಲ್ಲಿ ಮೊಟ್ಟೆ ಇಡುತ್ತವೆ. ಕಾಗೆಯು ಗೂಡುಮಾಡಿ
ಮೊಟ್ಟೆ ಇಡುವ ಅವಧಿಯಲ್ಲೇ ಕೋಗಿಲೆ ಮೊಟ್ಟೆ ಇಡುವ ಅವಧಿಯೂ
ಕಾಕತಾಳೀಯ. ಕೋಗಿಲೆಯ ದೇಹದ ಬಣ್ಣ ಕಪ್ಪು -ನೀಲಿಯ ಮಿಶ್ರಣ.
ಕೋಗಿಲೆಯ ಕಣ್ಣಿನ ವರ್ಣ ಪಟಲ ಕೆಂಪು ಬಣ್ಣವನ್ನುಂಟು ಮಾಡುವುದರಿಂದ
ಕೆಂಪಾಗಿ ಕಾಣುತ್ತದೆ.. ಅದರ ಕೊಕ್ಕು ಬೂದು-ಹಸಿರು ಮಿಶ್ರಣದ
ಬಣ್ಣದಿಂದ ಕೂಡಿದೆ.
೪. Ostrich ಪಕ್ಷಿಗಳು ಕುದುರೆಗಿಂತ ವೇಗವಾಗಿ ಓಡ ಬಲ್ಲವು ಮತ್ತು
ಸಿಂಹದಂತೆ ಘರ್ಜಿಸ ಬಲ್ಲವು.
೫. Swell Shark ನಾಯಿಯಂತೆ ಬೊಗಳ ಬಲ್ಲುದು. ಹಾಗಾಗಿ ಇದನ್ನು
ಬೊಗಳುವ Shark ಎನ್ನುತ್ತಾರೆ.
೬.. ಕಡಲ ಕೋಳಿ ಹಾರಾಡುತ್ತಿರುವಾಗಲೇ ನಿದ್ರಿಸ ಬಲ್ಲುದು.
೭. ಪ್ರಾಣಿಗಳಿಗೆ ೪ ಕಾಲುಗಳೇ ಇರಬಹುದು. ಆದರೆ ಕಾಲಮೇಲೆ ಕಾಲು
ಹಾಕ್ಕೊಂಡು ಕುಳಿತು ಕೊಳ್ಳಲು ಅವುಗಳಿಗೆ ಸಾಧ್ಯವಿಲ್ಲ.
೮. ಉತ್ತರ ಅಮೇರಿಕಾದಲ್ಲಿ ಕಂಡು ಬರುವ Peregrine Falcon ಹಕ್ಕಿ
ಗಂಟೆಗೆ ೩೨೦ ಕಿ.ಮೀ ವೇಗದಲ್ಲಿ ಹಾರಾಡ ಬಲ್ಲುದು.
೯. ಚಿಟ್ಟೆ ೪ ವಾರಗಳ ಬಳಿಕ ಮೊಟ್ಟೆಇಟ್ಟು ಸತ್ತು ಹೋಗುತ್ತವೆ.
ಚಿಟ್ಟೆಗೆ ಅಷ್ಟೊಂದು ಅಂದ ಕೊಟ್ಟ ಸೃಷ್ಟಿಕರ್ತ ಅದಕ್ಕೆ ಕೆಲವೇ
ದಿನಗಳ (೨ ರಿಂದ ೪ ವಾರಗಳ ಕಾಲ ಮಾತ್ರ)ಬದುಕು ಕೊಟ್ಟಿರುವುದು
ಬೇಸರದ ವಿಷಯ.
೧೦. ತಮ್ಮ ದೇಹದಿಂದ ಬೆಳಕನ್ನು ಹೊರಸೂಸುವ ಸುಮಾರು ೬೦೦
ಸಮುದ್ರ ಜೀವಿಗಳಿವೆ.
೧೧. ಎಲ್ಲಾ ರೀತಿಯ ರೋಗಗಳಿಗೂ ನಿರೋಧಕ ಶಕ್ತಿಯನ್ನು ಹೊಂದಿರುವ
ಶಾರ್ಕ್ ಗಳು ಯಾವ ರೋಗಕ್ಕೂ ಒಳಗಾಗುವುದಿಲ್ಲ.
೧೨. ಬಾತುಕೋಳಿಯ ಕೂಗು ಪ್ರತಿಧ್ವನಿಸುವುದಿಲ್ಲ.
೧೩.ಮೊಸಳೆಗಳು ಒಂದು ಕಣ್ಣು ತೆರೆದಿಟ್ಟು ಕೊಂಡೇ ನಿದ್ರಿಸುವ ಸಾಮರ್ಥ್ಯ
ಹೊಂದಿರುತ್ತವೆ. ತೆರೆದಿರುವ ಕಣ್ಣು ಮಿದುಳಿನ ಅರ್ಧಭಾಗವನ್ನು
ಸದಾ ಜಾಗ್ರತ ಸ್ಥಿತಿ ಯಲ್ಲಿಟ್ಟಿರುತ್ತದೆ.
೧೪. ರಕ್ತದ ಮರ Dragon. ಈ ಮರದ ಕಾಂಡವನ್ನು ಚೂರಿಯಿಂದ ಗೀರಿದರೆ
ದಳದಳನೆ ರಕ್ತ ಸುರಿಯುತ್ತದೆ. ಕೆನರಿ ದ್ವೀಪದಲ್ಲಿ(Canary Island) ಈ ಜಾತಿಯ ಒಂದು ಬೃಹತ್
ಮರ ಇದೆ. ಇದರ ವಯಸ್ಸು ೬,೦೦೦ ವರ್ಷಗಳನ್ನುದಾಟಿದೆ ಎಂದು
ಸಸ್ಯಶಾಸ್ತ್ರಜ್ಞರು ಎಣಿಕೆಹಾಕಿದ್ದಾರೆ.
೧೫. ಮನುಷ್ಯರು ತಮ್ಮ ಬದುಕಿನಲ್ಲಿ ೨ ಬಾರಿ ಮಾತ್ರ ಹಲ್ಲುಗಳನ್ನು
ಪಡೆದರೆ, ಮೊಸಳೆಗಳು ೪೦ ಬಾರಿ ಹಲ್ಲುಗಳನ್ನು ಪಡೆಯುತ್ತವೆ. ಆನೆಗಳು
ತಮ್ಮ ಜೀವಮಾನದಲ್ಲಿ ೬ಬಾರಿ ಹಲ್ಲುಗಳನ್ನು ಪಡೆಯುತ್ತವೆ.
ಕೊನೆಯ ಬಾರಿ ಹಲ್ಲುಗಳನ್ನು ಕಳೆದುಕೊಂಡ ಬಳಿಕ ಆನೆಗಳಿಗೆ
ಆಹಾರ ಸೇವಿಸುವುದೇ ಸಾಧ್ಯವಾಗುವುದಿಲ್ಲ.
ಮೂಲ:ಸಂಗ್ರಹ.

