ಚಿಂತನ.

೧. ಬೃಹಸ್ಪತಿಯೇ ಮೊದಲಾದ ಶ್ರೇಷ್ಠ ಗ್ರಹಗಳಿದ್ದರೂ ಕೂಡ
ರಾಹು ಅವರನ್ನೆಲ್ಲ ದ್ವೇಷಿಸದೆ ಪ್ರಕಾಶಮಾನರಾದ ಸೂರ್ಯ,
ಚಂದ್ರರಿಬ್ಬರನ್ನೇ ಪರ್ವದಿನದಲ್ಲಿ ಬೆಂಬತ್ತಿ ಪೀಡಿಸುತ್ತಾನೆ.
-ಭರ್ತೃಹರಿ.
೨.ನಮ್ಮ ಮನಸ್ಸು ಕನ್ನಡಿಯಂತೆ ಸ್ವಚ್ಛವಾಗಿದ್ದರೆ ಸಾಲದು.
camera ದಂತೆ ಸ್ಥಿರ ಚಿತ್ರವನ್ನು ಮೂಡಿಸಿಕೊಳ್ಳಲು ಸಮರ್ಥ
ವಾಗಬೇಕು.
೩. ಕಾವ್ಯ,ಶಾಸ್ತ್ರಗಳನ್ನೋದಿ ವಿನೋದಿಸುವುದರಿಂದ ಬುದ್ಧಿವಂತರ
ಸಮಯ ಕಳೆಯುತ್ತದೆ. ಆದರೆ ಮೂರ್ಖರ ಸಮಯ ದುರಭ್ಯಾಸ,ನಿದ್ರೆ,
ಅಥವಾ ಜಗಳದಿಂದ ಕಳೆಯುತ್ತದೆ.
೪. ಮೋಡಗಳು ತಾವು ಉಪ್ಪುನೀರನ್ನು ಕುಡಿದರೂ ಲೋಕಕ್ಕೆ ಸಿಹಿ
ನೀರನ್ನೇ ನೀಡುತ್ತವೆ.
೫. ಶೀಲವಂತನ ಭಕ್ತಿ ಶಂಕೆಯಲ್ಲಿ ಹೋಯಿತ್ತು. -ಚನ್ನ ಬಸವೇಶ್ವರ.
೬. ಹೂವ ಮುಡಿಯ ಬಹುದಲ್ಲದೆ ಗಂಧವ ಮುಡಿಯ ಬಹುದೇ ?
-ಅಕ್ಕ ಮಹಾದೇವಿ.
೭. ಹಗ್ಗವಿಲ್ಲದ ಕಟ್ಟು,ಬೆತ್ತ ವಿಲ್ಲದ ಪೆಟ್ಟು
ಒಗ್ಗಿತೇ ಈ ಗತಿಯು ಸವಿ ವಿಷವ ತಿಂದು.
-ಪಂಜೆ ಮಂಗೇಶ ರಾಯರು.
೮.ವಿಜ್ಞಾನ ಅತಿರೇಕಕ್ಕೆ ಹೋಗದ ಹಾಗೆ ಆಧ್ಯಾತ್ಮಿಕ ಕಡಿವಾಣ ಅಗತ್ಯ.
೯. ಲಲಾಟ ಲೇಖನದ ಮುದ್ರಣ ದೋಷ ತಿದ್ದುಪಡಿಗೆ ಮೀರಿದ್ದು.
೧೦. ದೃಷ್ಟ ಲೋಕದ ಬೆಡಗು ಅದೃಷ್ಟ (ಲೋಕ)ವನ್ನು ಮರೆಸ ಬಾರದು.
೧೧. ಆನೆಯನೇರಿದ ಮಾವಟಿಗ ಚಕ್ರೇಶ್ವರನಾಗ ಬಲ್ಲನೆ?
೧೨. ರಮ್ಯತೆ ಇದ್ದಾಗಲೇ ಭಾವನೆಗಳ ಉತ್ಕಟತೆ.
೧೩. ‘ಅ’ ಎನ್ನುವುದು ಮೊದಲ ಅಕ್ಷರ. ‘ಕ್ಪ’ ಕೊನೆಯದು.
‘ಅ’ ಮತ್ತು ‘ಕ್ಪ ‘ನ ಮುಂದುವರಿಕೆ ‘ಅಕ್ಷರ ‘ ಎನಿಸಿತು.
೧೪. ಕಳಾ ಹೀನರಿಗೂ ಕಳೆ ತಂದು ಕೊಡತಕ್ಕದ್ದು ಅಧಿಕಾರದ ಗದ್ದುಗೆ.
೧೫. ಒಬ್ಬ ವ್ಯಕ್ತಿಯನ್ನು ಗಾಢವಾಗಿ ಅರ್ಥ ಮಾಡಿಕೊಂಡ ಬಳಿಕವಷ್ಟೇ
ನಾವು ಆ ವ್ಯಕ್ತಿಯನ್ನು ಆಳವಾಗಿ ಪ್ರೀತಿಸಲು ಸಾಧ್ಯ.
ಮೂಲ:ಸಂಗ್ರಹ.

