ಗಣೇಶ ಚೌತಿ.

ganesh

ಗಣೇಶನೆಂದರೆ ಸಂಗೀತ, ಸಾಹಿತ್ಯ, ವಿದ್ಯೆ,ಕಲೆಗಳ ಅಧಿದೇವತೆ.
”ಶರಣು ಸಿದ್ಧಿ ವಿನಾಯಕ, ಶರಣು ವಿದ್ಯಾ ಪ್ರದಾಯಕ,
ಶರಣು ಪಾರ್ವತಿ ತನಯ ಮೂರುತಿ, ಶರಣು ಮೂಷಿಕ ವಾಹನ. ”
ಮಕ್ಕಳ ಪ್ರೀತಿಯ ಬೆನಕ , ಫ್ರೌಢರ ಆತ್ಮೀಯ ಗಣಪತಿ,
ಚಿಂತಕರನ್ನು ಚಿಂತನೆಗೆ ಎಳೆಯುವ ಸಿದ್ಧಿ ವಿನಾಯಕ,
ಸಂಶೋಧಕರ ನಿಲುಮೆಗೆ ಸಿಲುಕದ ವಿಶ್ವ ವ್ಯಾಪಿ ಗಜಾನನ ,
ತತ್ತ್ವ ಜ್ಞಾನಿಗಳಿಗೆ ನೂರಾರು ನಿರೂಪಣೆಗೆ ವಸ್ತುವಾಗುವ ಈ
ಏಕದಂತ, ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿ,
ರಾಯಭಾರಿಯಾಗಿ ವಿಶ್ವಾದ್ಯಂತ ಪ್ರಸಿದ್ಧ ಈ ವಿಕಟನ
ವಿಗ್ರಹದಲ್ಲೂ ಬದಲಾವಣೆ ಯಾಯಿತು.
ಒಂದು ನಾಗರೀಕತೆಯ ಪ್ರತೀಕವಾಗಿ, ಗಣಾಧ್ಯಕ್ಷ ನಾಗಿ
ವಿಘ್ನ ನಿವಾರಕನಾಗಿ, ವಿಶ್ವಂಭರನಾಗಿ ಈ ವಿನಾಯಕ
ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಕಲ್ಪನೆಗೂ ನಿಲುಕದ್ದು.
ಪಾರ್ವತಿ ದೇವಿಯ ಮೈಯ ಮಣ್ಣಿನಿಂದ ರೂಪು ಗೊಂಡ
ಗಣಪತಿ ಶ್ರಮ ಸಂಸ್ಕೃತಿಯ ಪ್ರತೀಕ.
ಕೃಷಿ ಉತ್ಪನ್ನಗಳನ್ನು ಸೂರೆ ಗೊಳ್ಳುವ ಮೂಷಿಕನನ್ನು
ವಾಹನವಾಗಿರಿಸಿ ಕೊಂಡ ವಿನಾಯಕನ ಆರಾಧನೆ
ಬೆಳೆದ ಧಾನ್ಯಗಳು ಮನೆಯಂಗಳಕ್ಕೆ ಬರುವ ಒಂದು
ತಿಂಗಳ ಮೊದಲೇ ಸನ್ನಿಹಿತ ವಾಗುವುದು ಎಷ್ಟು ಸಕಾಲಿಕ!
ಮಣ್ಣಿನ ಮೂರ್ತಿ ;ಕಬ್ಬಿನ ಜಲ್ಲೆಯಂಥಹ ಸಕಾಲಿಕ ಲಭ್ಯ ವಸ್ತು
ಗಳು ಪ್ರಧಾನ ಸಮರ್ಪಣಾ ದ್ರವ್ಯಗಳು; ಗರಿಕೆ ಹುಲ್ಲು;ವಿವಿಧ
ತಿಂಡಿಗಳು ಹೀಗೆ ಗಣೇಶ ಆರಾಧನಾ ವಿಧಾನದ ಸಮಗ್ರ
ಅವಲೋಕನದಲ್ಲಿ ಮಣ್ಣಿನ ಸಂಸ್ಕೃತಿಯ ಸೊಗಡಿದೆ.
ಗಣಪತಿ ಪೂಜೆಯ ಅರ್ಥ -ಮೂಲಾಧಾರ ಚಕ್ರದಲ್ಲಿ
ಜಗತ್ತಿನ ಸೃಷ್ಟಿ ಶಕ್ತಿ ಯಾದ ಅದ್ಭುತವಾದ ಕುಂಡಲಿನಿ ಎಂಬ
ಶಕ್ತಿ ಇದೆ ಎಂದು ತಂತ್ರ ಶಾಸ್ತ್ರ ಹೇಳುತ್ತದೆ. ಗಣಪತಿಯ
ಆರಾಧನೆ ಎಂದರೆ ನಮ್ಮೊಳಗಿರುವ ಅದ್ಭುತವಾದ ಆ ಶಕ್ತಿಯನ್ನು
ಜಾಗೃತ ಗೊಳಿಸುವುದು.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s