Collection of Quotes.

1.I am thankful to those special people in my life who

support me, uplift me and bring joy to my soul.

2.Comparison is the thief of joy.–Theodore Roosevelt.

3.Love me or hate me, both are in my favour;

If you love me, I will always be in your heart.

If you hate me, I’ll always be in your mind.

–William Shakespeare.

4.Expectation is the root of all heart-ache.–William

Shakespeare.

5.It is not in the stars  to hold our destiny but in ourselves.

6.Life is a comedy for those who think and a tragedy for

those who feel.

7.An honest man alter  his  ideas to fit the truth and a

dishonest man alters the truth to fit his ideas.

8.A man can achieve success, if he tries hard.

A woman can achieve success if she cries hard.

9.A man is as big as the things that made him angry.

10.Try not to become a man of success but rather try to

become a man of value.

11.Don’t worry about the people who don’t like you.

Enjoy the ones who love you.

12.We never know the love of parent till we become

parents ourselves.

13.Don’t get upset with people and situations because

both are powerless without your reaction.

14.Either you run the day or the day runs you.

15.”Arjuna, your mind is your friend and enemy.

If you control the mind, it is your friend. If your

mind controls you, it is your enemy.”

–Bhgavadgita.

Source:Collection.

 

Mother.

A mother is-

aMazing

lOving

sTrong

Happy

sElfless

gRaceful.

A mother may be educated or uneducated, but she is the ”Best Guide”

and the ”Last Hope” in the world, when you fail in your life.

Mother is the first person to welcome you in this world.

A mother is  the only person who carries you for 9 months

in her belly, 3 years in her arms and forever in her heart.

A mother’s dream is to see her children grow up to be happy,

healthy and successful. Her prayer is that her children will

love each other long after she is gone.

The greatest, unconditional and infinite love we will ever

experience is called MOTHER. A mother is she who can take

the place of all others but whose place no one else can take.

A mother understands what a child does not say.

Men are what their mothers made them.

Mother is a teacher of compassion, love and fearlessness.

If love is sweet as a flower, then the mother is that sweet

flower of love.I believe in ”Love at first sight”, because

I have been loving my mother since I opened my eyes.

