ಕನ್ನಡ ಸೌರಭ .

ವಿಚಾರ ಸೌರಭ.

1. ನಮ್ಮ ಬೆನ್ನು ನಮಗೆ ಕಾಣದಿರುವುದೇ ಸೊಗಸು.

ಬೆನ್ನ ಹಿಂದೆ ನಡೆಯುವುದೆಲ್ಲಾ ಕಣ್ಣ ಮುಂದೆ ನಡೆದಿದ್ದರೆ

ನಾವು ಬದುಕುವುದೇ ಕಷ್ಟವಾಗ ಬಹುದಿತ್ತು.  ನಮ್ಮ

ಹಿತ ಶತ್ರುಗಳು  ಬೆನ್ನಿನಲ್ಲಿ ಇರಿಯುತ್ತಾರೆಂದು ನಮಗೆ

ಕೆಡಕೆನಿಸುವುದಿಲ್ಲ .

ಎದುರಲ್ಲಿ ಚೂರಿ ಹಿಡಿದು ಬಂದರೆ, ನೋಡಿ ಯಾರು

ಸುಮ್ಮನಿದ್ದಾರು? ಬೆನ್ನು ಬಿದ್ದವರಿಂದ ಪ್ರಯೋಜನವಿಲ್ಲ.

ಬೆಂಬಲವಾಗಿ ನಿಂತವರಿಂದ ಲಾಭವಿದೆ. ನಮ್ಮ ಬೆನ್ನು

ನಮಗೆ ಕಾಣದಿರುವಂತೆ ನಮ್ಮ ತಪ್ಪುಗಳು, ದೋಷಗಳು ,

ಪಾಪ ಮತ್ತು ದೌರ್ಬಲ್ಯ ಕೂಡಾ ನಮಗೆ ಕಾಣುವುದಿಲ್ಲ.

ಹಾಗಾಗಿ ನಮ್ಮ ಬೆನ್ನು ನಮಗೆ ಕಾಣದಿರುವುದೇ ಸೊಗಸು.

2. ಮಾನವನ ಮಸ್ತಿಷ್ಕವೆಂದರೆ  ನಿಜವಾಗಿಯೂ ಎರಡು ಮಸ್ತಿಷ್ಕ

ಗಳನ್ನು  ಸೇರಿಸಿ ಮಾಡಿದ್ದಾಗಿದೆ.ಅವುಗಳೆರಡಕ್ಕೂ  ವಿಶಿಷ್ಟ

ಹಾಗೂ ಸ್ವತಂತ್ರವಾದ ಕಾರ್ಯ ನಿರ್ವಹಣೆಯುಂಟು.

ಕಲಾಕಾರನ ಬಲ ಮಿದುಳು ಪ್ರಭಾವಶಾಲಿಯಾಗಿರುತ್ತದೆ.

ಎಡಭಾಗದ್ದು ಅದಕ್ಕಿಂತ ದುರ್ಬಲವಾಗಿರುತ್ತದೆ. ತತ್ತ್ವ

ಚಿಂತಕನ ಎಡ ಮಿದುಳು ಪ್ರಭಾವಶಾಲಿಯಾಗಿಯೂ

ಬಲಭಾಗದ್ದು ಕಡಿಮೆ ಪ್ರಭಾವವುಳ್ಳದ್ದು ಆಗಿರುತ್ತದೆ. ಇದರರ್ಥ

ಎಡ  ಮಿದುಳು ಆಲೋಚನೆಗಳನ್ನೂ ಬಲಭಾಗದ್ದು ಭಾವನೆಗಳನ್ನೂ

ನಿಯಂತ್ರಿಸುತ್ತದೆ. ಎಡದ್ದು ಭಾಷಣ ಹಾಗೂ ಲೇಖನ, ಗಣಿತ, ಚಿಂತನೆ

ಮುಂತಾದುವುಗಳಲ್ಲಿ ನಿಯಂತ್ರಣ ಸಾಧಿಸಿದರೆ ಬಲಭಾಗದ್ದು

ಬರೆಹಕ್ಕೆ ಅಥವಾ ಮಾತಿಗೆ ಹೊರತಾದ ನೆನಪುಗಳನ್ನು  ಭಾವನೆ

ಹಾಗೂ ಮೂರ್ತವಾದ ಆಲೋಚನೆಗಳನ್ನು ನಿಯಂತ್ರಿಸುತ್ತದೆ.

