ಚಿಂತನ.

೧. ಕೇಳುವವರಿದ್ದಾರೆಂದು ಬಾಯಿಗೆ ಬಂದಂತೆ
ಮಾತನಾಡಬಾರದು. ಓದುವವರಿದ್ದಾರೆಂದು
ಸಹನೆ ಕೆಡಿಸುವಷ್ಟು ಬರೆಯಬಾರದು.
೨. ಮರ ತನ್ನ ಬೇರುಗಳನ್ನು ಭೂಮಿಯ ಆಳಕ್ಕೆ
ಇಳಿಸಿದರೆ ಮಾತ್ರ ಆಕಾಶದೆತ್ತರಕ್ಕೆಬೆಳೆಯಲು ಸಾಧ್ಯ.
ಅದೇ ರೀತಿ ನಾವು ಜೀವನದಲ್ಲಿ ಸರಳತೆ, ವಿಧೇಯತೆ
ಯನ್ನು ಮೈಗೂಡಿಸಿ ಕೊಂಡರೆ ಉನ್ನತ ಸ್ಥಾನಕ್ಕೇರ
ಬಹುದು.
೩. ವಾದಕ್ಕೂ ವಿವಾದಕ್ಕೂ ಇರುವ ವ್ಯತ್ಯಾಸ -ವಾದದಲ್ಲಿ
ಯಾರು ಸರಿ ಅನ್ನೋದು,ವಿವಾದದಲ್ಲಿ ಯಾವುದು ಸರಿ
ಅನ್ನೋದು ಕೊನೆಗೂ ಗೊತ್ತಾಗುವುದಿಲ್ಲ.
೪. ಸಾವಿರ ಮೈಲುಗಳ ಅಂತರವನ್ನು ವಿಮಾನದಲ್ಲಿ ಹಾರಿ
ತಲುಪಬಹುದು.ಆದರೆ ಮುನಿಸಿ ಕೊಂಡ ಮನಸ್ಸು ಸನಿಹ
ಇದ್ದರೂ ತಲುಪಲು ದಾರಿಯೇ ಇಲ್ಲ.
೫. ಉತ್ತಮ ಸಾಹಿತ್ಯವೆಂದರೆ ಮಾನಸ ಸರೋವರದಷ್ಟು
ಶುಭ್ರ ಹಾಗೂ ಸರ್ವರಿಗೂ ಹಿತ ಉಂಟು ಮಾಡುತ್ತದೆ .
ಅದೇ ಕೆಟ್ಟ ಸಾಹಿತ್ಯವೆಂದರೆ ಕೊಳೆತು ನಾರುತ್ತಿರುವ
ಕೊಳಚೆ ನೀರಿನಂತೆ ಅಶುದ್ಧ.ಯಾರಿಗೂ ಪ್ರಯೋಜನವಿಲ್ಲ.
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ.
೬. ಭೂಮಿಯ ಮೇಲಿನ ಮಣ್ಣು ಗಾಳಿಯೊಂದಿಗೆ ಸೇರಿದಾಗ
ಆಕಾಶದೆತ್ತರಕ್ಕೆಹಾರುತ್ತದೆ. ನೀರಿನೊಂದಿಗೆ ಸೇರಿದರೆ
ಕಡಲಿನಾಳಕ್ಕೂ ಇಳಿಯುತ್ತದೆ. ಸಹವಾಸದ ಪ್ರಭಾವದಿಂದ
ಮನಸ್ಸು ಪವಿತ್ರ ಯಾ ಮಾಲಿನ್ಯಗೊಳ್ಳುತ್ತದೆ.–ಬಾಬಾ.
೭. ಶೀಲವಿಲ್ಲದ ಶಿಕ್ಷಣ,ನೀತಿಯಿಲ್ಲದ ವ್ಯಾಪಾರ, ತತ್ತ್ವವಿಲ್ಲದ
ರಾಜಕಾರಣ,ಮಾನವೀಯತೆ ಇಲ್ಲದ ತಂತ್ರ ಜ್ಞಾನ ಇವು
ಗಳಿಂದ ಅಪಾಯ ತಪ್ಪಿದ್ದಲ್ಲ.– ಚಾಣಕ್ಯ.
೮. ಭಾರತದ ಶಿಕ್ಷಣ ಪದ್ಧತಿಯಲ್ಲಿ ೨ವಿಭಾಗ ಗಳಿವೆ.ಶಿಕ್ಷಣ
ವೆಂದರೆ ಶೈಕ್ಷಣಿಕ ಹಾಗೂ ವಿದ್ಯೆ. ಶಿಕ್ಷಣವೆಂದರೆ ಶೈಕ್ಷಣಿಕ
ಜ್ಞಾನ ಹೇಳಿ ಕೊಡುವ ಅಂಗ -ಗಣಿತ, ವಿಜ್ಞಾನ ,ಖಗೋಳ
ಶಾಸ್ತ್ರ ಇತ್ಯಾದಿ. ವಿದ್ಯೆ ಎಂದರೆ ಮಾನವೀಯ,ಧಾರ್ಮಿಕ
ಗುಣಗಳನ್ನು ಹೇಳಿ ಕೊಡುವ ಅಂಗ.
