ಭಾರತ ಪರಿಚಯ.

೧. ತನ್ನ ಪತಿಯೊಂದಿಗೆ ರಾಜ್ಯಾಡಳಿತದಲ್ಲಿ ಭಾಗಿಯಾಗಿದ್ದ
ರಾಣಿ ಯಾರು ?
-ರಜಿಯಾ ಸುಲ್ತಾನ್.
೨. ಪ್ರಸಿದ್ಧ ಮಯೂರ ಸಿಂಹಾಸನ ಮೊದಲು ಯಾವ ದೊರೆಯ
ವಶದಲ್ಲಿತ್ತು ?
-ಷಾ ಜಹಾನ್ ಮತ್ತು ನಾದಿರ್ ಷಾ.
೩. ”ಭಾರತದ ನೆಪೋಲಿಯನ್ ” ಎಂದು ಹೆಸರಾಗಿದ್ದವರು ಯಾರು ?
–ಸಮುದ್ರ ಗುಪ್ತ.
೪. ಜೈನರಲ್ಲಿ ಅರ್ಹ೦ತನೆಂದು ಯಾರಿಗೆ ಹೇಳುತ್ತಾರೆ?
-ಮಹಾವೀರ.
೫. ಉಪನಿಷತ್ತುಗಳು ಎಷ್ಟಿವೆ ?
-೧೨.
೬. ತಮಿಳುನಾಡಿನ ಪ್ರಸಿದ್ಧವಾದ ಕ್ರೈಸ್ತ ಯಾತ್ರಾ ಸ್ಥಳ ಯಾವುದು ?
-ವೇಲಾಂಗನಿ.
೭. ”ಗರ್ಭಾ”ನೃತ್ಯಕ್ಕೆ ಹೆಸರುವಾಸಿಯಾಗಿರುವ ರಾಜ್ಯ ಯಾವುದು ?
-ಗುಜರಾತ್.
೮. ದ್ರಾವಿಡ ಭಾಷೆಗಳಲ್ಲಿ ಯಾವುದು ಅತ್ಯಂತ ಹಳೆಯದು?
-ತಮಿಳು.
೯.” ತಮಿಳು ರಾಮಾಯಣ” ಬರೆದ ಕವಿ ಯಾರು ?
-ಕಂಬನ್.
೧೦. ”ಅಷ್ಟಾಧ್ಯಾಯ” ಬರೆದವರು ಯಾರು ?
-ಪಾಣಿನಿ.
೧೧.ಭಾರತದ ವಿಶ್ವ ಸುಂದರಿಯರು :
೧. ೧೯೬೬–ರೀಟಾ ಫಾರಿಯಾ.
೨. ೧೯೯೪–ಐಶ್ವರ್ಯಾ ರೈ.
೩. ೧೯೯೭–ಡಯಾನಾ ಹೇಡನ್.
೪. ೧೯೯೯–ಯುಕ್ತಾ ಮೊಖೆ.
೫. ೨೦೦೧–ಪ್ರಿಯಾಂಕಾ ಚೋಪ್ರಾ.
೧೨. ”ತಾನ್ ಸೇನ್ ” ಪ್ರಶಸ್ತಿ ಏತಕ್ಕಾಗಿ ನೀಡುತ್ತಾರೆ?
-ಸಂಗೀತ ಸಾಧನೆಗೆ.
೧೩. ಕಪಿಲಾ , ಗಾರ್ಗಿ,ಮೈತ್ರೇಯಿಯರ ತಾಯ್ನಾಡು ಯಾವುದು?
–ಮಿಥಿಲಾ.
೧೪. ಚಿಪ್ಕೋ ಚಳವಳಿ ಎಂದರೇನು?
-ಮರಗಳ ನಾಶ ಮಾಡುವುದನ್ನು ವಿರೋಧಿಸುವ ಚಳವಳಿ.
೧೫. ಅಹ್ಮದಾಬಾದ್ ಸ್ಥಾಪಿಸಿದವರು ಯಾರು ?
–ಅಹ್ಮದ್ ಷಾ.
ಮೂಲ :”ಭಾರತ ಪರಿಚಯ”

Advertisements

ನಿಮಗೆ ಗೊತ್ತೇ ?

