ಭಕ್ತಿ ಸೌರಭ.

ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿರುವ ದೇವರಿಗೆ ಆಲಯವನ್ನು
ರಚಿಸಲು ಸಾಧ್ಯವೇ ?
ಕೋಟಿ ಸೂರ್ಯನಿಗಿಂತಲೂ ಅಧಿಕ ಕಾಂತಿಯಿರುವವನಿಗೆ
ದೀಪವನ್ನಿಡಬೇಕೇ ?
ಅಜ(ಬ್ರಹ್ಮ )ಹರಾದಿ (ಶಿವ ) ಗಳಿಗೂ ಸಿಲುಕದ ರೂಪವನ್ನು
ಕಾಣಲು ಸಾಧ್ಯವೇ?
ಸರ್ವ ಭೂತಗಳಲ್ಲೂ ಸಂಚರಿಸುವವನಿಗೆ ಯಾವ ಹೆಸರನ್ನಿಡುವುದು ?
ಬ್ರಹ್ಮಾಂಡವೆಲ್ಲವೂ ಹೊಟ್ಟೆಯಲ್ಲಿರುವವನಿಗೆ ಭಕ್ಷ್ಯ ಭೋಜ್ಯವೇಕೆ?
ನೀರಿನಲ್ಲೆಲ್ಲಾ ವ್ಯಾಪಿಸಿರುವವನಿಗೆ ಸ್ನಾನ ಮಾಡಿಸಲಾದೀತೇ ?
ದೇವರನ್ನು ಕಣ್ಣು ಮುಚ್ಚಿ ಪ್ರಾರ್ಥಿಸುವುದೇಕೆ ?
ದೇವರನ್ನು ನೋಡುವುದು ಚರ್ಮ ಚಕ್ಷುಗಳಿಂದಲ್ಲ; ಹೃದಯ ನೇತ್ರಗಳಿಂದ
ಎಂಬುದು ಇದರ ಅಂತರಾರ್ಥ.
ಚಂಚಲ ಮನಸ್ಸನ್ನು ಅನುಸರಿಸುವವನು ಪಶು . ಮನಸ್ಸನ್ನು ಅಂಕೆಯಲ್ಲಿರಿಸಿ
ಕೊಂಡವನು ಪಶುಪತಿ.
ಆಕಾರ(ದೇಹ )ವನ್ನೇ ”ನಾನು” ಎಂದು ಕೊಂಡಾಗ ಅದು ಅಹಂಕಾರವಾಗಿ
ಪರಿಣಮಿಸುತ್ತದೆ. ಆಕಾರಕ್ಕೆ ಮೀರಿದ ಪರಾತ್ಪರ ವಸ್ತುವನ್ನೇ ನಾನು ಎಂದು
ಕೊಂಡಾಗ ದಿವ್ಯತ್ವ ಪ್ರಾಪ್ತವಾಗುತ್ತದೆ.
ದೇಹವು ಚಲಿಸುವ ದೇವಾಲಯ. ದೇಹವಿದ್ದಲ್ಲಿ ದೇವರಿದ್ದಾನೆ .
ಮೂಲ:ಸಂಗ್ರಹ.

Advertisements

God’s Little Book of Peace.

 1. Know God know peace…No God,no peace.
 2. Count your blessings, not your troubles.
 3. Turn unpleasant experiences into positive lessons.
 4. Discover other people’s plights; it may make yours pale into insignificance.
 5. Tell God everything and unburden your heart.
 6. Worry divides the mind; peace restores your mind to oneness.
 7. Deception, falsity and even half truths will stifle your search for peace.
 8.  Seek forgiveness.He is willing to forgive and forget. Just ask Him.
 9. Avoid a ”must do” attitude.
 10. Slow down! There’s no one winner in the race of life.
 11. Go somewhere peaceful-a quiet garden or a babbling brook where your soul can be uplifted.
 12. Let God lead. This enables you to handle life through His strength.
 13. Take a nap;sleep is a gift from God.
 14. Anything that makes it difficult to love our fellow man makes it difficult to love God.
 15. The way of escape that God offers us is not a flight, but a release.He says:”Come unto me and I will give you rest.
 16. Source-”God’s little book of peace” author-Richard Daly.

