ಒಗಟು.

೧. ಹಿಡಿಯೋಣವೆಂದರೆ ಕೈಗೆ ಸಿಗಲಾರದು.
ಬಡಿಯೋಣವೆಂದರೆ ಬಡಿಗೆಗೆ ಸಿಗಲಾರದು.
ನೋಡೋಣವೆಂದರೆ ಕಣ್ಣಿಗೆ ಕಾಣಿಸಲಾರದು.
ಅದಿಲ್ಲದೆ ಬದುಕೇ ಇಲ್ಲ. ಯಾವುದು ?
–ಗಾಳಿ.
೨. ನನ್ನನ್ನು ಕಂಡರೆ ಒದಿಯೋರೆ ಎಲ್ಲ; ನಾನಿಲ್ಲ
ದಿದ್ರೆ ಆಟವೇ ಇಲ್ಲ.
–ಚೆಂಡು.
೩. ಮನೆಯ ಒಳಗೆ ಮೊಗ್ಗಾಗುವೆ; ಮನೆಯ ಹೊರಗೆ
ಹೂವಾಗುವೆ.
-ಛತ್ರಿ.
೪. ಗುಂಡಾಗಿದ್ದರೂ ಚೆಂಡಲ್ಲ;ಮುಚ್ಚಳ ತೆಗೆದರೆ
ನೂರಾರು ಮುತ್ತು .
-ದಾಳಿಂಬೆ.
೫. ಹೊಟ್ಟೆಗೆ ಕೈ ಹಾಕಿದ್ರೆ ಬಾಯಿ ಬಿಡ್ತಾನೆ.
-ಬೀಗ.
೬. ಅಂಗೈ ಅಗಲದ ಕೆರೆ; ಕೆರೆಯಲ್ಲಿ ನೀರು ;
ನೀರಿನಲ್ಲಿ ಬೇರು; ಬೇರಿನಲ್ಲಿ ಬೆಂಕಿ .
-ದೀಪ.
೭. ಊಟಕ್ಕೆ ಕೂತಾಗ ಐದು ಜನ ಓಡಾಡುತ್ತಾರೆ.
-ಕೈ ಬೆರಳು.
೮. ನಿಂತರೆ ನಿಲ್ಲುತ್ತೆ; ಕುಂತರೆ ಕೂರುತ್ತೆ;ಕೈಗೆ
ಸಿಗೋದಿಲ್ಲ.
–ನೆರಳು.
೯. ಬಾಳೆ ಹಣ್ಣಿನೊಳಗೆ ಭಾರಿ ಗೋಲಿಗಳು.
-ಬೆಂಡೆ ಕಾಯಿ.
೧೦. ನಮ್ಮತ್ರಾನೆೇ ಇದೆ. ನಮಗೇ ಹೊಡೆಯುತ್ತದೆ .
-ರೆಪ್ಪೆ.
೧೧. ಹಾರುತ್ತಾನೆ ಹನುಮನಲ್ಲ ;ಕೂಡುತ್ತಾನೆ ಹುಲಿಯಲ್ಲ.
-ಕಪ್ಪೆ .
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s