ಶ್ರೀ ಗಣೇಶ.

671_ganesh wallpaper-005

ಜನಗಣಗಳ,ದೇವಗಣಗಳ,ಭಕ್ತಗಣಗಳ ಪತಿ ಅವನು.

ಗಣತಂತ್ರದ ದೇವರವನು.  ಆದುದರಿಂದಲೇ ಜನ

ಸಂಘಟನೆಗೆ  ಉಪಾಧಿಯಾಗಿ ಗಣೇಶನನ್ನು ಆರಿಸಿದ್ದು

ಲೋಕಮಾನ್ಯ ತಿಲಕರು. ಚೌತಿಯ ಸಂದರ್ಭ ಜನರು

ಭೇದವಿಲ್ಲದೆ ಪಾಲ್ಗೊಳ್ಳುವ ಸಾಮೂಹಿಕ ಹಬ್ಬ.

ಧಾರ್ಮಿಕ ಸರಳತೆ,ಜನಪರ ಧಾರ್ಮಿಕತೆಗೆ ಉದಾಹರಣೆ

ಎಂದರೆ ತೆರೆದ ಬಯಲಲ್ಲಿ ಸಾಮೂಹಿಕ ಆರಾಧನೆ.

ಆತನದು ಗಜಮುಖ, ನರದೇಹ; ಆತ ವಕ್ರದಂತ, ಲಂಬೋದರ,

ಸರ್ಪಭೂಷಣ,ಮೂಷಿಕ ವಾಹನ,ಮೋದಕ ಹಸ್ತ,ವಿಘ್ನರಾಜ,

ವಿನೋದ ಪ್ರಿಯ. ಗಣೇಶ ನಾದದ, ನೃತ್ಯದ,ಸಾಹಿತ್ಯದ,

ರಂಗ ಭೂಮಿ, ಚಿತ್ರ ಕಲೆಯ ಅಧಿದೇವತೆ. ಆತ ಆದಿ ಪೂಜ್ಯ.

”ಗಜಮುಖನ ಆದಿಯಲಿ ಅರ್ಚಿಸಿ ಕಾರ್ಯಾರಂಭಿಸಲು

ಎಲ್ಲ ವಿಘ್ನಗಳೂ ಮಾಯ” ಎಂದು ನಂಬಲಾಗಿದೆ. ಸಂಗೀತಾದಿ

ಕಲೆಗಳ ಆರಂಭ ಗಣೇಶ ಸ್ತುತಿಯಿಂದ. ಸಾಹಿತ್ಯದಲ್ಲಿ ”ಗಣೇಶ

ಉಪನಿಷದ್” ಇದೆ.

ಗಣೇಶೋತ್ಸವ ಅಂದರೆ ಜನ ಮಾನಸದ ಉತ್ಸವ.ದೇಶದ

ಸ್ವಾತಂತ್ರ್ಯ ಸಂಗ್ರಾಮದ ವೇಳೆ ಜನತೆಯ ಸಂಘಟನೆಗೆ

ಸ್ಫೂರ್ತಿ ನೀಡಿದ ಉತ್ಸವ. ಅದು  ಕಲೆ, ಸಂಸ್ಕೃತಿಗಳ ಉತ್ಸವ.

ನೈವೇದ್ಯ ಸಮರ್ಪಣೆಗೆ  ೨೧ಬಗೆಯ ಭಕ್ಷ್ಯಗಳನ್ನಿಟ್ಟು, ”ನಮೋ

ವಿಘ್ನ ನಾಯಕಃ” ಎನ್ನುತ್ತೇವೆ.

ಪ್ರಜಾಪತಿ  ವಿಶ್ವರೂಪನ ಮಕ್ಕಳು ಸಿದ್ಧಿ,ಬುದ್ಧಿಯರು ಈತನ

ಪತ್ನಿಯರು. ಸಿದ್ಧಿಯ ಮಗ ಕ್ಷೇಮ;ಬುದ್ಧಿಯ ಮಗ ಲಾಭ.

