ನಗೆ ಮಲ್ಲಿಗೆ.

೧. ಮರಿ :ಭಿಕ್ಷುಕರು ಅಂದ್ರೆ ಸಾಕಲ್ವಾ? ಬಡ ಭಿಕ್ಷುಕರು
ಅನ್ನುವುದೇಕೆ?
ಗುರು:ಗೊಂದಲವಾಗದಿರಲಿ ಎಂದು.ಮತ ಭಿಕ್ಷುಕರು,
ಪ್ರೇಮ ಭಿಕ್ಷುಕರು ಮುಂತಾದವರು ಇದ್ದಾರಲ್ವಾ?
೨.ಶಿಕ್ಷಕ: ಮೊಟ್ಟೆ ಇಡದ ಹಕ್ಕಿ ಯಾವುದು?
ವಿದ್ಯಾರ್ಥಿ:ಗಂಡು ಹಕ್ಕಿ ಸಾರ್.
೩. ಗೆಳೆಯ:ಪೋಲಿಸ್ ಮತ್ತು ಟೀಚರ್ ಗೆ ಇರುವ ವ್ಯತ್ಯಾಸವೇನು?
ಮಂಕ:ಪೋಲಿಸ್ ಒದ್ದು ಒಳಗೆ ಹಾಕ್ತಾರೆ;ಟೀಚರ್ ಒದ್ದು ಹೊರಗೆ
ಹಾಕ್ತಾರೆ.
೪. ಹುಡುಗ:ನನ್ನ ಅಪ್ಪ ತುಂಬಾ ಬುದ್ಧಿವಂತರು. ಯಾವ ವಿಷಯವನ್ನು
ಕೊಟ್ಟರೂ ಒಂದು ಗಂಟೆ ಭಾಷಣ ಮಾಡ್ತಾರೆ.
ಗೆಳೆಯ:ನನ್ನ ಅಪ್ಪ ಮತ್ತೂ ಗ್ರೇಟ್ . ಯಾವ ವಿಷಯ ಇಲ್ಲದಿದ್ದರೂ
ಎರಡು ಗಂಟೆ ಮಾತಾಡ ಬಲ್ಲರು.
೫. ಮಂಕ:ನನ್ನ ತಂದೆ ಎಲ್ಲರಿಗೂ ಸರಿಯಾದ ದಾರಿಯನ್ನು ತೋರಿಸುತ್ತಾರೆ.
ಮತ್ತು ಎಲ್ಲರೂ ಅವರು ತೋರಿದ ದಾರಿಯಲ್ಲೇ ಸಾಗುತ್ತಾರೆ.
ಗೆಳೆಯ :ಹಾಗಾದರೆ ನಿನ್ನ ತಂದೆ ಯಾರು–ರಾಜಕಾರಣಿಯೋ ?
ಯೋಗಿಯೋ?
ಮಂಕ:ಅಲ್ಲ ,ರಸ್ತೆಯ ಚೌಕದಲ್ಲಿರುವ ಟ್ರಾಫಿಕ್ ಪೋಲಿಸ್.
೬. ಮಂಕ:ಡಾಕ್ಟ್ರೆ,ಈ ಬಕೆಟ್ ತೂತಾಗಿದೆ. ರಿಪೇರಿ ಮಾಡಿ ಕೊಡಿ.
ಡಾಕ್ಟರ್:ರೀ ಸ್ವಾಮೀ, ಇದು ಆಸ್ಪತ್ರೆ. ಇಲ್ಲಿಗ್ಯಾಕ್ರೀ ತಂದ್ರಿ ಅದನ್ನ?
ಮಂಕ:ನೀವು ಫೇಮಸ್ ಪ್ಲಾಸ್ಟಿಕ್ ಸರ್ಜನ್ ಆಲ್ವಾ?ಅದಕ್ಕೆ ತಂದೆ.
೭.ಗೆಳೆಯ: ದೇವರ ಹೆಸರಿಟ್ಟುಕೊಂಡವರು ಅದಕ್ಕೆ ತಕ್ಕಂತೆ ವರ್ತಿಸುವುದಿಲ್ಲವೇಕೆ ?
ಮಂಕ: ಅಂದ್ರೆ…. ಗೋಪಾಲ ಎಂಬ ಹೆಸರಿನವರೆಲ್ಲ ದನ ಕಾಯ ಬೇಕೇ?
೮. ಪ್ರಶ್ನೆ:ದಂತ ಕಥೆಗೂ ದುರಂತ ಕಥೆಗೂ ಇರೋ ವ್ಯತ್ಯಾಸವೇನು?
ಉತ್ತರ:ಹುಳುಕು ದಂತದ ಬದಲು ಗಟ್ಟಿ ಹಲ್ಲು ಕಿತ್ತರೆ ಅದು ದುರಂತ ಕಥೆ.
೯. ಪ್ರಶ್ನೆ:”ಸುಖ” ಎಲ್ಲಿರುತ್ತದೆ ಗುರು?
ಉತ್ತರ:ಅಲ್ಲಿ, ಇಲ್ಲಿ ಹುಡುಕುವ ಬದಲು ಶಬ್ದ ಕೋಶದಲ್ಲಿ ಹುಡುಕಿ.
ಖಂಡಿತ ಸಿಕ್ಕುತ್ತದೆ.
೧೦.ಪ್ರತಿಯೊಬ್ಬರೂ ಬಾಲ್ಯದಲ್ಲಿ ರಾಹುಲ್ ಗಾಂಧಿ,ಮದುವೆಗೆ ಮುನ್ನ
ನರೇಂದ್ರ ಮೋದಿ,ಮದುವೆ ಬಳಿಕ ಮನ ಮೋಹನ್ ಸಿಂಗ್. –ಸರ್ ರವೀಂದ್ರ
ಜಡೇಜ.
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s