ಶ್ರಾವಣ ಮಾಸ .

ಶ್ರಾವಣ (ಜುಲೈ ೨೪ ರಿಂದ ಆಗಸ್ಟ್ ೨೧) ಜಗದೊಡೆಯ ಶಿವನಿಗೆ
ಪ್ರಿಯವಾದ ಮಾಸ. ಸಮುದ್ರ ಮಂಥನ ನಡೆದದ್ದು ಶ್ರಾವಣ ಮಾಸದಲ್ಲಿ.
ಚಂದ್ರ, ಅಮೃತ , ಕಾಮಧೇನು, ಲಕ್ಷ್ಮಿ ಸಮುದ್ರದಿಂದ ಹೊರ ಬಂದವು.
ಸಮುದ್ರ ಮಂಥನ ಕಾಲದಲ್ಲಿ ಹೊರ ಬಂದ, ಇಡೀ ಪೃಥ್ವಿಯನ್ನೇ ನಾಶ
ಪಡಿಸುವಂಥ ತೀಕ್ಷ್ಣ ವಿಷ, ಹಾಲಾಹಲವನ್ನುಕುಡಿದು ಗಂಟಲಿನಲ್ಲಿ ಇಟ್ಟು
ಕೊಂಡ ಕಾರಣ ಶಿವನ ಕಂಠ ನೀಲಿಯಾಯಿತು. ಶಿವನು ಅರ್ಧಚಂದ್ರಾಕೃತಿ
ಹೊಂದಿರುವ ಚಂದ್ರನನ್ನು ತಲೆಯ ಮೇಲೆ ಅಲಂಕರಿಸುತ್ತಾನೆ. ಚಂದ್ರನ
ಶೀತಲ ಮೇಲ್ಮೈ ವಾತಾವರಣ ಹಾಲಾಹಲದ ಪರಿಣಾಮವನ್ನು ತಗ್ಗಿಸಿತು.
ಶ್ರಾವಣ ಹಿಂದುಗಳಿಗೆ ಅತ್ಯಂತ ಪವಿತ್ರ ಮಾಸವಾಗಿದೆ. ಶಿವನಿಗೆ ಪೂಜೆ,
ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಹಾಲು, ಹೂವು (ನೀಲಿಬಣ್ಣದ್ದು),
ವೀಳ್ಯದ ಎಲೆಯನ್ನು ಶಿವನ ದೇವಸ್ಥಾನದಲ್ಲಿ ಅರ್ಪಿಸಬೇಕು..
ಶ್ರಾವಣ ಎಂದರೆ ಕೇಳಿಸಿಕೊಳ್ಳುವುದು. ಭಕ್ತಿಗೀತೆ, ಹರಿಕಥೆ, ಶಿವನ
ಕೀರ್ತನೆ ಗಳನ್ನು ಕೇಳಿಸಿ ಕೊಳ್ಳಬೇಕು. ಮಾರ್ಕಂಡೇಯ ಮಹಾಋಷಿಗಳು
ಮಹಾ ಮೃತ್ಯುಂಜಯ ಮಂತ್ರವನ್ನು ಇದೇ ಶ್ರಾವಣ ಮಾಸದಲ್ಲಿ
ರಚಿಸಿದ್ದರು. ಭಕ್ತಿಯಿಂದ ಜಪಿಸಿದರೆ ಸಾವನ್ನು ಸಹ ಮುಂದೂಡ
ಬಹುದಾಗಿದ್ದು,ಶಕ್ತಿಯುತ, ಪ್ರಭಾವಶಾಲೀ ಮಂತ್ರವಿದಾಗಿದೆ.
ಶ್ರಾವಣ ಮಾಸದಲ್ಲಿ ಸೂರ್ಯನು ಸಿಂಹರಾಶಿಗೆ ಪ್ರವೇಶಿಸುತ್ತಾನೆ.
ಮೂಲ :ಸಂಗ್ರಹ.
.

Advertisements

ಕನ್ನಡ ಸೌರಭ.

