ನಿಮಗೆ ಗೊತ್ತೇ ?

.೧. ಕೆಂಪು ಸಮುದ್ರ ಆಫ್ರಿಕಾ ಮತ್ತು ಅರೇಬಿಯಾಗಳ ನಡುವೆ
ಇದೆ. ಈ ಹೆಸರು ಬರಲು ಅನೇಕ ಕಾರಣಗಳಿವೆ.ಸಮುದ್ರದ ತಳದಲ್ಲಿ
ಕೆಂಪು ಹವಳ ಹೇರಳವಾಗಿ ಬೆಳೆದಿದೆ. ಸಮುದ್ರದ ತೀರದಲ್ಲಿರುವ
ಹವಳದ ದಿಣ್ಣೆಗಳು ಕೆಂಪಾಗಿವೆ. ಸಮುದ್ರದಲ್ಲಿನ ಅಸಂಖ್ಯಾತ ಪುಟ್ಟ
ಜೀವಿಗಳ ಬಣ್ಣವೂ ಕೆಂಪಾಗಿರುವುದರಿಂದ ಕೆಂಪು ಸಮುದ್ರ ಎಂದು
ಹೆಸರಾಗಿದೆ.
೨. ”ಯಾವನು ಪುತ್ ಎಂಬ ನರಕದಿಂದ ಪಿತೃ ಗಳನ್ನು ಪಾರುಮಾಡುತ್ತಾನೋ
ಅವನೇ ಪುತ್ರ.” –ಗರುಡ ಪುರಾಣದಲ್ಲಿ ಭಗವಂತನ ನುಡಿ.
೩. ಹಣವನ್ನು ಬಳಸದೆ ಉಳಿಸಿದರೆ ಬೆಳೆಯುತ್ತದೆ. ಭಾಷೆ ಹಾಗಲ್ಲ;
ಬಳಸಿದರೆ ಮಾತ್ರ ಉಳಿಯುತ್ತದೆ.
೪. ಭಾರಧ್ವಾಜ ಮುನಿಗಳು ವಿಮಾನ ಶಾಸ್ತ್ರ ಬರೆದಿದ್ದಾರೆ. ೧೮೬೯ರಲ್ಲಿ
ಅನೇಕಲ್ ಸುಬ್ರಾಯ ಶಾಸ್ತ್ರಿಯವರು ಮುಂಬೈಯಲ್ಲಿ ವಿಮಾನ ಹಾರಿಸಿದ್ದರು
ಎನ್ನುವ ದಾಖಲೆ ಗಳಿವೆ. ಸಮುದ್ರದಿಂದ ವಿದ್ಯುತ್ ತಯಾರಿಸ ಬಹುದು
ಎನ್ನುವ ಉಲ್ಲೇಖ ನಮ್ಮ ಹಿರಿಯರ ಕೃತಿಗಳಲ್ಲಿದೆ. ಭಾರತೀಯರಿಗೆ ಮೊದಲ
ವಿಮಾನ ಹಾರಿಸಿದ ಗೌರವ ಸಿಗುತ್ತದೆ ಎನ್ನುವ ಕಾರಣಕ್ಕೆ ಅಂದು ಭಾರತದಲ್ಲಿ
ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷ್ ಸರಕಾರ ಅದನ್ನು ಪ್ರಕಟವಾಗದಂತೆ ಮುಚ್ಚಿಡುವಲ್ಲಿ
ಯಶಸ್ವಿಯಾಯಿತು. —ಬನ್ನಂಜೆ ಗೋವಿಂದಾಚಾರ್ಯ.
೫. ೭ ದ್ವೀಪಗಳು :-ಜಂಬೂ ದ್ವೀಪ, ಪ್ಲಕ್ಷ ದ್ವೀಪ,ಶಾಲ್ಮಲಿ ದ್ವೀಪ, ಕುಶ ದ್ವೀಪ,
ಕ್ರೌ೦ಚ ದ್ವೀಪ, ಶಾಖ ದ್ವೀಪ,ಪುಷ್ಕರ ದ್ವೀಪ.
೬. ಶಿವನಿಗೆ ಕಾರ್ತಿಕ ಮಾಸ ಅತಿ ಪ್ರಿಯವಾದ ಮಾಸ. ಕಾರ್ತಿಕ ಮಾಸದಲ್ಲಿ
ಬರುವ ಸೋಮವಾರಗಳು ಶಿವನ ವಾರ.
ಮೂಲ:ಸಂಗ್ರಹ.

