ನಿಮಗೆ ಗೊತ್ತೇ ?

೧.ಪ್ರಾಕ್ =ಮೂಡು,ಪೂರ್ವ ದಿಕ್ಕು. ವೇಣು =ಕೊಳಲು, ಬಿದಿರು.
ಆದುದರಿಂದ ಪ್ರಾಗ್ವೇಣು ಪುರಂ ಅಂದರೆ ಮೂಡುಬಿದಿರೆ.
೨. ಹಂಸಗೀತೆ ಅಂದರೆ ಸಾಯುವ ಮೊದಲು ಹಂಸ ಹಾಡುವ
ಮಧುರ ಗೀತೆ.
೩. ಭಾರತೀಯ ವೈದ್ಯ ಪದ್ಧತಿಗಳು-ಆಯುರ್ವೇದ,ಸಿದ್ಧ ,ಯುನಾನಿ ,
ಯೋಗ,ಪೃಕೃತಿ ಚಿಕಿತ್ಸೆ.
೪. ರಥ =ನಡೆ ದೇಗುಲ.
೫. ಜಮದಗ್ನಿಯ ತಪೋ ಭೂಮಿ ಬಿಲ್ವಪುರವಾಯಿತು ಬೆಳ್ವೆ.
೬. ಕಂಬಗಳಿಂದ ಕಟ್ಟಿದ ಗೋದಾಮು ಇರುವ ಜಾಗವೇ ಖಂಬದ ಕೋಣೆ.
೭. ರಸ ರೂಪದಿಂದ ಕೂಡಿರುವ ಪಾದರಸವು ಬೆಂಕಿಯಲ್ಲಿ ಬಿದ್ದರೂ ಸುಟ್ಟು ಹೋಗದು.
೮. ದಕ್ಷಿಣ ಕನ್ನಡದ ಕವಿ ರತ್ನ ತ್ರಯರು -ರತ್ನಾಕರ ವರ್ಣಿ, ಪಾರ್ತಿ ಸುಬ್ಬ ಮತ್ತು ಮುದ್ದಣ.
೯. ದ್ರೋಣನ ಪುಟ್ಟ ನಾಡು ದಹರ ದ್ರೋಣ -ಇಂದಿನ ಡೆಹ್ರಾಡೂನ್.
೧೦. ಹಿಂದಿನ ”ಹಾಟಕ”(ಚಿನ್ನದ ನಾಡು )ಈಗಿನ ಲಡಾಖ್.
೧೧. ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರ ಜನ್ಮ ಸ್ಥಾನ -ಪಡುಮಲೆಯ
ಗೆಜ್ಜೆಗಿರಿ ನಂದನ ಬಿತ್ತ್ ಲ್.
೧೨. ರಕ್ತದಲ್ಲಿ Fibrinogen ನ ಪ್ರಮಾಣ (ರಕ್ತ ಹೆಪ್ಪುಗಟ್ಟಲು)೪೫೦ ಮಿಲಿಗ್ರಾಮ್
ಇರಬೇಕು. Thromboplastin ರಕ್ತ ಹೆಪ್ಪು ಗಟ್ಟಲು ಅಗತ್ಯವಾದ ಮತ್ತೊಂದು ವಸ್ತು.
೧೩.ತೈಲಕ್ಕೆ ಸಂಸ್ಕೃತದಲ್ಲಿ ”ಸ್ನೇಹ ” ಎನ್ನುತ್ತಾರೆ. ಈ ತೈಲ ಬತ್ತಿಯೊಂದಿಗೆ ಸೇರಿಕೊಂಡು
ನೆರವಾದರೆ ಮಾತ್ರ ದೀಪ ಉರಿಯುವುದು. ಇದು ಸ್ನೇಹದ ಫಲ ಸ್ವರೂಪ.
೧೪. ಹೀಬ್ರೂ ಭಾಷೆಗೆ ಇರುವ ಮತ್ತೊಂದು ಹೆಸರು -”ಲಶೋನ್ ಲಕೋಡೆಶ್” (ಪವಿತ್ರ ಭಾಷೆ )
೧೫. ”ಸರ್ಕಾರ” ಎಂಬುದು ”ಸರ್ವ ಕಾರ್ಯ ”ಎಂಬ ಸಂಸ್ಕೃತ ಶಬ್ದದ ಅಪಭ್ರಂಶ.
೧೬.ನೆರೆ -ಕರೆ ಎಂದರೇನು ?ನೆರೆ ಎಂದರೆ ಪಕ್ಕದ ಮನೆ; ಕರೆ ಎಂದರೆ ಕರೆದರೆ
ಕೇಳುವಷ್ಟು ದೂರದಲ್ಲಿರುವವರ ಮನೆ.
೧೭. ಕುಂತಿ-ಪಾಂಡವರ ಮಾತೆ ; ಶ್ರೀ ಕೃಷ್ಣನ ತಂದೆಯಾದ ವಸುದೇವನ ಸೋದರಿ.
೧೮. ನಮಃ =ಬಾಗು; ತೆ =ನೀನು (ನಮಸ್ತೆ )
೧೯. ವೇದ =ಶಬ್ದ. ಆರ್ಯ =ಸಂಸ್ಕಾರ ಸಂಪನ್ನ. ದ್ರವಿಡ =ದ್ರವ್ಯ ಸಂಪತ್ತು ಚೆನ್ನಾಗಿರುವ ದೇಶ.
೨೦. ಮಹಾರಾಷ್ಟ್ರದ ರತ್ನಗಿರಿ -ಪಾಂಡವರು ೧೨ ವರ್ಷ ವನವಾಸದಲ್ಲಿದ್ದಾಗ ಈ ಪ್ರದೇಶದಲ್ಲೇ
ವಾಸವಾಗಿದ್ದರು ಎನ್ನಲಾಗುತ್ತಿದೆ. (ಪೌರಾಣಿಕ ಹಿನ್ನೆಲೆಯ ಪ್ರಕಾರ ).
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s