ನಿಮಗಿದು ಗೊತ್ತೇ?

೧. ಇರಾನಿನ ಜನರು ಹಲವು ದೇವತೆಗಳನ್ನು ಪೂಜಿಸುತ್ತಿದ್ದರು.
ಇದು ಸರಿಯಲ್ಲ, ಒಬ್ಬನನ್ನೇ ಪೂಜಿಸಬೇಕು ಎಂಬುದನ್ನು
ಸಾರಲು ಜರಾತುಷ್ಟ್ರ ಹೊರಟಿದ್ದ. ಈ ಕಾರಣಕ್ಕಾಗಿ ಆತನಿಂದ
ಈ ದೇಶದಲ್ಲಿ ಹೊಸದೊಂದು ಧರ್ಮ ಉದಯವಾಯಿತು.
ಆ ಧರ್ಮಕ್ಕೆ ”ಜೊರಾಷ್ಟ್ರಿಯನ್ ” ಎಂದು ಹೆಸರು.
ಆ ಮತದ ಪ್ರಕಾರ ದೇವರೆಂದರೆ ”ಅಹುರಮಸ್ದ ”. ಅದು
ಏಳು ಒಳ್ಳೆಯ ಗುಣಗಳನ್ನು ಹೊಂದಿರುತ್ತದೆ. ಅವುಗಳೆಂದರೆ
ಚಿರ ಪ್ರಕಾಶ,ಶಾಶ್ವತ ಜೀವನ,ಸರ್ವಜ್ಞತೆ,ಶಕ್ತಿ ,ಪಾವಿತ್ರ್ಯ,
ಕರುಣೆ ಮತ್ತು ಸದಾಚಾರ. ಆದ್ದರಿಂದಲೇ ಅವರ ದೇವರು
೭ ಮುಖಗಳುಳ್ಳ ಅಹುರಮಸ್ದನಾಗಿರುತ್ತಾನೆ.
ಮನುಷ್ಯನಲ್ಲಿರುವ ಒಳ್ಳೆಯ ಗುಣವನ್ನು ಕೆಡಿಸಲು ಆತನ
ಶತ್ರುವೊಬ್ಬ ಇದ್ದೇ ಇರುತ್ತಾನೆ. ಅವನನ್ನು ”ಅಹ್ರಿಮನ್ ”
ಎಂದು ಕರೆಯುತ್ತಾರೆ.
೨. ರಾಮನ ತಮ್ಮ ಭರತನ ಮಗ ತಕ್ಷ. ಅವನಾಳಿದ
ನಾಡೇ ತಕ್ಷಶಿಲೆ.
೩. ಉಪ ಪಾಂಡವರೆಂದು ಹೆಸರಾಗಿರುವ ದ್ರೌಪದಿಯ ಐವರು
ಪುತ್ರರು -ಪ್ರತಿ ವಿಂಧ್ಯ,ಶ್ರುತ ಸೋಮ,ಶ್ರುತ ಕೀರ್ತಿ,ಶತಾನೀಕ,
ಶ್ರುತ ಸೇನ.
೪. ನೇಪಾಳದ ಜನಕಪುರಿಯೇ ಹಿಂದಿನ ಮಿಥಿಲೆ. ಸೀತೆ ಮಿಥಿಲೆಯ
ಮಗಳಾದ್ದರಿಂದ ಮೈಥಿಲಿ.ವಿದೇಹ ರಾಜ್ಯದ ಕುವರಿಯಾದ್ದರಿಂದ
ವೈದೇಹಿ.
೫.ಅಫ್ಘಾನಿಸ್ತಾನ್ ಹಿಂದಿನ ಕಂದಹಾರ. ಅದಕ್ಕೂ ಹಿಂದೆ ಗಾಂಧಾರ.
ಗಾಂಧಾರದ ರಾಜ ಸುಬಲನ ಮಗಳು ಸೌಬಲಿ/ಗಾಂಧಾರಿ;ಧೃತರಾಷ್ಟ್ರನ
ಮಡದಿ.
೬. ಮೊದಲು ದೇಶವನ್ನಾಳಿದ ಹೆಣ್ಣು -ಕಾಶ್ಮೀರದ ಯಶೊಮತಿ.
೭. ಹರಿದ್ವಾರದ ಮೊದಲಿನ ಹೆಸರು ಮಾಯಾಪುರಿ.
೮. ಬಿಂದು ಸರೋವರವೇ ಭಾಗೀರಥಿ.
೯. ನಾರಂ ದದಾತಿ (=ಮೋಕ್ಷ ಪ್ರದಾತ ) ಅಂದರೆ ನಾರದ.
೧೦. ಮುಖ್ಯಪ್ರಾಣ ದೇವರು ತ್ರೇತಾಯುಗದಲ್ಲಿ ಹನುಮಂತ,
ದ್ವಾಪರ ಯುಗದಲ್ಲಿ ಭೀಮ,ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ
ಅವತರಿಸಿದ್ದಾರೆ. ಈ ರೂಪಗಳನ್ನು ಸ್ಮರಿಸಿದರೆ, ನಮ್ಮ ಎಲ್ಲ
ದೋಷಗಳು ಪರಿಹಾರವಾಗುತ್ತವೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s