ಕನ್ನಡ ಸೌರಭ.

೧. ತುಡುಕಿದ ದೋಷಿಯನಲ್ಲದೆ ಪಿಡಿಯದು ಘಟಸರ್ಪಂ
ತುಡುಕದ ನಿರ್ದೋಷಿಯಮುಂ ಪಿಡಿವುದು ಖಲಮುಖ
ಘಟೋಗ್ರ ಜಿಹ್ವಾ ಸರ್ಪಂ.(ಕೆಣಕಿದ ದೋಷಿಯನಲ್ಲದೆ
ಅನ್ಯರನು ಪಿಡಿಯದು ಘಟ ಸರ್ಪ ;ಕೆಣಕದಿದ್ದರೂ
ಕಚ್ಚುವುದು ನಾಲಗೆ ಎಂಬ ಉಗ್ರ ಘಟ ಸರ್ಪ )
೨. ಸಂಪತ್ತು ಮತ್ತು ವಿಪತ್ತು ಮಹಾತ್ಮರಿಗೇ ಬರುವವು.
ವೃದ್ಧಿಯೂ ಹ್ರಾಸವೂ ಚಂದ್ರನಿಗೇ ಇರುವವಲ್ಲದೆ
ಆಕಾಶದ ಚುಕ್ಕಿ ಗಳಿಗುಂಟೇ ?
೩. ದುಡ್ಡು ಗಳಿಸುವ ಶಕ್ತಿಯಿರುವ ವರೆಗೆ ಮಾತ್ರ ಬಂಧು
ಬಾಂಧವರ ಆಸಕ್ತಿ.
೪. ಚಿಂತೆಯ ಬಲೆಯನ್ನು ಹರಿಯಲು ಒಂದು ಉಪಾಯ
ವೆಂದರೆ ಅವುಗಳನ್ನೆಲ್ಲ ಬರಹಕ್ಕಿಳಿಸುವುದು. ಆಗ ಅವುಗಳಲ್ಲಿ
ಬಹಳ ಮಟ್ಟಿಗೆ ಎಲ್ಲವೂ ನಿರಾಧಾರವೆಂದು ನಿಮಗೇ
ತಿಳಿಯುವುದು.
೫. ದುಡಿಮೆಗೆ ಅಂಜುವವರಿಗೆ ಮಾತೇ ಬಲ.
೬. ಬುದ್ಧಿವಂತಿಕೆ ನಮ್ಮಅನುಭವದಿಂದ ಬರುತ್ತದೆ. ಆದರೆ
ಅನುಭವ ನಮ್ಮ ಮೂರ್ಖತನ ದಿಂದಲೆ.
೭. ಬಾಳಿಗಿಂತ ಹಿರಿದಾದ ಗುರು ಮತ್ತೊಂದಿಲ್ಲ. ಹೇಗೆ ಬಾಳ
ಬೇಕೆಂಬುದನ್ನು ಬಾಳೇ ಕಲಿಸುತ್ತದೆ.
೮. ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು
ಬೊಟ್ಟು ಮಾಡಿ ತಿದ್ದುವ ಚೈತನ್ಯ ಆತನ ಅಂತರಾತ್ಮಕ್ಕೇ
ಹೊರತು ಬೇರಾರಿಗೂ ಇಲ್ಲ.
೯. ನಾವು ಬಾಲ್ಯದಲ್ಲಿ ಗಳಿಸಿದ ಪರಿಜ್ಞಾನದಿಂದ ಯೌವನ
ಕಾಲದ ಜೀವನ ರೂಪಿತವಾಗುತ್ತದೆ. ಯೌವನದಲ್ಲಿ
ಗಳಿಸಿದುದನ್ನು ಮುಪ್ಪಿನಲ್ಲಿ ಅನುಭವಿಸುತ್ತೇವೆ.
೧೦. ನಸುಗತ್ತಲಿನಲ್ಲಿ ಎದುರುಗಡೆ ಬಿದ್ದಿರುವ ಹಗ್ಗದ ತುಂಡು
ಹಾವಿನಂತೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ಹಾವಿಲ್ಲ ನಿಜ . ಆದರೆ
ಅದು ಶೂನ್ಯವೂ ಅಲ್ಲ. ಈ ಪ್ರಪಂಚದಲ್ಲಿ ನಮ್ಮ ಮತ್ತು ಇತರ
ವಸ್ತುಗಳ ಸಂಬಂಧ ಹೀಗೆ .
೧೧. ”ಕತ್ತಲಾಯಿತು ” ಎನ್ನುವ ಬದಲು ”ನಕ್ಷತ್ರಗಳು ಮೂಡಿದವು ”
ಎಂದರೆ ಎಷ್ಟು ಚೆನ್ನ!ಕಷ್ಟದ ಜತೆಗೆ ಸುಖವೂ ಬರುತ್ತದೆ. ಆದರೆ
ಕಷ್ಟವನ್ನೇ ಪ್ರಧಾನವಾಗಿ ಗುರುತಿಸದೆ ಸುಖವನ್ನು ಮಾತ್ರ
ಗುರುತಿಸುವ ಅಭ್ಯಾಸವನ್ನು ನಾವು ಬೆಳೆಸಿಕೊಂಡರೆ ಜೀವನ
ಅದೆಷ್ಟು ಸುಖಮಯ! ಕತ್ತಲೆಯಿಲ್ಲದಿದ್ದರೆ ನಕ್ಷತ್ರಗಳೆಷ್ಟು
ಕಾಂತಿಹೀನ ವಾಗಿರುತ್ತಿದ್ದವು ?
೧೨. ನಿಮಿಷಕ್ಕೊಮ್ಮೆ ಬಣ್ಣ ಬದಲಾಯಿಸುವ ಈ ಗೋಸುಂಬೆ
ಗಳನ್ನೆಲ್ಲ ಹಿಡಿದು ಎಂದೂ ಬದಲಾಗದಂಥಾ ಬಣ್ಣ ಬರುವಂಥ
ಇಂಜೆಕ್ಷನ್ ಚುಚ್ಚುವ ವೈದ್ಯ ಮಹನೀಯನೊಬ್ಬಅರ್ಜೆಂಟಾಗಿ
ಬೇಕಾಗಿದೆ. -ಜಿ . ಎಸ್. ಶಿವರುದ್ರಪ್ಪ.
೧೩. ಶಿಕ್ಷಣದಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನ ಎರಡರ ಸಮನ್ವಯ
ವಾದರೆ ಮಾತ್ರ ಸಂಪೂರ್ಣ ವ್ಯಕ್ತಿತ್ವದ ವಿಕಾಸವಾಗುವುದು.
೧೪. ಸಾಮಾಜಿಕ ನೀತಿ ಸೂತ್ರ ಗಳನ್ನು ಹೇಳುವಾಗ ನಾವು
ವೈಯಕ್ತಿಕವಾಗಿ ಎಷ್ಟರ ಮಟ್ಟಿಗೆ ಅರ್ಹತೆಯನ್ನು ಪಡೆದಿದ್ದೇವೆ
ಎನ್ನುವ ಆತ್ಮ ಸಂಶೋಧನೆ ಮಾಡಿಕೊಳ್ಳಬೇಕು.
೧೫. ನಿಮಗೆ ಸಿಟ್ಟು ಬರಬಹುದು ಎಂದೆನಿಸಿದೊಡನೆ ಮಾತಾಡು
ವುದನ್ನು ನಿಲ್ಲಿಸಿಬಿಡಿ.
ಮೂಲ:ಸಂಗ್ರಹ.
.
.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s