ವಿಚಾರ ವಿಹಾರ.

೧. ಯಂತ್ರ ಗಳು ಜಗತ್ತನ್ನು ಮಲಿನ ಗೊಳಿಸಿದರೆ
ಮಂತ್ರ ಗಳು ಜಗತ್ತನ್ನು ಪುನೀತ ಗೊಳಿಸಿವೆ.
ಋಷಿ ಗಳ ಅನ್ವೇಷಣೆ ಅಂತರ್ಮುಖಿ ಯಾದರೆ
ವಿಜ್ಞಾನಿಗಳ ಅನ್ವೇಷಣೆ ಬಾಹ್ಯ ಮುಖಿ ಯಾದದ್ದು.
೨. ಜಗವೆಲ್ಲ ಮಲಗಿರಲು ”ಖಾಕಿ”(ಪೋಲಿಸ್ )ರಾತ್ರಿಯ
ಗಸ್ತು ಮಾಡುವುದರಲ್ಲಿ ವ್ಯಸ್ತ. ಕನಸು ಕಾಣುವ ಇರುಳು
ಇವನಿಗಿಲ್ಲ . ಲೋಕದ ಡೊಂಕಿಗೆ ಲಾಟಿ ಎತ್ತುವ ಖಾಕಿಗೆ
ತನ್ನ ಮನೆ ಜನರ ಯೋಗ ಕ್ಷೇಮದ ಪರಿವೆ ಇಲ್ಲ.
ಎಲ್ಲರಿಗೂ ಹಬ್ಬವಿದೆ ;ಖಾಕಿಗೆ ಇಲ್ಲ .
ಜೇಬಿನ ಮೊಬೈಲ್ ರಿಂಗಣಿಸಿದರೂ ಖಾಕಿಯ ಕಿವಿ ತನಕ
ತಲುಪುವುದೇ ಇಲ್ಲ. ಖಾಕಿ ಧರಿಸಿದ ಮೇಲೆ ಶಾಂತಿ,
ಸುವ್ಯವಸ್ಥೆ, ನೂಕು ನುಗ್ಗಲು ನಿಯಂತ್ರಣದ್ದೇ ಚಿಂತೆ.
ಲೋಕಕ್ಕೆ ಹಬ್ಬದ ಸಡಗರ . ಜನ ನಿರಾತಂಕವಾಗಿ
ಹಬ್ಬ ಆಚರಿಸಲಿ ಎಂದು ಶ್ರಮಿಸುವ ಖಾಕಿಯ
ನಿಟ್ಟುಸಿರು ಯಾರಿಗೂ ಕೇಳಿಸುವುದಿಲ್ಲ.
೩. ಜಗಳ ಗಳಿದ್ದಷ್ಟೂ ಸಂಸಾರ ಮಧುರ ವಾಗಿರುತ್ತದೆ
ಎನ್ನುತ್ತಾರೆ. ಆದರೆ ಹೊಂದಾಣಿಕೆಯ ಮನೋಭಾವ
ಇರುವಲ್ಲಿ ಮಾತ್ರ ಅನ್ಯೋನ್ಯತೆ ಸಾಧ್ಯ. ಮನಸ್ಸು
ಸರಿ ಇಲ್ಲದಿದ್ದರೆ ಜಗಳಕ್ಕೆ ಕಾರಣವೇ ಬೇಕಾಗಿಲ್ಲ.
೪. ಭೂಮಿಯಂಥ ಪ್ರೇಯಸಿ ಇನ್ನೊಬ್ಬಳಿಲ್ಲ. ಅದು
ಪ್ರತಿದಿನ ಸೂರ್ಯನನ್ನು ಸುತ್ತುತ್ತಲೇ ಇದೆ ;ಸೂರ್ಯ
ಎಂದಿಗೂ ತನ್ನವನಾಗ ಎಂದು ತಿಳಿದಿದ್ದರೂ.
