ಚಿಂತನ.

೧. ಬರೆಯುವವನಿಗೆ ಅದನ್ನು ಅಳಿಸಲು ರಬ್ಬರ್ ಬೇಕಾಗುತ್ತದೆ.
ಅಂಥದೊಂದು eraser ನ ಅಗತ್ಯ ನಮಗೆ ಜೀವನದಲ್ಲಿ ಪದೇ
ಪದೇ ಬೇಕಾಗದಂತೆ ನಾವು ಬಾಳಬೇಕು.
೨.ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಯಾರಿಗೂ ತಲೆ
ಬಾಗ ಬೇಕಾದ ಅಗತ್ಯವಿಲ್ಲ . ಕೆಲಸವನ್ನು ಕಡೆಗಣಿಸಿದರೆ
ಯಾರನ್ನಾದರೂ ಓಲೈಸ ಬೇಕಾಗುತ್ತದೆ. ಹಂಗಿನ ಬದುಕು ಬೇಡ.
೩. ಸಮಸ್ಯೆಗಳು ಜೀವನವನ್ನು ಸುಂದರ ಗೊಳಿಸಲೂ ಬಹುದು
ಅಥವಾ ಹಾಳು ಮಾಡಲೂ ಬಹುದು. ಸುತ್ತಿಗೆಯು ಗಾಜನ್ನು
ಒಡೆಯಲೂ ಬಹುದು. ಹಾಗೆಯೇ ಕಬ್ಬಿಣವನ್ನು ಮಟ್ಟಸ ಗೊಳಿಸಲೂ
ಬಲ್ಲದು. ಸಮಸ್ಯೆ ಗಳನ್ನು ನಮ್ಮ ಲಾಭಕ್ಕೆ ಬಳಸಿ ಕೊಳ್ಳೋಣ.
೪. ಕಣ್ಣೊಳಗಿನ ಕಣ್ಣಾಲಿ ಚಿಕ್ಕದೆಂದು ಭಾವಿಸಬಾರದು.
ಅದು ಜಗತ್ತನ್ನು ನೋಡುವ ಅದ್ಭುತ ಶಕ್ತಿಯನ್ನು ಪಡೆದು
ಕೊಂಡಿದೆ .
೫. ಇತಿಹಾಸದಲ್ಲಿ ದುಂಡು ಮೇಜಿನ ಪರಿಷತ್ ಗೆ ಇತ್ತು ಮಹತ್ತ್ವ.
ಇಂದು ”ಗುಂಡು ಮೋಜಿನ ಪರಿಷತ್”ಗೆ ಇದೆ ಪ್ರಾಶಸ್ತ್ಯ.
೬. ರೆಕ್ಕೆ ಗಳಿದ್ದರೂ ಹಕ್ಕಿಗಳು ಹಾರದೇ ಒಂದೆಡೆ ಕುಳಿತರೇನು
ಪ್ರಯೋಜನ ? ಹಾಗೆಯೇ ನಮಗಿರುವ ಅವಕಾಶ ಸದುಪಯೋಗ
ಪಡಿಸಿಕೊಳ್ಳದಿದ್ದರೆ ಜೀವನ ಸಾರ್ಥಕವಾಗದು.
೭. ಒಂದಾಗುವುದು ಆರಂಭ. ಒಟ್ಟಿಗೆ ಇರುವುದು ಪ್ರಗತಿ.
ಒಟ್ಟಿಗೆ ಕೆಲಸ ಮಾಡುವುದು ಯಶಸ್ಸಿನ ಸಂಕೇತ.
೮. ಜಡತ್ವ ಹೊಡೆದೋಡಿಸಲು ಸಂಕಲ್ಪಗಳು ಬೇಕು.
೯. ಒಂದು ಹಣ್ಣನ್ನು ಹಾಗೆಯೇ ತಿಂದರೆ ಪ್ರಕೃತಿ. ಅದನ್ನು ಹಾಲು,
ಸಕ್ಕರೆ ಹಾಕಿ ಪಾನೀಯವಾಗಿ ಪರಿವರ್ತಿಸಿ ತಿಂದರೆ ಸಂಸ್ಕೃತಿ.
ಅದೇ ಹಣ್ಣನ್ನು ಕೊಳೆಯುವಂತೆ ಮಾಡಿ ಮದ್ಯ ತಯಾರಿಸಿದರೆ
ವಿಕೃತಿ. ಒಟ್ಟಿನಲ್ಲಿ ಸಂಸ್ಕೃತಿ ಎಂಬುದು ಪ್ರಕೃತಿಗೆ ಪೂರಕವಾದುದು.
೧೦. ತಾನು ಬೆಳಗಿ ಇತರರನ್ನು ಬೆಳಗುವುದು ಸಂಸ್ಕೃತಿ.
ಸಂಸ್ಕೃತಿಯ ಜೀವಾಳ ಸಂಸ್ಕಾರ .
ಮೂಲ:ಸಂಗ್ರಹ.

.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s