Advertisements

ಕನ್ನಡ ಸೌರಭ.

ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು .
ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ
ಭವ್ಯ ಇತಿಹಾಸವಿದೆ.
ನಮ್ಮೂರೇ ಚೆಂದ, ನಮ್ಮವರೇ ಅಂದ
ಕನ್ನಡ ಭಾಷೆ ಕರ್ಣಾನಂದ.
ನಮ್ಮ ಕನ್ನಡ ನಾಡಿಗೆ ದೇವರು ಸಹ್ಯಾದ್ರಿಯನ್ನು,ತುಂಗಾ,
ಕಾವೇರಿಯನ್ನು, ಪಶ್ಚಿಮ ಸಮುದ್ರದ ಸಂಗ ಸಾನ್ನಿಧ್ಯಗಳನ್ನು
ದಯಪಾಲಿಸಿದ್ದಾನೆ. ಜೊತೆಗೆ ಪಂಪ,ನಾರ್ಣಪ್ಪರಂಥ ವಿಶ್ವ
ಕವಿಗಳನ್ನು ಅನುಗ್ರಹಿಸಿದ್ದಾನೆ. ಇಲ್ಲಿ ಅರಳದಿಹ ಹೂವುಗಳಿಲ್ಲ;
ಹಾಡಲು ಬಾರದ ಹಕ್ಕಿಗಳಿಲ್ಲ.
”ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ-
ಮೂಗಲ್ ಕನ್ನಡ ಪದ ವಾಡ್ತೀನಿ!ನನ್ ಮನಸನ್ನ್ ನೀ ಕಾಣೆ!”
ಅಂದಿದ್ದಾನೆ ಕನ್ನಡ ಕವಿ ರಾಜ ರತ್ನಂ.
”ಸಾಯುತಿದೆ ನಿಮ್ಮ ನುಡಿ,ಓ ಕನ್ನಡ ಕಂದರಿರ!
ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ಕಣ್ತೆರೆಯಿರೇಳಿ, ಓ ಕನ್ನಡದ ಮಕ್ಕಳಿರ!
ಗರ್ಜಿಸುವುದ ಕಲಿತು ಸಿಂಹವಾಗಿ” ಅಂದಿದ್ದಾರೆ ಕುವೆಂಪು.
ಕನ್ನಡ ಉಳಿಸುವುದು,ಬೆಳೆಸುವುದು ಆಮೇಲೆ;
ಮೊದಲು ಬಳಸೋಣ. ಅದು ತಾನೇ ಬೆಳೆಯುತ್ತದೆ.
ಆಂಗ್ಲ ಭಾಷೆಗೆ ಒತ್ತು;ಕನ್ನಡಕ್ಕೆ ಕುತ್ತು.
ಕನ್ನಡದ ಹಿನ್ನಡೆಗೆ ಇಂಗ್ಲಿಷ್ ಮುನ್ನುಡಿ;ಕನ್ನಡ ಕಾಪಾಡಿ.
ಕನ್ನಡವೇ ಸತ್ಯ;ಕನ್ನಡವೇ ನಿತ್ಯ.
”ಎಲ್ಲಾದರೂ ಇರು ಎಂತಾದರೂ ಇರು;
ಎಂದೆಂದಿಗೂ ನೀ ಕನ್ನಡವಾಗಿರು;
ಕನ್ನಡ ಗೋವಿನ ಮುದ್ದಿನ ಕರು ;
ಕನ್ನಡತನ ಒಂದಿದ್ದರೆ ನೀನೆಮಗೆ ಕಲ್ಪತರು”
-ರಾಷ್ಟ್ರ ಕವಿ ಕುವೆಂಪು.
೧೯೫೬-ನವೆಂಬರ್ ೧ ರಂದು ”ವಿಶಾಲ ಮೈಸೂರು ”ರಾಜ್ಯ
ಉದಯವಾಯಿತು. ೧೯೭೩ರಲ್ಲಿ ಮೈಸೂರು ರಾಜ್ಯವನ್ನು
”ಕರ್ನಾಟಕ ”ಎಂದು ಮರುನಾಮಕರಣ ಮಾಡಲಾಯಿತು.
ಮೂಲ:ಸಂಗ್ರಹ.

