ಕನ್ನಡ ಸೌರಭ.

೧. ಯಾವುದೇ ವಿಷಯದ ಮಂಥನಕ್ಕೆ ಹೊರಟಾಗ ಮೊದಲು
ಉಕ್ಕುವುದು ಪ್ರಶ್ನೆಗಳ ಹಾಲಾಹಲ. ನಂತರ ಹೊಮ್ಮುವುದು
ಉತ್ತರದ ಅಮೃತ.
೨. ಕಡಲಿಗೇಕೆ ಸುರಿಯುವೆ ಮಳೆಯೇ …
ನೀನು ಕೂಡ ಉಳ್ಳವರ ಪರವೇ .
೩. ನಾವು ನೆರಳಿಲ್ಲದ ಮನುಷ್ಯರಾಗ ಬಾರದು.
ಆದರೆ ನಮ್ಮ ನೆರಳೇ ನಮ್ಮನ್ನು ನುಂಗ ಬಾರದು.
೪. ಬಡವರ ಮಕ್ಕಳು ಮೂಟೆ ಹೊರುತ್ತಾರೆ–ಕೂಲಿಗೆ.
ಶ್ರೀಮಂತರ ಮಕ್ಕಳೂ ಮೂಟೆ ಹೊರುತ್ತಾರೆ –ಸ್ಕೂಲಿಗೆ.
೫. ಒಂದು ಒಂದು ಸೇರಿದರೆ ಎರಡು -ಗಣಿತದ ಲೆಕ್ಕ ;
ಒಂದು ಒಂದು ಸೇರಿದರೆ ಮೂರು –ಬಾಳಿನ ಲೆಕ್ಕ.
೬. ನೀರಿನ ಅಲೆಗಳನ್ನುತಡೆಯಲು ನಮ್ಮಿಂದ ಸಾಧ್ಯವಿಲ್ಲ .
ಆದರೆ ಆ ಅಲೆಗಳ ಮೇಲೆ ತೇಲುವುದು ಸಾಧ್ಯ.
ಪರಿಸ್ಥಿತಿಗೆ ಹೊಂದಿಕೊಳ್ಳುವುದನ್ನು ಕಲಿಯ ಬೇಕು.
೭. ಸೂರು ಭದ್ರ ವಾಗಿರುವ ವರೆಗೂ ಬಾಗಿಲಿಗೆ ಅರ್ಥವಿರುತ್ತದೆ.
ಸೂರು ಕುಸಿದ ಮೇಲೆ ಬಾಗಿಲಿಗೇನು ಅರ್ಥ?
ಮೂಲ :ಸಂಗ್ರಹ .

Advertisements

ಚಿಂತನ.

