ಕನ್ನಡ ಸೌರಭ.

೧.ಜ಼ನಕಂಜಿ ನಡೆಯದೆ ಮನಕಂಜಿ ನಡೆ.
ಮನಕಂಜಿ ನಡೆಯದಿರೆ ಮನದೊಳಗಣ
ಮಹಾದೇವ ಮರೆಯಾಗುವನು.
೨.ದೇವರು ಬಹಿರಂಗದಲ್ಲಿ ಭೌತಿಕ ಬೆಳಕಾಗಿ
ಅಂತರಂಗದಲ್ಲಿ ಪ್ರಜ್ಞೆಯ ಬೆಳಕಾಗಿ ಬೆಳಗುತ್ತಿರುವನು.
೩. ಅಕ್ಕಿಗೆ ಸಂಸ್ಕಾರ ಕೊಟ್ಟಾಗ ಅನ್ನ ಆಗುತ್ತದೆ.
ಹತ್ತಿಗೆ ಸಂಸ್ಕಾರ ಕೊಟ್ಟಾಗ ಅರಿವೆ ಆಗುತ್ತದೆ.
ಸುವರ್ಣಕ್ಕೆ ಸಂಸ್ಕಾರ ಕೊಟ್ಟಾಗ ಆಭರಣ ಆಗುತ್ತದೆ.
ಸ್ವಯಂ ಸಂಸ್ಕಾರಗೊಂಡ ಭಾಷೆ ಸಂಸ್ಕೃತ.
೩. ಹೆಣ್ಣಿಗೆ ಹಟ ಇರ ಬಾರದು;ಗಂಡಿಗೆ ಚಟ ಇರ ಬಾರದು.
೪. ಉಪವಾಸ ಇರಬಹುದು; ಉಪದ್ರ ತಾಳಲಾಗದು.
೫.ನೆನಪುಗಳ ಭಾರವನ್ನು ಪ್ರೀತಿಯಲ್ಲಿ ಸೋತವರು
ಮಾತ್ರ ಅರಿಯ ಬಲ್ಲರು.
೬. ಸ್ಮಾರಕ ಮತ್ತು ಸ್ಥಾವರಗಳ ನಡುವೆ ಅಂತರವಿದೆ.
ಸ್ಮಾರಕ ಸ್ಮರಣೆಯ ಕೇಂದ್ರ. ಸ್ಥಾವರ ಆರಾಧನೆಯ ಕೇಂದ್ರ.
೭. ಮನುಷ್ಯನ ಅಂಗಾಂಗ ಗಳಿದ್ದಾಕ್ಷಣ ಅವನು ಮನುಷ್ಯನಾಗಲಾರ.
ಯಾರಲ್ಲಿ ಮನುಷ್ಯತ್ವ ಇದೆಯೋ ಅವನು ಮನುಷ್ಯ.
ಯಾರಲ್ಲಿ ಮಾನವೀಯತೆ ಇದೆಯೋ ಅವನು ಮಾನವ.
ಯಾರಲ್ಲಿ ವ್ಯಕ್ತಿತ್ವವಿದೆಯೋ ಅವನು ವ್ಯಕ್ತಿ.
ಈ ಪ್ರಪಂಚದಲ್ಲಿ ನಾವು ಜ್ಞಾನಿಯನ್ನೂ, ಅಜ್ಞಾನಿಯನ್ನೂ,
ವಿಜ್ಞಾನಿಯನ್ನೂ, ವಿದ್ವಾಂಸರನ್ನೂ, ವಿಧ್ವಂಸಕರನ್ನೂ
ನೋಡುತ್ತೇವೆ.
೮. ಹಣ ಎಂದರೆ ಉಪ್ಪು ತಿಂದಂತೆ.ಅದನ್ನು ತುಸುವೇ
ನಾಲಿಗೆಯ ಮೇಲಿರಿಸಿದರೆ ರುಚಿ. ಹೆಚ್ಚಾಗಿ ತಿಂದರೆ ದಾಹ.
೯.ಭಾರತದಲ್ಲಿ ವಿದ್ಯಾವಂತರು ತುಂಬ ಮಂದಿ ಇದ್ದಾರೆ.
ಆದರೆ ಪ್ರಜ್ಞಾವಂತರ ಕೊರತೆಯಿದೆ.
೧೦. ಇಲಿ ಹಿಡಿಯ ಬಲ್ಲ ಬೆಕ್ಕು ಕಪ್ಪಾಗಿದ್ದರೇನು,ಬಿಳಿದಾಗಿ
ದ್ದರೇನು?
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s