ಭಗವದ್ಗೀತೆ.

ಭಾರತ ದೇಶವನ್ನು ಪ್ರಪಂಚದ ಭೂಪಟದಲ್ಲಿ ಗುರುತಿಸುವಂತೆ
ಮಾಡಿದ ಉತ್ಕೃಷ್ಟ ಗ್ರಂಥಗಳಲ್ಲಿ ಭಗವದ್ಗೀತೆಯೂ ಒಂದು.
ಮಾನವನ ಉನ್ನತ ಜೀವನಕ್ಕೆ ಕಳಶಪ್ರಾಯವಾಗಿ ಕರ್ತವ್ಯ ಪ್ರಜ್ಞೆ
ಯನ್ನು ಬೋಧಿಸಿದ ಕೀರ್ತಿ ಭಗವದ್ಗೀತೆಯದ್ದು. ತ್ಯಾಗ,ಜ್ಞಾನ ಸಂಪತ್ತು
ಮತ್ತು ಕರ್ತವ್ಯ ಪ್ರಜ್ಞೆ ಜಾಗೃತಿಯನ್ನು ಬಿಂಬಿಸಿದ ಸರ್ವಕಾಲಿಕ
ಶ್ರೇಷ್ಠ ರತ್ನವೆಂದು ಭಗವದ್ಗೀತೆ ಸಾರಲ್ಪಟ್ಟಿದೆ.೫ ನೇ ವೇದ ವೆಂದು
ಪ್ರಸಿದ್ಧ ವಾಗಿರುವ ಮಹಾಭಾರತದ ಭೀಷ್ಮ ಪರ್ವದ ೨೫ ರಿಂದ
೪೨ನೆಯ ಅಧ್ಯಾಯದ ವರೆಗಿನ ಭಾಗಗಳನ್ನೇ ಭಗವದ್ಗೀತೆ
ಎಂದು ಕರೆಯುತ್ತಿರುವುದು . ಮಹಾಭಾರತವು ೧೮ ಪರ್ವಗಳಲ್ಲಿ
೧ ಲಕ್ಷಕ್ಕೂ ಮೀರಿದ ಶ್ಲೋಕ ಗಳಲ್ಲಿ ಹರಡಿ ಕೊಂಡಿದ್ದರೆ
ಭಗವದ್ಗೀತೆಯು ೧೮ ಅಧ್ಯಾಯ ಗಳಲ್ಲಿ ೭೦೦ ಶ್ಲೋಕಗಳಲ್ಲಿ
ಅಡಕವಾಗಿದೆ.ಗೀತೆಯ ೧೮ ಅಧ್ಯಾಯಗಳು :
೧. ಅರ್ಜುನ ವಿಷಾದ ಯೋಗ ೨. ಸಾಂಖ್ಯ ಯೋಗ ೩. ಕರ್ಮ ಯೋಗ
೪. ಜ್ಞಾನ ಯೋಗ. ೫. ಸಂನ್ಯಾಸ ಯೋಗ. ೬. ಧ್ಯಾನ ಯೋಗ
೭. ಜ್ಞಾನ ವಿಜ್ಞಾನ ಯೋಗ. ೮. ಅಕ್ಷರ ಬ್ರಹ್ಮ ಯೋಗ ೯. ರಾಜ
ವಿದ್ಯಾರಾಜ ಗುಹ್ಯ ಯೋಗ. ೧೦. ವಿಭೂತಿ ಯೋಗ. ೧೧. ವಿಶ್ವ ರೂಪ
ದರ್ಶನ ಯೋಗ. ೧೨. ಭಕ್ತಿ ಯೋಗ ೧೩. ಕ್ಷೇತ್ರ ಕ್ಷೇತ್ರಜ್ಞ ಯೋಗ .
೧೪. ಗುಣ ತ್ರಯ ವಿಭಾಗ ಯೋಗ. ೧೫.ಪುರುಷೋತ್ತಮ ಯೋಗ.
೧೬. ದೈವಾಸುರ ಸಂಪದ್ವಿಭಾಗ ಯೋಗ. ೧೭. ಶ್ರದ್ಧಾ ತ್ರಯ ವಿಭಾಗ
ಯೋಗ. ೧೮. ಮೋಕ್ಷ ಸಂನ್ಯಾಸ ಯೋಗ .
ಭಗವದ್ಗೀತೆಗೆ ಭಾಷ್ಯವನ್ನು ಬರೆದವರಲ್ಲಿ ಮೊದಲಿಗರು ಶಂಕರಾಚಾರ್ಯರು.
ಗೀತೆಯು ಶ್ರೀ ಕೃಷ್ಣ , ಅರ್ಜುನ ಇವರ ಸಂವಾದದ ರೂಪದಲ್ಲಿದೆ.
ಗೀತೆಯನ್ನು ಉಪನಿಷತ್ತು,ಬ್ರಹ್ಮವಿದ್ಯೆ ಮತ್ತು ಯೋಗ ಶಾಸ್ತ್ರ ಎಂದೂ
ಕರೆಯಲಾಗುತ್ತದೆ.
ಅಧ್ಯಾತ್ಮಿಕ ರಹಸ್ಯಗಳನ್ನೊಳ ಗೊಂಡಿರುವುದರಿಂದ ಉಪನಿಷತ್ತು.
ಪರಬ್ರಹ್ಮನನ್ನು ಕುರಿತು ಹೇಳುವುದರಿಂದ ಬ್ರಹ್ಮವಿದ್ಯೆ. ಸಾಧನಾ
ಪ್ರಧಾನವಾದುದರಿಂದ ಯೋಗ ಶಾಸ್ತ್ರ.
