ಕನ್ನಡದ ಮೊದಲುಗಳು.

೧. ಕನ್ನಡದ ಮೊದಲ ಕೃತಿ -ಕವಿರಾಜ ಮಾರ್ಗ(ಕ್ರಿ. ಶ. ೮೫೦).
೨. ತ್ರಿಪದಿ ಛಂದಸ್ಸಿನಲ್ಲಿರುವ ಬಾದಾಮಿಯ ಕಪ್ಪೆ ಅರಭಟ್ಟನ
ಶಾಸನ (ಕ್ರಿ.ಶ.೭೦೦).
೩. ಕನ್ನಡದ ಮೊದಲ ಕವಯಿತ್ರಿ –ಅಕ್ಕ ಮಹಾದೇವಿ.
೪. ಕನ್ನಡದ ಮೊದಲ ಮಹಮ್ಮದೀಯ ಕವಿ–ಶಿಶುನಾಳ ಶರೀಫರು.(೧೮೧೯)
೫. ಕನ್ನಡ ಅಕ್ಷರಗಳ ಅಚ್ಚಿನ ಮೊಳೆಗಳ ಮೊದಲ ವಿನ್ಯಾಸಕಾರ
ಕನ್ನಡಿಗ –ಅತ್ತಾವರ ಅನಂತಾಚಾರಿ. (೧೮೯೦)
೬. ಬೈಬಲ್ ಅನ್ನು ಕನ್ನಡಕ್ಕೆ ಮೊದಲು ತಂದವರು –ಜಾನ್ ಹ್ಯಾಂಡ್ಸ್.
೭. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ —
ಫರ್ಡಿನಾಂಡ್ ಕಿಟ್ಟೆಲ್. (೧೮೯೬ರಲ್ಲಿ )
೮. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ -ಇಂದಿರಾ ಬಾಯಿ.
೯. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಮೊದಲ
ಕನ್ನಡ ಕೃತಿ-ಕುವೆಂಪು ಅವರ ”ಶ್ರೀ ರಾಮಾಯಣ ದರ್ಶನಂ ”(೧೯೫೫)
೧೦. ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕವಿ -ಕುವೆಂಪು (”ಶ್ರೀ
ರಾಮಾಯಣ ದರ್ಶನಂ” ಮಹಾ ಕಾವ್ಯಕ್ಕೆ )
೧೧. ಪುಸ್ತಕ ಪ್ರಕಾಶನಕ್ಕೆ ”ಪದ್ಮ ಶ್ರೀ” ಪ್ರಶಸ್ತಿಪಡೆದ ಮೊದಲ
ಕನ್ನಡಿಗ-ಜಿ. ಬಿ. ಜೋಷಿ.
೧೨. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಮಹಿಳೆ –
ಶ್ರೀಮತಿ ಜಯದೇವಿ ತಾಯಿ ಲಿಗಾಡೆ (೧೯೭೪-ಮಂಡ್ಯ ಸಮ್ಮೇಳನ )
೧೩. ಕರ್ನಾಟಕ ಸರಕಾರದ ಮೊದಲ ಪಂಪ ಪ್ರಶಸ್ತಿ ಪಡೆದವರು —
”ಕುವೆಂಪು”.
೧೪.ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ
ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -ಡಾ ।।ಹಾ. ಮಾ. ನಾಯಕ .
೧೫. ನಾಟಕ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ Philippines ನ
Megsaysay ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -ಕೆ. ವಿ. ಸುಬ್ಬಣ್ಣ.
೧೬. ವಿಶ್ವ ಆಹಾರ ಸಂಸ್ಥೆಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ,
ಪ್ರಗತಿಪರ ರೈತ -ದೇವಂಗಿ ಪ್ರಫುಲ್ಲ ಚಂದ್ರ.
೧೭. ಕೇಂದ್ರ ಸಾಹಿತ್ಯ ಅಕಾಡೆಮಿಯ ಚುನಾಯಿತ ಅಧ್ಯಕ್ಷರಾದ
ಮೊದಲ ಕನ್ನಡಿಗ -ಡಾ ।।ಯು. ಆರ್. ಅನಂತ ಮೂರ್ತಿ.
೧೮. ಕನ್ನಡದ ಭಾವಗೀತೆ ಗಳ ಮೊದಲ Cassette -”ನಿತ್ಯೋತ್ಸವ ”.
೧೯. ಕನ್ನಡದ ಮೊದಲ ಪ್ರಾಧ್ಯಾಪಕರು –ಟಿ. ಎಸ್. ವೆಂಕಣ್ಣಯ್ಯ.
