ಶ್ರೀ ಲಕ್ಷ್ಮಿ.

laxmi41123

”ಲಕ್ಷಯತಿ-ಪಶ್ಯತಿ ಭಕ್ತ ಜನಾನ್ ಇತಿ ಲಕ್ಷ್ಮೀ”

ಇದು ಲಕ್ಷ್ಮೀ ಶಬ್ದದ ವ್ಯುತ್ಪತ್ತಿ.

ಉಪಾಸಕರನ್ನು ಕೃಪಾ ಕಟಾಕ್ಷದಿಂದ ವೀಕ್ಷಿಸುವವಳೇ ಲಕ್ಷ್ಮೀ.

ಶ್ರೀ ಎಂಬುದು ಲಕ್ಷ್ಮಿಯ ನಾಮಾಂತರ. ಪ್ರಭೆ,ಶೋಭೆ,ಕೀರ್ತಿ,

ಕಾಂತಿ,ವಿಭೂತಿ, ಮತಿ,ವರ್ಚಸ್,ತೇಜಸ್,ಸೌಂದರ್ಯ,ವೃದ್ಧಿ,

ಸಿದ್ಧಿ,ಸೌಭಾಗ್ಯ,ಕಮಲ,ಬಿಲ್ವ ವೃಕ್ಷ ಮುಂತಾದುವು ”ಶ್ರೀ ”ಶಬ್ದ

ಕ್ಕಿರುವ ಅರ್ಥಗಳು. ಸಂಪತ್ತೆಂಬುದು ಸಾಮಾನ್ಯ ಅರ್ಥವಾದರೂ

ಐಶ್ವರ್ಯವೆಂಬುದು  ಪ್ರಧಾನ ಅರ್ಥ.

”ಈಶ್ವರಸ್ಯಭಾವಃ ಐಶ್ವರ್ಯಂ”  ಪರಮಾತ್ಮನ ಅನುಗ್ರಹಕಾರಕ

ವಾದ ಗುಣ ವಿಶೇಷವೇ ”ಶ್ರೀ”(ಬಂಗಾರ ಮತ್ತು ಸಂಪತ್ತು ಆಕೆಯ

ಅನುಗ್ರಹವೆಂಬುದು ಗ್ರಾಹ್ಯ )

ಶ್ರೀ ಸೂಕ್ತದ ಆಶಯ-”ಹಿರಣ್ಯ-ಮಹಾಲಕ್ಷ್ಮಿ”

(ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮಿಯು ನಮಗೆಲ್ಲರಿಗೂ

ಹಿರಣ್ಯವನ್ನು ಸದಾ ಕೊಡಲಿ )

ಶ್ರೀ ಸೂಕ್ತವು ಶ್ರೀಮನ್ನಾರಾಯಣನಿಂದ ಸದಾಕಾಲ

ಅನಪಗಾಮಿನಿಯಾದ (ಜೊತೆಯಲ್ಲೇ ಇರುವ )ಶ್ರೀ

ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು ವರ್ಣಿಸುತ್ತದೆ.

ಹಿರಣ್ಯದ ರಥ ಹಾಗೂ ಚಿನ್ನದ ಆಭರಣಗಳಿಂದ ಶೃಂಗರಿಸಲ್ಪಟ್ಟ

ಗಜ,ತುರಗಾದಿಗಳನ್ನು ಹೊಂದಿರುವ ಹಾಗೂ ಹಿರಣ್ಯದ ಆಭರಣ

ಗಳನ್ನು ಧರಿಸಿರುವ ”ಶ್ರೀ ಲಕ್ಷ್ಮೀ” ಹಿರಣ್ಯದೊಳಗೆ ಇರುವವಳು

ಎಂಬ ಚಿಂತನೆಯು, ಹಿರಣ್ಯಕ್ಕೂ ಲಕ್ಷ್ಮಿಗೂ ಇರುವ ಅವಿನಾಭಾವ

ಸಂಬಂಧವನ್ನು ವರ್ಣಿಸುತ್ತದೆ.

ಲಕ್ಷ್ಮೀ ಸ್ವರೂಪವಾದ ಹಿರಣ್ಯವನ್ನು ಧರಿಸಿದಾಗ ಹಿರಣ್ಯದ ತೇಜಸ್ಸನ್ನು

ನಾವು ಪಡೆಯುತ್ತೇವೆ. ಈ ಆಕರ್ಷಕ ಬಂಗಾರವು  ವ್ಯಕ್ತಿತ್ವಕ್ಕೆ ಮೆರುಗನ್ನು

ನೀಡುತ್ತದೆ.

ಲಕ್ಷ್ಮೀ  ಪವಿತ್ರ, ಪರಿಶುದ್ಧ,ಆಕರ್ಷಣೀಯವಾದ   ಬಂಗಾರದಲ್ಲಿ ಸನ್ನಿಹಿತಳು.

ಲಕ್ಷ್ಮೀ ಚಿನ್ನಕ್ಕೆ ಅಧಿದೇವತೆ. ಪರಿಶುದ್ಧ ಬಂಗಾರ ಧಾರಣೆಯಿಂದ ಪರಿಪಕ್ವವಾದ

ಮನಃ ಸ್ಥಿತಿ. ಆ ಮೂಲಕ ಶಾಂತ ಬದುಕು.

”ನಮಸ್ತೇಸ್ತು ಮಹಾಮಾಯೆ ಶ್ರೀ ಪೀಟೇ ಸುರ ಪೂಜಿತೆ

ಶಂಖ ಚಕ್ರ ಗದಾ ಪದ್ಮ ಹಸ್ತೇ ಮಹಾ ಲಕ್ಷ್ಮೈ ನಮೋ ಸ್ತುತೇ ”

ವಂದೇ ಲಕ್ಷ್ಮೀಂ ಪರಶಿವಮಯೀಂ ಶುದ್ಧ ಜಾಂಬೂನದಾಭಾಂ

ತೇಜೋ ರೂಪಾಂ ಕನಕವಸನಾಮ್ ಸರ್ವ ಭೂಷೋಜ್ವಲಾಂಗೀಂ

ಬೀಜಾಪೂರಂ ಕನಕಕಲಶಂ ಹೇಮಪದ್ಮಂ ದಧಾನಂ

ಆದ್ಯಂ ಶಕ್ತಿಂ ಸಕಲಜನನೀಂ ವಿಷ್ಣು ವಾಮಾಂಕ ಸಂಸ್ಥಾಮ್ ॥

ಯಾ ರಕ್ತಾಂಬುಜ ವಾಸಿನೀ ವಿಲಸಿನೀ

ಚಂಡಾಂಶು ತೆಜಸ್ವಿನೀ ಆರಕ್ತಾ ರುಧಿರಾಂಬರ

ಹರಿಸಖಿ ಯಾ ಶ್ರೀ ಮನೊಹ್ಲಾದಿನೀ

ಯಾ ರತ್ನಾಕರ ಮಂಥನಾತ್ ಪ್ರಘಟಿತಾ

ವಿಷ್ಣೋಶ್ಚಯಾ ಗೇಹಿನೀ ಸಾಮಾಂಪಾತು

ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾಲಯಾ

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s