ಸುಖ ಸಂಸಾರ.

ಒಬ್ಬ ಕೀರುತಿಗೆ ಒಬ್ಬಳಾರತಿಗೆ
ತುತ್ತು ಮೂರೂ ಹೊತ್ತಿಗೆ ।ಆರೋಗ್ಯ ಭಾಗ್ಯವು ಜತೆಗೆ
ಇದೇ ಅಲ್ಲವೇ ಸುಖದ ಸುಪ್ಪತ್ತಿಗೆ ?
ಎಣ್ಣೆಯಾಗಿ ಸತಿ ಬತ್ತಿಯಾದರೆ ಪತಿ ,
ಬೆಳಗೀತು ಬಾಳ ಹಣತೆ ।ದುಃಖ ದುಮ್ಮಾನಗಳಿದ್ದರೇನಂತೆ ?
ಬತ್ತದಿರಲೆಂದೂ ಪ್ರೀತಿಯೊರತೆ।
ಬೇಡ ಸಂತೆ ಗದ್ದಲ, ಚಿಂತೆ, ಗೊಂದಲ
ಇರೋಣ ಇನ್ನಿರುವಷ್ಟು ಕಾಲ ನಿರಾಳ
ಅರಸೋಣ ಅಗೆದು ಇನ್ನಷ್ಟು ಆಳ
ದೊರಕೀತು ಜೀವನದ ಜೀವಾಳ .
ಯಾಕೆ ಸುಮ್ಮನೆ ಎಣಿಸುವೆ ವಯಸು ?
ತಾರುಣ್ಯಕ್ಕೇ ಮಣೆ ಹಾಕಿದಲ್ಲಿ ಮನಸು
ನುಚ್ಚು ನೂರು ಕಣೇ ವೃದ್ಧಾಪ್ಯದ ಕನಸು
ಸರಸದಲ್ಲಿ ಹೊಂದಿ ಕೊಂಡರೇ ಬಾಳು ಸೊಗಸು.
ಕವಿ —–ಶ್ರೀ ಕೃಷ್ಣಯ್ಯ ಅನಂತಪುರ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s