ಕನ್ನಡ ಸುಭಾಷಿತಗಳು.

೧. ಕಾಲ ಎಂಬುದಕ್ಕೆ ಹಣ ಎಂಬ ರೂಪಕವನ್ನು ಬಳಸಲಾಗುತ್ತದೆ.
ಬದುಕಿಡೀ ಕಾಲಕ್ಕೆ ಬಾಗುತ್ತಾ ಕಾಲದ ಚೌಕಟ್ಟಿನಲ್ಲಿ ಬದುಕುವವರು
ನಾವು. ಜೀವನ ಹಣದಂತೆ ಒಮ್ಮೆ ಮಾತ್ರ ವ್ಯಯಿಸಲು ಸಾಧ್ಯ.
೨. ದ್ವೇಷಕ್ಕೆ ರೋಗ; ಪ್ರೀತಿಗೆ ನಿರೋಗ.
೩. ನಾಲಿಗೆ ಪಳಗಿಸದಿದ್ದರೆ ನಾಲೆಗೆ ಬೀಳುವುದು ಸರ್ವಕಾಲಿಕ ಸತ್ಯ.
೪. ಮಾತನಾಡುತ್ತಾ ಹತ್ತಿರವಾಗಲು ಸಾವಿರಾರು ನೆಪಗಳು ಬೇಕಂತೆ.
ಮಾತನಾಡದೇ ದೂರವಾಗಲು ಒಂದೇ ಒಂದು ನೆಪ ಸಾಕಂತೆ.
೫. ಹಾಸ್ಯವಿಲ್ಲದ ಬಾಳು ದೇವರಿಲ್ಲದ ಗುಡಿಯಂತೆ.
೬. ನಗು ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡ ಬಾರದು. ಒಬ್ಬರನ್ನು
ಗೇಲಿಮಾಡಿ ಉಳಿದವರನ್ನು ನಗಿಸೋದನ್ನು ”ಪೈಶಾಚಿಕ ನಗೆ ”
ಅಂತ ಹೇಳ್ತಾರೆ.
೭. ಕುದಿಯುವ ನೀರಿನಲ್ಲಿ ಮುಖ ವಿಕಾರವಾಗಿ ಕಾಣುತ್ತದೆ. ಕೋಪ
ದಿಂದಿರುವಾಗಲೂ ಅಷ್ಟೇ. ಕೋಪ ಕಡಿಮೆ ಮಾಡಿಕೊಳ್ಳೋಣ.
೮. ನದಿ ಪೊಳ್ಳನ್ನು ತೇಲಿಸುತ್ತದೆ. ಭಾರವನ್ನು ಮುಳುಗಿಸುತ್ತದೆ.
೯ಮೀ ಪರೆ ಪೋಪರೆ ಪಾಪವೇನದು ಕೆಸರೇ ?-ಸರ್ವಜ್ಞ.
೧೦. ಲೌಕಿಕ ಸೌಂದರ್ಯಕ್ಕಿಂತ ಅಧ್ಯಾತ್ಮಿಕ ಸೌಂದರ್ಯ ದೊಡ್ಡದು.
ಮೂಲ:ಸಂಗ್ರಹ. . .

Spiritual Corner.