೧. ಅವಜ್ಞೆಯಿಂದ ಉಪೇಕ್ಷಿತವಾದ ಪ್ರೇಮ ಮತ್ತೆ ಕೂಡುವುದು
ಕಷ್ಟ. ಒಡೆದ ಮಣಿಯನ್ನು ಅರಗಿನಿಂದ ಕೂಡಿಸಲು ಸಾಧ್ಯವೇ ?
೨. ಮೃದು ಸ್ವಭಾವದವನು ಯಾವಾಗಲೂ ಅಪಮಾನಕ್ಕೆ ಒಳ
ಗಾಗುತ್ತಾನೆ. ಕಠಿಣ ಸ್ವಭಾವದವನಾಗಿದ್ದರೆ ಹಗೆತನಕ್ಕೆ ಗುರಿ
ಯಾಗುತ್ತಾನೆ. ಆದುದರಿಂದ ಇವೆರಡನ್ನೂ ಬಿಟ್ಟು ಮಧ್ಯಮ
ರೀತಿಯಲ್ಲಿ ವರ್ತಿಸುವುದು ಉತ್ತಮ.
೩. ತಾವರೆಗಳಿಗೆ ಸೂರ್ಯನಲ್ಲಿ ಪ್ರೀತಿ. ಚಂದ್ರನ ಕಿರಣಗಳು
ಎಷ್ಟು ತಂಪಾಗಿದ್ದರೂ ಅರಳುವುದಿಲ್ಲ.
೪. ದೇಹವನ್ನು ನಂಬ ಬಾರದು. ದೇವರನ್ನು ಮರೆಯ ಬಾರದು.
೫. ಬಂಧು ಮಿತ್ರರು ಮಸಣದ ವರೆಗೆ ಮಾತ್ರ ಜೊತೆಗೆ ಬರುತ್ತಾರೆ.
ಸದಾ ನಮ್ಮ ಜೊತೆ ಇರುವವನು ಭಗವಂತ ಒಬ್ಬ ಮಾತ್ರ.
೬. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ;
ಹಲವುತನದ ಮೈ ಮರೆಸುವಾಟವಿದು, ನಿಜವು ತೋರದಲ್ಲ.
೭. ಮಾತು ಮೈಲಿಗೆಯಾಗದೆ ಮಲ್ಲಿಗೆಯಾಗಲಿ.
ಮಾತು ನಮ್ಮ ಆದರ್ಶ, ಸಂಸ್ಕೃತಿಯನ್ನು ಸಾರುತ್ತದೆ.
ಮಾತು ಮನವನ್ನು ಅರಳಿಸ ಬೇಕೇ ವಿನಾ ಕೆರಳಿಸ ಬಾರದು.
೮.ಉತ್ಸಾಹವೆಂಬುದು ಕಲ್ಲಿದ್ದಲು ಒಳಗೆ ಕುದಿಯುತ್ತಿರುವ ಕಾವಾಗ
ಬೇಕೇ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗ ಬಾರದು.
೯. ಹಗಲು-ರಾತ್ರಿಗಳು ಜೀವಿಯ ಆಯು:ಪ್ರಮಾಣವನ್ನು ಎಡೆ ಬಿಡದೆ
ತಿನ್ನುತ್ತಿವೆ. ಬಾಳಿನ ಸಮಯವನ್ನು ಹಗುರವಾಗಿ ಕಳೆಯದೆ ಸಾರ್ಥಕ
ಪಡಿಸಿ ಕೊಳ್ಳಬೇಕು.
೧೦. ಮಾತು ಕಠಿಣವಾದ ಬಾಣದಂತಿರದೆ ಕೋಮಲವಾದ
ಹೂವಿನಂತಿರಬೇಕು.
ಮೂಲ :ಸಂಗ್ರಹ

ಚಿಂತನ.

೧. ತಪ್ಪು ಹಾದಿಯಲ್ಲಿ ಎಷ್ಟೇ ವೇಗವಾಗಿ ಧಾವಿಸಿದರೂ
ಅದು ನಿಷ್ಪ್ರಯೋಜಕ. ಹಾಗಾಗಿ ಆಯ್ದು ಕೊಂಡ ದಾರಿ
ಸರಿಯಾದದ್ದೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
೨. ಸಿಗದವರನ್ನು ಹುಡುಕ ಬೇಡ. ಬಾರದವರನ್ನು
ಕಾಯಬೇಡ. ಕೊಡದವರನ್ನು ಕೇಳ ಬೇಡ.ಕೊಟ್ಟವರನ್ನು
ಮರೆಯ ಬೇಡ.
೩. ಒಂದು ಜೇಡ ದಿನಕ್ಕೆ ೮೦ ಕೀಟ ಅಥವಾ ಸೊಳ್ಳೆಗಳನ್ನು
ಪುಕ್ಕಟೆಯಾಗಿ ತಿಂದು ಸೊಳ್ಳೆ ನಾಶಕದ ಖರ್ಚನ್ನು ಉಳಿಸುತ್ತದೆ.
ಆದರೆ ನಾವು ಜೇಡರ ಬಲೆಗಳನ್ನು ಕಂಡಲ್ಲಿ ಅದನ್ನು ಗುಡಿಸಿ
ಶುಚಿ ಮಾಡುತ್ತೇವೆ.
೪. ಹೊನ್ನಿಗೆ ಆಸೆ ಪಡುವವರು ಸಂತರಲ್ಲ.
ಚಿಂತೆಯೇ ಇಲ್ಲದವರು ಮನುಷ್ಯರೇ ಅಲ್ಲ.
೫. ಮೌನವಾಗಿದ್ದಷ್ಟೂ ಹೆಚ್ಚು ಆಲಿಸಲು ಸಾಧ್ಯ.
೬.ಹೃದಯವಂತಿಕೆ ಇಲ್ಲದಿರುವಾಗ ಬುದ್ಧಿವಂತಿಕೆ ಎಷ್ಟಿದ್ದರೂ
ಪ್ರಯೋಜನವಾಗದು.
೭.ಭಾರತೀಯ ಸಂಸ್ಕೃತಿ ರಕ್ಷಣೆಗೆ ಮೂಢ ನಂಬಿಕೆಯ ಬದಲು
ಮೂಲ ನಂಬಿಕೆಯ ಅಗತ್ಯವಿದೆ.
೮. ಒಬ್ಬ ಯಶಸ್ವೀ ವ್ಯಕ್ತಿಯಾಗಲು ಪ್ರಯತ್ನಿಸುವುದಕ್ಕಿಂತ
ಚಾರಿತ್ರ್ಯವಂತನಾಗಲು ಮೊದಲು ಪ್ರಯತ್ನಿಸು .
೯. ನಿಮ್ಮ ತೀರಾ ಆತ್ಮೀಯರ ಕುರಿತ ನಿಮ್ಮ ಕಾಳಜಿಯನ್ನು
ಅವರು ಕಿರುಕುಳವೆಂದು ಭಾವಿಸಿದರೆ, ಅದಕ್ಕಿಂತ ತೀವ್ರವಾದ
ಯಾತನೆ ಬೇರೇನಿದೆ ?
೧೦. ಕಾವ್ಯ ಬರೆಯಲಾಗದಿದ್ದರೇ ನಂತೆ ? ನಾವೇ ಕಾವ್ಯ ವಾಗ
ಬಹುದಲ್ಲ ?
ಮೂಲ :ಸಂಗ್ರಹ.

