ಕನ್ನಡ ಸೌರಭ.

ನಾಗರ ಪಂಚಮಿ.

ನಾಗರ ಹಾವೇ ಹಾವೊಳು ಹೂವೇ,

ಬಾಗಿಲ ಬಿಲದೊಳು ನಿನ್ನಯ ಠಾವೇ,

ಕೈಗಳ ಮುಗಿವೆ ಹಾಲನ್ನೀವೆ,

ಬಾ ಬಾ ಬಾ.

ಎಲೆ ನಾಗಣ್ಣ ಹೇಳೆಲೋ ನಿನ್ನ

ತಲೆಯಲ್ಲಿರುವ ನಿಜವನ್ನ;

ಬಡ ಬಗ್ಗರಿಗೆ ಕೊಪ್ಪರಿಗೆ ಚಿನ್ನ

ತಾ ತಾ ತಾ ತಾ

–ಪಂಜೆ ಮಂಗೇಶ ರಾವ್.

ಶ್ರಾವಣ ಮಾಸಕ್ಕೆ ವಿಷ್ಣು ಮಾಸ ಎಂಬ ಹೆಸರಿದೆ.

ನಾಗರ ಪಂಚಮಿ (ಗರುಡ ಪಂಚಮಿ ಎಂದೂ ಕರೆಯುತ್ತಾರೆ)

ಮೊದಲ ಹಬ್ಬ. ಕುಂಡಲಿನಿ ಸ್ವರೂಪಿ ನಾಗನಿಗೆ ಹಾಲು ತನಿ

ಎರೆಯುವ ಹಬ್ಬ.ತವರು ಮನೆಯನ್ನು ನೆನಪಿಸುವ, ಒಡ

ಹುಟ್ಟಿದವರಿಗೆ ಶುಭ ಕೋರುವ ದಿನ.ನಾಗರ ಪಂಚಮಿ ನಾಡಿಗೆ

ದೊಡ್ಡದು.

”ಅನಂತಶ್ಚಾಮಿ ನಾಗಾನಾಂ ”(ನಾಗಗಳಲ್ಲಿ ನಾನು ಅನಂತ ಎಂದು

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ  ಹೇಳಿದ್ದಾನೆ)

ಶಿವ ನಾಗಭೂಷಣ;ವಿಷ್ಣು ಶೇಷ ಶಯನ.

ಜನಮೇಜಯನ ಸರ್ಪ ಯಾಗದಲ್ಲಿ ಸರ್ಪಗಳ ಮಾರಣ

ಹೋಮ ನಿಂತ ದಿನವೇ ಶ್ರಾವಣ ಪಂಚಮಿ. ಅಂದು ಮಹಿಳೆ

ನಾಗ ಪೂಜೆ ಮಾಡಿದರೆ,ಏಳು ತಲೆಮಾರಿನ ವರೆಗೂ ಆ ಕುಲ

ದಲ್ಲಿ ನಾಗಪೀಡೆಯಾಗುವುದಿಲ್ಲ.

ಕಶ್ಯಪ ಮುನಿಗಳಿಂದ ಕದ್ರು ಎಂಬ ನಾಗ ಮಾತೆಯಿಂದ ನಾಗಕುಲ

ಜನಿಸಿದೆ. ಸುಬ್ರಹ್ಮಣ್ಯನು ಶಾಪ ದಿಂದಾಗಿ ಕೆಲಕಾಲ ಸರ್ಪ ಶರೀರವನ್ನು

ಧರಿಸಿದ್ದನು. ಶ್ರೀದೇವಿಯು ನಾಗಗಳನ್ನು ಆರಾಧಿಸಿ,ಮಗನನ್ನು ಮರಳಿ

ಮೂಲರೂಪದಲ್ಲಿ ಪಡೆದಳು.

ಅಧ್ಯಾತ್ಮ ಸೌರಭ.

ಆಸೆ ಇಲ್ಲದಿರುವುದೇ ತಪ,ರೋಷ ಇಲ್ಲದಿರುವುದೇ ಜಪ,

ದೇವರು ಕರುಣಿಸಿದ ತನು,ಮನ,ಧನವನ್ನು   ವಂಚನೆ

ಇಲ್ಲದೆ ಅರ್ಪಿಸುವುದೇ  ಭಕ್ತಿ.

ಶ್ರೇಷ್ಠ-ಕನಿಷ್ಠ ಎಂದು ಭಾವಿಸದೆ ಸಕಲರಲ್ಲೂ ಶಿವನನ್ನು

ಕಾಣುವುದೇ ಸದಾಚಾರ.

ಎಂಥ ಪ್ರಸಂಗದಲ್ಲೂ ಸತ್ಯದ ಮಾರ್ಗದಲ್ಲಿ ನಡೆಯುವುದೇ

ಸದ್ಧರ್ಮ.

ಇದುವೇ  ಅಧ್ಯಾತ್ಮ ವಿದ್ಯಾ ಪ್ರಸಾದ.

-ಶ್ರೀ ಸಿದ್ಧೇಶ್ವರ ಸ್ವಾಮೀಜಿ.

