ಕನ್ನಡ ಸೌರಭ.

೧. ”ಹುಟ್ಟಿದ್ದು ಸಾಯುವುದು, ಕಟ್ಟಿದ್ದು ಬೀಳುವುದು ” ಎನ್ನುವ
ಮಾತಿನಲ್ಲಿ ವಿಶಾಲ ಅರ್ಥವಿದೆ. ಆದರ್ಶವನ್ನುಗಾಳಿಗೆ ತೂರಿ
ಎಂಥ ಬಂಗಲೆ ಕಟ್ಟಿದರೂ ಪ್ರಯೋಜನವಿಲ್ಲ. ಏಕೆಂದರೆ
ಬಾಹ್ಯವಾಗಿ ಕಟ್ಟುವ ಎಲ್ಲ ಕಟ್ಟಡಗಳೂ ಬೀಳಬೇಕು.
ಆದಕಾರಣ ಹೊರಗೆ ಕಟ್ಟುವ ಮುನ್ನ ಮನಸ್ಸನ್ನು ಕಟ್ಟಿ
ಕೊಳ್ಳುವತ್ತ ಗಮನ ಹರಿಸಬೇಕು.
೨.”ಅಟ್ಟ ಹತ್ತಿ ಆಕಾಶಕ್ಕೆ ಹಾರು ಎಂಬಂತೆ ” ಆದರೆ
ಒಂದೊಂದೇ ಹೆಜ್ಜೆ ಇಟ್ಟು ಹತ್ತುತ್ತಿದ್ದರೆ ಅಟ್ಟ ಮುಟ್ಟುವಾಗಲೇ
ಮುದುಕನಾಗಿ ಬಿಟ್ಟರೆ ಆಕಾಶಕ್ಕೆ ಹಾರುವ ಸಾಮರ್ಥ್ಯ
ಉಳಿದಿರುತ್ತದೆಯೇ ?
೩. ಮಾತು ಕಲಿಯಲು ಎರಡು ವರ್ಷ ಸಾಕು. ಆದರೆ ಏನು
ಆಡಬೇಕು,ಏನು ಆಡ ಬಾರದು ಎಂಬುದನ್ನು ಕಲಿಯಲು
ಜೀವಮಾನವೇ ಬೇಕು.
೪. ಯೋಗಿಗಳು ಶೂನ್ಯ ಸಂಪಾದನೆ ಮಾಡಿದರೆ ಸಂಸಾರಿಗಳು
ಶೀಲ ಸಂಪಾದನೆ ಮಾಡಬೇಕು.
೫. ಪ್ರತಿಯೊಬ್ಬನ ಉಸಿರು ”ಸೋಹಂ ” ಅನ್ನುತ್ತದೆ.
(ಸಹ=ಅದು;ಅಹಂ=ನಾನು )
೬. ನೂರು ಅಬ್ಬರದ ಮಾತುಗಳು ಹೇಳಲಾಗದ್ದನ್ನು
ಒಂದು ಅರ್ಥಪೂರ್ಣ ಮೌನ ಹೆಲಬಲ್ಲದು.
೭. ಜೀವನದಲ್ಲಿ ಸುಸ್ತಾದರೂ ಶಿಸ್ತಿರಬೇಕು.
೮. ಖುಷಿಗಳೇ ಹಾಗೆ;ಅದಕ್ಕೆ ಪಸರಿಸುವ ಗುಣ ಹೆಚ್ಚು.
ಆದರೆ ನೋವುಗಳು ಹಾಗಲ್ಲ;ನೋವುಗಳನ್ನು ತುಂಬಾ
ಜನರ ಜೊತೆ ಹಂಚಿಕೊಳ್ಳಬೇಕೆಂದು ಅನ್ನಿಸುವುದೇ ಇಲ್ಲ.
ಇದು ನೋವು-ನಲಿವುಗಳ ವೈರುಧ್ಯ ಗುಣ ಸ್ವಭಾವಗಳು
ಅಂದರೂ ಸರಿಯೆ.
೯. ಜನರು ವಿಜ್ಞಾನದ ಹಿಂದೆ ಹೋಗಿ ಅಜ್ಞಾನವನ್ನು ಬೆಳೆಸಿ
ಕೊಳ್ಳುವುದರ ಬದಲು ಸುಜ್ಞಾನಿಗಳಾಗಬೇಕು.
೧೦. ಎದ್ದ ಕೂಡ್ಲೆ ಲದ್ದಿ ;ಹಸಿದ ಕೂಡ್ಲೆ ಮುದ್ದಿ ;ಬಿದ್ದ ಕೂಡ್ಲೆ
ನಿದ್ದಿ ಅಂದ್ರೆ ನೀ ಜೀವನದಾಗೆ ಗೆದ್ದಿ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s