ಶಿವನೆಲ್ಲಿ?

ಭೋಜರಾಜನ ರಾಜ್ಯದಲ್ಲಿ ಉದ್ದಾಮ ಪಂಡಿತನೊಬ್ಬನಿದ್ದ.
ಬಡತನದ ಬೇಗೆಯನ್ನು ತಾಳಲಾರದೆ ಒಂದು ದಿನ ರಾಜ
ದರ್ಶನಕ್ಕಾಗಿ ಬಂದ. ಭೋಜರಾಜನು ಶಿವಾಲಯವೊಂದರಲ್ಲಿ
ಪೂಜೆ ಸಲ್ಲಿಸುತ್ತಿದ್ದ. ಶಿವನಿಗೆ ಮಂಗಳಾರತಿ ಆದಮೇಲೆ ಬ್ರಾಹ್ಮಣನು
”ಭಗವಾನ್ ಶಿವನು ಅಲ್ಲಿಲ್ಲ” ಎಂದು ಗಟ್ಟಿಯಾಗಿ ಕೂಗಿದ ರಾಜನಿಗೆ
ಕೇಳುವಂತೆ. ಆಶ್ಚರ್ಯಗೊಂಡ ರಾಜ ಕೂಗಿದುದು ಯಾರೆಂದು ಕೇಳಲು
ಬ್ರಾಹ್ಮಣನು ಮುಂದೆ ಬಂದ. ”ಪೂಜ್ಯರೆ,ತಾವು ಹಾಗನ್ನಲು ಕಾರಣವೇನು?”
ಎಂದು ಅರಸನು ಬೆಸಗೊಳ್ಳಲು ಬ್ರಾಹ್ಮಣನಿಂತೆಂದ:”ಪ್ರಭೂ ಬಹು ಹಿಂದೆ
ಶಿವನು ತನ್ನರ್ಧ ಭಾಗವನ್ನು ವಿಷ್ಣುವಿಗೂ (ಶಂಕರ ನಾರಾಯಣ ) ಉಳಿದರ್ಧ
ಭಾಗವನ್ನುಪಾರ್ವತಿಗೂ (ಅರ್ಧ ನಾರೀಶ್ವರ )ಕೊಟ್ಟದ್ದರಿಂದ ಅವನು ಅಲ್ಲಿರಲು
ಹೇಗೆ ಸಾಧ್ಯ ?”ರಾಜನೆಂದ ”ಅವನ ಜಟೆಯಲ್ಲಿದ್ದ ಗಂಗೆ ಏನಾದಳು ?”
ಬ್ರಾಹ್ಮಣನೆಂದ ”ರಾಜನ್, ಗಂಗೆ ಸಮುದ್ರ ಸೇರಿದಳು .”
ಪ್ರಭು :”ಶಿರದಲ್ಲಿದ್ದ ಚಂದ್ರನೆತ್ತ ಸಾಗಿದ ?”
ಬ್ರಾಹ್ಮಣ :”ಆಕಾಶಕ್ಕೆ ಜಿಗಿದ. ”
ಪ್ರಭು :”ಶಿವನ ಶಕ್ತಿ ಎಲ್ಲಿ ಹೋಯಿತು ?”
ಬ್ರಾಹ್ಮಣ :”ಶಿವನು ಶಕ್ತಿಯೆಲ್ಲವನ್ನೂತಮಗೇ ಧಾರೆಯೆರೆದಿರುವನು”
ಪ್ರಭು:”ಶಿವನ ಭಿಕ್ಷಾ ಪಾತ್ರೆ ಏನಾಯಿತು ?”
ಬ್ರಾಹ್ಮಣ:”ಅದನ್ನು ನನಗಿತ್ತ” ಎಂದು ಬ್ರಾಹ್ಮಣನೆನ್ನಲು ಆತನ
ಬುದ್ಧಿವಂತಿಕೆಗೆ ಮೆಚ್ಚಿದ ರಾಜನು ಹೇರಳ ಧನ ,ಕನಕವಿತ್ತು ಸನ್ಮಾನಿಸಿದ.
ಮೂಲ :ಸಂಗ್ರಹ.