೧.ಪ್ರಾಕ್ =ಮೂಡು,ಪೂರ್ವ ದಿಕ್ಕು. ವೇಣು =ಕೊಳಲು, ಬಿದಿರು.
ಆದುದರಿಂದ ಪ್ರಾಗ್ವೇಣು ಪುರಂ ಅಂದರೆ ಮೂಡುಬಿದಿರೆ.
೨. ಹಂಸಗೀತೆ ಅಂದರೆ ಸಾಯುವ ಮೊದಲು ಹಂಸ ಹಾಡುವ
ಮಧುರ ಗೀತೆ.
೩. ಭಾರತೀಯ ವೈದ್ಯ ಪದ್ಧತಿಗಳು-ಆಯುರ್ವೇದ,ಸಿದ್ಧ ,ಯುನಾನಿ ,
ಯೋಗ,ಪೃಕೃತಿ ಚಿಕಿತ್ಸೆ.
೪. ರಥ =ನಡೆ ದೇಗುಲ.
೫. ಜಮದಗ್ನಿಯ ತಪೋ ಭೂಮಿ ಬಿಲ್ವಪುರವಾಯಿತು ಬೆಳ್ವೆ.
೬. ಕಂಬಗಳಿಂದ ಕಟ್ಟಿದ ಗೋದಾಮು ಇರುವ ಜಾಗವೇ ಖಂಬದ ಕೋಣೆ.
೭. ರಸ ರೂಪದಿಂದ ಕೂಡಿರುವ ಪಾದರಸವು ಬೆಂಕಿಯಲ್ಲಿ ಬಿದ್ದರೂ ಸುಟ್ಟು ಹೋಗದು.
೮. ದಕ್ಷಿಣ ಕನ್ನಡದ ಕವಿ ರತ್ನ ತ್ರಯರು -ರತ್ನಾಕರ ವರ್ಣಿ, ಪಾರ್ತಿ ಸುಬ್ಬ ಮತ್ತು ಮುದ್ದಣ.
೯. ದ್ರೋಣನ ಪುಟ್ಟ ನಾಡು ದಹರ ದ್ರೋಣ -ಇಂದಿನ ಡೆಹ್ರಾಡೂನ್.
೧೦. ಹಿಂದಿನ ”ಹಾಟಕ”(ಚಿನ್ನದ ನಾಡು )ಈಗಿನ ಲಡಾಖ್.
೧೧. ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರ ಜನ್ಮ ಸ್ಥಾನ -ಪಡುಮಲೆಯ
ಗೆಜ್ಜೆಗಿರಿ ನಂದನ ಬಿತ್ತ್ ಲ್.
೧೨. ರಕ್ತದಲ್ಲಿ Fibrinogen ನ ಪ್ರಮಾಣ (ರಕ್ತ ಹೆಪ್ಪುಗಟ್ಟಲು)೪೫೦ ಮಿಲಿಗ್ರಾಮ್
ಇರಬೇಕು. Thromboplastin ರಕ್ತ ಹೆಪ್ಪು ಗಟ್ಟಲು ಅಗತ್ಯವಾದ ಮತ್ತೊಂದು ವಸ್ತು.
೧೩.ತೈಲಕ್ಕೆ ಸಂಸ್ಕೃತದಲ್ಲಿ ”ಸ್ನೇಹ ” ಎನ್ನುತ್ತಾರೆ. ಈ ತೈಲ ಬತ್ತಿಯೊಂದಿಗೆ ಸೇರಿಕೊಂಡು
ನೆರವಾದರೆ ಮಾತ್ರ ದೀಪ ಉರಿಯುವುದು. ಇದು ಸ್ನೇಹದ ಫಲ ಸ್ವರೂಪ.
೧೪. ಹೀಬ್ರೂ ಭಾಷೆಗೆ ಇರುವ ಮತ್ತೊಂದು ಹೆಸರು -”ಲಶೋನ್ ಲಕೋಡೆಶ್” (ಪವಿತ್ರ ಭಾಷೆ )
೧೫. ”ಸರ್ಕಾರ” ಎಂಬುದು ”ಸರ್ವ ಕಾರ್ಯ ”ಎಂಬ ಸಂಸ್ಕೃತ ಶಬ್ದದ ಅಪಭ್ರಂಶ.
೧೬.ನೆರೆ -ಕರೆ ಎಂದರೇನು ?ನೆರೆ ಎಂದರೆ ಪಕ್ಕದ ಮನೆ; ಕರೆ ಎಂದರೆ ಕರೆದರೆ
ಕೇಳುವಷ್ಟು ದೂರದಲ್ಲಿರುವವರ ಮನೆ.
೧೭. ಕುಂತಿ-ಪಾಂಡವರ ಮಾತೆ ; ಶ್ರೀ ಕೃಷ್ಣನ ತಂದೆಯಾದ ವಸುದೇವನ ಸೋದರಿ.
೧೮. ನಮಃ =ಬಾಗು; ತೆ =ನೀನು (ನಮಸ್ತೆ )
೧೯. ವೇದ =ಶಬ್ದ. ಆರ್ಯ =ಸಂಸ್ಕಾರ ಸಂಪನ್ನ. ದ್ರವಿಡ =ದ್ರವ್ಯ ಸಂಪತ್ತು ಚೆನ್ನಾಗಿರುವ ದೇಶ.
೨೦. ಮಹಾರಾಷ್ಟ್ರದ ರತ್ನಗಿರಿ -ಪಾಂಡವರು ೧೨ ವರ್ಷ ವನವಾಸದಲ್ಲಿದ್ದಾಗ ಈ ಪ್ರದೇಶದಲ್ಲೇ
ವಾಸವಾಗಿದ್ದರು ಎನ್ನಲಾಗುತ್ತಿದೆ. (ಪೌರಾಣಿಕ ಹಿನ್ನೆಲೆಯ ಪ್ರಕಾರ ).
ಮೂಲ:ಸಂಗ್ರಹ.

