ಚಿಂತನ.

1). ತಪ್ಪು ಮಾಡಲು ಅಂಜದಿರಿ. ತಪ್ಪು ಮುನ್ನಡೆಗೆ ಮೆಟ್ಟಿಲು .
”ನಡೆವರೆಡಹದೆ ಕುಳಿತರೆಡಹುವರೆ” ಎಂದು ಕೇಳಿದ ಕನ್ನಡ
ಕವಿ ಆಳವಾದ ಅರ್ಥವನ್ನು ವ್ಯಂಜಿಸಿದ್ದಾನೆ. ತಪ್ಪು ಮಾಡದೆ
ಒಪ್ಪು ಕೆಲಸವಾಗುವುದಿಲ್ಲ. ಅನುಭವಕ್ಕೆ ಅದೊಂದೇ ದಾರಿ .
”ನಮ್ಮ ತಪ್ಪುಗಳಿದ್ದರೆ ನಾವು ಅನುಭವ ಎಂಬ ಹೆಸರನ್ನು ಕೊಡುತ್ತೇವೆ.”
ಎಂದು ಆಸ್ಕರ್ ವೈಲ್ಡ್ ಹೇಳಿದ್ದು ಪೂರ್ತಿ ತಮಾಷೆಯಲ್ಲ.
ತಪ್ಪು ಮಾಡುವುದರ ಪರಿಣಾಮ ಎರಡು ವಿಧ. ಒಂದು ಅಪಾಯ;
ಇನ್ನೊಂದು ಅಪಹಾಸ್ಯ.
ತಂದೆ ತಾಯಿಗಳಿಂದ ತಪ್ಪಿನ ಭಯೋಪದೇಶವನ್ನು ಪಡೆದ
ಮಕ್ಕಳಲ್ಲಿ ತಪ್ಪು ಮಾಡಿದ ಜೀವನವೇ ನಿರರ್ಥಕ ಎಂಬ ಭಾವ
ಉದಿಸುವುದಲ್ಲದೆ ಧೈರ್ಯದಿಂದ ಬಾಳನ್ನು ಎದುರಿಸುವ ಪ್ರವೃತ್ತಿ
ಹುಟ್ಟುವುದಿಲ್ಲ. ತಪ್ಪಾದುದನ್ನೇ ಚಿಂತಿಸುತ್ತಿರುವವರಿಗೆ ತಪ್ಪಿದ್ದನ್ನು
ಸರಿಪಡಿಸುವ ಯತ್ನ ಅಸಾಧ್ಯವಾಗುತ್ತದೆ.ತಿದ್ದುವುದು ಮುಖ್ಯ
ಹೊರತು ನೋಯುವುದು ಮುಖ್ಯವಲ್ಲ.
ತಪ್ಪು ಮಾಡದ ಮನುಷ್ಯ ಲೋಕದಲ್ಲಿಲ್ಲ. ಜಗತ್ತಿನಲ್ಲಿ ಸಂಪೂರ್ಣ
ತಪ್ಪು ಎನ್ನುವುದು ಇಲ್ಲವೇ ಇಲ್ಲ. ನಿಂತು ಹೋದ ಗಡಿಯಾರ ಕೂಡ
ದಿನದಲ್ಲಿ ಎರಡು ಸಲ ಸರಿಯಾಗಿರುತ್ತದೆ.
2)ಬಳಲಿದ ದೇಹಕ್ಕೆ ದಿವ್ಯೌಷಧಿ ನಿದ್ದೆ. ದಿನ ದಿನದ ನೋವು, ಚಿಂತೆ
ಕಂತೆ ಗಳನ್ನು ಕರಗಿಸಿ ಹೃದಯವನ್ನು ಹಗುರ ಮಾಡುವ ಅಪೂರ್ವ
ದ್ರಾವಕ ನಿದ್ರೆ .ಅನೇಕ ದಿನ ಉಪವಾಸ ಇದ್ದರೂ ಮನುಷ್ಯ ತನ್ನ
ಬುದ್ಧಿಯನ್ನು ಮತ್ತು ಭಾವಾವೇಶಗಳನ್ನು ಹತೋಟಿಯಲ್ಲಿಟ್ಟು
ಕೊಂಡಿರಬಲ್ಲ. ಆದರೆ ಮೂರು ದಿನ ನಿದ್ದೆ ಗೆಟ್ಟರೆ ಹುಚ್ಚು
ಹಿಡಿದಂತಾಗುತ್ತದೆ.ಆಳ , ಶಾಂತ ನಿದ್ದೆ ದೇಹಕ್ಕೆ ಪುನರುಜ್ಜೀವನ
ಶಕ್ತಿಯನ್ನು ನೀಡುತ್ತದೆ. ಆಳ ನಿದ್ದೆಯ ಅವಧಿಯಲ್ಲಿ ಬೆಳವಣಿಗೆಯ
ಹಾರ್ಮೋನು ಎನಿಸಿಕೊಳ್ಳುವ ರಾಸಾಯನಿಕವೊಂದು ದೇಹದಲ್ಲಿ
ಉತ್ಪನ್ನವಾಗುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s