ಮೂಲ್ಕಿ ಸುಂದರರಾಮ ಶೆಟ್ಟಿ.

ವಿಜಯಾ ಬ್ಯಾಂಕಿನ ವಿಜಯ ಶಿಲ್ಪಿ ಮೂಲ್ಕಿ ಸುಂದರರಾಮ
ಶೆಟ್ಟಿಯವರು ವಿಜಯ ಬ್ಯಾಂಕ್ ನ್ನು ಮುನ್ನಡೆಸಿದ
ರೋಚಕ ಕಥೆಯು ವಿಜಯ ಬ್ಯಾಂಕ್ ನ ವಿಜಯದ ಕಥೆಯೂ
ಆಗಿದೆ.
`೧೯೩೧ನೇ ಇಸವಿಯ ಅಕ್ಟೋಬರ್ ತಿಂಗಳ ೨೩ನೇ ತಾರೀಕಿನ
ವಿಜಯ ದಶಮಿಯಂದು ರೂ. ೮,೭೩೦/-ರ ಬಂಡವಾಳದೊಂದಿಗೆ
ವಿಜಯಾ ಬ್ಯಾಂಕ್ ಪ್ರಾರಂಭವಾಯಿತು. ಆರಂಭಿಕ ಅಧ್ಯಕ್ಷರಾಗಿದ್ದ
ಶ್ರೀ ಎ. ಬಿ. ಶೆಟ್ಟರು ವಿಜಯಾ ಬ್ಯಾಂಕ್ ನ ಪ್ರಥಮ ಶಾಖೆಯನ್ನು
ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪ್ರಾರಂಭಿಸಿದರು. ಮುಂದೆ
ಅವರು ಆಗಿನ ಮದ್ರಾಸು ಮತ್ತು ಮೈಸೂರು ರಾಜ್ಯ
ಗಳೆರಡರಲ್ಲೂ ಮಂತ್ರಿಯಾಗಿ ಹೊಣೆ ನಿರ್ವಹಿಸ ಬೇಕಾದುದರಿಂದ
ಅಧ್ಯಕ್ಷ ಪದವಿಗೆ ರಾಜೀನಾಮೆ ಸಲ್ಲಿಸಿದರು .
೧೯೬೨ರಲ್ಲಿ ಸುಂದರರಾಮ ಶೆಟ್ಟಿ ಯವರು ಗೌರವ ಅಧ್ಯಕ್ಷ ರಾಗಿ
ಅಧಿಕಾರ ಸ್ವೀಕರಿಸಿದರು. ೧೯೬೩ ರಿಂದ ೧೯೬೭ ರ ಮಧ್ಯೆ
ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂಲದ ೪೨ಶಾಖೆ
ಗಳೊಂದಿಗೆ ೪೪.೩೫ ಕೋಟಿ ವ್ಯವಹಾರ ಹೊಂದಿದ್ದ ೯ ಬ್ಯಾಂಕ್
ಗಳು ವಿಜಯಾ ಬ್ಯಾಂಕಿನೊಂದಿಗೆ ವಿಲೀನ ಗೊಂಡವು. ಹಲವಾರು
ದೊಡ್ಡ ಬ್ಯಾಂಕ್ ಗಳ ಸ್ಪರ್ಧೆಯ ಮಧ್ಯೆಯೂ ವಿಜಯಾ ಬ್ಯಾಂಕಿ
ನೊಂದಿಗೆ ವಿಲೀನ ಗೊಳ್ಳಲು ಸುಂದರರಾಮ ಶೆಟ್ಟರ ಸತತ ಶ್ರಮ
ಹಾಗೂ ಸಫಲ ಪ್ರಯತ್ನ ಗಳೇ ಕಾರಣ ಎನ್ನುವುದು ಈಗ ಇತಿಹಾಸ.
೧೯೬೯ನೇ ಇಸವಿಯಲ್ಲಿ ಪೂರ್ಣ ಕಾಲಿಕ ಅಧ್ಯಕ್ಷರಾದ ಸುಂದರರಾಮ
ಶೆಟ್ಟರು ಬ್ಯಾಂಕ್ ನ ಆಡಳಿತ ಕಛೇರಿಯನ್ನು ಬೆಂಗಳೂರಿಗೆ
ವರ್ಗಾಯಿಸಿದರು. ಇದರಿಂದಾಗಿ ಬ್ಯಾಂಕ್ ನ ವ್ಯವಹಾರಗಳು
ದಿನೇ ದಿನೇ ವೃದ್ಧಿಯಾಗ ತೊಡಗಿದವು.