1.Tolerance empowers us to, not let irritating circumstances

steal our peace of mind.Lack of tolerance makes us a victim of

our circumstances. When people lack tolerance, they respond to

adverse situations and inimical people in one of two ways–

depression or violence. Inferiority complex, addiction or suicide

are fall outs of the first response,whereas divorce,larceny,

murder or war are results of the second. Tolerance protects us

from internal over reactions to externally distasteful situations.

2.Science and technology have improved our lives by giving us

material abundance. But science has also provided us with weapons

of mass destruction. We need spirituality more than ever, to

generate a feeling of cosmic kinship for the survival of our species

as also for an abiding personal happiness.

3.Life is a perennial river of  worldly thoughts,

Flowing toward the ocean of Divinity

From birth to death; continuity is its motto,

And enlightenment, its goal.

Poem:”A Perennial River”-Poet:Dr. Venkataramana. K.V.

Source:Collection.

ಶ್ರೀ ಗಣೇಶ.

ganesh

ಗಣೇಶನ ಆಕಾರದ ಕಲ್ಪನೆ ತುಂಬಾ ಅದ್ಭುತವಾದುದು. ದೊಡ್ಡ
ತಲೆಯುಳ್ಳವರೆಂದರೆ ಬುದ್ಧಿವಂತರು. ಡೊಂಕಾದ ಸೊಂಡಿಲು
ಓಂಕಾರದ ಪ್ರತೀಕ. ಆತ ಶೂಪ ಕರ್ಣ. ಮೊರದಗಲ ಕಿವಿ ಆತನದು.
ಮೊರದಲ್ಲಿ ಧಾನ್ಯ ಗೇರಿದಾಗ ಜೊಳ್ಳು ದೂರವಾಗಿ ನೆಲ್ಲು ಮಾತ್ರ
ನಿಲ್ಲುವಂತೆ, ಹೊಗಳಿಕೆ -ತೆಗಳಿಕೆ ಬಂದಾಗ ಸತ್ಯಾಂಶವನ್ನು ಮಾತ್ರ
ಸ್ವೀಕರಿಸಬೇಕು ಎಂದು ಸೂಚಿಸುತ್ತಾನೆ.ಮಹಾಕಾಯನಾದ ಆತನ
ಡೊಳ್ಳು ಹೊಟ್ಟೆ ಬ್ರಹ್ಮಾಂಡದ ಸಂಕೇತ. ಆ ಲಂಬೋದರಕ್ಕೆ ಸುತ್ತಿ