ಗಣಹೋಮದ ಮೂಲಕ ಗಣೇಶಾರ್ಚನೆಯಲ್ಲಿ ವಿಗ್ರಹ

ಸ್ಥಾಪನೆ ಇಲ್ಲ. ಮೂರ್ತಿ ರೂಪದ ಆರಾಧನೆಯಲ್ಲಿ ಸ್ಥಾನಕ

(ನಿಂತು ಕೊಂಡ), ಆಸೀನ(ಕುಳಿತು ಕೊಂಡ), ನರ್ತನ

ಮೊದಲಾದ ಹಲವು ಪ್ರಭೇದ ಗಳಿವೆ. ಹಾಗೆಯೇ ವರದ

ಮೂರ್ತಿ,ಶಕ್ತಿ ಗಣಪತಿ,ವಿದ್ಯಾ ಗಣಪತಿ,ಲಕ್ಷ್ಮೀ ಗಣೇಶ,

ಅರ್ಕ ಗಣಪತಿ ಮೊದಲಾದ ಹಲವು ಪ್ರಕಾರಗಳಿವೆ.

ಪಂಚ ಮುಖ ಗಣೇಶ ಮೂರ್ತಿ ಗಳೂ ಇವೆ. ಗಣೇಶನ

ಪ್ರೀತ್ಯರ್ಥವಾಗಿ ಸತ್ಯ ಗಣಪತಿ ವ್ರತ, ವರದ ಗಣಪತಿ ವ್ರತ

ಮೊದಲಾದ ವ್ರತಗಳೂ ಇತರ ಪೂಜಾ ವಿಧಾನಗಳೂ ಇವೆ.

ಉಪನಿಷತ್ ಸ್ತೋತ್ರ ಮಂತ್ರ :

ತ್ವಮೇವ ಪ್ರತ್ಯಕ್ಷಂ ತತ್ತ್ವಮಸಿ ।

ತ್ವಮೇವ ಕೇವಲಂ ಕರ್ತಾಸಿ ।

ತ್ವಮೇವ ಕೇವಲಂ ಧರ್ತಾಸಿ ।

ತ್ವಮೇವ ಕೇವಲಂ ಹರ್ತಾಸಿ ।

ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ:।

ಭಾವಾರ್ಥ -ಗಣೇಶ ಸಕಲ ಬ್ರಹ್ಮಾಂಡದ ತತ್ತ್ವ.

ಕರ್ತಾ,ಹರ್ತಾ ಹಾಗೂ ಧಾರಕ. ಆತ ಸರ್ವ ವ್ಯಾಪಕ

ಬ್ರಹ್ಮ,ಆತ್ಮ ವಸ್ತು,ಚಿನ್ಮಯ,ವಾಘ್ಮಯ,ಬ್ರಹ್ಮ ಮಯ ,

ಅದ್ವಿತೀಯ ಸತ್-ಚಿತ್ ಆನಂದ, ಪಂಚ ಭೂತಾತ್ಮಕ.

ಗಣ ತ್ರಯ, ಕಾಲ ತ್ರಯ ಗಳಿಗೆ ಮೀರಿದ ಮೂಲಾಧಾರ.

ಆತ ಬ್ರಹ್ಮಾಸ್ತ್ವಂ,ವಿಷ್ಣುಸ್ತ್ವಂ,ರುದ್ರಸ್ತ್ವಂ, ಇಂದ್ರಸ್ತ್ವಂ,

ವಾಯುಸ್ತ್ವಂ, ಸೂರ್ಯಸ್ತ್ವಂ,ಚಂದ್ರಮಾಸ್ತ್ವಂ ಹಾಗೂ

ಬ್ರಹ್ಮ ಭೂ ಭುವ ಸ್ವಃ (ಸಕಲ ಲೋಕ ರೂಪ ಹಾಗೂ

ವಿಶ್ವ ರೂಪ)

ಇದು ಏಕತಾ ಪ್ರಧಾನವಾದ  ಹಾಗೂ ವಿವಿಧ ದೇವರುಗಳ

ತತ್ತ್ವಗಳ ಸಮನ್ವಯ.

ಮೂಲ:ಸಂಗ್ರಹ.

Advertisements

ರಾಧೆಯ ಪ್ರೀತಿ.

ರಾಧೆ:ಸ್ವಾಮೀ ನಾನು ನಿನ್ನನ್ನು ಉತ್ಕಟವಾಗಿ ಪ್ರೀತಿಸುತ್ತೇನೆ.

