ಚಿಂತನ.

೧.ದಪ್ಪರೊಟ್ಟಿ ಒಂದು ಸಾಕು; ಗಟ್ಟಿ ಮಗ ಒಬ್ಬ ಸಾಕು.
೨. ಪ್ರೇಮವೇ ಬೆಳಕು;ದ್ವೇಷವೇ ಕತ್ತಲು.
೩. ರೋಗವೊಂದು; ಮದ್ದು ಬೇರೊಂದು.
೪. ಕೈಯ ಊತಕ್ಕೆ ಕಾಲಿಗೆ ಲೇಪವೇ ?
೫ . ಹೂವು ಗಾಳಿಗೆ ಉದುರಿದರೂ ಪರಿಮಳವ
ತೊರೆಯದು.
೬. ಹನಿಗೂಡಿ ಹಳ್ಳ ;ನಾರೊಡ ಗೂಡಿ ಹಗ್ಗ.
೭. ಒಳ್ಳೆಯ ಮಾತೇ ಸಂಪತ್ತು;ಕೆಟ್ಟ ಮಾತೇ ಆಪತ್ತು.
೮. ಸಮುದ್ರಕ್ಕೆ ಇಂಗು ಕದಡಿದಂತೆ.
೯. ಆರೋಗ್ಯವಂತನ ದೇಹ ಆತ್ಮನ ಅರಮನೆ.
ಅನಾರೋಗ್ಯವಂತನ ದೇಹ ಆತ್ಮನ ಸೆರೆಮನೆ.
ಆರೋಗ್ಯ ಚೆನ್ನಾಗಿದ್ದರೆ ಮನಸ್ಸು ಕೂಡ ಚೆನ್ನಾಗಿರುತ್ತದೆ.
೧೦. ಸಜ್ಜೆ ಕೋಣೆಗೆ ಚಂದ ; ಗೆಜ್ಜೆ ಕುಣಿತಕೆ ಚಂದ.
೧೧. ಮಕ್ಕಳ ಎದೆಯ ಕದ ತಟ್ಟಿ ಒಲವು ಗಳಿಸಲು
ಕಥೆಗಿಂತ ಒಳ್ಳೆಯ ಸಾಧನ ಇಲ್ಲ.
೧೨. ಇದ್ದಲನ್ನು ಆಸಕ್ತಿಯಿಂದ ಹಾಲಿನ ಸಮುದ್ರದಲ್ಲಿ
ತೊಳೆದರೆ ಅದು ಬೆಳ್ಳಗಾಗುವುದೇ ?
೧೩. ಸದ್ಗುಣವಿದ್ದಲ್ಲಿ ಕುರೂಪವೂ ಶೋಭಿಸುತ್ತದೆ.
೧೪. ತಿರುಗುವ ಬುಗುರಿ ಎಷ್ಟು ಹೊತ್ತು ತಿರುಗುತ್ತೆ ?
ತಿರುಗಿ, ತಿರುಗಿ ಒಮ್ಮೆ ಹೊರಳಿ ಬೀಳದಿರುತ್ಯೆ ?
೧೫. ಮರಳುಗಾಡಿಗೆ ಹೋಗಿ ನೀರಿಗೆ ಅತ್ತಂತೆ.
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s