೯. ಶಿಕ್ಷಣದಿಂದ ಮನಸ್ಸಿನ ಶಕ್ತಿ, ಬುದ್ಧಿ ಶಕ್ತಿ, ಚಾರಿತ್ರ್ಯ ವೃದ್ಧಿ
ಯಾಗಬೇಕು.-ಸ್ವಾಮಿ ವಿವೇಕಾನಂದ.
೧೦.ಯಾರಿಗೂ ನೋವು ಮಾಡದೆ ಇರ ಬಹುದು.
ಎಲ್ಲರಿಗೂ ಸಂತೋಷ ಉಂಟು ಮಾಡುವುದು ಕಷ್ಟ.
೧೧. ಜಗತ್ತು ನಮ್ಮನ್ನು ನೋಡಲಿ ಎಂಬ ಆಸೆಯಿಂದ
ಪರ್ವತ ಏರುವ ಬದಲು ನಾವು ಜಗತ್ತನ್ನು ನೋಡುವ
ಇಚ್ಛೆಯಿಂದ ಹತ್ತ ಬೇಕು.
೧೨. ಮಗ, ಸೇವಕ,ಸ್ನೇಹಿತ, ಮಿತ್ರ, ಹೆಂಡತಿ ,ಧರ್ಮ,
ಸತ್ಯಶೀಲತೆ ಇವೆಲ್ಲವೂ ಕೋಪದ ಸ್ವಭಾವದವನನ್ನು
ತ್ಯಜಿಸಿ ದೂರ ಹೋಗುತ್ತವೆ.
೧೩. ನೋವಿಲ್ಲದ ಹೃದಯವಿಲ್ಲ;ಆಸೆಯಿಲ್ಲದ ಮನಸ್ಸಿಲ್ಲ.
೧೪. ನಮ್ಮ ಕಣ್ಣುಗಳು ಸುಂದರವಾಗ ಬೇಕಾದರೆ ಕಾಡಿಗೆ
ಹಚ್ಹ್ಚುವುದಲ್ಲ. ಸುತ್ತಲಿನ ಜಗತ್ತಿನಲ್ಲಿ ಒಳ್ಳೆಯದನ್ನು ಕಾಣಬೇಕು.
೧೫. ಜಗತ್ತಿನಲ್ಲಿ ನಿಜವಾದ ತೃಪ್ತಿ ಸಿಗುವುದು ನೀರು, ಅನ್ನ
ಮತ್ತು ಒಳ್ಳೆಯ ಮಾತುಗಳಿಂದ. ಇವುಗಳನ್ನು ರತ್ನ ತ್ರಯ
ಗಳೆಂದು ಬಲ್ಲವರು ಕರೆಯುವರು.
೧೬. ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ
ಕೋಟೆಯಲ್ಲಿ. ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ. -ಜಿ. ಎಸ್. ಶಿವರುದ್ರಪ್ಪ.
೧೭. ಹಸಿದ ಹೊಟ್ಟೆಯನ್ನು ಯಾರಾದರೂ ತುಂಬ ಬಹುದು.
ಆದರೆ ಆಸೆಯ ಹೊಟ್ಟೆಯನ್ನು ಯಾರಿಂದಲೂ ತುಂಬಲು
ಸಾಧ್ಯವಿಲ್ಲ.
೧೮. ಪ್ರೇಮ ಕುರುಡಲ್ಲ;ಕಣ್ಣಿದ್ದರೂ ದಾರಿ ತಪ್ಪಿಸುವ
ದುರ್ಗಮ ಕಾಡು.
೧೯. ಕೋಪದಲ್ಲಿದ್ದಾಗ ಪ್ರತಿಕ್ರಿಯಿಸಬೇಡಿ. ಸಂತೋಷದಲ್ಲಿದ್ದಾಗ
ಮಾತು ಕೊಡ ಬೇಡಿ.ದುಃಖದಲ್ಲಿದ್ದಾಗ ಯಾವ ನಿರ್ಧಾರವನ್ನೂ
ಕೈಗೊಳ್ಳ ಬೇಡಿ.
೨೦. ಯಾರೇ ಆದರೂ ಪುಟ್ಟ ಕಲ್ಲನ್ನು ಎಡವುತ್ತಾರೆಯೇ ಹೊರತು
ದೊಡ್ಡ ಬೆಟ್ಟವನ್ನಲ್ಲ. ಯಾವತ್ತೂ ತಪ್ಪುಗಳು (mistakes not crime )
ದೊಡ್ಡದಿರುವುದಿಲ್ಲ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s