ಕಾವ್ಯ ಲಹರಿ.

೧.”ಕನ್ನಡಿಯಂ ತೋರಿದೊಡೆ ಅತ್ಯುನ್ನತ ಸಲ್ಲಕ್ಷಣಂಗೆ ಮುಳಿಸಲಾಗದು.
ಮತ್ತೆನ್ನದೆ ಮುಕೊರೆಯಂಗೆ ಆ ಕನ್ನಡಿಯಂ ತೋರೆ ಮೀರಿ ಬಯ್ಗು೦,ಬಡಿಗುಂ,ಕೊಲ್ಗು೦”
೨. ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆ ಕಿಚ್ಚಿನ ಕಿಡಿಯ ನೆಟ್ಟಿಹ ನರನೋಳ್
ಹೊಟ್ಟೆ ತುಂಬಿದ ತೋಳ ಮಲಗೀತು ನೀ೦ ಪೆರರ
ದಿಟ್ಟಿಸುತ ಕರುಬುವೆಯೂ -ಮಂಕು ತಿಮ್ಮ.
೩. ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬುವ ಚಿಂತೆ
ಎನಗೆ ಎಮ್ಮ ಕೂಡಲ ಸಂಗಮ ದೇವನ ನೆನೆವ ಚಿಂತೆ.
೪. ಮುಗಿಲ ಕಪ್ಪನು ಕದ್ದು ನಿಂತ ಆ ಮೊಗ ಮುದ್ದು
ಎನ್ನ ಹೃದ್ರಂಗದಲಿ ಅಂಬೆಯಿಕ್ಕುತ ಬಂದೆ
ನೀಲಿ ಮೈಯನು ಮುತ್ತಿ ಎತ್ತಿಕೊಳ್ಳುವಾಸೆ ನನಗೆ
ಹಾಲು ಬೆಣ್ಣೆಯ ಮೆದ್ದೆ ಗೋಪಿಯರ ಗೆದ್ದೆ.
೫. ಭಗವಂತನ ಮೇಲಿರುವ ಅಕ್ಷಯ ವಸ್ತ್ರಗಳ ಪರದೆಯನ್ನು
ಎಳೆದೆಳೆದು ನಾನು ಸೋತೆ. ಅವನ ನಗ್ನ ಸತ್ಯ ಬಗೆಹರಿಯದ ಒಗಟು.
ತುಂಟ ಕೃಷ್ಣನನ್ನು ಬಂಧಿಸಲು ಎಷ್ಟು ಹಗ್ಗದ ತುಂಡುಗಳನ್ನು
ಜೋಡಿಸಿದರೂ ಸಾಕಾಗಲಿಲ್ಲವಂತೆ. ನನ್ನ ಪ್ರಜ್ಞೆಯೊಳಗೆ
ಪರಮಾತ್ಮನನ್ನು ಬಂಧಿಸಲು ಪ್ರಯತ್ನಿಸಿದೆ. ಜ್ಞಾನ ರಜ್ಜುವೂ
ಮೊಟಕಾಯಿತು.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s