ಕನ್ನಡ ಸೌರಭ.

ಅಧ್ಯಾತ್ಮ ಸೌರಭ.

ಮಾನವ ಜೀವನವೊಂದು ಹೂವಿನ ಹಾರ.

ಒಂದು ತುದಿಯಲ್ಲಿ ಜನನ; ಇನ್ನೊಂದು ತುದಿಯಲ್ಲಿ

ಮರಣ. ನಡುವೆ  ನಾನಾ ರೀತಿಯ ನೋವು ನಲಿವು

ಗಳೆಂಬ ಬಣ್ಣದ ಹೂವುಗಳು. ಇವುಗಳಿಗೆ ಆಧಾರವಾಗಿ

ಒಳಗಡೆ ದಾರ ವೊಂದಿದೆ. ಅದೇ ಅಗೋಚರವಾದ ಬ್ರಹ್ಮ

ಸೂತ್ರ. ಇದೇ ದೇವರು.

೨. ತತ್ತ್ವಮಸಿ ,ಅಯಮಾತ್ಮ ಬ್ರಹ್ಮ ,ಅಹಂ ಬ್ರಹ್ಮಾಸ್ಮಿ ,

ಪ್ರಜ್ನಾನಂ ಬ್ರಹ್ಮ ಎಂಬ ನಾಲ್ಕು ಮಹಾ ವಾಕ್ಯಗಳಲ್ಲಿ

ವೇದಗಳು ಪರಮಾತ್ಮನ ಇರುವಿಕೆಯನ್ನು ಸಾರಿವೆ.

೩. ”ಚಂದ್ರಮಾ ಮನಸೋಜಾತಃ ” ನಮ್ಮ ಮನಸೇ ಚಂದ್ರ.

ಪರಿಪೂರ್ಣವಾದ ಪ್ರೇಮದಿಂದ  ತುಂಬಿದ ದಿನವೇ ಪೌರ್ಣಮಿ.

ರಾಗ,ದ್ವೇಷಗಳೆಂಬುದು ರಾಹು, ಕೇತುಗಳಂತೆ ಮನಸ್ಸನ್ನು

ಪೀಡಿಸುತ್ತವೆ. ಅಂತರಂಗದಲ್ಲಿ ಅಂಧಕಾರ ತುಂಬಿ ಬಾಹ್ಯದಲ್ಲಿ

ಪೌರ್ಣಮಿಯನ್ನು ಆಚರಿಸಿ ಕೊಂಡರೆ ಲಾಭವಿಲ್ಲ. ಅಂತರಂಗದಲ್ಲಿ

ದಿವ್ಯತೆಯ ಜ್ಯೋತಿಯನ್ನು ಬೆಳೆಸಿಕೊಳ್ಳ ಬೇಕು.

”ಸರ್ವಂ ಖಲ್ವಿದಂ ಬ್ರಹ್ಮ ”

ಎಲ್ಲೆಡೆಯೂ ದಿವ್ಯತ್ವವೇ ವ್ಯಾಪಿಸಿದೆ. ಇದರಲ್ಲಿ

ದೇಹಗಳು ವಿವಿಧ ರೀತಿಯ bulb ಗಳು. ಇದರಲ್ಲಿ

ಹರಿಯುತ್ತಿರುವ ದಿವ್ಯತ್ವವೆಂಬ current ಒಂದೇ

ಎಂಬ ಸತ್ಯವನ್ನು ಗುರುತಿಸಬೇಕು.

ಭಕ್ತನ ಭಾವನೆಯೇ ಭಗವಂತ. ಯಾವ ರೂಪದಲ್ಲಿ

ಧ್ಯಾನಿಸಿದರೂ,ಯಾವ ನಾಮದಿಂದ ಕರೆದರೂ ಅವನು

ಓ ಗೊಡುತ್ತಾನೆ.

”ಏಕಂ ಏವ ಅದ್ವಿತೀಯಮ್ ಬ್ರಹ್ಮ ”

ದೇವರು ಒಬ್ಬ. ನಾಮ ಹಲವು.

ಗಾದೆ ಹಾಗೂ ನುಡಿಮುತ್ತುಗಳು.

”ಇರಬಹುದು” ಎನ್ನುವುದೇ ಹಗ್ಗ;

”ಹೋಗಲಿ ಬಿಡು” ಎನ್ನುವುದೇ ನೇಣಿನ ಕುಣಿಕೆ.

-Russian Proverb.

ಆನೆ ಮುಟ್ಟುವ ಕುರುಡರಾಗದಿರೋಣ.

ದೊರೆ ಕಿವಿ ಮಂತ್ರಿ ಬಾಯಲ್ಲಿ.

ಸಾವು ಬದುಕಿನ ಲೆಕ್ಕ ಇಡುವವರ ಯಮ ನೋಡಿ ನಕ್ಕ.

ಈ ಬದುಕು ಒಂದು ಹೂವಿನ ಹಾಗೆ. ನಗುವೇ ಆ ಸುಮದ

ಪರಿಮಳವು.

ದುಃಖದಲ್ಲಿ ಸಹಿಸಿ ಕೊಳ್ಳುವುದೇ ವಿವೇಕ. ಹೋರಾಡಿ

ಕುಸಿಯದಿರುವುದೇ  ಶೌರ್ಯ.

ಕಪಟವಿಲ್ಲದ ನಾಸ್ತಿಕ, ವಂಚಕ ಆಸ್ತಿಕನಿಗಿಂತ ಉತ್ತಮನು.

–ಸ್ವಾಮಿ ವಿವೇಕಾನಂದ.

ನಾವು ಅನುಸರಿಸ ಬೇಕಾದ್ದು ಸಂತರ ಚಾರಿತ್ರ್ಯವನ್ನೇ ಹೊರತು

ಚರಿತ್ರೆಯನ್ನಲ್ಲ.

ಬಾಳಿನ ಸೆಲೆಗೆ ನೂರೊಂದು ನೆಲೆ.

ಸಾವು ತರೋ ಸತ್ಯಕ್ಕಿಂತ ಬದುಕು ಕೊಡೋ ಸುಳ್ಳೇ ವಾಸಿ.

ಪ್ರೀತಿ ಎಂಬುದು ಬಾಳಿನ ಕಣ್ಣು ಗಳಂತೆಯೇ; ಅದನ್ನು ಕಳೆದು

ಕೊಂಡದ್ದೇ ಆದರೆ ಬದುಕು ಕುರುಡಾಗುತ್ತದೆ.

ಕಷ್ಟಗಳನ್ನು  ಎದುರಿಸುವಲ್ಲಿ ಒಂದು ನಿಟ್ಟುಸಿರಿಗಿಂತ

ಒಂದು ಮುಗುಳ್ನಗೆಯಲ್ಲಿ   ಪ್ರಚಂಡ ಶಕ್ತಿ ಇದೆ.

ಬೆಂಕಿಗೆ ದಹನ ಶಕ್ತಿ, ಮಂಜಿಗೆ ತಂಪು ಹೇಗೆ ಮುಖ್ಯವೋ

ಮಾನವನಿಗೆ ಪ್ರೇಮವೂ ಅಷ್ಟೇ ಮುಖ್ಯ.

ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s