Life doesn’t come with a manual; it comes with a mother.

There is no perfect way to be a good mother to bring up

children with different skills and abilities.

There was never a great man, who had not a great mother.

Mother is the name for God in the lips and hearts of little

children.

Source:Collection.

ಕನ್ನಡ ಸುಭಾಷಿತಗಳು.

೧. ಮಗನ ಯೋಗ್ಯತೆಯ ಅರಿವು ಅವನ ಮದುವೆಯ ನಂತರ.
ಮಗಳ ಯೋಗ್ಯತೆ ಅವಳ ಹರೆಯದ ವಯಸ್ಸಿನಲ್ಲಿ.
ಪತಿಯ ಯೋಗ್ಯತೆ ಹೆಂಡತಿಯ ಅನಾರೋಗ್ಯಾವಸ್ಥೆಯಲ್ಲಿ.
ಪತ್ನಿಯ ಯೋಗ್ಯತೆ ಗಂಡನ ಬಡತನಾವಸ್ಥೆಯಲ್ಲಿ.
ಗೆಳೆಯನ ಯೋಗ್ಯತೆ ಆಪತ್ಕಾಲದಲ್ಲಿ.
ಸೋದರನ ಯೋಗ್ಯತೆ ಜಗಳದ ಪ್ರಸಂಗದಲ್ಲಿ.
ಮಕ್ಕಳ ಯೋಗ್ಯತೆ ನಮ್ಮ ವೃದ್ಧಾಪ್ಯದಲ್ಲಿ ತಿಳಿಯುವುದು.
೨.ವಿಶಾಲವಾದ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡ ಬಹುದು.
ಆದರೆ ಒಂದು ಒಳ್ಳೆಯ ಹೃದಯವನ್ನು ನೋಡಬೇಕಾದರೆ
ನಮ್ಮ ಮನಸ್ಸು ವಿಶಾಲವಾಗಿರಬೇಕು.
೩. ಕ್ಷಣ ಕ್ಷಣಕ್ಕೂ ಬದಲಾಗುವುದು ಅಭಿಪ್ರಾಯ. ಯಾವ ಕ್ಷಣಕ್ಕೂ
ಬದಲಾಗದಿರುವುದು ನಿರ್ಧಾರ. ಆ ಕ್ಷಣಕ್ಕೆ ಸರಿಯಾಗಿ ಮಾತನಾಡುವುದು
ಅಭಿವ್ಯಕ್ತಿ. ಆ ಕ್ಷಣದ ಸರಿಯಾದ ಹೇಳಿಕೆಯೇ ತೀರ್ಮಾನ.
೪.ಕಡೇ ತನಕ ಮನುಷ್ಯನಿಗೆ ಪೂರ್ತಿ ಅರ್ಥವಾಗದೇ, ಪೂರ್ಣ ಉತ್ತರ
ಸಿಗದೇ ಉಳಿದು ಕೊಳ್ಳುತ್ತಲ್ಲಾ ,ಆ ಒಂದು ಪ್ರಶ್ನೆಯೇ ಜೀವನ.
೫. ದೊಡ್ಡೋರು ಹೇಳಿದ್ದು … ಉತ್ತಮರ ಕೋಪ ಕ್ಷಣಕಾಲ.
ಮಧ್ಯಮರ ಕೋಪ ಗಂಟೆ ಕಾಲ. ಅಧಮರ ಕೋಪ ದಿನವಿಡೀ ಇದ್ದರೆ
ದುರಾತ್ಮರ ಕೋಪ ಜೀವನ ಪರ್ಯಂತವಿರುತ್ತದೆ.
೬. ಅನುಮಾನ ಸುಳ್ಳಾಗಬಹುದು. ಆದರೆ ಅನುಭವ ಸುಳ್ಳಾಗಲಾರದು.
ಏಕೆಂದರೆ ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆಯಾಗಿರುತ್ತದೆ.