ಕೊಂಡಿರುವ ಸರ್ಪ ಕುಂಡಲಿನೀ ಶಕ್ತಿಯ ಪ್ರತೀಕ. ಅವನ ಕೈಯಲ್ಲಿರುವ
ಪಾಶ – ಅಂಕುಶಗಳು ನಮ್ಮಲ್ಲಿರುವ ರಾಗ -ದ್ವೇಷಗಳನ್ನು ನಿಯಂತ್ರಿಸುವ
ಸಾಧನಗಳು. ಮೋದಕ ಪ್ರಿಯನ ಪೂಜೆಯಿಂದ ಮೋದ ಅಂದರೆ ಆನಂದ
ದೊರೆಯುತ್ತದೆ. ಮೂಷಕ ವಾಹನನಾದ ಗಣೇಶ, ನಾವು ಬೆಳೆಯುವ ದವಸ,
ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಯ ಮೇಲೆ ಸಂಪೂರ್ಣ ನಿಯಂತ್ರಣ
ಹೊಂದಿದ್ದಾನೆ. ಸೂಕ್ಷ್ಮ ದೃಷ್ಟಿ ಯುಳ್ಳವರಾಗಬೇಕೆಂದು ಅವನ ಚಿಕ್ಕ ಕಣ್ಣು
ಸಾರುತ್ತದೆ. ಸಿದ್ಧಿ -ಬುದ್ಧಿ ಆತನ ಪತ್ನಿಯರು. ಲಾಭ -ಕ್ಷೇಮ ಅವನ ಮಕ್ಕಳು.
ಗಣಪತಿಯ ಆರಾಧನೆಯಿಂದ ನಮಗೆ ಎಲ್ಲ ಕ್ಷೇತ್ರ ಗಳಲ್ಲೂ ಗೆಲುವು ಖಚಿತ.
ದೇವತೆಗಳಲ್ಲಿ ಅಗ್ರ ಪೂಜೆ ಇವನಿಗೆ ಸಲ್ಲುತ್ತದೆ. ಗಣೇಶನ ಪೂಜೆಯಲ್ಲಿ
ತುಳಸಿಯನ್ನು ಬಳಸ ಬಾರದು ಎಂಬ ಶಾಸ್ತ್ರದ ಮಾತುಂಟು. ಗಣಪತಿಯ
೨೧ ನಾಮಗಳನ್ನು ಹೇಳಿ ಒಂದೊಂದು ಹೆಸರಿಗೂ ಒಂದೊಂದು ಪತ್ರೆಯನ್ನು
ಅರ್ಪಿಸುವುದುಂಟು.
ರೈತರು ಇವನು ಮಣ್ಣಿನಿಂದ ಹುಟ್ಟಿದವನು ಆದ್ದರಿಂದ ನಮ್ಮ ಇಷ್ಟ ದೇವರು
ಎಂದು ಕೊಳ್ಳುತ್ತಾರೆ. ಪ್ರಜಾಪ್ರಭುತ್ವವಾದಿಗಳು ಗಣಾಧಿಪತಿ ಎಂದರೆ ಪ್ರಜೆಗಳಿಂದ
ಚುನಾಯಿತನಾದವ ಎಂದು ಅವನಲ್ಲಿ ಪ್ರಜಾಪ್ರಭುತ್ವದ ಅಂಕುರವನ್ನು ಕಾಣುತ್ತಾರೆ.
ಆತ ವಿದ್ಯಾಧಿದೇವತೆ.
ಹೇರಂಬ ಗಣಪತಿಯ ಪೂಜೆ ನೇಪಾಳದಲ್ಲಿ ತುಂಬಾ ಪ್ರಸಿದ್ಧ. ಉಚ್ಚಿಷ್ಟ ಗಣಪತಿಯ
ಉಪಾಸನೆ ತಂತ್ರ ಮಾರ್ಗದ ಅನುಯಾಯಿಗಳಲ್ಲಿ ರೂಢಿಯಲ್ಲಿದೆ.
ಮುದ್ಗಲ ಪುರಾಣದಲ್ಲಿ ಗಣಪತಿಯ ೩೨ ರೂಪಗಳ ವರ್ಣನೆಯಿದೆ:ಬಾಲ ಗಣಪತಿ,
ತರುಣ ಗಣಪತಿ, ಭಕ್ತ ಗಣಪತಿ,ವೀರ ಗಣಪತಿ,ಶಕ್ತಿ ಗಣಪತಿ,ದ್ವಿಜ ಗಣಪತಿ,ಸಿಧ್ಧ ಗಣಪತಿ,
ಉಚ್ಚಿಷ್ಟ ಗಣಪತಿ, ವಿಘ್ನ ಗಣಪತಿ, ಕ್ಷಿಪ್ರ ಗಣಪತಿ, ಹೇರಂಬ ಗಣಪತಿ, ಲಕ್ಷ್ಮೀ ಗಣಪತಿ,
ಮಹಾ ಗಣಪತಿ,ವಿಜಯ ಗಣಪತಿ,ನೃತ್ಯ ಗಣಪತಿ,ಊರ್ಧ್ವ ಗಣಪತಿ ,ಏಕಾಕ್ಷರ ಗಣಪತಿ,
ವರ ಗಣಪತಿ, ತ್ರ್ಯಕ್ಷರ ಗಣಪತಿ,ಕ್ಷಿಪ್ರ ಪ್ರಸಾದ ಗಣಪತಿ,ಹರಿದ್ರಾ ಗಣಪತಿ,ಏಕದಂತ ಗಣಪತಿ,
ಸೃಷ್ಟಿ ಗಣಪತಿ,ಉದ್ದಂಡ ಗಣಪತಿ,ಋಣ ಮೋಚನ ಗಣಪತಿ,ಢುಂಢಿ ಗಣಪತಿ,ದ್ವಿಮುಖ
ಗಣಪತಿ,ತ್ರಿಮುಖ ಗಣಪತಿ,ಸಿಂಹ ಗಣಪತಿ,ಯೋಗ ಗಣಪತಿ,ದುರ್ಗಾ ಗಣಪತಿ, ಸಂಕಷ್ಟ ಹರ
ಗಣಪತಿ.
ಮೂಲ:ಸಂಗ್ರಹ.