೫. ಪರಿಸರ ವಿಜ್ಞಾನದಲ್ಲಿ ಹುಲಿ,ಹುಲ್ಲೆ,ಹುಲ್ಲು ,ಹೊಲ
ಮತ್ತು ಹೊಳೆಗೆ ಪರಸ್ಪರ ಸಂಬಂಧವಿದೆ. ಹೊಲದಲ್ಲಿ
ಬೆಳೆದ ಹುಲ್ಲನ್ನು ಹುಲ್ಲೆ (ಜಿಂಕೆ )ತಿನ್ನುತ್ತದೆ.ಅದನ್ನು
ತಿಂದು ಹುಲಿ ಬದುಕುತ್ತದೆ.ಹುಲಿ ಸಂತತಿ ನಾಶವಾದರೆ
ಹುಲ್ಲೆ ಹುಲ್ಲನ್ನು ತಿಂದು ಖಾಲಿ ಮಾಡುತ್ತದೆ. ಆಗ ಬಿದ್ದ
ಮಳೆ ಎಲ್ಲ ಹರಿದು ಹೋಗಿ ಮಣ್ಣು ಸವೆತ ಉಂಟಾಗುತ್ತದೆ.
ಭೂಮಿ ಬರಡಾಗುತ್ತದೆ. ಹುಲ್ಲೆಯ ಸಂತತಿ ಹುಲುಸಾಗಿ
ಬೆಳೆದರೆ ಹುಲಿಯ ಸಂತತಿ ಪರಿಮಿತ. ಒಂದು ವೇಳೆ
ಜಿಂಕೆ ಇಲ್ಲವಾದರೆ ಹುಲಿ ಬದುಕುವುದಿಲ್ಲ. ಹುಲಿ ಬದುಕಲು
ಹುಲ್ಲೆ ಬೇಕು. ಹುಲ್ಲೆಗೆ ಹುಲ್ಲು ಬೇಕು. ಹುಲ್ಲು ಇದ್ದರೆ ಮಳೆಯನ್ನು
ಬೇರುಗಳಲ್ಲಿ ಹಿಡಿದಿಟ್ಟುಕೊಂಡು ಹೊಳೆಗೆ ಹರಿದು ಹೋಗದಂತೆ
ತಡೆಯುತ್ತದೆ. ಹೀಗೆ ಪ್ರಕೃತಿಯ ಪ್ರತಿಯೊಂದು ಜೀವಿಗಳ
ನಡುವೆಯೂ ಒಂದಕ್ಕೊಂದು ಸಂಬಂಧವಿದೆ.
೬. ಜಗತ್ತಿನ ಸಮಸ್ಯೆ ಬಗೆಹರಿಸಲು ದೋಷ ವಿಷವನ್ನು
ಗಂಟಲಲ್ಲಿರಿಸಿ, ಗುಣ ಚಂದ್ರನನ್ನು ತಲೆ ಮೇಲಿರಿಸಿದ ಚಂದ್ರ
ಮೌಳೇಶ್ವರರಾಗಬೇಕು. ನಾವು ಸರಿಯಾದರೆ ಜಗತ್ತು
ಸರಿಯಾಗುತ್ತದೆ.ನಮ್ಮಲ್ಲಿರುವ ದೋಷವನ್ನು ತಿದ್ದಿ ಇತರರ
ಗುಣವನ್ನು ಮೆಚ್ಚಿ ಕೊಳ್ಳಬೇಕು.
೭. ಎತ್ತರಕ್ಕೆ ಏರಿದಷ್ಟು ಬಿದ್ದಾಗ ನೋವು ಜಾಸ್ತಿ.
೮. ಬದುಕಿನ ಬವಣೆಗಳು ಕಲಾವಿದನ ಅಂತರಂಗದೊಳಗಿನ
ಸೃಜನಶೀಲತೆಯನ್ನು ಅರಳಿಸುತ್ತವೆ ವಿನಾ ಉರುಳಿಸುವುದಿಲ್ಲ.
೯. ಭಗವಂತನನ್ನು ”ಸಹಸ್ರ ಶೀರ್ಷಾ ”ಎಂದು ಕರೆದರೂ
ಹೃದಯ ಒಂದೇ .
೧೦. ಹಗಲ ಆಕಾಶದಲ್ಲಿ ಸೂರ್ಯ ಒಬ್ಬಂಟಿ. ಚಂದ್ರ ಹಾಗಲ್ಲ,
ಲಕ್ಷ ನಕ್ಷತ್ರಗಳ ಸಂಸಾರಿ.
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s