ಚಿಂತನ

೧. ಜೀವಂತ ವ್ಯಕ್ತಿಗಳ ಹೊರತಾಗಿ ಒಂದು ಪುಸ್ತಕಕ್ಕಿಂತ ಅಧ್ಭುತವಾದದ್ದು
ಇಲ್ಲ . ಅದೆಷ್ಟೋ ದೂರದಲ್ಲಿರಬಹುದಾದ, ಬಹುಶಃ ಕಾಣದೆಯೇ ಇರುವ
ವ್ಯಕ್ತಿಗಳೊಂದಿಗೆ ಈ ಪುಸ್ತಕದ ಹಾಳೆಗಳ ಮುಖಾಂತರ ಸಂಧಿಸ ಬಹುದು.
ಅವು ನಮ್ಮೊಡನೆ ಮಾತಾಡುತ್ತವೆ. ನಮ್ಮ ಮನಸ್ಸನ್ನು ಅರಳಿಸುತ್ತವೆ.
ನಮಗೆ ಸಮಾಧಾನ ನೀಡುತ್ತವೆ. ನಮಗೆ ಜ್ಞಾನವನ್ನು ನೀಡುತ್ತವೆ. ಪ್ರೀತಿಯ
ಸೋದರ ಸೋದರಿಯರಂತೆ ತಮ್ಮ ಹೃದಯವನ್ನು ನಮ್ಮೆದುರು ಬಿಚ್ಚಿಡುತ್ತವೆ.
೨. ಕಾಮನೆಗಳೇ ನಮ್ಮ ಪ್ರಭುವಾದಾಗ ನಮ್ಮಲ್ಲಿ ದೈನ್ಯತೆ ಬರುತ್ತದೆ.
ಭಗವಂತನ ಒಡೆತನ ಒಪ್ಪಿದವರಿಗೆ ಯಾವ ದೈನ್ಯತೆಯೂ ಇರುವುದಿಲ್ಲ.
೩. ಜೀವನ ಒಂದು ನಾಟಕ. ಅಭಿನಯಿಸು.
ಜೀವನ ಒಂದು ಗಂಡಾಂತರ. ಅದನ್ನು ಎದುರಿಸು.
ಜೀವನ ಒಂದು ಹೋರಾಟ. ಅದನ್ನು ಜಯಿಸು.
ಜೀವನ ಒಂದು ಸಾಹಸ. ಅದನ್ನು ಸಾಧಿಸು.
ಜೀವನ ಒಂದು ಸಾಗರ. ಅದನ್ನು ಈಸು.
ಜೀವನ ಒಂದು ವರ. ಅದನ್ನು ಬೇಡು.
ಜೀವನ ಒಂದು ಕನಸು. ಅದನ್ನು ಕಾಣು.
ಜೀವನ ಒಂದು ವಾಗ್ದಾನ. ಅದನ್ನು ನೆರವೇರಿಸು.
ಜೀವನ ಒಂದು ಬಹುಮಾನ. ಅದನ್ನುಸ್ವೀಕರಿಸು.
ಜೀವನ ಒಂದು ಸುಯೋಗ. ಅದನ್ನು ಆನಂದಿಸು.
ಮೂಲ:ಸಂಗ್ರಹ.