ಕನ್ನಡ ಸೌರಭ .

೧. ಸಂಸ್ಕೃತದ ಕೃ (ಮಾಡುವಿಕೆ) ಎಂಬ ಧಾತುವು ವಿವಿಧ ಪೂರ್ವ ಪ್ರತ್ಯಯ
ಗಳನ್ನು ಸೇರಿಸಿದಾಗ, ಬೇರೆ, ಬೇರೆ ನಾಮಪದಗಳ ರೂಪ ತಾಳುತ್ತದೆ.
ಉದಾ:ಪೃಕೃತಿ (ಮೂಲವಸ್ತು);ಸಂಸ್ಕೃತಿ (ಶುದ್ಧೀಕೃತ ವಸ್ತು );ಹಾಗು
ವಿಕೃತಿ (ವಿರೂಪಗೊಂಡ ವಸ್ತು/ಸ್ಥಿತಿ )ಉದಾ :ಕಲ್ಲು ಬಂಡೆ ಪೃಕೃತಿ;
ಅದನ್ನು ಸುಂದರ ವಿಗ್ರಹವನ್ನಾಗಿ ಕೆತ್ತಿದರೆ ಅದು ಸಂಸ್ಕೃತಿಗೊಳ್ಳುತ್ತದೆ.
ಆ ಕಲ್ಲು ಬಂಡೆಯನ್ನು ಒಡೆದು ಪುಡಿ ಮಾಡಿದರೆ ಅದು ವಿಕೃತಿ.
೨. ಶಿವ ಪಾಪಗಳನ್ನು ಕಳೆಯುವುದರಿಂದ ಹರ.
ಮಂಗಳವನ್ನು ಉಂಟು ಮಾಡುವುದರಿಂದ ಶಿವ.
ಕೈಯಲ್ಲಿ ತ್ರಿಶೂಲ ಹಿಡಿದಿರುವುದರಿಂದ ಶೂಲಿ.
ಜಗತ್ತನ್ನು ಆವರಿಸಿಕೊಂಡಿರುವುದರಿಂದ ಈಶ್ವರ.
ಚಂದ್ರನನ್ನು ಜಟೆಯಲ್ಲಿ ಧರಿಸಿರುವುದರಿಂದ ಚಂದ್ರ ಶೇಖರ.
೩, ವಾಕ್ ಎಂದರೆ ಜ್ಯೋತಿ. ಶಬ್ದವೆಂಬ ಜ್ಯೋತಿ ಆದಿಕಾಲದಿಂದ
ಬೆಳಗದೆ ಇದ್ದಿದ್ದರೆ ಈ ಜಗತ್ತೆಲ್ಲ ಕತ್ತಲೆಯ ಕೂಪದಲ್ಲಿ ಬಿದ್ದಿರುತ್ತಿತ್ತು.
ಅದೇ ಮಾನವನ ಬದುಕನ್ನು ಚೊಕ್ಕವಾಗಿಸುವ ಬೆಳಕೆಂದು
ವೇದೋಪನಿಷತ್ತುಗಳು ಸಾರುತ್ತಿವೆ.