One Line Quotes.

1.Don’t make a mouse of yourself, or else you will be eaten by cats.

2.Love lights more fire than hate extinguishes.

3. Forgiving is the best option because hatred gives someone to occupy

your mind without rent.

4.Some people will never fit into your life, no matter how much you

want them to.

5.Responding to an angry person is like pouring fuel to fire.

6.Be happy! You never know how much time you have left.

7.Always listen to your heart; it may be on the left but it is always right,

8. Distance yourself from people who:1)lie to you 2)disrespect you

3)use you 4)put you down.

9.  The happiness of your life depends on the quality of your thoughts.

10.Always pray to have eyes that see the best, a heart that  forgives

the worst, a mind that  forgets the bad and a soul that never loses faith.

Source:Collection.

ನಿಮಗೆ ಗೊತ್ತೇ ?

೧. ”ಭಾರತಕ್ಕೆ ಹೋಗುವಾಗ ದೇವಳಕ್ಕೆ ಹೋಗುವಂತೆ
ತಲೆ ತಗ್ಗಿಸಿ ಕೊಂಡು ಹೋಗು . ಎದೆ ಎತ್ತಿ ಕತ್ತಿ ಹಿಡಿದು
ಕೊಂಡಲ್ಲ ” ಎಂದಿದ್ದರಂತೆ ಅಲೆಕ್ಸಾಂಡರ್ ನ ಗುರು
ಅರಿಸ್ಟಾಟಲ್.
೨. ೫ ಶತಮಾನಗಳ ಹಿಂದೆ ಬಾಳಿದ್ದ ದೇಯಿ ಬೈದ್ಯೆತಿ
ಪಾರಂಪರಿಕ ಗಿಡ ಮೂಲಿಕಾ ಔಷಧ ಪದ್ಧತಿಯ ಹರಿಕಾರಳು.
೩. ಭಾ =ಪ್ರಕಾಶ. ರ =ಆಸಕ್ತರು (ಪ್ರಕಾಶವನ್ನು ಪೂಜಿಸುವವರು.)
4.ಪಂಚ ವರ್ಣೋದ ಪುಂಚದ ಮಣ್ಣ್ (ಪಂಚ ವರ್ಣಗಳ ಹುತ್ತದ ಮಣ್ಣು )
ಎಂಬ ಖ್ಯಾತಿ ತುಳುನಾಡ ಮಣ್ಣಿಗಿದೆ. ಇದಕ್ಕೆ ಚರ್ಮರೋಗವನ್ನು
ಗುಣಪಡಿಸುವ ಶಕ್ತಿ ಇದೆ. ಇಲ್ಲಿನ ಮಣ್ಣಿನಲ್ಲಿ ಹೊರಳಾಡಿದರೆ
ರೋಗ ರುಜಿನ ಗುಣವಾಗುತ್ತದೆ ಎಂಬ ನಂಬಿಕೆಯಿದೆ.
5.  ಯಾವ ಹಿಂದುವೂ ವಿಗ್ರಹಗಳನ್ನೇ ದೇವರೆಂಬ ಭಾವನೆಯಿಂದ
ಪೂಜಿಸುವುದಿಲ್ಲ. ಈ ವಿಗ್ರಹಗಳು ಜಡವಾದರೂ ಅವು ನೆನಪಿಗೆ
ತಂದು ಕೊಡುವುದು ಚೈತನ್ಯ ಪೂರಿತ ಪರಮಾತ್ಮನನ್ನು.
ವಿವಿಧ ದೇವತಾ ರೂಪಗಳನ್ನು ಧ್ಯಾನಿಸಿದರೆ ಅವುಗಳ ಮೂಲಕ
ನಮಗೆ ಸಿಗುವ ಅನುಭವ ಪರಮಾತ್ಮ ಸಾಕ್ಷಾತ್ಕಾರವೇ. ಊಹೆಗೂ
ನಿಲುಕದ ಪರಮಾತ್ಮನನ್ನು ಜನ ಸಾಮಾನ್ಯರು ಧ್ಯಾನಿಸುವುದು
ಕಷ್ಟವಾದುದರಿಂದ, ಋಷಿಗಳು ತಮ್ಮ ತಪಸ್ಸಿನಿಂದ ಅವನನ್ನು
ಮೆಚ್ಚಿಸಿ ವಿವಿಧ ದೇವತಾ ರೂಪಗಳನ್ನೂ, ಅವುಗಳ ಹೆಸರುಗಳನ್ನೂ
ಪಡೆದುಕೊಂಡು ನಮಗೆ ಕೊಟ್ಟಿರುತ್ತಾರೆ.
6. ಬಂಗಾಳದಲ್ಲಿ ರಂಗೋಲಿಯನ್ನು ಅಲ್ಪನಾ ಎಂದು ಕರೆಯುತ್ತಾರೆ.
7. ಉಡುಪಿ ಕೃಷ್ಣ ಮಠದಲ್ಲಿ ಯತಿಗಳು ಮಾತ್ರವೇ ಪೂಜೆ ಮಾಡುತ್ತಾರೆ.
ಪ್ರತಿ ಶುಕ್ರವಾರ ಅವನು ಸ್ತ್ರೀ ವೇಷಧಾರಿ. ಸಮುದ್ರ ಮಂಥನದಲ್ಲಿ
ಅವನೇ ಮೋಹಿನಿಯಾಗಿ ಬಂದನಲ್ಲವೇ?
ಮೂಲ:ಸಂಗ್ರಹ.

ಶ್ರೀ ಕೃಷ್ಣ.