Collection of Quotes.

 

1.For the best psychiatrist in town, talk to God.

He knows you better than anyone.

2.The tongue is a sword or a magic wand; it can

cut and kill, or love and heal.

3.If you have experienced the dark, you can better

appreciate the light.

4.Total surrender to and unconditional belief in the

Lord is the only way of getting relief from the worldly

tensions and desires.

5.Some people own a lot of things but many people’s

things own them.

6.Bad habits are thinking skeptically, being pessimistic,

doubting, looking critically on the things around you.

Good habits are thinking positively, seeing the good

in every situation, never giving up hope, speaking

kind words.

7.Don’t confuse fame with success.

8.Don’t jump to conclusions. There are usually not

only two sides to every story, but three, four or more.

Give others the benefit of doubt and people will love

you for it.

9.A man’s countenance tell you more about him than

his clothes.

10.There is a special place in your heart that only God

can fill.

11.Put on the glasses of optimism and you will see a world

of potential.

12.You never appreciate your blessings as much as when

they are gone.

13.There is no substitute to peace of mind.

14.An optimist sees an opportunity in every calamity;

a pessimist sees a calamity in every opportunity.

15.Love is the most powerful and still most unknown energy

in the world.

Source:Collection.

Proverbs.

1.We do not care of what we have, but we cry when it is lost.

(Russian proverb).

2.Fools build houses and wise men buy them.

(English proverb)

3.What soap is to the body, ,laughter is to the soul.

(Yiddish proverb).

4. A mother understands what a child does not say.

(Jewish proverb)

5. There is a remedy for everything and it is called death.

(Portugese proverb)

6.A fence between makes love more keen.

(German proverb)

7.The heart that loves is always young.

(Greek proverb)

8.To learn what is good, a thousand days are not sufficient;

to learn what is evil, an hour is too long.

(Chinese proverb)

9.Wherever man goes to dwell, his character goes

with him.

(African proverb)

10.Learning is a treasury, whose keys are queries.

(Arabian proverb)

11. Every man must scratch his head, with his own nails.

(Arabian proverb)

12.If you scatter thorns, don’t go barefoot.

(Italian proverb)

13. Vision without action is a daydream.Action without

vision is a nightmare.

(Japanese proverb)

14.Arrogance diminishes wisdom.

15.Until lions can speak, the only history will be that

of the hunters.(African saying)

Source:Collection.

 

 

ಗಣೇಶ ಚೌತಿ.