ಆದರೂ ಭಾವನೆಗಳೇ ಇಲ್ಲದ ಬಿದಿರನ್ನು ಸದಾ ನಿನ್ನೊಂದಿಗೆ

ಒಯ್ಯುವೆ.  ನಿನ್ನ ಚೆಂದುಟಿಗಾನಿಸಿ  ಮಧುರ ನಾದವನ್ನು

ಹೊಮ್ಮಿಸುವೆ.ಏಕೆ ಕೃಷ್ಣ? ನಾನು ಆ  ಬಿದಿರಿನ ಕೊಳಲಿಗಿಂತಲೂ

ಕೀಳಾದೆನೆ?

ಕೃಷ್ಣ: ಹೌದು, ರಾಧೆ. ನಿನ್ನ ಪ್ರೀತಿಯಲ್ಲಿ ”ನಾನು” ಎಂಬ ಅಹಂಭಾವ

ತುಂಬಿದೆ. ಬಿದಿರ ಕೊಳಲು ಒಳಗೆ ಖಾಲಿಯಿದೆ. ಅಹಂಭಾವದಿಂದ

ಮಾಡುವ ಕರ್ಮ ಯಾವುದೂ ನನಗೆ ಪ್ರಿಯವಾಗುವುದಿಲ್ಲ.

ಒಮ್ಮೆ ಶ್ರೀ ಕೃಷ್ಣ ಗೋಕುಲವನ್ನು ತೊರೆದು ದ್ವಾರಕೆಗೆ ಹೊರಟು

ನಿಲ್ಲುತ್ತಾನೆ.ಗೋಪಿಕಾ ಸ್ತ್ರೀಯರೆಲ್ಲರೂ ಶ್ರೀ ಕೃಷ್ಣನನ್ನು ಅಗಲಿರಲಾರದೆ

ಪಾದದ ಬಳಿ ಹೊರಳಾಡಿ, ಕಣ್ಣೀರು ಸುರಿಸುತ್ತ, ವಿಧ, ವಿಧವಾಗಿ

ವಿಲಪಿಸುತ್ತಾರೆ. ರಾಧೆಯೋರ್ವಳೇ ನಿರ್ಲಿಪ್ತ ಭಾವದಿಂದ ಕೊಂಚ

ದೂರದಲ್ಲಿ ಮೌನವಾಗಿ ನಿಂತಿರುತ್ತಾಳೆ. ಶ್ರೀ ಕೃಷ್ಣ ಗೋಪಿಯರನ್ನು

ಸಂತೈಸದೆ ರಾಧೆಯ ಬಳಿ ಹೋಗಿ ಪ್ರೀತಿಯಿಂದ ಅವಳನ್ನು ತಬ್ಬಿ

ಮೃದು ವಚನಗಳಿಂದ ಆಕೆಯನ್ನು ಸಂತೈಸುತ್ತಾನೆ. ಸಿಟ್ಟುಗೊಂಡ

ಗೋಪಿಕೆಯರು ಕೃಷ್ಣನನ್ನು ತರಾಟೆಗೆ ತೆಗೆದು ಕೊಳ್ಳುತ್ತಾರೆ. ”ಕೃಷ್ಣಾ,

ವಿರಹದಿಂದ ನಾವು ಕೊಡಗಟ್ಟಲೆ ಕಣ್ಣೀರು ಹರಿಸುವಾಗ, ಒಂದು ಬಿಂದು

ಕಣ್ಣೀರನ್ನೂ ಸುರಿಸದ ರಾಧೆಯನ್ನು ಒಬ್ಬಳನ್ನೇ ಏಕೆ ಸಂತೈಸಿದೆ?

ಇಂಥ ಪಕ್ಷಪಾತ ನಿನಗೆ ತರವೇ?” ಎಂದು ಅವರು ಪ್ರಶ್ನಿಸುತ್ತಾರೆ.

ಆಗ ಶ್ರೀ ಕೃಷ್ಣ,”ನಿಮ್ಮ ವಿರಹಕ್ಕಿಂತ ರಾಧೆಯ ವಿರಹವೇ ಹೆಚ್ಚು.

ಆಕೆಯ ವಿರಹದ ಕಾವಿನಿಂದ ಅವಳ ಕಣ್ಣೀರೆಲ್ಲ ಆವಿಯಾಗಿದೆ.

ನಿಮ್ಮ ವಿರಹದ ಕಾವು ಇನ್ನೂ ಪ್ರಖರವಾಗಿಲ್ಲ.”ಎಂದು ಹೇಳುತ್ತಾನೆ.

ಮೂಲ:ಸಂಗ್ರಹ.

ಕನ್ನಡ ಸೌರಭ.

