ಕನ್ನಡ ಸೌರಭ.

೧. ಮನುಷ್ಯರು ಹುಟ್ಟುವುದು ದ್ವೇ
ಷಕ್ಕಾಗಿ ಅಲ್ಲ ;ವಿನಾಶಕ್ಕಾಗಿ
ಅಲ್ಲ;ಬದುಕಿಗಾಗಿ, ಪ್ರೇಮಕ್ಕಾಗಿ. -ಡಾ. ರಾಧಾ ಕೃಷ್ಣನ್.
೨.ಜೀವನ ಪೂರ್ತಿ ದುಡಿಯುವುದೆಂದರೆ ಹೃದಯ ಮಾತ್ರ.
೩.ಗಡಿಯಾರದ ಮುಳ್ಳು ಹೇಗೆ ಹಿಮ್ಮುಖ ಚಲಿಸುವು ದಿಲ್ಲವೋ
ಹಾಗೆಯೇ ಹಿಂತಿರುಗಿಬಾರದು ಕಳೆದು ಹೋದ ಸುವರ್ಣದ ದಿನಗಳು.
೪. ಅದೃಷ್ಟವಲ್ಲ,ಆಯ್ಕೆಯೇ ನಮ್ಮ ಬದುಕನ್ನು ನಿರ್ಧರಿಸುವ
ಅಂಶ.-ಅರಿಸ್ಟಾಟಲ್
೫.ಹಸಿವು ರಹಿತ ಸಮಾಜ O.K;ಅಮಲು ಸಹಿತ ಸಮಾಜ ಏಕೆ ?
೬. ವ್ಯಾಯಾಮ ದಿಂದ ತನು ಗಟ್ಟಿ ; ಧ್ಯಾನದಿಂದ ಮನ ಹಗುರ.
೭. ಕಸ ತಿನ್ನುವುದಕ್ಕಿಂತ ತುಸು ತಿನ್ನ ಬೇಕು .
೮. ಬೆಕ್ಕಿಗೆ ಹಾಲಿನ ಉಸ್ತುವಾರಿ ಕೊಟ್ಟಂತೆ.
೯.ಗಡ್ಡಕ್ಕೆ ಬೆಂಕಿ ಹೊತ್ತಿ ಕೊಂಡಾಗ,ಬಾವಿ ತೋಡುವ ಕೆಲಸ
ಆರಂಭವಾದಂತೆ.
೧೦. ವದಂತಿ, ಕಿಂವದಂತಿ ಗಳಿಗೆ ಇಂದು ನಿಜವಾದ ಸುಗ್ಗಿ.
ಹರಕು ಬಾಯಿಗಳಿಗೆ ದೊರೆತ ಹುಗ್ಗಿ.
೧೨.ಬಿಸಿ ನೀರಲ್ಲುಂಟೆ ಬೆಂಕಿಯಲುಳ್ಳ ಗುಣ ?
೧೩. ನಕ್ಕು ಹಗುರಾಗ ಬಹುದು. ಆದರೆ ನಗಿಸುವುದು ಹಗುರ
ಕೆಲಸವಲ್ಲ.
೧೪. ಬತ್ತದಿರಲಿ ಆತ್ಮವಿಶ್ವಾಸ; ಗುರಿ ತಲುಪಲು ಉಂಟು ನೂರೆಂಟು
ಅವಕಾಶ.
೧೫. ಅಪೇಕ್ಷೆ ಇಟ್ಟು ಕೊಂಡು ಜಪ ಮಾಡಿದರೆ ಅದು ತಪ ವಾಗುವುದಿಲ್ಲ;
ಬದಲಾಗಿ ‘ಪತ ‘(=ಬೀಳು) ವಾಗುತ್ತದೆ.
೧೬. ಕಲೆ ಮತ್ತು ಕ್ರೀಡೆಗೆ ಭಾಷೆಯ ಹಂಗಿಲ್ಲ.
೧೭. ಬರೀ ಯೋಗ್ಯತೆ ಇದ್ದರಷ್ಟೇ ಸಾಲದು; ಯೋಗವೂ ಇರಬೇಕು.
೧೮.ಹುಟ್ಟಿದಾಗ ಉಸಿರಿರುತ್ತದೆ; ಹೆಸರಿರುವುದಿಲ್ಲ. ಮೃತ ಪಟ್ಟಾಗ
ಹೆಸರಿರುತ್ತದೆ; ಉಸಿರಿರುವುದಿಲ್ಲ.
೧೯. ಸದೃಢ ವ್ಯಕ್ತಿ ಗಳು ಇತರರನ್ನು ಕೆಳ ತಳ್ಳುವುದಿಲ್ಲ; ಮೇಲೆತ್ತುತ್ತಾರೆ.
೨೦.ಕಾಲ ಎಂಬುದು ಕಾಯುವವರಿಗೆ ನಿಧಾನವಾಗಿರುತ್ತದೆ;
ಭಯ ಪಡುವವರಿಗೆ ಅನಿರೀಕ್ಷಿತವಾಗಿರುತ್ತದೆ.
ದುಃಖಿತರಿಗೆ ದೀರ್ಘವಾಗಿರುತ್ತದೆ.
ಸಂಭ್ರಮಿಸುವವರಿಗೆ ಹೃಸ್ವವಾಗಿರುತ್ತದೆ.
ಪ್ರೀತಿಸ ಬಲ್ಲವರಿಗೆ ಮಾತ್ರ ಅನಂತವಾಗಿರುತ್ತದೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s