ಭಗವಾನ್ ಶ್ರೀ ಕೃಷ್ಣ.

lord-krishna-wallpaper2

 

”ಕರ್ಷತೀತಿ ಕೃಷ್ಣ ”. ಕೃಷ್ಣ ಎಂದರೆ ಆಕರ್ಷಣೆ.
ಜಗತ್ತು ನಿಂತಿರುವುದು ಆಕರ್ಷಣಾ ಶಕ್ತಿಯಿಂದ.
ಶ್ರೀ ಕೃಷ್ಣ ಯದು ವಂಶದ ಕ್ಷತ್ರಿಯರ ಮನೆತನದಲ್ಲಿ
ಅವತರಿಸಿದ. ಅವನು ಬೆಳೆದದ್ದು ಗೊಲ್ಲರ ಮತ್ತು
ಗೋವುಗಳ ಜೊತೆಗೆ.ಅದ್ವಿತೀಯ ಮಹಾ ಪುರುಷನಾಗಿ
ಮೆರೆದ ಕೃಷ್ಣ , ಜನ ಸಾಮಾನ್ಯರ ಜೊತೆಗೆ ಇದ್ದು ಅವರ
ಸುಖ ,ದುಃಖ ಗಳಿಗೆ ಅನನ್ಯವಾಗಿ ಸ್ಪಂದಿಸಿದ. ದ್ವಾಪರದಲ್ಲಿ
ಅವತರಿಸಿದರೂ, ಕಲಿಯುಗದಲ್ಲೂ ಇದ್ದವನು. ದ್ವಾಪರ ಕಳೆದು
ಕಲಿಯುಗ ಕಾಲಿಟ್ಟಾಗ ಕೃಷ್ಣನಿಗೆ ೭೦ ತುಂಬಿ ೭೧ ನಡೆಯುತ್ತಿತ್ತು.
ಮತ್ತೆ ೩೬ ವರ್ಷಗಳ ಕಾಲ ಕಲಿಯುಗದಲ್ಲೂ ಅವನಿದ್ದ.
ಹಾಗಾಗಿ ನಮ್ಮ ಯುಗದ್ದೇ ಅವತಾರ ಪುರುಷ. ಅದಕ್ಕಾಗಿ ಅವನ
ಜನ್ಮೋತ್ಸವ ನಮಗೆ ತುಂಬ ಮಹತ್ತ್ವದ್ದಾಗುತ್ತದೆ.
ಭಾರತೀಯ ತತ್ತ್ವಜ್ಞಾನದ ಕೆನೆಯಾದ ಭಗವದ್ಗೀತೆಯನ್ನು
ಮನು ಕುಲಕ್ಕೆ ನೀಡಿದ ಕೃಷ್ಣನ ಜನ್ಮೋತ್ಸವವನ್ನು ಎಷ್ಟು ಸಂಭ್ರಮದಿಂದ
ಆಚರಿಸಿದರೂ ಕಮ್ಮಿಯೇ.
ಈ ದೇಶದ ಅವತಾರ ಪುರುಷರಲ್ಲಿ ಕೃಷ್ಣನದ್ದು ಸಾಟಿಯಿಲ್ಲದ ಇತಿಹಾಸ.
ಈ ನೆಲದ ಜನಕೋಟಿಯನ್ನು ಗೆದ್ದ ಕೃತಿಗಳು ೨:ರಾಮಾಯಣ ಮತ್ತು
ಮಹಾಭಾರತ. ರಾಮಾಯಣ ಕರುಣ–ಶೃಂಗಾರ ಗಳಿಂದ ಪುಳಕಗೊಂಡ
ವೀರ ಗಾಥೆ. ಮಹಾಭಾರತ ಶಾಂತ ರಸದಲ್ಲಿ ನೆಲೆಗೊಳ್ಳುವ ನವರಸ ಗಾಥೆ.
ಭಾವನೆ ಗಳಿಗೆ ಹಸಿದವನು ಶ್ರೀ ಕೃಷ್ಣ. ಭಾವನೆಗಳ ಕಾವಿಗೆ ಹರಿದು ಬಿಡುವ
ಸ್ವಚ್ಛ ತಿಳಿ ನೀರಿನಂಥವನು. ಎಂಟು ಹೆಂಡತಿಯರ ಮುದ್ದಿನ ಗಂಡ.
ಆತ ಎಲ್ಲರವನು. ಯಶೋದೆಗೆ ಪ್ರೀತಿಯ ತುಂಟ ಮಗ. ರಾಧೆಯ
ಪ್ರಿಯ ಗೆಳೆಯ. ರುಕ್ಮಿಣಿಯ ಒಡೆಯ. ಸತ್ಯಭಾಮೆ,ಜಾಂಬವತಿಯರ
ಮನದನ್ನ. ದ್ರೌಪದಿಯ ಆಪದ್ಬಾಂಧವ. ಸುಧಾಮನ ಸ್ನೇಹಿತ.
ಅರ್ಜುನನ ಆಪ್ತ ಮಿತ್ರ. ತುಳಸಿ ಕೂಡಾ ಆತನಿಗೇ ಸೇರಿದವಳು.
ಆತನ ಹರಹು ದೊಡ್ಡದು.
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s