೧.. ಕೋಮುವಾದಿಗಳಾಗೋಕ್ಕಿಂತ ಪ್ರೇಮವಾದಿಗಳಾಗೋಣ.
೨. ಬದುಕುವುದು ಒಂದು ಅವಕಾಶ. ಅದನ್ನು ಗರಿಷ್ಠ ಸದುಪಯೋಗ
ಪಡಿಸಿಕೊಳ್ಳಬೇಕು.
೩. ಯುದ್ಧವೆಂದರೆ ಅದು ನಿರಾಶ್ರಿತರನ್ನು ಹುಟ್ಟು ಹಾಕುವ ಮಹಾ ಪಾತಕ.
೪. . ಭವ್ಯವಾಗಿ ಬದುಕುವುದಕ್ಕಿಂತ ಸುಂದರವಾಗಿ ಬದುಕುವುದು ಮುಖ್ಯ.
೫. ನಾನು ಗಿಡ್ಡ ಇದ್ದೇನೆ ಎನ್ನುವುದು ಋಣಾತ್ಮಕ; ಇತರರಿಗಿಂತ ನೆಲಕ್ಕೆ
ಹತ್ತಿರವಾಗಿದ್ದೇನೆ ಅನ್ನುವುದು ಧನಾತ್ಮಕ.
೬. ಹಲ್ಲುಗಳು ತಮಗೆ ಸಾಮರ್ಥ್ಯ ಇದೆಯೆಂದು ನಾಲಿಗೆಯನ್ನು ಕಚ್ಚಬಾರದು.
ನಾಲಿಗೆ ಮನಸ್ಸು ಮಾಡಿದರೆ ಹಲ್ಲುಗಳನ್ನು ಉದುರಿಸಬಲ್ಲದು. ಶಕ್ತಿಯ
ಜೊತೆ ವಿವೇಚನೆ ಇರಲಿ.
೭. ದೇಹ ಮೈಲಿಗೆಯಾದರೂ, ಮನಸ್ಸು ಮಲ್ಲಿಗೆಯಾಗಿರಬೇಕು.
೮. ದಣಿವಿನಲ್ಲಿ ವಿಶ್ರಾಂತಿ ದೊರೆಯಬೇಕು, ಹೊರತು ವಿಶ್ರಾಂತಿಯಿಂದಲೇ
ದಣಿವು ಆಗಬಾರದು.
೯. ಸಾಯುವಾಗ ಒಂಟಿ ಅಂದಂತೆ ಹುಟ್ಟುವಾಗಲೂ ಒಂಟಿ ಅನ್ನೋ ಹಾಗಿಲ್ಲ.
ಅವಳಿ ,ತ್ರಿವಳಿ ಗಳಾಗಿದ್ದಾರೆ ?
೧೦. ಮಾದರಿಯಾಗಿ;ಮುಳ್ಳಾಗದಿರಿ.
೧೧.ಭಾವನೆಗಳಿಲ್ಲದ ಬದುಕು ಬಣ್ಣರಹಿತ.
೧೨.ನೀರಿನಲ್ಲಿ ಮೀನಿನ ಹೆಜ್ಜೆ,ಬಾನಲ್ಲಿ ಹಕ್ಕಿಯ ಹೆಜ್ಜೆ ಪತ್ತೆ ಹಚ್ಚಲಾಗದು.
೧೩. ”ಬಿಟ್ಟಿ ಸಿಗುವುದಾದರೆ ಬೆಟ್ಟವೇ ಸಿಗಲಿ ” ಎನ್ನುವುದು ಮನುಷ್ಯ ಬುದ್ಧಿ
೧೪. ದ್ವೀಪಗಳಾಗದೆ ಜಗವ ಬೆಳಗುವ ದೀಪಗಳಾಗಬೇಕು.
೧೫. ಯೋಚನೆಗಳ ಗುಣಮಟ್ಟ ನಮ್ಮ ಬದುಕಿನ ಮೌಲ್ಯವನ್ನು ನಿರ್ಧರಿಸುತ್ತದೆ.
೧೬.. ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು;ಹೆದರಿಸುವವರ ಮುಂದೆ
ಕತ್ತಿಯಂತಿರಬೇಕು. ಆತ್ಮೀಯರ ಮುಂದೆ ಮುತ್ತಿನಂತಿರಬೇಕು. ಹಿರಿಯರ
ಮುಂದೆ ಹತ್ತಿಯಂತಿರಬೇಕು.
೧೭. ”ಸಮರಸವೇ ಜೀವನ” ಎನ್ನುವುದರಲ್ಲಿ ಕಡೆಯ ”ಸ” ಕಳೆದರೆ ”ಸಮರವೇ
ಜೀವನ ” ಆಗುತ್ತದೆ.
೧೮. ದೇಹದ ಗಾಯಕ್ಕೆ ಮುಲಾಮು ಹಚ್ಚ ಬಹುದು;ಮನಸ್ಸಿಗಾದ ಗಾಯಕ್ಕೆ
ಸಾಂತ್ವನವೇ ಮದ್ದು.
೧೯.ದ್ವೀಪಗಳಾಗದೆ ಜಗವ ಬೆಳಗುವ ದೀಪಗಳಾಗಬೇಕು.
೨೦. ಹಿರಿಯರು ಉದಾರರೂ ಉದಾತ್ತರೂ ಆಗಿದ್ದರೆ ಆ ಮನೆಯ ಮಕ್ಕಳಲ್ಲಿ
”ಸಣ್ಣತನ” ಹತ್ತಿರವೂ ಸುಳಿಯುವುದಿಲ್ಲ.
ಮೂಲ:ಸಂಗ್ರಹ. .