ಗೀತೆಯನ್ನು ಉಪದೇಶಿಸಿದ ಮಹಾ ಪುರುಷ ಶ್ರೀ ಕೃಷ್ಣ.
ಅದನ್ನು ಪಡೆದವನು ಶ್ರೀ ಕೃಷ್ಣನ ಭಕ್ತ ಅರ್ಜುನ.
ಉಪದೇಶಿಸಿದ ಸಂದರ್ಭ ಕುರುಕ್ಷೇತ್ರ ಯುದ್ಧ. ಸ್ಥಳ ಯುದ್ಧ ಭೂಮಿ.
ಕೇಳಿದ ಪ್ರಶ್ನೆಗಳು ಜೀವನದ ಕರ್ತವ್ಯ ನಿರ್ವಹಣೆಗೆ ನೇರವಾಗಿ
ಸಂಬಂಧಿಸಿದವು. ಕೊಟ್ಟ ಉತ್ತರ ಅಂದಿಗೂ, ಇಂದಿಗೂ,ಮುಂದೆಯೂ
ಶಾಶ್ವತವಾಗಿ ಅನ್ವಯಿಸ ತಕ್ಕಂಥವು.
”ಜಯದ್ರಣಾ೦ಗಣೇ ಯಸ್ಯ ಸ್ಮರಣಂ ಜಯ ಕಾರಣಂ
ಪಾರ್ಥಸಾರಥಯೇ ತಸ್ಮೈ ಶ್ರೀ ಕೃಷ್ಣ ಬ್ರಹ್ಮಣೇ ನಮಃ ”
(ಜಗತ್ತು ರಣರಂಗ. ಶ್ರೀ ಕೃಷ್ಣನ ಸ್ಮರಣೆಯಿಂದ ಇಲ್ಲಿ ಜಯ
ಸಿಗುವುದು ಏಕೆಂದರೆ ಜೀವನ ರಥವನ್ನು ನಡೆಸುವವನೇ ಅವನು.
ರಥ ವೆಂದರೆ ಶರೀರ. ಜೀವಾತ್ಮ ರಥಿ; ಪರಮಾತ್ಮ ಸಾರಥಿ).
”ನಮ್ಮ ಮನಸ್ಸುಗಳು ತಲ್ಲಣದಲ್ಲಿವೆ.ನಮಗೆ ಒಂದು ಧೈರ್ಯ ಬೇಕು.
ನಮ್ಮ ನಂಬಿಕೆಗಳು ಚೆದರಿ ಅಲುಗಾಡುತ್ತಿವೆ. ಮನಸ್ಸಿಗೆ ಒಂದು
ನೆಲೆಮನೆ ಬೇಕು. ಭವಿಷ್ಯವು ಸಂದೇಹಗಳಲ್ಲಿ ಸಿಕ್ಕಿ ಕೊಂಡಿದೆ.
ಒಂದು ಭರವಸೆ ಬೇಕು. ಇಂಥ ವಿವೇಕ ,ಇಂಥ ಶ್ರದ್ಧೆ ,ಇಂಥ
ಸಮಾಧಾನ ಗಳಿಗೆ ಭಗವದ್ಗೀತೆ ದಾರಿ ತೋರಿಸುವುದಾದರೆ
ಅದು ನಮಗೆ ಬೇಕಾದ ಗ್ರಂಥ. ಮೋಕ್ಷ ಮಾತ್ರವಲ್ಲ;ಲೋಕ
ಜೀವನದ ದೃಷ್ಟಿಯಿಂದಲೂ ಗೀತೋಪದೇಶವನ್ನು ಎಲ್ಲ ಜನರೂ
ಅಂಗೀಕರಿಸ ತಕ್ಕದ್ದೆಂದು ಪ್ರಾಚೀನ ಭಾಷ್ಯಕಾರರು ಪ್ರತಿಪಾದಿಸಿದ್ದಾರೆ.”
–ಡಿ. ವಿ. ಜಿ.
ಭಗವದ್ಗೀತೆಯನ್ನು ನಮ್ಮ ಕಾಲಕ್ಕೆ, ನಿತ್ಯದ ಆಗು ಹೋಗು ಗಳಿಗೆ
ಹೇಗೆ ಹೊಂದಿಸಿ ಕೊಳ್ಳುವುದು ಎಂಬುದು ನಮ್ಮ ಅಂತರಂಗದ
ಒತ್ತಡ ಮತ್ತು ಹೃದಯ ಸಂವೇದನೆಗಳನ್ನು ಅವಲಂಬಿಸಿದೆ .
-ಎಸ್. ಸೂರ್ಯ ಪ್ರಕಾಶ್ ಪಂಡಿತ್.
ಭಗವಂತನು ಗೀತೆಯಲ್ಲಿ ಕರ್ತವ್ಯ ಬುದ್ಧಿ ಯಿಂದ ದೇಶ, ಕಾಲ,
ಪಾತ್ರ , ಔಚಿತ್ಯ ಇವುಗಳನ್ನು ತಿಳಿದು ಕೊಂಡು ಶ್ರದ್ಧಾಯುಕ್ತವಾಗಿ
ಮಾಡುವ ದಾನವೇ ಸಾತ್ವಿಕ ದಾನ ಎಂದು ಹೇಳಿರುತ್ತಾನೆ.
ದೇವಸ್ಥಾನ ಹಾಗೂ ಸತ್ಕಾರ್ಯಗಳಿಗೆ ನೀಡುವ ದಾನವು
ವಿಶೇಷವಾದ ಫಲವನ್ನು ನೀಡುತ್ತದೆ ಎಂಬುದು ಮಹಾತ್ಮರ
ಸಿದ್ಧಾಂತವಾಗಿದೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s