krishna

ಶ್ರೀ ಕೃಷ್ಣನ ಜೀವನವೇ ವರ್ಣಮಯವಾಗಿದ್ದು ಆತನನ್ನು ಚಿತ್ರಿಸುವುದು
ಕಷ್ಟದ ಕೆಲಸ. ಶ್ರೀ ಕೃಷ್ಣ ನಮಗೆ ರಾಜಕಾರಣಿಯಾಗಿ,ವೇಣುನಾದ ಪ್ರಿಯನಾಗಿ
ಬಾಲಕನಾಗಿ, ಹದಿನಾರು ಸಾವಿರ ಸ್ತ್ರೀಯರಿಗೆ ಪತಿಯಾಗಿ ಕಾಣಿಸುತ್ತಾನೆ.
ಕೃಷ್ಣ ಎಂದರೆ ಕಪ್ಪು ಎಂದು ಹೇಳುತ್ತಾರೆ. ಆತ ನೀಲ ಮೇಘ ಶ್ಯಾಮ.
ಶ್ರೀ ಕೃಷ್ಣ ಎಲ್ಲರನ್ನೂ ಆಕರ್ಷಿಸುತ್ತಾನೆ. ಅದಕ್ಕೆ ಆತನಿಗೆ ಅನ್ವರ್ಥವಾಗಿ
ಕೃಷ್ಣ ಎಂಬ ಹೆಸರು ಬಂದಿದೆ.
ಶ್ರೀ ಕೃಷ್ಣನ ಸಮಗ್ರ ಬದುಕು ಮನಮೋಹಕ ವಿಸ್ಮಯಗಳ ನೆಲೆ.
ತುಂಟ ಬಾಲಕನಾಗಿ, ಪ್ರೇಮಮಯಿಯಾಗಿ, ಉದ್ಧಾರಕನಾಗಿ, ರಾಜಕೀಯ
ಮುತ್ಸುದ್ಧಿಯಾಗಿ, ಚಾಣಾಕ್ಷ ಸೂತ್ರಧಾರನಾಗಿ,ಗೀತಾಚಾರ್ಯನಾಗಿ,
ವಿರಾಟ್ ಪುರುಷನಾಗಿ ಕೊನೆಗೊಮ್ಮೆ ಯೋಗೀಶ್ವರನಾಗಿ ಭಾರತೀಯರ
ಆರಾಧ್ಯನೆನಿಸಿದ ಶ್ರೀ ಕೃಷ್ಣನ ನಾಡು ಉಡುಪಿ.
ಆಚಾರ್ಯ ಮಧ್ವರು ರುಕ್ಮಿಣೀ ಕರಾರ್ಚಿತ ಶ್ರೀ ಕೃಷ್ಣನ ಪ್ರತಿಷ್ಠೆ
ಮಾಡಿ,ಅಷ್ಟ ಯತಿ ಗಳನ್ನು ಶಿಷ್ಯರಾಗಿ ಸ್ವೀಕರಿಸಿ, ಸರದಿಯಲ್ಲಿ ಶ್ರೀ ಕೃಷ್ಣ
ಪೂಜೆಗೆ ನಿಯೋಜಿಸಿದರು. ಈ ಅವಧಿಯನ್ನು ೨ ವರ್ಷಕ್ಕೆ ವಿಸ್ತರಿಸಿದ
ಶ್ರೀ ವಾದಿರಾಜರು ಪರ್ಯಾಯ ಪೂಜಾ ಹಸ್ತಾ೦ತರ ಪರ್ವಕ್ಕೆ ವೈಭವದ
ವಿಸ್ತೃತ ರೂಪ ನೀಡಿದರು. ಪರ್ಯಾಯ ವಿಧಿ -ವಿಧಾನಕ್ಕೆ ಸಾಂಸ್ಕೃತಿಕ
ಸ್ಪರ್ಶ ನೀಡಿ ಸಮಷ್ಟಿಯ ಸಹಭಾಗಿತ್ವದ ಅವಕಾಶ ನೀಡಿದರು. ಕ್ರಮೇಣ
ಪರ್ಯಾಯ ನಾಡಹಬ್ಬವಾಯಿತು.
ಪದಗಳಲ್ಲಿ ನಾನು ಏಕಾಕ್ಷರವಾದ ಪ್ರಣವ (=ಓಂ ) ಎಂದು
ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ (ವಿಭೂತಿ ಯೋಗ :೨೫)ಹೇಳಿದ್ದಾನೆ.
ಶ್ರೀಕೃಷ್ಣ ಸ್ಮರಣೆ —
”ಚಂದನ ಚರ್ಚಿತ (ಲೇಪಿತ )ನೀಲ ಕಲೇವರ (ತನು )
ಪೀತ ವಸನ ವನಮಾಲೀ ಕೇಲಿ ಚಲನ್ಮಣಿ ಕುಂಡಲ ಮಂಡಿತ
ಗಂಡ(ಗಲ್ಲ ) ಯುಗಸ್ಮಿತ ಶಾಲೀ’
”ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ ”
ಮೂಲ : ಸಂಗ್ರಹ.