ನಿಮಗೆ ಗೊತ್ತೇ ?

೧. ದೂರ್ವಾಸ ಮುನಿಯ ಶಾಪದಿಂದ ಇಂದ್ರನ ಅಮರಾವತಿಯ
ಸಕಲ ಭೋಗಗಳೂ ಕಡಲ ತಡಿಯನ್ನು ಕಂಡವು. ಮಥನಕ್ಕಾಗಿ
ಮಹಾ ವಿಷ್ಣುವು ಕೂರ್ಮಾವತಾರ ತಾಳಿ ಮಂದರ ಗಿರಿಯನ್ನು
ಹೊತ್ತನು. ವಾಸುಕಿ ಎಂಬ ಮಹಾಸರ್ಪವೊಂದನ್ನು ಮಂದರ
ಪರ್ವತಕ್ಕೆ ಬಿಗಿದು ತಲೆ, ಬಾಲಗಳನ್ನು ಹಿಡಿದು ರಾಕ್ಷಸರೂ
ದೇವತೆಗಳೂ ಮಥಿಸಿದರು. ವಾಸುಕಿಯ ಪ್ರಾಣೋತ್ಕ್ರಮಣ
ವಾದರೂ ಕಾಮಧೇನು , ಕಲ್ಪವೃಕ್ಷ ,ಅಮೃತ ಎಲ್ಲ ದೊರೆಯಿತು.
೨. ದಕ್ಷ ಪ್ರಜಾಪತಿಗೆ ಕದ್ರು, ವಿನತೆಯರೆಂಬ ಇಬ್ಬರು ಪುತ್ರಿಯರು.
ಇಬ್ಬರೂ ಕಶ್ಯಪ ಮುನಿಯ ಪತ್ನಿಯರು. ಕದ್ರುವಿನ ಸಂತಾನವೇ
ನಾಗಗಳು. ವಿನತೆಯ ಇಬ್ಬರು ಪುತ್ರರು ಗರುಡ ಮತ್ತು ಅರುಣ.
ಪಾತಾಳ ನಾಗಗಳ ವಾಸಸ್ಥಾನ.ಪಾತಾಳದಿಂದ ಮೂವತ್ತು
ಸಹಸ್ರ ಯೋಜನಗಳ ಕೆಳಗೆ ಆದಿಶೇಷನ ತಾಣ. ಆದಿಶೇಷ
ತಮೋಗುಣ ಸ್ವರೂಪಿ. ಪೃಥ್ವಿಗೆ ಅವನೇ ಆಧಾರ.
ಗೋಮಟಮೂರ್ತಿಯ ಪಾದದ ಬಳಿ ಕುಕ್ಕುಟ ಸರ್ಪವೆಂಬ
ಕಾಲುಗಳುಳ್ಳ ಸರ್ಪಗಳ ಕೆತ್ತನೆ ಇಂದಿಗೂ ಇದೆ. ಹಿಂದೂ
ದೇವತೆಗಳಾದ ಶಿವ, ಗಣೇಶ, ಸುಬ್ರಹ್ಮಣ್ಯರನ್ನು ಸರ್ಪ
ಗಳಿಂದ ಕೂಡಿ ಕೊಂಡಿರುವಂತೆ ಚಿತ್ರಿಸುತ್ತಾರೆ.
ಕ್ರೈಸ್ತ ,ಇಸ್ಲಾಂ ಮತದವರಿಗೆ ಸರ್ಪ ಕಡು ವೈರಿ.
ಬಂಜೆ ಸ್ತ್ರೀಯರು ನಾಗರಾಜನಿಗೆ ತೊಟ್ಟಿಲಿನ ಹರಕೆ
ಹೇಳುತ್ತಾರೆ.ಹಿಂದಿನ ಕಾಲದಲ್ಲಿ ಭೂಮಿಯ ಅಡಿಯಲ್ಲಿ
ಹುಗಿದ ಅಪೂರ್ವ ನಿಧಿ ಭಂಡಾರಗಳನ್ನು ಸರ್ಪಗಳು
ಕಾಯುತ್ತವೆ ಎಂದು ನಂಬಿಕೆ.
ನಾಗರ ಹಾವು ಜೀವಿಗಳಲ್ಲಿ ಅತಿ ಹೆಚ್ಚು ಸೇಡಿನದು.
”ಸರ್ಪದ ಸೇಡು” ಎಂಬ ಮಾತೇ ಉಳಿದು ಕೊಂಡಿದೆ.
ಸೃಷ್ಟಿ ವಿಕಾಸದ ಪ್ರಕಾರ ಉರಗ ಜಾತಿ ೧೮ ಕೋಟಿ
ವರ್ಷಗಳ ಹಿಂದೆ ಉಗಮವಾಯಿತು. ಮಾನವ
ಅವತರಿಸಿದುದು ಕೇವಲ ೬ಲಕ್ಷ ವರ್ಷಗಳ ಹಿಂದೆ.
ನಾಗರ ಪಂಚಮಿ ಮಕ್ಕಳ ವಿಧ್ಯಾಭ್ಯಾಸ ಪ್ರಾರಂಭಿಸಲು
ಬಹು ಶುಭ ದಿನ ಎಂದೇ ಮಕ್ಕಳಿಂದ ಈ ದಿನವೇ
ಗಣೇಶನ ಪೂಜೆ ಮಾಡಿಸುತ್ತಾರೆ. ಈ ದಿನ ನಾಗಾಧಿಪತಿ
ರಾಖೇಶ್ವರನ ಪೂಜೆ ಮಾಡುತ್ತಾರೆ. ಆದುದರಿಂದ
ಈ ದಿನವನ್ನು ”ರಾಖೀ ಪಂಚಮಿ”ಎಂದು ಕೂಡಾ ಹೇಳುತ್ತಾರೆ.
ಈ ದಿನದಂದೇ ನೇಪಾಳದಲ್ಲಿ ಗರುಡ ಮತ್ತು ನಾಗರೊಳಗೆ
ಯುದ್ಧ ನಡೆಯಿತಂತೆ.
ಪ್ರಳಯ ಕಾಲದಲ್ಲಿ ಆದಿಶೇಷನ ಅಕ್ಷಿ ಗಳಿಂದ ಹೊರಬಂದ
ರುದ್ರರು ಲೋಕ ನಾಶ ಗೈದರು. ಪ್ರಳಯದ ಬಳಿಕ ಕಮಲ
ಪತ್ರದಲ್ಲಿ ಶೇಷ ಶಾಯಿ ಯಾಗಿರುವವನು ಮಹಾ ವಿಷ್ಣು.
ಅವನ ನಾಭಿಯಲ್ಲಿ ಅರಳಿದ ಕಮಲವೇ ಬ್ರಹ್ಮನ ಪೀಠ.
ಶಾಪಗ್ರಸ್ಥ ಜಯ ವಿಜಯರೇ ಮಧು, ಕೈಟಭರಾಗಿ ಬರುತ್ತಾರೆ.
ಇದು ಪ್ರಳಯಾನಂತರ ಸೃಷ್ಟಿಯ ಆದಿ.
ಮೂಲ :ಸಂಗ್ರಹ .

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s