Collection Of Poems.

 1. As long as rivers flow, the sea remains;
 2. As long as stars glow, the sky survives;
 3. As long as snow rules, the Himalays exist;
 4. And as long as hearts melt in prayer,God manifests.
 5. (Poem-As long As.)
 6. The material world progresses by competition;
 7. The spiritual world advances in loneliness.
 8. The material world progresses by competition;
 9. The spiritual world advances in loneliness;
 10. The material world teaches us, how to gain happiness;
 11. The spiritual world enlightens us how to secure bliss.
 12. And the material world tries to conquer time and space;
 13. But the spiritual world aims to win His simple grace.
 14. (Poem:The Two worlds)
 15. When I stare at the sky, I see the sun shining brightly;
 16. Uniformly and all alone;
 17. But, as I look down at the earth,
 18. I see a million fragments of another sun
 19. Called humanity, in the form of castes, sub-castes,
 20. Races and religion.
 21. (Poem:A Fragmented World)
 22. I go on moving, I go on marching, and I go on rushing …
 23. For I want to reach Him and unite with Him;
 24. Like a river which took its birth in a mountain
 25. Goes on moving to merge with ocean.
 26. (Poem:The Union,)
 27. Source:Sunlight And Circumstance
 28. -Poet: Dr.Venkataramana KV.

ಕನ್ನಡ ಸುಭಾಷಿತಗಳು.

