ಕನ್ನಡ ಗಾದೆಗಳು.

೧. ಬೆನ್ನು ಪೆಟ್ಟು ತಿನ್ನುತ್ತದೆ, ಹೊಟ್ಟೆ ಅನ್ನ ತಿನ್ನುತ್ತದೆ.
೨. ಮಂಕು ದೊರೆಗೆ ಮುಟ್ಟಾಳ ಮಂತ್ರಿ.
೩. ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು ;ಅತ್ತು ಅತ್ತು ಕಣ್ಣು ಇಂಗಿ ಹೋಯ್ತು.
೪. ಅಪಾಯ ಬಂದಾಗ ಉಪಾಯವಿರಬೇಕು.
೫. ಅಡಿಗೆ ಆಗೋದಕ್ಕೆ ಮುಂಚೆ ಎಲೆ ಹಾಕಿದ ಹಾಗೆ.
೬. ಅಷ್ಟ ಪುತ್ರರಲ್ಲಿ ಇಷ್ಟ ಪುತ್ರ ಯಾರು ?
೭. ಕೌರವರ ಜೊತೇಲಿ ಭೀಷ್ಮನೂ ಗೋವು ಕದ್ದ .
೮. ಗೆಳೆಯರಿಲ್ಲದ ಗ್ರಾಮ ಗೊಂಡಾರಣ್ಯ.
೯. ಅರಸಿ ಬಂದವರನ್ನು ಅಳಿಸಿ ಕಳಿಸ ಬಾರದು.
೧೦. ಚಂದ್ರನನ್ನು ನೋಡಿ ನಾಯಿ ಬೊಗಳಿದ ಹಾಗೆ .
೧೧. ದೂರ್ವಾಸರು ಬಂದಾಗ ದೂರ ಓಡಬೇಕು.
೧೨. ಕದ್ದು ತಿನ್ನೋದಕ್ಕಿಂತ ಬೇಡಿ ತಿನ್ನೋದು ಲೇಸು.
೧೩. ಜನ ಮೆಚ್ಚಿಸೋಕೆ ಜನಾರ್ಧನನ ಕೈಲೂ ಅಸಾಧ್ಯ .
೧೪. ಹೆಣ್ಣು ಚೆಂದ ;ಕಣ್ಣು ಕುರುಡು.
೧೫. ಕೂಡಿಡುವವನು ಕೋಣ ;ಅನುಭವಿಸುವವನು ಜಾಣ.
೧೬. ತಂದೆ ಸತ್ತ ಮಗು ಅರ್ಧ ತಬ್ಬಲಿ; ತಾಯಿ ಸತ್ತ ಮಗು
ಪೂರ್ತಿ ತಬ್ಬಲಿ.
೧೭. ಪಕ್ಷಿಗೆ ಗೂಡು;ಮಕ್ಕಳಿಗೆ ತಾಯಿ .
೧೮. ದುರ್ಜನರಿಗೆ ಬಂದ ಸಂಪತ್ತು ,ಸಜ್ಜನರಿಗೆ ಬಂದ ವಿಪತ್ತು
ಹೆಚ್ಚು ದಿನ ಇರದು.
೧೯. ಊಟ ಮಾಡಿದ ಮೇಲೆ ಜಾತಿ ಕೇಳಿದನಂತೆ.
೨೦. ಅಗಳು ಚೆಲ್ಲಿದರೆ ಕಾಗೆಗಳಿಗೆ ಕಡಿಮೆಯೇ ?
೨೧. ಲೋಕ ಸೇವಾ ನಿರತ ಮನೆ ಮಂದಿಯನ್ನು ಮರೆತ.
೨೨. ಬರುವಾಗ ನರಿ ;ಬಂದ ಮೇಲೆ ಹುಲಿ.
೨೩.ನಿಯಮವುಳ್ಳವನನ್ನು ಕಂಡರೆ ಯಮನಿಗೂ ಭಯ .
೨೪. ಪಾತ್ರಧಾರನಿಗೆ ಸೂತ್ರಧಾರನೇ ಆಧಾರ .
೨೫. ಪಾದಕ್ಕೆ ಬಿದ್ದರೂ ನಾಗಪ್ಪ ಕಚ್ಚದೆ ಬಿಡ .
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s