Diwali Greetings.

This Diwali, I am sending my dear viewers

CASH:

C=Care;A=Affection;S=Smiles;H=Hugs.

Wishing you all a very happy Diwali:

Sky-full of fireworks.Mouth-full of sweets.

House full of diyas(lamps) and Heart full of joy.

May the divine light of diwali spread into your life

peace, prosperity, happiness and good health.

It is an opportunity to entreat the Deities

to bless us all and rid us of sufferings.

Diwali or Deepavali is the Hindu festival of lights.

It spiritually signifies the victory of light over darkness,

good over evil, knowledge over ignorance and hope

over despair.

The 13 reasons  behind the jubilations are-

1.Birthday of Goddess Lakshmi.She is said

to have been incarnated from the depth of

the bottomless ocean during the Samudra

Manthana (churning of ocean by the angels

and devils.

2.Killing of Narakasura the devil by Satyabhama.

who was an incarnation of Bhudevi(earth goddess)

as she only could kill him.

3.Return of Rama after vanquishing the evil king

Ravana and after passing a period of 14 years in exile.

4.The return of Pandavas from 12 years of banishment.

They were kind and honest and loved by the people.

5.The coronation of Vikramaditya on Diwali, following

his victory  over the Shakas in 56 BC.

6. For the Jains, Diwali commemorates the

enlightenment of Vardhamana Mahaveera. He was

the last Thirthankara of the Jains .

7.The enlightenment of Swami Dayananda Saraswati

a reformer of Hinduism and founder of  Arya Samaj in 1875.

8. Special day for the Sikhs. It was on the occasion of

Diwali, the foundation stone of Golden Temple at Amritsar

was laid in 1577. The 6th Sikh Guru was freed from

imprisonment  in 1619 by Jahangir on Diwali day.

9.Goddess Kali saved heaven and earth from the

growing  cruelty of the demons by killing all the

devils.

10. The harvest festival. Diwali falls in the time of

Kharif crop, when the rice cultivation gives its fruits.

11.Hindu New Year Day.Hindu businessmen offer pujas

and start new book of accounts and pay off all the debts.

12.Diwali marks the overcoming of Mahabali by Lord

Vishnu. Mahabali was  violent in his ways with the Devas(gods)

On their insistence, Lord Vishnu disguised himself as

Vamana(short Brahmin) and approached Mahabali

for some charity. Bali was tricked into giving up his

kingship and wealth. Diwali marks the overcoming of

Mahabali by Lord Vishnu.But  Mahabali was bestowed

a boon by  Lord Vishnu  to return to earth for one day

during diwali festival to be honoured by his beloved people.

13.According to Skanda Purana, Goddess Shakti(wife of Shiva)

observed 21 days of Kedhara Vrata.Diwali is the completion

day of this austerity.This is the day when Lord Shiva accepted

Shakti into the left half of of His form and appeared as

Ardhanarishwara.