ganesh

ಗಣೇಶನೆಂದರೆ ಸಂಗೀತ, ಸಾಹಿತ್ಯ, ವಿದ್ಯೆ,ಕಲೆಗಳ ಅಧಿದೇವತೆ.
”ಶರಣು ಸಿದ್ಧಿ ವಿನಾಯಕ, ಶರಣು ವಿದ್ಯಾ ಪ್ರದಾಯಕ,
ಶರಣು ಪಾರ್ವತಿ ತನಯ ಮೂರುತಿ, ಶರಣು ಮೂಷಿಕ ವಾಹನ. ”
ಮಕ್ಕಳ ಪ್ರೀತಿಯ ಬೆನಕ , ಫ್ರೌಢರ ಆತ್ಮೀಯ ಗಣಪತಿ,
ಚಿಂತಕರನ್ನು ಚಿಂತನೆಗೆ ಎಳೆಯುವ ಸಿದ್ಧಿ ವಿನಾಯಕ,
ಸಂಶೋಧಕರ ನಿಲುಮೆಗೆ ಸಿಲುಕದ ವಿಶ್ವ ವ್ಯಾಪಿ ಗಜಾನನ ,
ತತ್ತ್ವ ಜ್ಞಾನಿಗಳಿಗೆ ನೂರಾರು ನಿರೂಪಣೆಗೆ ವಸ್ತುವಾಗುವ ಈ
ಏಕದಂತ, ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿ,
ರಾಯಭಾರಿಯಾಗಿ ವಿಶ್ವಾದ್ಯಂತ ಪ್ರಸಿದ್ಧ ಈ ವಿಕಟನ
ವಿಗ್ರಹದಲ್ಲೂ ಬದಲಾವಣೆ ಯಾಯಿತು.
ಒಂದು ನಾಗರೀಕತೆಯ ಪ್ರತೀಕವಾಗಿ, ಗಣಾಧ್ಯಕ್ಷ ನಾಗಿ
ವಿಘ್ನ ನಿವಾರಕನಾಗಿ, ವಿಶ್ವಂಭರನಾಗಿ ಈ ವಿನಾಯಕ
ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಕಲ್ಪನೆಗೂ ನಿಲುಕದ್ದು.
ಪಾರ್ವತಿ ದೇವಿಯ ಮೈಯ ಮಣ್ಣಿನಿಂದ ರೂಪು ಗೊಂಡ
ಗಣಪತಿ ಶ್ರಮ ಸಂಸ್ಕೃತಿಯ ಪ್ರತೀಕ.
ಕೃಷಿ ಉತ್ಪನ್ನಗಳನ್ನು ಸೂರೆ ಗೊಳ್ಳುವ ಮೂಷಿಕನನ್ನು
ವಾಹನವಾಗಿರಿಸಿ ಕೊಂಡ ವಿನಾಯಕನ ಆರಾಧನೆ
ಬೆಳೆದ ಧಾನ್ಯಗಳು ಮನೆಯಂಗಳಕ್ಕೆ ಬರುವ ಒಂದು
ತಿಂಗಳ ಮೊದಲೇ ಸನ್ನಿಹಿತ ವಾಗುವುದು ಎಷ್ಟು ಸಕಾಲಿಕ!
ಮಣ್ಣಿನ ಮೂರ್ತಿ ;ಕಬ್ಬಿನ ಜಲ್ಲೆಯಂಥಹ ಸಕಾಲಿಕ ಲಭ್ಯ ವಸ್ತು
ಗಳು ಪ್ರಧಾನ ಸಮರ್ಪಣಾ ದ್ರವ್ಯಗಳು; ಗರಿಕೆ ಹುಲ್ಲು;ವಿವಿಧ
ತಿಂಡಿಗಳು ಹೀಗೆ ಗಣೇಶ ಆರಾಧನಾ ವಿಧಾನದ ಸಮಗ್ರ
ಅವಲೋಕನದಲ್ಲಿ ಮಣ್ಣಿನ ಸಂಸ್ಕೃತಿಯ ಸೊಗಡಿದೆ.
ಗಣಪತಿ ಪೂಜೆಯ ಅರ್ಥ -ಮೂಲಾಧಾರ ಚಕ್ರದಲ್ಲಿ
ಜಗತ್ತಿನ ಸೃಷ್ಟಿ ಶಕ್ತಿ ಯಾದ ಅದ್ಭುತವಾದ ಕುಂಡಲಿನಿ ಎಂಬ
ಶಕ್ತಿ ಇದೆ ಎಂದು ತಂತ್ರ ಶಾಸ್ತ್ರ ಹೇಳುತ್ತದೆ. ಗಣಪತಿಯ
ಆರಾಧನೆ ಎಂದರೆ ನಮ್ಮೊಳಗಿರುವ ಅದ್ಭುತವಾದ ಆ ಶಕ್ತಿಯನ್ನು
ಜಾಗೃತ ಗೊಳಿಸುವುದು.
ಮೂಲ:ಸಂಗ್ರಹ.