ಕವಿತೆ.

ದೀಪವು ನಿನ್ನದೇ,ಗಾಳಿಯೂ ನಿನ್ನದೇ, ಆರದಿರಲಿ ಬೆಳಕು;

ಕಡಲು ನಿನ್ನದೇ ಹಡಗು ನಿನ್ನದೇ, ಮುಳುಗದಿರಲಿ ಬದುಕು;

ಬೆಟ್ಟವು ನಿನ್ನದೇ ಬಯಲು ನಿನ್ನದೇ,ಹಬ್ಬಿ ನಗಲಿ ಪ್ರೀತಿ ;

ನೆರಳು, ಬಿಸಿಲು ಎಲ್ಲವೂ ನಿನ್ನದೇ, ಇರಲಿ ಏಕರೀತಿ.

ಆಗೊಂದು ಸಿಡಿಲು, ಈಗೊಂದು ಮುಗಿಲು,ನಿನಗೆ ಅಲಂಕಾರ;

ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು,ನಿನಗೆ ನಮಸ್ಕಾರ.

ಅಲ್ಲಿ ರಣ ದುಂದುಭಿ,ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ;

ಆ ಮಹಾಕಾವ್ಯ,ಈ ಭಾವಗೀತೆ ನಿನ್ನ ಪದಧ್ವನಿ.

ರಚನೆ-ಕೆ. ಎಸ್. ನರಸಿಂಹ ಸ್ವಾಮಿ.

ಕೀರ್ತನೆ

ಅನುಗಾಲವು ಚಿಂತೆ ಜೀವಕ್ಕೆ ಮನವು ಶ್ರೀ ರಂಗನೊಳು

ಮೆಚ್ಚುವ ತನಕ.

ಸತಿಯಿದ್ದರೂ ಚಿಂತೆ ಸತಿ ಇಲ್ಲದಾ ಚಿಂತೆ

ಮತಿಹೀನೆ ಸತಿಯಾದರೂ ಚಿಂತೆ

ಪೃಥ್ವಿ ಯೊಳಗೆ ಸತಿ ಕಡು ಚೆಲ್ವೆಯಾದರೆ

ಮಿತಿ ಮೇರೆಯಿಲ್ಲದ ಮೋಹದ ಚಿಂತೆ

ಮಕ್ಕಳಿಲ್ಲದ ಚಿಂತೆ ಮಕ್ಕಳಾದರೂ ಚಿಂತೆ

ಒಕ್ಕಲು ಹೊನ್ನು ಕೊಡುವ ಚಿಂತೆ

ಅಕ್ಕರೆಯಿಂದಲಿ ತುರುಗಳ ಕಾಯ್ದರೂ

ಕಕ್ಕುಲತೆಯು ಬಿಟ್ಟು ಹೋಗದ ಚಿಂತೆ

ಬಡವನಾದರೂ ಚಿಂತೆ ಬಲ್ಲಿದನಾದರೂ ಚಿಂತೆ

ಹಿಡಿ ಹೊನ್ನು ಕೈಯೊಳು ಇದ್ದರೂ ಚಿಂತೆ

ಪೊಡವಿಯೊಳಗೆ ನಮ್ಮ ಪುರಂದರ ವಿಠಲನ

ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ.

ಲೋಕೋಕ್ತಿ ಸಂಗ್ರಹ.

ಅನ್ನ ಬೇಡಿದರೆ ಬೆನ್ನ ಮುರಿವರೆ?

ಚಿನ್ನಕ್ಕಿಂತ ಅನ್ನ ಲೇಸು;ಅನ್ನಕ್ಕಿಂತ ಅಕ್ಷರ ಲೇಸು.

ಬಾಳ ಪಯಣಕ್ಕೆ ಅನಿವಾರ್ಯ ಆಸೆಯೆಂಬ ಊರುಗೋಲು.

ಬಾವಿಯೆಂದು ಇಣುಕಿದರೆ ಪಾತಾಳ ಕಂಡಂತೆ.

ಕಾನೂನು,ದೇವರು,ಮನುಷ್ಯರಿಗೆ ಹೆದರದಿದ್ದರೂ

ಜನರು ಕ್ಷುದ್ರ ಶಕ್ತಿಗಳಿಗೆ ಹೆದರುತ್ತಾರೆ.

ಬಣ್ಣದ ಹೂಗಳಿಗೆ ವಾಸನೆ ಇಲ್ಲ;

ವಾಸನೆಯ ಹೂಗಳು  ಬಾಳುವುದೇ ಇಲ್ಲ.

ಸ್ವಾವಲಂಬನೆಯಿಂದ ಸ್ವಾಭಿಮಾನ ಬರುತ್ತದೆ.

ನಡೆ ಆರೋಗ್ಯಕ್ಕೆ ಮುನ್ನಡೆ.

ಕಣ್ಣೆರಡು,ಕಾಣಿಕೆ (ದೃಷ್ಟಿ )ಎರಡೆ ?

ಒಳಗಿನಿಂದ ಝರಿ, ಕರ್ಪೂರ ಕಂಡಾಗ ಉರಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s