೧೯೬೨ರಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿದಾಗ ೧೭೬
ಸಿಬ್ಬಂದಿಯೊಂದಿಗೆ ೨೧ ಶಾಖೆ ಹೊಂದಿದ್ದ ವಿಜಾಯಾ ಬ್ಯಾಂಕು
೧೯೭೯ರಲ್ಲಿ ಅಧಿಕಾರಾವಧಿ ಪೂರ್ಣ ಗೊಂಡಾಗ ೯೦೮೦ ಸಿಬ್ಬಂದಿ
ಮತ್ತು ೫೭೧ ಶಾಖೆಗಳೊಂದಿಗೆ ಬೃಹದಾಕಾರವಾಗಿ ಬೆಳೆದುದು
ಸುಂದರರಾಮ ಶೆಟ್ಟರ ಕೃತು ಶಕ್ತಿಗೆ ಸಾಕ್ಷಿ.
ಬ್ರಿಟನ್ನಿನ ಆಗಿನ ಪ್ರಧಾನಿ ಹೆರಾಲ್ಡ್ ಮ್ಯಾಕ್ ಮಿಲನ್ ರೊಂದಿಗೆ
ಆತ್ಮೀಯತೆ ಹಾಗೂ ದೇಶದ ಪ್ರತಿಷ್ಟಿತ ನಾಯಕರೊಂದಿಗೆ
ನಿಕಟ ಸಂಪರ್ಕ. ಅದನ್ನು ಬ್ಯಾಂಕ್ ವ್ಯವಹಾರ ವೃದ್ಧಿಗೆ
ಉಪಯೋಗಿಸಿ ಕೊಂಡ ದೃಷ್ಟಾರ.
೧೯೧೫ ಏಪ್ರಿಲ್ ೩೦ ರಂದು ಜನಿಸಿದ ಸುಂದರರಾಮ ಶೆಟ್ಟರು
ನವಂಬರ ೧,೧೯೮೧ರಂದು ತಮ್ಮ ೬೬ನೇ ವಯಸ್ಸಿನಲ್ಲಿ ವಿಧಿವಶ
ರಾದರು.ತಂದೆ ಮುದ್ದಣ್ಣ ಶೆಟ್ಟಿ ಮತ್ತು ತಾಯಿ ಸೀತಮ್ಮ ಶೆಡ್ತಿ.
ಅವರಿಬ್ಬರ ಏಕಮೇವ ಕುಮಾರನೇ ಸುಂದರರಾಮ ಶೆಟ್ಟಿಯವರು.
ಹೆಸರೇ ಹೇಳುವಂತೆ, ಅವರ ಅಂತರಂಗ -ಬಹಿರಂಗ ಬಹು ಸುಂದರ.
೧೯೭೦ ರ ದಶಕದಲ್ಲಿ ಈ ನಾಡಿನ ಯುವಜನತೆ ಉದ್ಯೋಗಕ್ಕಾಗಿ
ಅಲೆಯುತ್ತಿರುವ ಸಂದರ್ಭದಲ್ಲಿ ೯,೦೦೦ ಜನರಿಗೆ ಉದ್ಯೋಗ ನೀಡಿದ
ಧವಳ ಕೀರ್ತಿಗೆ ಭಾಜನರಾದವರು ಶ್ರೀ ಸುಂದರರಾಮ ಶೆಟ್ಟರು.
ಈ ಮಹಾನ್ ಸಾಧಕನ ಸಾಧನೆ ಗಳನ್ನು ಲೋಕಮುಖಕ್ಕೆ
ಬಿಂಬಿಸುವುದಕ್ಕಾಗಿ, ಅವರ ಹುಟ್ಟೂರಾದ ಮೂಲ್ಕಿಯಲ್ಲಿ ಅವರ ಹೆಸರಿನ
ಸ್ಮಾರಕ ಭವನ ನಿರ್ಮಾಣವಾಗಬೇಕಾದ ಆವಶ್ಯಕತೆ ಇದೆ. ದಾನಿಗಳು
ಮತ್ತು ಸರಕಾರದ ಸಹಕಾರದಿಂದ ಈ ಯೋಜನೆ ಪೂರ್ಣಗೊಳ್ಳುವ
ತುಂಬು ಭರವಸೆ ಇದೆ.
ಮೂಲ:ಸಂಗ್ರಹ.

.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s