ಚಿಂತನ.

೧. ಅವಜ್ಞೆಯಿಂದ ಉಪೇಕ್ಷಿತವಾದ ಪ್ರೇಮ ಮತ್ತೆ ಕೂಡುವುದು
ಕಷ್ಟ. ಒಡೆದ ಮಣಿಯನ್ನು ಅರಗಿನಿಂದ ಕೂಡಿಸಲು ಸಾಧ್ಯವೇ ?
೨. ಮೃದು ಸ್ವಭಾವದವನು ಯಾವಾಗಲೂ ಅಪಮಾನಕ್ಕೆ ಒಳ
ಗಾಗುತ್ತಾನೆ. ಕಠಿಣ ಸ್ವಭಾವದವನಾಗಿದ್ದರೆ ಹಗೆತನಕ್ಕೆ ಗುರಿ
ಯಾಗುತ್ತಾನೆ. ಆದುದರಿಂದ ಇವೆರಡನ್ನೂ ಬಿಟ್ಟು ಮಧ್ಯಮ
ರೀತಿಯಲ್ಲಿ ವರ್ತಿಸುವುದು ಉತ್ತಮ.
೩. ತಾವರೆಗಳಿಗೆ ಸೂರ್ಯನಲ್ಲಿ ಪ್ರೀತಿ. ಚಂದ್ರನ ಕಿರಣಗಳು
ಎಷ್ಟು ತಂಪಾಗಿದ್ದರೂ ಅರಳುವುದಿಲ್ಲ.
೪. ದೇಹವನ್ನು ನಂಬ ಬಾರದು. ದೇವರನ್ನು ಮರೆಯ ಬಾರದು.
೫. ಬಂಧು ಮಿತ್ರರು ಮಸಣದ ವರೆಗೆ ಮಾತ್ರ ಜೊತೆಗೆ ಬರುತ್ತಾರೆ.
ಸದಾ ನಮ್ಮ ಜೊತೆ ಇರುವವನು ಭಗವಂತ ಒಬ್ಬ ಮಾತ್ರ.
೬. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ;
ಹಲವುತನದ ಮೈ ಮರೆಸುವಾಟವಿದು, ನಿಜವು ತೋರದಲ್ಲ.
೭. ಮಾತು ಮೈಲಿಗೆಯಾಗದೆ ಮಲ್ಲಿಗೆಯಾಗಲಿ.
ಮಾತು ನಮ್ಮ ಆದರ್ಶ, ಸಂಸ್ಕೃತಿಯನ್ನು ಸಾರುತ್ತದೆ.
ಮಾತು ಮನವನ್ನು ಅರಳಿಸ ಬೇಕೇ ವಿನಾ ಕೆರಳಿಸ ಬಾರದು.
೮.ಉತ್ಸಾಹವೆಂಬುದು ಕಲ್ಲಿದ್ದಲು ಒಳಗೆ ಕುದಿಯುತ್ತಿರುವ ಕಾವಾಗ
ಬೇಕೇ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗ ಬಾರದು.
೯. ಹಗಲು-ರಾತ್ರಿಗಳು ಜೀವಿಯ ಆಯು:ಪ್ರಮಾಣವನ್ನು ಎಡೆ ಬಿಡದೆ
ತಿನ್ನುತ್ತಿವೆ. ಬಾಳಿನ ಸಮಯವನ್ನು ಹಗುರವಾಗಿ ಕಳೆಯದೆ ಸಾರ್ಥಕ
ಪಡಿಸಿ ಕೊಳ್ಳಬೇಕು.
೧೦. ಮಾತು ಕಠಿಣವಾದ ಬಾಣದಂತಿರದೆ ಕೋಮಲವಾದ
ಹೂವಿನಂತಿರಬೇಕು.
ಮೂಲ :ಸಂಗ್ರಹ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s