೨೦. ಕನ್ನಡ ನಾಡಿನ ಮೊದಲ ರಾಜ ವಂಶ -ಕದಂಬರು.
೨೧.ಕನ್ನಡ ನಾಡಿನ ಮೊದಲ ಕಾಲೇಜು -ಮಂಗಳೂರಿನ
ಸರ್ಕಾರಿ ಕಾಲೇಜು.
೨೨. ಕನ್ನಡ ನಾಡಿನ ಮೊದಲ ಮೆಡಿಕಲ್ ಕಾಲೇಜು –
ಬೆಂಗಳೂರು ಮೆಡಿಕಲ್ ಕಾಲೇಜು.
೨೩. ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ -”ಕರುಣೆಯೇ
ಕುಟುಂಬದ ಕಣ್ಣು”.
೨೪. ಕನ್ನಡದ ಮೊದಲ ವರ್ಣ ರಂಜಿತ ಚಲನ ಚಿತ್ರ–”ಅಮರ
ಶಿಲ್ಪಿ ಜಕಣಾಚಾರಿ”.
೨೫.ಸ್ವರ್ಣ ಕಮಲ ಗಳಿಸಿದ ಮೊದಲ ಕನ್ನಡ ಚಿತ್ರ -”ಸಂಸ್ಕಾರ”.
೨೬. ಕನ್ನಡದ ಮೊದಲ ಸಂಗೀತ ನಿರ್ದೇಶಕಿ -ಅನಸೂಯಾ ದೇವಿ.
೨೭. ಕನ್ನಡದ ಮೊದಲ ಚಿತ್ರ ನಿರ್ಮಾಪಕಿ -ಎಂ. ವಿ. ರಾಜಮ್ಮ.
೨೮. ಕನ್ನಡ ನಾಡಿನ ಮೊದಲ ಚಿತ್ರ ಮಂದಿರ -ಪ್ಯಾರಾಮೌಂಟ್.
೨೯. ಕನ್ನಡ ನಾಡಿನ ಮೊದಲ ಛಾಯಾ ಗ್ರಾಹಕಿ–ವಿಜಯ ಲಕ್ಷ್ಮಿ.
೩೦. ಕನ್ನಡದ ಮೊದಲ ನಿರ್ದೇಶಕಿ -ಲಕ್ಷ್ಮಿ (ಮಕ್ಕಳ ಸೈನ್ಯ )
೩೧. ಪ್ರಶಸ್ತಿ ವಿಜೇತ ಮೊದಲ ಕನ್ನಡ ಚಿತ್ರ ನಿರ್ದೇಶಕಿ- ಪ್ರೇಮಾ
ಕಾರಂತ.
೩೨. ಕನ್ನಡ ನಾಡಿನ ಮೊದಲ ಟೆಸ್ಟ್ ಆಟಗಾರ -ಪಿ. ಇ. ಪಾಲಿಯಾ.
೩೩. ಅರ್ಜುನ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಕ್ರಿಕೆಟ್ ಆಟಗಾರ –
ಇ.ಎ. ಎಸ್. ಪ್ರಸನ್ನ.
೩೪.ಭಾರತೀಯ ಮಹಿಳಾ ಕ್ರಿಕೆಟ್ ನ ಪ್ರಥಮ ನಾಯಕಿ (ಕರ್ನಾಟಕದವರು )
ಶಾಂತಾ ರಂಗ ಸ್ವಾಮಿ.
೩೫. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ- ”ಚೋರ ಗ್ರಹಣ ತಂತ್ರ”
೩೬.”ಕರ್ನಾಟಕ ರತ್ನ” ಪ್ರಶಸ್ತಿ ಪಡೆದ ಮೊದಲ ಕನ್ನಡ ಕವಿ -ಕುವೆಂಪು.
೩೮. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ –
ಡಾ।।ರಾಜ್ ಕುಮಾರ್.
೩೯. ಪ್ರಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಜರುಗಿದ್ದು ಬೆಂಗಳೂರಿನಲ್ಲಿ .(೧೯೧೫)
೪೦. ಕರ್ನಾಟಕ ಸರ್ಕಾರದ ಅತ್ತಿಮಬ್ಬೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ –
ಟಿ . ಸುನಂದಮ್ಮ.
೪೧. ಕನ್ನಡದ ಮೊದಲ ನವ್ಯ ನಾಟಕ -ಯಯಾತಿ (ಗಿರೀಶ್ ಕಾರ್ನಾಡ್ )
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s