ಅನುಭವ ಜೀವನದಲ್ಲಿ ನಿಜವಾಗಿ ಪಡೆದುಕೊಂಡಿರುತ್ತೇವೆ.
೭. ನಿಮ್ಮ ಹೃದಯ ಎನ್ನುವುದು ಸುಂದರ ನೆನಪುಗಳನ್ನು ತುಂಬಿಡ
ಬೇಕಾದ ಸಂಗ್ರಹಾಲಯವೇ ಹೊರತು ದ್ವೇಷ, ಅಸೂಯೆ ಗಳನ್ನು
ಎಸೆಯುವ ಕಸದ ಬುಟ್ಟಿಯಲ್ಲ.
೮. ಕೋಪ ಎನ್ನುವುದು ಬೆಂಕಿ ಕಡ್ಡಿ ಇದ್ದಂತೆ. ಹೇಗೆ ಬೆಂಕಿ ಕಡ್ಡಿ ಬೇರೆ
ವಸ್ತುವನ್ನು ಸುಡುವ ಮೊದಲು ತನ್ನನ್ನು ಸುಟ್ಟು ಕೊಳ್ಳುತ್ತದೋ
ಅದೇರೀತಿ ಕೋಪವು ಬೇರೆಯವರಿಗಿಂತ ಮೊದಲು ನಮಗೇ ಹಾನಿ
ಯುಂಟು ಮಾಡುತ್ತದೆ.
೯. ಬದುಕಿನ ಒಂದು ವಿಚಿತ್ರ ನಿಯಮ -ಪ್ರೀತಿಸುವುದೆಲ್ಲಾ ಸಿಗುವುದಾದರೆ
ಕಣ್ಣೀರಿಗೆ ಬೆಲೆ ಎಲ್ಲಿದೆ?ಸಿಗುವುದೆಲ್ಲವನ್ನೂ ಪ್ರೀತಿಸುವುದಾದರೆ ಕಣ್ಣೀರಿಗೆ
ಅವಕಾಶ ಎಲ್ಲಿದೆ ?
೧೦.ಈ ಜೀವನದಲ್ಲಿ ಎಲ್ಲವೂ ಭಯ ಭರಿತ, ವೈರಾಗ್ಯವೊಂದೇ ನಿರ್ಭಯ.
ಭೋಗದಲ್ಲಿ ರೋಗದ ಭಯ, ಸಂಪತ್ತಿನಲ್ಲಿ ದರೋಡೆಕೋರರ ಭಯ ,
ಸೌಂದರ್ಯದಲ್ಲಿ ಮುಪ್ಪಿನ ಭಯ,ದೇಹದಲ್ಲಿ ಮರಣದ ಭಯ, ಪಾಂಡಿತ್ಯದಲ್ಲಿ
ಸೋಲಿನ ಭಯ, ಶಕ್ತಿಯಿದ್ದಲ್ಲಿ ಶತ್ರುಗಳ ಭಯ.
೧೧. ನಿಜ ವೈರಿ ಹೊರಗಿಲ್ಲ … ನಮ್ಮೊಳಗೇ ಇಹನು. ಉಸಿರು ನಿಲ್ಲುವವರೆಗೆ
ಕಾಡುವವನಿವನು.
೧೨. ಜೊತೇಲೇ ಇದ್ದುಕೊಂಡು ಒಬ್ಬಂಟಿ ಮಾಡೋರ ಜೊತೆ ಇರೋದಕ್ಕಿಂತ
ಅಂಥವರ ಸಹವಾಸದಿಂದ ದೂರ ಆಗಿ ನಾವೇ ಒಬ್ಬಂಟಿಯಾಗಿರೋದು
ಉತ್ತಮ. ಕೊನೇ ಪಕ್ಷ ಕಣ್ಣೀರು ಹಾಕೋದಾದ್ರೂ ತಪ್ಪುತ್ತೆ.
೧೩.ಕೆಲವು ಸಂಬಂಧಗಳು ಮುರಿದು ಹೋಗಲು ಮುಖ್ಯವಾದ ಕಾರಣಗಳೆಂದರೆ
–ಒಬ್ಬರು ಸರಿಯಾಗಿ ಮಾತನಾಡದಿರುವುದು;ಇನ್ನೊಬ್ಬರು ಸರಿಯಾಗಿ ಅರ್ಥ
ಮಾಡಿಕೊಳ್ಳದಿರುವುದು.
೧೪. ಹೃದಯ ಎಲ್ಲರ ಬಳಿ ಇರಬಹುದು. ಆದರೆ ಎಲ್ಲರೂ ಹೃದಯವಂತರಾಗಿರಲ್ಲ.
೧೫.ನಮ್ಮ ಜೀವನದಲ್ಲಿ ಕೆಲವು ಮಂದಿ ಕೊಡುಗೆಯಾಗಿ ಬಂದರೆ,ಇನ್ನೂ ಹಲವರು
ಪಾಠವಾಗಿ ಬರುತ್ತಾರೆ.
ಮೂಲ:ಸಂಗ್ರಹ.

Do You Know?

1.”Yogakshemam  vahamyaham”, the slogan of L.I.C. is

derived from the Bhagavadgita.

