ನುಡಿ ಮುತ್ತು.

೧. ಹೊಗೆಯು ಗಾಳಿಗೆ ವಶವಾಗಿ ಗಾಳಿ ಹೋದಂತೆ ಹೋಗುತ್ತದೆ.
ಹಾಗೆಯೇ ಧರ್ಮವು ಬಲಕ್ಕೆ ವಶವಾಗಿ ಬಲವನ್ನು ಹಿಂಬಾಲಿಸುತ್ತದೆ.
ಬಳ್ಳಿಯು ಮರವನ್ನು ಆಶ್ರಯಿಸಿಕೊಂಡಂತೆ ಬಲವನ್ನಾಶ್ರಯಿಸಿರುವ
ಧರ್ಮವು ಬಲವನ್ನು ಅಲ್ಲಾಡಿಸಲು ಅಸಮರ್ಥವಾಗಿದೆ.
-ಮಹಾಭಾರತ, ಶಾಂತಿಪರ್ವ.
೨. ಮಾತು ಮಂತ್ರವಾದಾಗ ಮನೆ ಮಂದಿರವಾಗುತ್ತದೆ.
೩. ಪರರನ್ನು ನೋಯಿಸದಿರುವುದೇ ಧರ್ಮ.
೪. ನಂಬಿಕೆ ದೃಢವಾದರೆ ಕಲ್ಲೂ ದೇವರಾಗುತ್ತಾನೆ. ನಂಬದವರಿಗೆ
ದೇವರೂ ಕಲ್ಲಾಗುತ್ತಾನೆ.
೫. ಇನ್ನೊಬ್ಬರಿಗೆ ಸಂತೋಷ ನೀಡುವುದೇ ಆರಾಧನೆ
೬.ಹೃದಯವು ನವನೀತದಂತಿರಲಿ; ಮಾತು ಮಕರಂದದಂತೆ
ಸವಿಯಾಗಿರಲಿ.
.೭. ಮಾತಿಗೊಂದು ರೀತಿಯುಂಟು;ಅರಿತು ಆಡಬೇಕು;
ಬಾಳಿಗೊಂದು ನೀತಿಯುಂಟು; ತಿಳಿದು ಬಾಳಬೇಕು.
೮. ಸತ್ ಚಿಂತನೆಯಲ್ಲಿ ಸಾಗಲಿ ಹೊತ್ತು; ಆಡುವ ಮಾತಾಗಲಿ
ಸವಿ ಮುತ್ತು.
೯. ದೈವ ಒಂದು ಶಕ್ತಿ. ಅದನ್ನು ಒಲಿಸಿಕೊಳ್ಳಲು ಪ್ರಾರ್ಥನೆ
ಅಗತ್ಯ.
೧೦.ಬದುಕು ಮತ್ತು ಸಮಯಗಳೆರಡೂ ಉತ್ತಮ ಗುರುಗಳು.
ಬದುಕು ಸಮಯದ ಸದುಪಯೋಗವನ್ನು ಕಲಿಸಿದರೆ ಕಾಲ ಜೀವನದ
ಮೌಲ್ಯಗಳ ಕುರಿತು ಕಲಿಸುತ್ತದೆ.
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s