God Answers.

I asked God to spare the pain.

God said, no.Suffering draws you apart from

worldly cares and brings you closer to me.

I asked God for all things that I might enjoy

life.

God said, no. I will give you life so that you

may enjoy all things.

I asked God to take away my pain.

God said, no.It is not for me to take away

but for you to give it up.

I asked God to grant me patience.

God said, no.Patience isn’t granted; it is

earned.

I asked God to give me happiness.

God said, no. I give you blessings;

happiness is up to you.

I asked God to help me Love Others

as much as He loves me.

God said,Ah,at last, you have the idea.

Source:Internet.

ಕನ್ನಡದ ಮೊದಲುಗಳು.

೧. ಕನ್ನಡದ ಮೊದಲ ಕೃತಿ -ಕವಿರಾಜ ಮಾರ್ಗ(ಕ್ರಿ. ಶ. ೮೫೦).
೨. ತ್ರಿಪದಿ ಛಂದಸ್ಸಿನಲ್ಲಿರುವ ಬಾದಾಮಿಯ ಕಪ್ಪೆ ಅರಭಟ್ಟನ
ಶಾಸನ (ಕ್ರಿ.ಶ.೭೦೦).
೩. ಕನ್ನಡದ ಮೊದಲ ಕವಯಿತ್ರಿ –ಅಕ್ಕ ಮಹಾದೇವಿ.
೪. ಕನ್ನಡದ ಮೊದಲ ಮಹಮ್ಮದೀಯ ಕವಿ–ಶಿಶುನಾಳ ಶರೀಫರು.(೧೮೧೯)
೫. ಕನ್ನಡ ಅಕ್ಷರಗಳ ಅಚ್ಚಿನ ಮೊಳೆಗಳ ಮೊದಲ ವಿನ್ಯಾಸಕಾರ
ಕನ್ನಡಿಗ –ಅತ್ತಾವರ ಅನಂತಾಚಾರಿ. (೧೮೯೦)
೬. ಬೈಬಲ್ ಅನ್ನು ಕನ್ನಡಕ್ಕೆ ಮೊದಲು ತಂದವರು –ಜಾನ್ ಹ್ಯಾಂಡ್ಸ್.
೭. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ —
ಫರ್ಡಿನಾಂಡ್ ಕಿಟ್ಟೆಲ್. (೧೮೯೬ರಲ್ಲಿ )
೮. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ -ಇಂದಿರಾ ಬಾಯಿ.
೯. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಮೊದಲ
ಕನ್ನಡ ಕೃತಿ-ಕುವೆಂಪು ಅವರ ”ಶ್ರೀ ರಾಮಾಯಣ ದರ್ಶನಂ ”(೧೯೫೫)
೧೦. ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕವಿ -ಕುವೆಂಪು (”ಶ್ರೀ
ರಾಮಾಯಣ ದರ್ಶನಂ” ಮಹಾ ಕಾವ್ಯಕ್ಕೆ )
೧೧. ಪುಸ್ತಕ ಪ್ರಕಾಶನಕ್ಕೆ ”ಪದ್ಮ ಶ್ರೀ” ಪ್ರಶಸ್ತಿಪಡೆದ ಮೊದಲ
ಕನ್ನಡಿಗ-ಜಿ. ಬಿ. ಜೋಷಿ.
೧೨. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಮಹಿಳೆ –
ಶ್ರೀಮತಿ ಜಯದೇವಿ ತಾಯಿ ಲಿಗಾಡೆ (೧೯೭೪-ಮಂಡ್ಯ ಸಮ್ಮೇಳನ )
೧೩. ಕರ್ನಾಟಕ ಸರಕಾರದ ಮೊದಲ ಪಂಪ ಪ್ರಶಸ್ತಿ ಪಡೆದವರು —
”ಕುವೆಂಪು”.
೧೪.ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ
ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -ಡಾ ।।ಹಾ. ಮಾ. ನಾಯಕ .