೧. ನಿಷ್ಕ್ರಿಯ ಮನಸ್ಸು ದೆವ್ವಗಳ ಕಾರ್ಯಾಗಾರ. ಕ್ರಿಯಾಶೀಲ
ಮನಸ್ಸು ದೇವತೆಗಳ ಕಾರ್ಯಾಗಾರ.
೨. ದೇವರ ಎದುರು ತಲೆ ಬಾಗುವವರು ಯಾರ ಮುಂದೆ ಬೇಕಾದರೂ
ತಲೆಯೆತ್ತಿ ನಿಲ್ಲ ಬಲ್ಲರು.
೩. ಜೀವನವನ್ನು ಕೆಲವರು ಜೀವಿಸುತ್ತಾರೆ;ಇನ್ನು ಕೆಲವರು ಸಂಭ್ರಮಿಸುತ್ತಾರೆ.
೪. ಹಿತ್ತಳೆಯಂಥ ಮನುಷ್ಯನನ್ನು ಬಂಗಾರವನ್ನಾಗಿಸುವುದು ಸನ್ನಡತೆ.
೫. ಹೆಣ್ಣು, ಹೊನ್ನು,ಮಣ್ಣು ಮಾಯೆಯಲ್ಲ ;ಮನದ ಆಸೆ, ದುರಾಸೆಗಳೇ ಮಾಯೆ.
೬. ದೃಷ್ಟಿ ಚೆನ್ನಾಗಿದ್ದರೆ ಸೃಷ್ಟಿ ಚೆನ್ನಾಗಿರುತ್ತದೆ. ದೃಷ್ಟಿಯಂತೆ ಸೃಷ್ಟಿ.
೭. ನಡೆಯುವುದು ಸಹಜವಾದರೆ, ನಲಿಯುವುದು ಸಂಸ್ಕೃತಿ. -ದ. ರಾ. ಬೇಂದ್ರೆ.
೮. ದುರ್ಗತಿ ದೂರ ಮಾಡುವವಳೇ ದುರ್ಗೆ.
೯. ಕೆಟ್ಟ ಸತ್ಯಕ್ಕಿಂತ ಒಳ್ಳೆಯ ಸುಳ್ಳೇ ಶ್ರೇಷ್ಠ.
೧೦. ಕುರುಡರ ರಾಜ್ಯದಲ್ಲಿ ಕಣ್ಣಿದ್ದವನೇ ಅಪರಾಧಿ.
೧೧.ಅರಿತು ನಡೆದರೆ ಬಾಳೆಲ್ಲ ಉತ್ಕರ್ಷ ;ಮರೆತು ಮಲಗಿದರೆ ಬಾಳೆಲ್ಲ ವ್ಯರ್ಥ.
೧೨. ಕಬ್ಬಿಣದ ನಾಶಕ್ಕೆ ಅದಕ್ಕೆ ಹಿಡಿವ ತುಕ್ಕೇ ಕಾರಣ ಹೊರತು ಬೇರೆ ಏನಲ್ಲ;
ಮನುಷ್ಯನ ನಾಶಕ್ಕೆ ಅವನ ಮನಸ್ಸೇ ಕಾರಣ ಹೊರತು ಬೇರೇನಲ್ಲ.
೧೩. ಹೊತ್ತು -ಕಳೆಯುವುದಷ್ಟೇ ಗೊತ್ತು;ಕೂಡಿಸಲಾಗದು.
೧೪. ಛಾವಣಿಗೂ ಮೊದಲು ಅಡಿಪಾಯ ಗಟ್ಟಿಯಾಗಿರಲಿ.
೧೫. ಕನಸು ಕಾಣ ಬೇಕು; ಆದರೆ ಕನಸೇ ಜೀವನವಾಗಬಾರದು.
ಮೂಲ:ಸಂಗ್ರಹ .

ನಿಮಗೆ ಗೊತ್ತೇ ?

೧. ಇಡೀ ಜಗತ್ತಿನ ಮೊದಲ ಬಾಹ್ಯಾಕಾಶ ಯಾನಿ -ಹನುಮಾನ್.
೨. ಮೊದಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿದ್ದು ಗಣೇಶ.
ಇದನ್ನು ನೆರವೇರಿಸಿದ ವೈದ್ಯ -ಈಶ್ವರ.
೩. ಬುದ್ಧನ ಜನ್ಮ ಸ್ಥಳ ಲು೦ಬಿನಿ ಇರುವುದು ನೇಪಾಳದಲ್ಲಿ.
೪. ಕೋನಾರ್ಕ ನೆಂದರೆ ಸೂರ್ಯನೆಂದೇ ಅರ್ಥ.
೫. ಪಂಡ ಎಂದರೆ ಜ್ಞಾನ ಎಂದರ್ಥ. ಜ್ಞಾನದಿಂದ ಹಣ್ಣಾದವನೇ
ಪಂಡಿತ.
೬. ಕಾರ್ಕಳ -ಪಡು ತಿರುಪತಿ ಕ್ಷೇತ್ರ, ಜೈನರ ಪ್ರಾಚೀನ ನೆಲೆ.
೭. ಥಾಯ್ಲೆಂಡ್ ನ ಮೂಲ ಹೆಸರು ಶ್ಯಾಮ ದೇಶ. ಶ್ಯಾಮವೆಂಬುವ
ಜನಾಂಗ ಅಲ್ಲಿತ್ತು.
೮. ಬಳಿ ಚಕ್ರವರ್ತಿಯ ಇನ್ನೊಂದು ಹೆಸರು ಇಂದ್ರಸೇನ.
೯. ಗಾಯತ್ರಿ ಮಂತ್ರ, ತ್ರಿಶಂಕು ಸ್ವರ್ಗ, ಎಮ್ಮೆ -ವಿಶ್ವಾಮಿತ್ರನ ಸೃಷ್ಟಿ.
೧೦. ತುಳಸಿಯ ನಾಮ –ಕಹ್ಲಾರಿಣಿ,ಪದ್ಮಾಕರಾ, ಪದ್ಮನಯನೆ .
(ಸ್ಕಂದ ಪುರಾಣ ,ಪದ್ಮ ಪುರಾಣ)
ಮೂಲ:ಸಂಗ್ರಹ