೪. ಉಪವಾಸ ಎಂದರೆ ಉಣ್ಣದೆ ಇರುವುದು ಎಂದಲ್ಲ. ಉಪ =
(ಭಗವಂತನ)ಹತ್ತಿರದಲ್ಲಿ;ಭಗವಂತನ ನೆನಪಿನಲ್ಲಿ ಇಡೀ ದಿನವನ್ನು
ಕಳೆಯುವುದು ನಿಜವಾದ ಉಪವಾಸ.
೫. ಈ ಜಗತ್ತಿಗೆ ಬಿಸಿ ತಲೆಗಳಿಗಿಂತ ತಂಪಾದ ಹೃದಯಗಳ
ಅಗತ್ಯ ಹೆಚ್ಚಾಗಿದೆ.
೬. ಮಾನವನ ಯೋಚನಾಶಕ್ತಿಗೆ ಮೀರಿದ ಅತಿಮಾನುಷ
ಶಕ್ತಿ ಈ ಪ್ರಪಂಚದಲ್ಲಿದೆ. ಆ ಶಕ್ತಿಗೆ ಆಸ್ತಿಕರು ದೇವರೆಂದು ಕರೆದರೆ
ಚಾರ್ವಾಕರು ಅಗೋಚರ ಶಕ್ತಿಯೆಂದು ಕರೆದರು.
೭. ಸಂವಹನದಿಂದ ವ್ಯವಹಾರ,ಬಾಂಧವ್ಯ ವೃದ್ಧಿಯಾದರೆ
gossip(ಗಾಳಿಮಾತು)ಉತ್ತಮ ಸಂಬಂಧವನ್ನು ಹಾಳುಗೆಡಹುವುದು.
೮. ಬುದ್ಧಿವಂತ ವ್ಯಕ್ತಿ ನಿಮ್ಮ ಮನಸ್ಸು ಅರಳಿಸುತ್ತಾನೆ.
ಸುಂದರ ವ್ಯಕ್ತಿ ಕಣ್ಣು ಅರಳಿಸುತ್ತಾನೆ.
ಪ್ರೀತಿಸುವ ವ್ಯಕ್ತಿ ಹೃದಯ ಅರಳಿಸುತ್ತಾನೆ.
೯. ಸದಾ ಕೋಪಿಷ್ಠನಾದರೆ ರೋಗ ಬರುತ್ತದೆ. ನಗು ನಗುತ್ತ ಇದ್ದರೆ
ರೋಗ ಮಾಯವಾಗುತ್ತದೆ.
೧೦. ಖಾಕಿ,ಖಾದಿ ಮತ್ತು ಕಾವಿ -ಈ ಮೂರಕ್ಕೂ ಸಮಾಜದಲ್ಲಿ ಗೌರವವಿದೆ.
ಖಾದಿ ಜನ ಸೇವೆ, ಖಾಕಿ ಅಧಿಕಾರ ಹಾಗೂ ಕಾವಿ ಕಾಯಕದ ಸಂಕೇತ.
ಮೂಲ:ಸಂಗ್ರಹ.