ಮಿದುಳಿನ  ಎರಡೂ ವಿಭಾಗಗಳಲ್ಲಿ ಪರಸ್ಪರ ಸಂಪರ್ಕವೂ ಸಮನ್ವಯವೂ

ಉಂಟು.

ನಿಮಗೆ ಗೊತ್ತೆ ?

1.ರಾಮಾಯಣದ ೨೪,೦೦೦ ಶ್ಲೋಕಗಳು ಗಾಯತ್ರೀ

ಮಂತ್ರದ ೨೪ ಅಕ್ಷರಗಳಿಂದ ಪ್ರಾರಂಭವಾಗುತ್ತದೆ.

ಗಾಯತ್ರೀ ಮಂತ್ರದಲ್ಲಿ ೨೪ ಅಕ್ಷರಗಳಿವೆ. ಋಗ್ವೇದ

ದಲ್ಲಿ ೨೪ ಉಪಶಾಖೆಗಳಿವೆ.

2. ಪಾಟಲಿ ಎಂಬ ಮರದ ಬಳಿ ಸಾಮ್ರಾಟ ಅಶೋಕ

ನಗರ ನಿರ್ಮಾಣ ಕೈಗೊಂಡದ್ದರಿಂದ ಪಾಟಲಿಪುರ (ಪಾಟ್ನ)

ಎಂಬ ಹೆಸರು ಬಂತು.

ನುಡಿಮುತ್ತು

1.ಹೊಟ್ಟೆಗಿಲ್ಲದಿದ್ದರೇನು?ಹುಲಿಗೆ ಪೌರುಷ ಕಡಿಮೆಯಾಗದು.

ಸೀಳ ಬಹುದೇ ಸೀಸದುಳಿಯಲಿ ಶೈಲವನು?

2.ಸಮಾಜದಲ್ಲಿ ನಂಜು ಹರಡುವ ಬದಲು ಪಂಜು ಹಿಡಿವ ಕೆಲಸ

ಮಾಡ ಬೇಕು.

3.ಮನೆಯ ದೀಪ ಎಂದು ಮುದ್ದಿಸಿದರೆ ಬಾಯಿ

ಸುಡದೆ ಇರುತ್ತದೆಯೇ ?

4.ಸುಸಂಸ್ಕೃತ ಸ್ತ್ರೀ ದೇವರ ಹಣೆಯ ಮೇಲಿನ ತಿಲಕದಂತೆ.

5.ಸರ್ಪದ ಮೈ ಶೀತಲವಾಗಿದ್ದರೂ ಒಡಲಲ್ಲಿ ಬಡಬಾನಲ

ತುಂಬಿರುತ್ತದೆ.

6.ಜನ ಮೆಚ್ಚಿಸೋಕೆ ಜನಾರ್ಧನನಿಗೂ ಸಾಧ್ಯವಿಲ್ಲ.

7.ಕಬ್ಬಿಣದಲ್ಲಿ ಹುಟ್ಟಿದ ತುಕ್ಕಿನಿಂದಲೇ ಕಬ್ಬಿಣದ ನಾಶ;

ಪಾಪಿಯ  ಮನಸ್ಸಿನಲ್ಲಿ ಹುಟ್ಟಿದ ಪಾಪಗಳಿಂದಲೇ

ಅವನ ನಾಶ.

8.ತಾಯಿ ಇದ್ದರೆ  ತವರು;ತಂದೆ ಇದ್ದಾರೆ ಬಳಗ.

9.ಇದ್ದವರಿಗೆಲ್ಲ ಬುದ್ಧಿ ಮಾತಾಡುವವ ತನ್ನ ಡೊಂಕನ್ನು

ತಿದ್ದಲಾರ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s