ಕನ್ನಡ ಸಂಪದ.

೧. ತರಕಾರಿ ಎಂಬುವುದು ಅಲ್ಲ ಬರಿ ಬದನೆ ।
ಕಾವ್ಯವೆಂಬುದು ಅಲ್ಲ ಬರಿ ಶಬ್ದ ರಚನೆ ।
ಪ್ರತಿಯೊಂದು ಶಬ್ದ ದೊಳಗಿರಬೇಕು ಪಾಕ ।
ಈ ಪಾಕ ಎನ್ನುವುದು ಅನುಭವದ ಲೋಕ ।
–ದಿನಕರ ದೇಸಾಯಿ.
೨. ಸೇಡು ತೀರಿಸಿ ಕೊಳ್ಳುವ ವಿಷಯದಲ್ಲಿ ಕಾಲ ಎಲ್ಲಕ್ಕಿಂತ ಮುಂದೆ.
ನಾವು ಕಾಲ ಕಳೆಯುತ್ತೇವೆ, ಪ್ರತಿಯಾಗಿ ಕಾಲ ನಮ್ಮನ್ನು ಕಳೆಯುತ್ತದೆ
೩.ಚಲಾವಣೆಯಾದಾಗಲೇ ನಾಣ್ಯಕ್ಕೆ ಬೆಲೆ. ಹಾಗೇ ಪದಗಳು .
೪. ಸೂರ್ಯ ಅಧ್ಯಾತ್ಮದ ಸಂಕೇತ; ಚಂದ್ರ ಮನಸ್ಸಿನ ಸಂಕೇತ.
೫. ಭಗವಂತನ ವ್ಯಾಖ್ಯೆ ಮಾಡಲಿಕ್ಕೆ ಸಾಧ್ಯವಿಲ್ಲ. ಅವನ ಅನುಭೂತಿಗೆ
ಪ್ರೇಮ,ಭಕ್ತಿಪೂರ್ಣ ನಾಮ ಸ್ಮರಣೆಯೇ ಸಾಧನ.
ಮೂಲ:ಸಂಗ್ರಹ.

An Unsolved Riddle.

The home was fully furnished with luxurious things;

Toys vied with one another to reach the child;

The door was always kept open for the child to go out

And return at his will; The child was showered with love

By all at home and at all times. The sun rose early to greet him

With its warm hands; The moon and the stars peeped in

Through the window at night to illuminate his innocent face;

Flowers never withered in day as he kept roaming about the garden;

Pups and kittens stagnated in their babyhood

To enjoy longer the company of the child;

The cuckoo cooed all day long, to keep him happy…..

Then why did he cut short his journey on earth?

The pups, the kittens and the flowers, the sun, the moon and the stars

And all his kith and kin grope and endlessly wait for an answer.

Source:”Sunlight and circumstance”—poet:Dr.Venkataramana K.V.