ಕನ್ನಡ ಗಾದೆಗಳು ಮತ್ತು ನುಡಿಗಟ್ಟುಗಳು.

೧. ಮಂದೀಲ್ ಹೊಡೆದು ಸಂದೀಲ್ ಕಾಲಿಗೆ ಬೀಳ್ತಾರೆ.
೨. ಹೋಳಿ ಬಂದಾಗ ಹೊಯ್ಕೋ ಬೇಕು.
೩. ದುಡ್ಡಿನ ಆಸೆಗೆ ಬೆಲ್ಲ ಮಾರಿ ಗೋಣಿ ಚೀಲ ನೆಕ್ಕಿದ.
೪. ಮುನಿಸು ತರವಲ್ಲ ;ನಾಚಿಕೆಯೇ ಲೇಸು.
೫. ”ಹೇಗಿದೆ ಸ್ವಾಮಿ ತಮ್ಮ ಕಾರು ಬಾರು” ಎಂದು ಕೇಳಿದರೆ
”ಕೊಂಡಿರುವೆ ಮಾರುತಿ ಕಾರು, ಇಟ್ಟಿರುವೆ ಊರಲ್ಲೊಂದು ಬಾರು”
ಎಂದನಂತೆ.
೬. ಆಗ ದೇಶಕ್ಕಾಗಿ ಮಾಡಿದರು ಅಧಿಕಾರದ ತ್ಯಾಗ;
ಈಗ ಅಧಿಕಾರಕ್ಕಾಗಿ ಮಾಡುತಿಹರು ಏನೆಲ್ಲಾ ಯಾಗ.
೭.ಮಕ್ಕಳು ಓದುತ್ತಾರೋ ಇಲ್ಲವೋ ಎಂಬುದು ಪ್ರಶ್ನೆ ಅಲ್ಲ ;
ಏನು ಓದುತ್ತಾರೆ ಎಂಬುದು ಪ್ರಶ್ನೆ.
೮. ಸಂಸ್ಕೃತಿ ಇಲ್ಲದ ಮನುಷ್ಯರಿಂದ ಸಮಾಜದಲ್ಲಿ ನೆಮ್ಮದಿ ಇರದು.
೯. ವ್ಯಕ್ತಿಗಿಂತ ಪ್ರಚಾರ ದೊಡ್ಡದು.
೧೦. ಹುಟ್ಟು ಉಚಿತ;ಸಾವು ಖಚಿತ… ಪ್ರೀತಿಯೊಂದೇ ಶಾಶ್ವತ.
೧೧. ಚಲಿಸುವ ಮೋಡದ ಚಿತ್ರವನ್ನು ಬಿಡಿಸ ಬಹುದೇ ?
೧೨. ಸ್ನೇಹ ಮರದ ನೆರಳಿನಂತೆ ನಿಜ. ಆದರೆ ಆ ಮರ ಹೂವಿನದೋ
ಮುಳ್ಳಿನದೋ ?ಎಂಬ ಪ್ರಜ್ಞೆ ಇರಬೇಕು.
೧೩. ಶಾಂತಿ ಮಂತ್ರ ಕೊಟ್ಟ ರಾಷ್ಟ್ರಕ್ಕೆ ಶಕ್ತಿ ಮಂತ್ರವೂ ಬೇಕು.
೧೪. ಗಂಡು ಮಕ್ಕಳು ಗಂಟಿಗಾಗಿ ಅತ್ತರೆ ಹೆಣ್ಣು ಮಕ್ಕಳು ಹೆತ್ತವರಿಗಾಗಿ ಅತ್ತರು.
೧೫. ಸಂತೋಷವೇ ಸವಿ ಬಾಳಿನ ಸಂಗೀತ;
ಸಂಗಾತಿಯ ಸವಿಮಾತೇ ಸಪ್ತ ಸ್ವರ.
ಮೂಲ:ಸಂಗ್ರಹ.

ಜೀವನ ಯೋಗ.