2. New Amsterdam becomes New York on September 8, 1664.

3.Ronald Amundsen, the explorer reached the South Pole and

North Pole first.

4.Hampi is the Kishkindha of Ramayana.

5.Upside down water falls exist in Waikiki beach, Oahu, Hawaii.

6. Indonesia is a country of 13,466 islands.

7. Christopher Columbus sighted Venezuela in 1498, August 1.

8.Salt Lake City was founded on July 24, 1847.It is the capital of

the U.S.state of  Utah.

9.In Chinese Alphabet(a system known as Hanyu Pinyin) there are

23 consonants and 24 vowels  that are formed from  a combination

of 26 letters of Roman Alphabet.

10.Researchers, studying the Turritopsis (the immortal jelly fish)

will lead to breakthroughs in reversing the human aging process.

11.Except human beings spiders are  the only other creatures that

sleep on their backs.

12.All animals shed basal and reflex tears but only human beings

shed emotional tears.

13.Kangaroo rat can go literally its entire life without once drinking

water.

14.The bulldog never sleeps.

15.Horses, zebras and elephants sleep standing up.

16. Majority of animals on earth lack eye lids so most animals sleep

with their eyes open.

Source:Collection.

ಭಕ್ತಿ ಸೌರಭ.

ಭಗವತ್ಸಾಕ್ಷಾತ್ಕಾರ ಪಡೆಯಲು ಭಕ್ತಿಯೇ ಪ್ರಧಾನವಾದದ್ದು.
ಭಕ್ತಿಯಲ್ಲಿ ಎರಡು ವಿಧ:-ನಿರಾಕಾರ ಭಕ್ತಿ ; ಸಾಕಾರ ಭಕ್ತಿ.
ಸಾಕಾರ ಭಕ್ತಿ ಸಾಧಾರಣ ಮಾನವನಿಗೆ ದಕ್ಕುವಂಥಾದ್ದು.
ನಿರಾಕಾರ ಭಕ್ತಿ ಜ್ಞಾನಿಗೆ ಮಾತ್ರ ಸಾಧ್ಯ.ವೈದಿಕ ಪರಂಪರೆಯಲ್ಲಿ
ಸಾಕಾರ ಭಕ್ತಿ ನವ ವಿಧ:ಶ್ರವಣ, ಕೀರ್ತನ,ಸ್ಮರಣ, ಸೇವನ,
ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮಾರ್ಪಣ.
ಅಂತೆಯೇ ಭಗವಂತನನ್ನು ಸೇರಲು ಬೇಕಾದ ಭಾವಗಳಲ್ಲಿ
ರೂಢಿಗತವಾದವು ಪಂಚ ವಿಧ:ವಾತ್ಸಲ್ಯ ಭಾವ, ದಾಸ್ಯ ಭಾವ,
ಸಖ್ಯ ಭಾವ,ಮಧುರ ಭಾವ ಹಾಗೂ ಶಾಂತ ಭಾವ.
ಬಿಜ್ಜ ಮಹಾದೇವಿ ಶಂಕರನನ್ನೇ ಮಗನೆಂದು ಭಾವಿಸಿ, ಸಾಕಿ ಸಲಹಿ
ವಾತ್ಸಲ್ಯ ಭಾವದಿಂದ ಮೋಕ್ಷ ಸಂಪಾದಿಸಿದಳು. ಅಂತೆಯೇ
ಯಶೋದ ಕೃಷ್ಣನನ್ನು ಮಗನೆಂದು ಭಾವಿಸಿ ಪರಂಧಾಮವನ್ನೈದಿದಳು.
ಹನುಮಂತ ರಾಮನಿಗೆ ದಾಸನೆಂದು ಭಾವಿಸಿ ದಾಸ್ಯ ಭಾವದಿಂದ
ಸದ್ಗತಿ ಪಡೆದನು. ಅರ್ಜುನನು ಶ್ರೀ ಕೃಷ್ಣನನ್ನು ಸಖನೆಂದು ಭಾವಿಸಿ
ಸಖ್ಯ ಭಾವದಿಂದ ಸಾಯುಜ್ಞ ಹೊಂದಿದನು.
ಮಧುರಭಾವದಿಂದ (ಅಂದರೆ ಸತಿ-ಪತಿ ಮನೋಭಾವದಿಂದ ) ಮೀರಾ,
ಅಕ್ಕ ಮಹಾದೇವಿ ಮತ್ತು ಅಂಡಾಳ್ ಭಗವಂತನನ್ನು ಸೇರಿದರು.
ಮೂಲ:ಸಂಗ್ರಹ.