ಚಿಂತನ.

೧. ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ನಮ್ಮ ಕೈ ಬಿಟ್ಟವರು ಮತ್ತು
ಅಂಥದೇ ಸಮಯದಲ್ಲಿ ನಮ್ಮ ಕೈ ಹಿಡಿದವರು ಇಬ್ಬರನ್ನೂ
ಮರೆಯಲಾಗದು.
೨. ನೀವು ಮೂರ್ಖರೊಂದಿಗೆ ವಾದಮಾಡುತ್ತಿದ್ದೀರೆಂದರೆ,
ಅಲ್ಲಿ ಇಬ್ಬರು ಮೂರ್ಖರಿದ್ದಾರೆಂದೇ ಅರ್ಥ.
೩. ಭಾಗ್ಯ ಮಲಗಲು ಬಿಡುವುದಿಲ್ಲ;ದೌರ್ಭಾಗ್ಯ ಮೇಲೇಳಲು
ಬಿಡುವುದಿಲ್ಲ. (ಗಾದೆ )
೪. ಮೈ ಮೇಲೆ ಮುಳ್ಳಿದ್ದರೂ ಆಂತರ್ಯದಲ್ಲಿ ಸಿಹಿಯನ್ನೇ
ಹುದುಗಿಸಿಕೊಂಡು ಎಲ್ಲರಿಗೂ ಸವಿಯನ್ನೇ ಉಣ ಬಡಿಸುವ
ಹಣ್ಣು-(Pine Apple)=ಅನನಾಸು.
೫. Money ಗಿಂತ Harmony ಗೇನೇ ನಾವೆಲ್ಲ ಹೆಚ್ಚು
ಬೆಲೆಯನ್ನು ಕೊಡಬೇಕು.
೬. ಅಂಬಲಿ ತಿನ್ನಾ೦ವ ಅಂಬರಕ್ಕೆ ಹಾರಿದಾಂಗೆ ಆದಾತು.
೭. ನಗು ಮತ್ತು ಮೌನ ಎರಡು ಅತ್ಯುತ್ತಮ ಉಪಕರಣಗಳು.
ನಗು ತುಂಬಾ ಸಮಸ್ಯೆ ಗಳನ್ನು ಪರಿಹರಿಸುತ್ತದೆ. ಮೌನ
ತುಂಬಾ ಸಮಸ್ಯೆಗಳನ್ನು ತಡೆಯುತ್ತದೆ.
೮. ವಯಸ್ಸು ಚರ್ಮವನ್ನು ಸುಕ್ಕು ಗೊಳಿಸುವಂತೆ ನಿರುತ್ಸಾಹವು
ಆತ್ಮವನ್ನು ಸುಕ್ಕು ಗೊಳಿಸುತ್ತದೆ.
೯. ಒಬ್ಬರ ಇಷ್ಟ ,ಮತ್ತೊಬ್ಬರಿಗೆ ಕಷ್ಟ.
೧೦. ವಿರುದ್ಧ ಶಬ್ದವಿಲ್ಲದ ಏಕೈಕ ಪದವೆಂದರೆ ಅಮ್ಮ .
೧೧. ಜಗ ಒಂದು ಗಜನಿಂಬೆ ಹಣ್ಣು ,ತಮ್ಮ
ನಗಬೇಡ ಅರಿತುಕೋ ಇದರ ಮರ್ಮ
ಕಸರತ್ತು ಬಲ್ಲಿದಗೆ ಸಿಹಿಯ ಶರಬತ್ತು
ನಿಜ ಹೇಳಿ ನಡೆವಂಗೆ ಬರಿಯ ಕಹಿತುತ್ತು
೧೨. ಜೀವನವೆಂದರೆ ಅದೊಂದು ವಿವಿಧ ತಂತು ಗಳ
ವೀಣೆ. ಮಿಡಿದಂತೆ ಸ್ವರ ಭಿನ್ನ. ಅನೇಕತೆಗಳಲ್ಲಿ ಏಕತೆ
ಗಾಗಿ ಹಂಬಲಿಸುವುದೇ ಜೀವನದ ಗುರಿ. ಇದನ್ನು ಮಾನವ
ತಿಳಿದಿರಬೇಕು. ಆಗ ಮಾತ್ರ ಅಪಸ್ವರ ಹೊರಡುವುದು
ಕಡಿಮೆಯಾಗುತ್ತದೆ. .
ಮೂಲ:ಸಂಗ್ರಹ .

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s