೧೫. ನಾಟಕ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ Philippines ನ
Megsaysay ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -ಕೆ. ವಿ. ಸುಬ್ಬಣ್ಣ.
೧೬. ವಿಶ್ವ ಆಹಾರ ಸಂಸ್ಥೆಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ,
ಪ್ರಗತಿಪರ ರೈತ -ದೇವಂಗಿ ಪ್ರಫುಲ್ಲ ಚಂದ್ರ.
೧೭. ಕೇಂದ್ರ ಸಾಹಿತ್ಯ ಅಕಾಡೆಮಿಯ ಚುನಾಯಿತ ಅಧ್ಯಕ್ಷರಾದ
ಮೊದಲ ಕನ್ನಡಿಗ -ಡಾ ।।ಯು. ಆರ್. ಅನಂತ ಮೂರ್ತಿ.
೧೮. ಕನ್ನಡದ ಭಾವಗೀತೆ ಗಳ ಮೊದಲ Cassette -”ನಿತ್ಯೋತ್ಸವ ”.
೧೯. ಕನ್ನಡದ ಮೊದಲ ಪ್ರಾಧ್ಯಾಪಕರು –ಟಿ. ಎಸ್. ವೆಂಕಣ್ಣಯ್ಯ.
೨೦. ಕನ್ನಡ ನಾಡಿನ ಮೊದಲ ರಾಜ ವಂಶ -ಕದಂಬರು.
೨೧.ಕನ್ನಡ ನಾಡಿನ ಮೊದಲ ಕಾಲೇಜು -ಮಂಗಳೂರಿನ
ಸರ್ಕಾರಿ ಕಾಲೇಜು.
೨೨. ಕನ್ನಡ ನಾಡಿನ ಮೊದಲ ಮೆಡಿಕಲ್ ಕಾಲೇಜು –
ಬೆಂಗಳೂರು ಮೆಡಿಕಲ್ ಕಾಲೇಜು.
೨೩. ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ -”ಕರುಣೆಯೇ
ಕುಟುಂಬದ ಕಣ್ಣು”.
೨೪. ಕನ್ನಡದ ಮೊದಲ ವರ್ಣ ರಂಜಿತ ಚಲನ ಚಿತ್ರ–”ಅಮರ
ಶಿಲ್ಪಿ ಜಕಣಾಚಾರಿ”.
೨೫.ಸ್ವರ್ಣ ಕಮಲ ಗಳಿಸಿದ ಮೊದಲ ಕನ್ನಡ ಚಿತ್ರ -”ಸಂಸ್ಕಾರ”.
೨೬. ಕನ್ನಡದ ಮೊದಲ ಸಂಗೀತ ನಿರ್ದೇಶಕಿ -ಅನಸೂಯಾ ದೇವಿ.
೨೭. ಕನ್ನಡದ ಮೊದಲ ಚಿತ್ರ ನಿರ್ಮಾಪಕಿ -ಎಂ. ವಿ. ರಾಜಮ್ಮ.
೨೮. ಕನ್ನಡ ನಾಡಿನ ಮೊದಲ ಚಿತ್ರ ಮಂದಿರ -ಪ್ಯಾರಾಮೌಂಟ್.
೨೯. ಕನ್ನಡ ನಾಡಿನ ಮೊದಲ ಛಾಯಾ ಗ್ರಾಹಕಿ–ವಿಜಯ ಲಕ್ಷ್ಮಿ.
೩೦. ಕನ್ನಡದ ಮೊದಲ ನಿರ್ದೇಶಕಿ -ಲಕ್ಷ್ಮಿ (ಮಕ್ಕಳ ಸೈನ್ಯ )
೩೧. ಪ್ರಶಸ್ತಿ ವಿಜೇತ ಮೊದಲ ಕನ್ನಡ ಚಿತ್ರ ನಿರ್ದೇಶಕಿ- ಪ್ರೇಮಾ
ಕಾರಂತ.
೩೨. ಕನ್ನಡ ನಾಡಿನ ಮೊದಲ ಟೆಸ್ಟ್ ಆಟಗಾರ -ಪಿ. ಇ. ಪಾಲಿಯಾ.
೩೩. ಅರ್ಜುನ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಕ್ರಿಕೆಟ್ ಆಟಗಾರ –
ಇ.ಎ. ಎಸ್. ಪ್ರಸನ್ನ.
೩೪.ಭಾರತೀಯ ಮಹಿಳಾ ಕ್ರಿಕೆಟ್ ನ ಪ್ರಥಮ ನಾಯಕಿ (ಕರ್ನಾಟಕದವರು )
ಶಾಂತಾ ರಂಗ ಸ್ವಾಮಿ.
೩೫. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ- ”ಚೋರ ಗ್ರಹಣ ತಂತ್ರ”
೩೬.”ಕರ್ನಾಟಕ ರತ್ನ” ಪ್ರಶಸ್ತಿ ಪಡೆದ ಮೊದಲ ಕನ್ನಡ ಕವಿ -ಕುವೆಂಪು.
೩೮. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ –
ಡಾ।।ರಾಜ್ ಕುಮಾರ್.
೩೯. ಪ್ರಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಜರುಗಿದ್ದು ಬೆಂಗಳೂರಿನಲ್ಲಿ .(೧೯೧೫)
೪೦. ಕರ್ನಾಟಕ ಸರ್ಕಾರದ ಅತ್ತಿಮಬ್ಬೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ –
ಟಿ . ಸುನಂದಮ್ಮ.
೪೧. ಕನ್ನಡದ ಮೊದಲ ನವ್ಯ ನಾಟಕ -ಯಯಾತಿ (ಗಿರೀಶ್ ಕಾರ್ನಾಡ್ )
ಮೂಲ:ಸಂಗ್ರಹ.

