ಕನ್ನಡ ಸೌರಭ.

ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು .
ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ
ಭವ್ಯ ಇತಿಹಾಸವಿದೆ.
ನಮ್ಮೂರೇ ಚೆಂದ, ನಮ್ಮವರೇ ಅಂದ
ಕನ್ನಡ ಭಾಷೆ ಕರ್ಣಾನಂದ.
ನಮ್ಮ ಕನ್ನಡ ನಾಡಿಗೆ ದೇವರು ಸಹ್ಯಾದ್ರಿಯನ್ನು,ತುಂಗಾ,
ಕಾವೇರಿಯನ್ನು, ಪಶ್ಚಿಮ ಸಮುದ್ರದ ಸಂಗ ಸಾನ್ನಿಧ್ಯಗಳನ್ನು
ದಯಪಾಲಿಸಿದ್ದಾನೆ. ಜೊತೆಗೆ ಪಂಪ,ನಾರ್ಣಪ್ಪರಂಥ ವಿಶ್ವ
ಕವಿಗಳನ್ನು ಅನುಗ್ರಹಿಸಿದ್ದಾನೆ. ಇಲ್ಲಿ ಅರಳದಿಹ ಹೂವುಗಳಿಲ್ಲ;
ಹಾಡಲು ಬಾರದ ಹಕ್ಕಿಗಳಿಲ್ಲ.
”ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ-
ಮೂಗಲ್ ಕನ್ನಡ ಪದ ವಾಡ್ತೀನಿ!ನನ್ ಮನಸನ್ನ್ ನೀ ಕಾಣೆ!”
ಅಂದಿದ್ದಾನೆ ಕನ್ನಡ ಕವಿ ರಾಜ ರತ್ನಂ.
”ಸಾಯುತಿದೆ ನಿಮ್ಮ ನುಡಿ,ಓ ಕನ್ನಡ ಕಂದರಿರ!
ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ಕಣ್ತೆರೆಯಿರೇಳಿ, ಓ ಕನ್ನಡದ ಮಕ್ಕಳಿರ!
ಗರ್ಜಿಸುವುದ ಕಲಿತು ಸಿಂಹವಾಗಿ” ಅಂದಿದ್ದಾರೆ ಕುವೆಂಪು.
ಕನ್ನಡ ಉಳಿಸುವುದು,ಬೆಳೆಸುವುದು ಆಮೇಲೆ;
ಮೊದಲು ಬಳಸೋಣ. ಅದು ತಾನೇ ಬೆಳೆಯುತ್ತದೆ.
ಆಂಗ್ಲ ಭಾಷೆಗೆ ಒತ್ತು;ಕನ್ನಡಕ್ಕೆ ಕುತ್ತು.
ಕನ್ನಡದ ಹಿನ್ನಡೆಗೆ ಇಂಗ್ಲಿಷ್ ಮುನ್ನುಡಿ;ಕನ್ನಡ ಕಾಪಾಡಿ.
ಕನ್ನಡವೇ ಸತ್ಯ;ಕನ್ನಡವೇ ನಿತ್ಯ.
”ಎಲ್ಲಾದರೂ ಇರು ಎಂತಾದರೂ ಇರು;
ಎಂದೆಂದಿಗೂ ನೀ ಕನ್ನಡವಾಗಿರು;
ಕನ್ನಡ ಗೋವಿನ ಮುದ್ದಿನ ಕರು ;
ಕನ್ನಡತನ ಒಂದಿದ್ದರೆ ನೀನೆಮಗೆ ಕಲ್ಪತರು”
-ರಾಷ್ಟ್ರ ಕವಿ ಕುವೆಂಪು.
೧೯೫೬-ನವೆಂಬರ್ ೧ ರಂದು ”ವಿಶಾಲ ಮೈಸೂರು ”ರಾಜ್ಯ
ಉದಯವಾಯಿತು. ೧೯೭೩ರಲ್ಲಿ ಮೈಸೂರು ರಾಜ್ಯವನ್ನು
”ಕರ್ನಾಟಕ ”ಎಂದು ಮರುನಾಮಕರಣ ಮಾಡಲಾಯಿತು.
ಮೂಲ:ಸಂಗ್ರಹ.

Advertisements

2 thoughts on “ಕನ್ನಡ ಸೌರಭ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s