ಒಂದು ಜಾಲಿಯ ಮರ. ಅದರ ಮೈ ತುಂಬ ಮುಳ್ಳು.
ಯಾರೂ ಅದರ ಬಳಿ ಸುಳಿಯುತ್ತಿರಲಿಲ್ಲ. ಒಂಟಿ ಜೀವನ
ಮರಕ್ಕೆ ಬೇಸರವಾಯಿತು. ಯಾರಾದರೂ ಅತಿಥಿಗಳು
ಬರಬಹುದು ಎಂದು ದಾರಿ ಕಾಯುತ್ತಿತ್ತು. ಒಂದು ದಿನ
ರಾತ್ರಿ ಒಂದು ಪಕ್ಷಿಯು ಆ ಮರದ ಮೇಲೆ ಬಂದು ಕುಳಿತಿತು.
ಮರಕ್ಕೆ ಹಿಡಿಸಲಾರದಷ್ಟು ಸಂತಸ. ”ಅತಿಥಿ ದೇವೋ ಭವ”
ಎಂದು ಆ ಪಕ್ಷಿಯನ್ನು ಗೌರವಾದರ ಗಳಿಂದ ಸತ್ಕರಿಸಿ ಆ
ಪಕ್ಷಿಗೆ ಆಶ್ರಯವನ್ನಿತ್ತಿತು. ಪಕ್ಷಿಯು ಸಂತಸದಿಂದ ರಾತ್ರಿಯನ್ನು
ಕಳೆದು ಬೆಳಗಾಗುತ್ತಲೇ ಹೊರಟು ನಿಂತಿತು. ”ಮಿತ್ರನೇ,
ನೀನು ನನ್ನ ಕೂಡ ಇಲ್ಲಿಯೇ ಇದ್ದು ಬಿಡು!” ಎಂದು ಮರವು
ವಿನಂತಿಸಿತು. ಪಕ್ಷಿ ಹೇಳಿತು”ದೇವರು ನನಗೆ ಹಾರಲು
ಪುಕ್ಕಗಳನ್ನು ಕೊಟ್ಟಿದ್ದಾನೆ. ನಿನಗೆ ಸ್ಥಿರವಾಗಿರಲು ಬೇರನ್ನು
ಕೊಟ್ಟಿದ್ದಾನೆ. ನಾನು ಹಾರುತ್ತಿರಲೇ ಬೇಕು. ನೀನು ಒಂದು ಕಡೆ
ಸ್ಥಿರವಾಗಿರಲೇ ಬೇಕು!ಅದುವೇ ಜೀವನ ರೀತಿ. ಮತ್ತೆ ಎಂದಾದರೂ
ಸಮಯ ಸಿಕ್ಕಾಗ ಬರುತ್ತೇನೆ. ನಿನ್ನ ಉಪಕಾರವನ್ನು ಎಂದೂ
ಮರೆಯಲಾರೆ” ಎಂದು ಹೇಳಿ ಪಕ್ಷಿ ಹಾರಿ ಹೋಯಿತು. ಮರವು
ಇನ್ನೂ ಮಿತ್ರನ ದಾರಿ ಕಾಯುತ್ತಲಿದೆ. ನಾವು ಕೂಡಿದಾಗ ಸುಖಿಸ
ಬೇಕು. ಅಗಲಿದಾಗ ಕೂಡಿದ ಸುಖವನ್ನು ಸ್ಮರಿಸುತ್ತಿರಬೇಕು. ಸಂತಸ
ದಿಂದಿರಬೇಕು. ಅದು ಜೀವನ ಯೋಗ! ಪ್ರಪಂಚದಲ್ಲಿ ಕೂಡುವುದು
ಸಹಜ. ಅಗಲುವುದು ಅನಿವಾರ್ಯ !
ಡಾ. ಶ್ರದ್ಧಾನಂದ ಶ್ರೀ.

ಚಿಂತನ.

