ನಿಮಗೆ ಗೊತ್ತೇ?

೧. ಜೈನ ಕಾಶಿ ಮೂಡಬಿದರೆ , ಕವಿ ರತ್ನಾಕರ ವರ್ಣಿ (ಭರತೇಶ ವೈಭವ )ಯು
ಬಾಳಿ ಬೆಳಗಿದೂರು. ವೇಣುಪುರ, ವಂಶಪುರ, ಬೆದ್ರ ಎಂಬುದು ಪರ್ಯಾಯ
ಹೆಸರು. (ವೇಣು,ವಂಶ =ಬಿದಿರು )’ಮೂಡು’ ಎಂಬುದು ದಿಕ್ಕನ್ನು ಸೂಚಿಸುವ
ಪದವಷ್ಟೇ ಅಲ್ಲ,ಪ್ರಾಚೀನತೆಯನ್ನೂ ನಿರ್ದೇಶಿಸುತ್ತದೆ.
೨. ಜೈನ ಸಮುದಾಯದವರು ಅನೇಕ ಮಠಗಳನ್ನು ನಿರ್ಮಿಸಿದ ಪರಿಸರ
ಮಠತಾರಾ ಮುಂದೆ ಮಡಂತ್ಯಾರು ಆಯಿತು.
೩. ಮಹಾಭಾರತ ಕಾಲದ ಗಾಂಧಾರ ದೇಶವೇ ಈಗಿನ ಅಫ್ಘಾನಿಸ್ತಾನ.
ಕಂದಹಾರ ನಗರದ ಹೆಸರು ಇದಕ್ಕೆ ಒತ್ತು ಕೊಡುತ್ತದೆ .
೪. ಮಾಣಿ ಎಂದರೆ ಸರ್ಪ. ಸರ್ಪಗಳ ಬಿಲಗಳು ಜಾಸ್ತಿ ಇರುವ ಕಾರಣ
ಮಾಣಿಬಿಲ ಮುಂದೆ ಮಾಣಿಲ ಆಯಿತು.
೫. ಕನ್ಯಾನ -ಕನ್ಯೆಯರಿಲ್ಲದ ಕನ್ಯನಃ ಪ್ರದೇಶ ಕನ್ಯಾನ ಎಂದಾಯಿತು.
ಈ ಭಾಗಕ್ಕೆ ಮಲರಾಯಿ ದೈವ ಎಂಬ ಕನ್ಯೆ ದೈವದ ಆಗಮನದಿಂದ
(ಕನ್ಯಾಗಮನ)ಕನ್ಯಾನ ವಾಯಿತೆಂದು ಕೂಡ ಹೇಳಲಾಗುತ್ತದೆ.
೬. ಮೇರು ಪರ್ವತದ ಮಗ ಆನಂದ ಪರ್ವತ;ಕಲಿಯುಗದಲ್ಲಿ
ವೆಂಕಟಾಚಲವೆನಿಸಿದೆ.
೭. ದೇಲಪ ಎಂದರೆ ಪಾರಿವಾಳ. ದೇಲಂಪಾಡಿ ಎಂದರೆ ಪಾರಿವಾಳಗಳ
ಊರು.
೮. ಮೌಳಿ ಆರು (ಆರು ಶಿರಸ್ಸುಳ್ಳ ಷಣ್ಮುಖ )ಎಂಬ ಹೆಸರು ಮುಳಿಯಾರು
ಎಂದಾಯಿತು.
೯. ಟಿಬೆಟ್ -ಪ್ರಾಚೀನ ಕಾಲದಲ್ಲಿ ಇದರ ಹೆಸರು ‘ತ್ರಿವಿಷ್ಟಪ’ವೆಂದಿತ್ತು.
೧೦. ಬಳುಕಿ-ಬಾಗಿ ಹರಿವ ವಾರಾಹಿ ನದಿ ತಟವೇ ಬಳ್ಕೂರು.
೧೧. ”ನೆಲ್ಲಿ ಮರದ ಅಡಿಯಲ್ಲಿ” ಎಂಬುದೇ ನೆಲ್ಯಾಡಿ. ಮಂಗಳೂರಿನಿಂದ
೭೧ ಕಿಲೋ ಮೀಟರ್ ದೂರದಲ್ಲಿದೆ.
೧೨. ತಿರುಪತಿ ಬೆಟ್ಟಕ್ಕೆ ವೆಂಕಟಾಚಲವೆಂಬ ಹೆಸರೂ ಇದೆ.
೧೩. ರೋಮ್ ಸಾಮ್ರಾಜ್ಯವನ್ನು ಹುಟ್ಟು ಹಾಕಿದವ ರೋಮಲಸ್.
೧೪. ಗಂಗಾ ನದಿ ಉದ್ಭವಿಸುವ ಸ್ಥಳ ಗೋಮುಖ.
೧೫. ಕೂಡಲ ಸಂಗಮದಲ್ಲಿ ತ್ರಿವೇಣಿ ಸಂಗಮವಾದರೆ ಗಂಗೊಳ್ಳಿಯಲ್ಲಿ
ಪಂಚ ನದಿಗಳು ಸಂಗಮವಾಗುವ ಮೂಲಕ ಪಂಚ ಗಂಗಾವಳಿ (ಗಂಗೊಳ್ಳಿ )
ಎಂಬ ಹೆಸರು ಬಂದಿದೆ. ಸೌಪರ್ಣಿಕಾ , ಚಕ್ರಾ ,ವಾರಾಹಿ ,ಕುಬ್ಜಾ ಹಾಗೂ
ಖೇತ ನದಿಗಳು ಗಂಗೊಳ್ಳಿಯಲ್ಲಿ ಅರಬ್ಬೀ ಸಮುದ್ರಕ್ಕೆ ಸೇರುತ್ತವೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s