ಕನ್ನಡ ಸೌರಭ.

೧. ಪ್ರತಿಷ್ಠೆ ಎಂಬುದು ಕಣ್ಣೊಳಗಿನ ಕಸವಿದ್ದಂತೆ. ಎದುರಿಗಿರುವುದು
ಸರಿಯಾಗಿ ಕಾಣಿಸ ಬೇಕೆಂದರೆ ಕಸವನ್ನು ತೆಗೆಯಲೇ ಬೇಕು.
೨. ಒಂದು ಮರದಲ್ಲಿ ಯಾವುದೋ ಒಂದು ಎಲೆ ಅಲುಗಿದರೆ
ಗಾಳಿಯಾಡದು. ಎಲ್ಲ ಎಲೆಗಳು ಬೀಸಿದರೆ ಮಾತ್ರ ಮಾರುತಕ್ಕೆ
ಚಲನೆ ಸಾಧ್ಯವಾಗುತ್ತದೆ.
೩. ವರ್ಷದಿಂದ ವರ್ಷಕ್ಕೆ ನಾವು ಹಳಬರಾಗುತ್ತ ಹೋಗುತ್ತೇವೆ .
ಆದರೆ ದಿನದಿಂದ ದಿನಕ್ಕೆ ಹೊಸಬರಾಗುತ್ತ ಹೋಗುತ್ತೇವೆ.
೪. ಮೌಲ್ಯಯುತ ಶಿಕ್ಷಣ ಸಿಗದಿರುವುದೇ ಸಮಾಜದಲ್ಲಿ
ಆಗುತ್ತಿರುವ ಅನಾಹುತಗಳಿಗೆ ಮುಖ್ಯ ಕಾರಣ .
೫. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಅವಕಾಶ ಎಲ್ಲರಿಗೂ
ಸಿಗಲ್ಲ. ಆದರೆ ದೇಶಕ್ಕಾಗಿ ಬದುಕುವ ಅವಕಾಶವಂತೂ
ಎಲ್ಲರಿಗೂ ಸಿಕ್ಕೇ ಸಿಗುತ್ತದೆ.ಅದನ್ನು ಪ್ರಯತ್ನಿಸೋಣ.
೬. ತಾಯಿ ಕೇವಲ ಮುತ್ತನ್ನು ನೀಡುವುದಿಲ್ಲ;ಅದರ ಜೊತೆಗೆ
ಸಂಸ್ಕೃತಿಯ ತುತ್ತನ್ನು ಕೂಡ ಉಣಿಸುತ್ತಾಳೆ.
೭. ದೈತ್ಯರು ಎಡವಿದರೆ ಏಳುವುದೇ ಕಷ್ಟ. ಆದರೆ ಚೋಟುದ್ದದ
ಮಂದಿಗೆ ಅದೇನೂ ದೊಡ್ಡ ಕೆಲಸವಲ್ಲ.
೮. ಕನ್ನಡದ ಒಂದೊಂದು ನುಡಿಯೂ ಕಿಡಿಯಾಗ ಬೇಕು.
ಸಿಡಿಲಾಗ ಬೇಕು. ನಕ್ಷತ್ರವಾಗಬೇಕು. ಅಮೃತ ಬಿಂದುವಾಗ ಬೇಕು.
೯. ಹಕ್ಕಿ ಗಳಿಗೆ ದೇಶ, ದೇಶಗಳ ಆವರಣವಿಲ್ಲ ಗಡಿ ರೇಖೆ ಗಳೂ ಇಲ್ಲ.
ಮನುಷ್ಯರಿಗೆ ಅವೆಲ್ಲ ಇವೆ.ಹಾಗಾಗಿ ಅವರ ಮಧ್ಯೆ ಸಂಘರ್ಷವೂ ಇದೆ.
೧೦. ಜಗತ್ತಿನಲ್ಲಿ ಸಾವಿರಾರು ಭಾಷೆ ಗಳಿವೆ. ಆದರೆ ಜಗತ್ತಿನ ಎಲ್ಲ
ಜನರಿಗೆ ಅರ್ಥವಾಗುವ ಭಾಷೆ ಎಂದರೆ ಪ್ರೀತಿ.
ಮೂಲ :ಸಂಗ್ರಹ.

.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s