Source:Collection.

ಚಿಂತನ.

೧. ವಿಶಾಲವಾದ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು.
ಆದರೆ ಒಂದು ಒಳ್ಳೆಯ ಹೃದಯವನ್ನು ನೋಡಬೇಕಾದರೆ ನಮ್ಮ
ಮನಸ್ಸು ವಿಶಾಲವಾಗಿರಬೇಕು.
೨. ಪರಮ ಎಂದರೆ ಆತನಿಗೆ ಹೋಲಿಸಲು ಬೇರೆ ಯಾವುದೂ
ಇಲ್ಲವೆಂದರ್ಥ. ಆ ಪರಮಾತ್ಮನು ಅದ್ವಯನು (ಎರಡು ಇಲ್ಲದ್ದು )
ಹಾಗೂ ಅನಂತನು ಎಂದು ವೇದಾಂತವು ಹೇಳಿದೆ.
೩. ಪೃಕೃತಿ ವಿಕೃತಿ ಗೊಂಡಾಗ ಜೀವನ ಸಂಸ್ಕೃತಿ ನಾಶವಾಗುತ್ತ
ಹೋಗುತ್ತದೆ.
೪.ಶರೀರದ ಆರೋಗ್ಯ ಕಾಪಾಡಲು ವೈದ್ಯರು ಬೇಕು. ಸಮಾಜದ
ಸ್ವಾಸ್ಥ್ಯ ಕಾಪಾಡಲು ಆರಕ್ಷಕರು ಬೇಕು. ಆದರೆ ಇದು ಅವರಿಂದಲೇ ಸಾಧ್ಯವೇ?
ಖಂಡಿತ ಇಲ್ಲ. ಜನರೂ ಅವರೊಡನೆ ಸ್ಪಂದಿಸ ಬೇಕು. ನೆಲದ ಕಾನೂನನ್ನು
ಗೌರವಿಸಬೇಕು. ದೈನಂದಿನ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು.
ಜೀವನ ಧರ್ಮವನ್ನು ಪರಿಪಾಲಿಸಬೇಕು.
೫.ಮಾಧ್ಯಮಗಳು ಮೌಲ್ಯಗಳ ಕಾವಲುಗಾರರಾಗಲಿ.
೬. ಹೊಸತೆ ಇರಲಿ, ಹಳತೆ ಇರಲಿ, ಒಳಿತು ಮಾತ್ರ ಬಾಳ್ಗೆ ಬರಲಿ.
೭. ನಾಲಿಗೆಗೆ ಆದ ಗಾಯ ವಾಸಿ ಮಾಡ ಬಹುದು. ಆದರೆ ನಾಲಿಗೆಯಿಂದ
ಆಗುವ ಗಾಯ ವಾಸಿ ಮಾಡಲು ಸಾಧ್ಯವಿಲ್ಲ .
೮. ಬಾಹ್ಯ ಸೌಂದರ್ಯ ನಾಗರೀಕತೆಯ ಸಂಕೇತ. ಆಂತರಿಕ ಸೌಂದರ್ಯ
ಸಂಸ್ಕೃತಿಯ ಸಂಕೇತ .
೯. ಕಂಡವರನ್ನು ಮೆಚ್ಚಿಸುವಂತೆ ಬದುಕುವುದಲ್ಲ ;ದೇವರು ಮೆಚ್ಚುವಂತೆ
ಬದುಕಬೇಕು.
೧೦. ಬದುಕಿಗೆ ವಿಸ್ತಾರವಿದೆ. ಆದರೆ ನಮ್ಮ ಪ್ರಾಪ್ತಿಗೆ ಮಿತಿ ಇದೆ.
.

Do You Know?

1.Diet in pregnancy influences child’s gender.

Eating bananas(potassium intake) was associated

with having a boy.Drinking a lot of milk (calcium)

but within safe limits, eating breakfast cereal everyday,

having a reasonable intake of sodium plus a good intake

of protein meant that women were likely to have boys.