ಕನ್ನಡದ ಮೊದಲುಗಳು.

೧. ಕನ್ನಡದ ಪ್ರಾಚೀನತೆ -೧ನೇ ಶತಮಾನದ ಗ್ರೀಕ್ ಪ್ರಹಸನ ಗಳಲ್ಲಿ
ಕನ್ನಡ ನುಡಿಯ ಬಳಕೆ -”ದೀನ ಮತ್ತು ದಮ್ಮಾರ ”ಪದಗಳು .
(ಸಂಶೋಧನೆ -ಮಂಜೇಶ್ವರ ಗೋವಿಂದ ಪೈ )
೨.ಕನ್ನಡದ ಮೊದಲ ಮಹಾಕಾವ್ಯ -ಆದಿ ಪುರಾಣ.
೨. ಆದಿ ಕವಿ- ಪಂಪ.
೩. ಕರ್ನಾಟಕದ ಮೊದಲ ವಿಶ್ವ ವಿದ್ಯಾಲಯ -ಮೈಸೂರು.
೪. ಅಚ್ಚ ಕನ್ನಡದ ಮೊದಲ ದೊರೆ -ಕದಂಬ ವಂಶದ ಮಯೂರ ವರ್ಮ.
(ಕ್ರಿ. ಶ. ೩೨೫)
೫. ಕನ್ನಡದ ಮೊದಲ ನಾಟಕ -”ಮಿತ್ರವಿಂದ ಗೋವಿಂದ”.
೬. ಕನ್ನಡದ ಮೊದಲ ಶಾಸನ-ಹಲ್ಮಿಡಿಯ ಶಾಸನ.(ಕ್ರಿ .ಶ.೪೫೦)
೭. ಕನ್ನಡದ ಮೊದಲ ಬೆರಳಚ್ಚು ಲಿಪಿ ಯಂತ್ರವನ್ನು ಸಿದ್ಧ ಪಡಿಸಿದ
ಕನ್ನಡಿಗ-ಅನಂತ ಸುಬ್ಬ ರಾವ್.
೮. ಮೊದಲ ಗದ್ಯ ಕೃತಿ -ಶಿವ ಕೋಟ್ಯಾಚಾರ್ಯರ ”ವಡ್ಡಾರಾಧನೆ ‘.’
೯. ಕನ್ನಡ ನಿಘಂಟು ರಚಿಸಿದ ಮೊದಲ ಜರ್ಮನ್ ವ್ಯಕ್ತಿ -ಫರ್ಡಿನಾಂಡ್ ಕಿಟ್ಟೆಲ್.
೧೦.ಅಚ್ಚಾದ ಮೊದಲ ಕನ್ನಡ ಕೃತಿ-The Grammer of Karnataka
Language.
ಮೂಲ :ಸಂಗ್ರಹ.

.