೧.ಸ್ವರ್ಗದಲ್ಲಿ ನಗು ಇರುವುದಿಲ್ಲ. ನರಕದಲ್ಲಿ ನಗಲು ಬಿಡುವುದಿಲ್ಲ.
ಆದ್ದರಿಂದ ಇಲ್ಲೇ ನಕ್ಕು ಹಗುರಾಗಿ.
೨. ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನವನ್ನು ಹರಿ ಕೇಳನು.
೩. ಸಂದರ್ಭವು ಮನುಷ್ಯನನ್ನು ಅನಪೇಕ್ಷಿತ ದಾರಿಯಲ್ಲಿ
ಅನಿರೀಕ್ಷಿತವಾಗಿ ಕೊಂಡೊಯ್ದು ಬಿಡುವುದು.
೪. ವಿದೇಶೀಯರ ಕಠಿಣ ದುಡಿಮೆ, ಸಮಯ ಪ್ರಜ್ಞೆ,ಸ್ವಾಭಿಮಾನ,
ಪ್ರಾಮಾಣಿಕತೆ ಮಾತ್ರ ಅನುಸರಿಸೋಣ.ಸ್ವೇಚ್ಚಾಚಾರ, ಉಡುಗೆ, ಡ್ರಗ್ಸ್
ಅಂಥ ದುರಭ್ಯಾಸವನ್ನಲ್ಲ.
೫. ಮಿಂಚು ಹೊಳೆಯುತ್ತದೆ. ಆದರೆ ಅದು ಗಾಜಿನ ಮೇಲೆ ಪ್ರತಿಫಲಿಸುತ್ತದೆಯೇ
ಹೊರತು ಮರದ ಮೇಲೆ ಪ್ರತಿಬಿಂಬಿಸುವುದಿಲ್ಲ.
೬. ಕಣ್ಣಿನ ನೋಟವನ್ನು ಸ್ವಚ್ಛಗೊಳಿಸಿದರೆ ಜಗತ್ತೆಲ್ಲಾ ಶುಚಿಯಾಗಿ
ಗೋಚರಿಸುತ್ತದೆ ಎನ್ನುವುದು ನಿತ್ಯ ಸತ್ಯ.
೭.ಮದುವೆಯಾದ ಮೇಲೆ ನಾಚಿಕೆ ಹೋಗುತ್ತೆ
ಮಕ್ಕಳಾದಮೇಲೆ ಹೇಸಿಗೆ ಹೋಗುತ್ತೆ.
೮. ಭೂಮಿಯ ಮೇಲಿನ ಮಾಲಿನ್ಯ ಪ್ರಮಾಣ ಕಡಿಮೆಯಾಗಬೇಕಾದರೆ
ವಾಹನ ವೈರಾಗ್ಯ ಒಂದೇ ಪರಿಹಾರ.
೯. ಕೀರ್ತಿಗಾಗಿ ಬದುಕಲ್ಲ;ತ್ಯಾಗಕ್ಕಾಗಿ ಬದುಕು.
೧೦. ಎಷ್ಟೇ ಜೋರಿದ್ದರೂ ಜಾಹೀರಾತಿನ ಕಮಾಲು
ಬಿಕರಿಯಾಗ ಬಲ್ಲುದೇ ಹೇಳು ಮುಗ್ಗಿರುವ ಮಾಲು ?
೧೧. ಸಂತೆಯಾ ಮನೆ ಹೊಲ್ಲ ;ಚಿಂತೆಯಾ ತನು ಹೊಲ್ಲ ;
ಚಿತ್ತ ಬಂದತ್ತ ತಿರುಗುವಾ ಮಗ ಹೊಲ್ಲ.
೧೨. ಅಪ್ಪ -ಅಮ್ಮ ಬದುಕಿದ್ದಾಗ ಹಾಕಲಿಲ್ಲ ತುತ್ತು ಅನ್ನ ;
ಸತ್ತ ಮೇಲೆ ಮಾಡಿಸಿದ ಊರಿನವರಿಗೆ ಸಂತರ್ಪಣೆಯನ್ನ .
೧೩. ತುಂಬು ಬೆಳದಿಂಗಳಿನಲ್ಲಿ ಕಣ್ಮುಚ್ಚಿ ಕುಳಿತ ವ್ಯಕ್ತಿಯಂತೆ.
೧೪. ತುಕ್ಕು ಹಿಡಿದ ಜೀವನಕ್ಕೆ ಸಾಹಿತ್ಯದ ಲೇಪನ ಅತ್ಯಗತ್ಯ.
೧೫. ವೇದಗಳು ದೇವರನ್ನು ರೂಪ,ಗುಣ,ರೇಖೆ,ಬಣ್ಣ,ಹುಟ್ಟು,
ಸಾವು,ಆದಿ, ಅಂತ್ಯ ಇವ್ಯಾವುದೂ ಇಲ್ಲದ ಅನಂತ ಶೂನ್ಯ ಎಂದು
ಕರೆದವು. ಬದುಕಿಗೆ ಒಳಿತನ್ನು ಮಾಡುವ ಶಕ್ತಿಗಳನ್ನು ಗೌರವಿಸುವುದು
ಆ ದೇವರಿಗೆ ಸಲ್ಲಿಸುವ ಗೌರವ ಎಂದು ಸಾರಿದವು.
ಮೂಲ:ಸಂಗ್ರಹ.