It’s the converse of that if you’re hoping for a girl.

2.To what question can you never answer ”yes”?

Ans:Q.1.Are you sleeping?

Q.2.Are you me?

Q.3.Are you dead?

Q.4.What’s the opposite of ”yes”?

3.Scientists have discovered a new gene, responsible

for good health and longevity in humans. The gene FOXO 3a

is known for increasing lifespan in other species, now

linked to humans for the first time, increasing their lifespan

beyond 100 years. FOXO  genes are present in 4 forms in

humans but its form FOXO 3a is being associated with

better health and longevity.

Source:Collection.

ಕನ್ನಡ ಗಾದೆ ಮತ್ತು ನುಡಿಗಟ್ಟುಗಳು.

೧. ಕನಸಿನಲ್ಲಿ ತಾಳಿ ಕಟ್ಟಿ ಬೆಳಿಗ್ಗೆ ಹೆಂಡ್ತೀನ ಹುಡುಕಿದ್ನಂತೆ.
೨, ಪಿಂಗಾಣಿ ಅಂಗಡಿಗೆ ಗೂಳಿ ನುಗ್ಗಿದ ಹಾಗೆ.
೩. ನಾನೂ ರಾಣಿ, ನೀನೂ ರಾಣಿ ಬೆರಣಿ ಎತ್ತೋರು ಯಾರು?
೪. ಯಾವ ಕಾಲು ಮುರಿದರೂ ಸೊಂಟಕ್ಕೆ ಕಷ್ಟ.
೫. ಬಹುಕೋಪಿಗಳಿರುವಲ್ಲಿ ಅನುಭವ ಗೋಷ್ಠಿಯ ಮಾಡಬಾರದು.
೬. ಸಹನೆಗೂ ಮಿತಿಯಿದೆ. ಸಾಗರದೊಳಗೂ ಬಡಬಾನಲವಿದೆ.
೭. ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗೆ.
೮. ಮಿಂಚು ಮೂಡಿಸುವ ಬೆಳಕು ಕ್ಷಣಿಕ.
೯. ಇಷ್ಟ ಬಂದಂತೆ ಮಾತಾಡುವವ ಇಷ್ಟವಿಲ್ಲದ್ದನ್ನು ಕೇಳಬೇಕಾಗುತ್ತದೆ.
೧೦. ಬಿದಿಗೆ ಚಂದ್ರಮ ಡೊಂಕು . ಆದರೆ ಬೆಳದಿಂಗಳು ಡೊಂಕೇ ?
೧೧. ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನವೆಲ್ಲಿ ?
೧೨. ಮನುಷ್ಯರಿಗೆ ಗುರಿ ತೋರಿಸುವವರೇ ಗುರು.

Collection Of Quotes.

1.World peace does not require that each person

love his neighbour; it requires only that they live

together with mutual tolerance.

-John F. Kennedy.

2. To open a shop is easy; to keep it open is an art..

-Confucius.

3.Worldly love is erratic and subject to change.

Divine love is flawless.

4. Kites rise highest against the wind, not with it.

-Sir Winston Churchill.

5. Speak evil of  no one.-Prophet Muhammad.

6.There are sometimes when silence has the

loudest voice.

7.It  is better to declare the truth and be rejected

than to withhold it just to be accepted.

8.It is better to lose your pride with someone you

love, rather than lose that someone you love,

with your useless pride.

-Chinese proverb.

9.Happiness depends  more on the inward

disposition of mind than on the outward

circumstances.

-Benjamin Franklin.

10.Marriage works when we are givers of

happiness  and not beggars of happiness.

11. You can cage a singer, but you cannot

cage the song.

12.A human being betrays another’s faith

but God  never betrays the faith of His devotee.

13.The greatest conflicts are not between two people

but between one person and himself.

14. In science, read the newest works; in literature,

the oldest; the classical literature is always modern.

15.Patriotism is when love of your own people comes

first ; nationalism is, when hate for people other

than your own comes first.

-Charles De Gaule.

Source:Collection.