ಅರ್ಜುನನ ವಿವಿಧ ಹೆಸರುಗಳು.

೧.ಫಲ್ಗುಣ(ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ
ಫಲ್ಗುಣೀ ನದಿಯ ತೀರದಲ್ಲಿ ಹಗಲಿನ ವೇಳೆ ಉತ್ತರಾ ಫಲ್ಗುಣಿ
ನಕ್ಷತ್ರದಲ್ಲಿ ಹಗಲಿನ ವೇಳೆ ಜನಿಸಿದ ಕಾರಣ)
೨. ಜಿಷ್ಣು (ಸದಾಕಾಲ ಗೆಲುವು ಸಾಧಿಸುವುದರಿಂದ)
೩. ಕಿರೀಟಿ (ದೇವತೆಗಳ ಪರವಾಗಿ ದಾನವರ ವಿರುದ್ಧ
ಯುದ್ಧ ಮಾಡಿದ್ದರಿಂದ ವಜ್ರ ಖಚಿತ ಸ್ವರ್ಣಮಯ ಕಿರೀಟವನ್ನು
ದೇವೇಂದ್ರ ತೊಡಿಸಿದ ಕಾರಣ)
೪. ಪಾರ್ಥ
೫. ಶ್ವೇತವಾಹನ (ರಥವನ್ನೇರಿ ಯುದ್ಧಕ್ಕೆ ತೆರಳುವಾಗ,
ಸ್ವರ್ಣಾಭರಣಗಳಿಂದ ಅಲಂಕೃತ ಗೊಂಡಿರುವ ಬಿಳಿಯ ವರ್ಣದ
ಕುದುರೆಗಳನ್ನೇ ರಥಕ್ಕೆ ಕಟ್ಟಲಾಗುತ್ತಿತ್ತು.)
೬.ವಿಭತ್ಸು (ಗೆಲುವಿನ ಅಮಲೇರಿ ಹೇಯ ರೀತಿಯಲ್ಲಿ, ಅನ್ಯಾಯ
ಮಾರ್ಗದಲ್ಲಿ, ಕ್ರೂರ ಕೃತ್ಯ ಗಳಲ್ಲಿ ತೊಡಗದೆ,ಯುದ್ಧ ಧರ್ಮ,
ನೀತಿಯನ್ನು ಮೀರಿ ಯುದ್ಧ ಮಾಡಲಾರ ಎಂಬುದರಿಂದ)
೭. ವಿಜಯ (ಯುದ್ಧದಲ್ಲಿ ಎಂದಿಗೂ ಸೋತು ಹಿಂದಿರುಗಿ ಬಂದದ್ದಿಲ್ಲ)
೮. ಗುಡಾಕೇಶ
೯. ಧನಂಜಯ(ಭೂಮಂಡಲದ ದಿಗ್ವಿಜಯಕ್ಕಾಗಿ ಹೊರಟು ಆಕ್ರಮಣ
ಮಾಡಿದ ರಾಜರೆಲ್ಲ ಸೋತು ತಮ್ಮಲ್ಲಿರುವ ಅಪಾರ ಐಶ್ವರ್ಯವನ್ನು
ಒಪ್ಪಿಸಿದರು. ಅದನ್ನು ತಂದು ಅಣ್ಣ ಯುಧಿಷ್ಠಿರನ ಖಜಾನೆಯನ್ನು
ತುಂಬಿಸಿದ್ದರಿಂದ)
೧೦. ಸವ್ಯಸಾಚಿ(ಗಾಂಢೀವ ಧನುಸ್ಸನ್ನು ಎತ್ತಿಕೊಂಡು ಹೆದೆ ಏರಿಸಿ
ಎರಡೂ ಕೈಗಳಿಂದ ಬಾಣ ಪ್ರಯೋಗ ಮಾಡ ಬಲ್ಲ )
ಮೂಲ :ಸಂಗ್ರಹ .