ಅಧ್ಯಾತ್ಮ ಸೌರಭ.

ಮಾನವ ಜೀವನವೊಂದು ಹೂವಿನ ಹಾರ.

ಒಂದು ತುದಿಯಲ್ಲಿ ಜನನ; ಇನ್ನೊಂದು ತುದಿಯಲ್ಲಿ

ಮರಣ. ನಡುವೆ  ನಾನಾ ರೀತಿಯ ನೋವು ನಲಿವು

ಗಳೆಂಬ ಬಣ್ಣದ ಹೂವುಗಳು. ಇವುಗಳಿಗೆ ಆಧಾರವಾಗಿ

ಒಳಗಡೆ ದಾರ ವೊಂದಿದೆ. ಅದೇ ಅಗೋಚರವಾದ ಬ್ರಹ್ಮ

ಸೂತ್ರ. ಇದೇ ದೇವರು.

೨. ತತ್ತ್ವಮಸಿ ,ಅಯಮಾತ್ಮ ಬ್ರಹ್ಮ ,ಅಹಂ ಬ್ರಹ್ಮಾಸ್ಮಿ ,

ಪ್ರಜ್ನಾನಂ ಬ್ರಹ್ಮ ಎಂಬ ನಾಲ್ಕು ಮಹಾ ವಾಕ್ಯಗಳಲ್ಲಿ

ವೇದಗಳು ಪರಮಾತ್ಮನ ಇರುವಿಕೆಯನ್ನು ಸಾರಿವೆ.

೩. ”ಚಂದ್ರಮಾ ಮನಸೋಜಾತಃ ” ನಮ್ಮ ಮನಸೇ ಚಂದ್ರ.

ಪರಿಪೂರ್ಣವಾದ ಪ್ರೇಮದಿಂದ  ತುಂಬಿದ ದಿನವೇ ಪೌರ್ಣಮಿ.

ರಾಗ,ದ್ವೇಷಗಳೆಂಬುದು ರಾಹು, ಕೇತುಗಳಂತೆ ಮನಸ್ಸನ್ನು

ಪೀಡಿಸುತ್ತವೆ. ಅಂತರಂಗದಲ್ಲಿ ಅಂಧಕಾರ ತುಂಬಿ ಬಾಹ್ಯದಲ್ಲಿ

ಪೌರ್ಣಮಿಯನ್ನು ಆಚರಿಸಿ ಕೊಂಡರೆ ಲಾಭವಿಲ್ಲ. ಅಂತರಂಗದಲ್ಲಿ

ದಿವ್ಯತೆಯ ಜ್ಯೋತಿಯನ್ನು ಬೆಳೆಸಿಕೊಳ್ಳ ಬೇಕು.

”ಸರ್ವಂ ಖಲ್ವಿದಂ ಬ್ರಹ್ಮ ”

ಎಲ್ಲೆಡೆಯೂ ದಿವ್ಯತ್ವವೇ ವ್ಯಾಪಿಸಿದೆ. ಇದರಲ್ಲಿ

ದೇಹಗಳು ವಿವಿಧ ರೀತಿಯ bulb ಗಳು. ಇದರಲ್ಲಿ

ಹರಿಯುತ್ತಿರುವ ದಿವ್ಯತ್ವವೆಂಬ current ಒಂದೇ

ಎಂಬ ಸತ್ಯವನ್ನು ಗುರುತಿಸಬೇಕು.

ಭಕ್ತನ ಭಾವನೆಯೇ ಭಗವಂತ. ಯಾವ ರೂಪದಲ್ಲಿ

ಧ್ಯಾನಿಸಿದರೂ,ಯಾವ ನಾಮದಿಂದ ಕರೆದರೂ ಅವನು

ಓ ಗೊಡುತ್ತಾನೆ.

”ಏಕಂ ಏವ ಅದ್ವಿತೀಯಮ್ ಬ್ರಹ್ಮ ”

ದೇವರು ಒಬ್ಬ. ನಾಮ ಹಲವು.

ಗಾದೆ ಹಾಗೂ ನುಡಿಮುತ್ತುಗಳು.

”ಇರಬಹುದು” ಎನ್ನುವುದೇ ಹಗ್ಗ;

”ಹೋಗಲಿ ಬಿಡು” ಎನ್ನುವುದೇ ನೇಣಿನ ಕುಣಿಕೆ.

-Russian Proverb.

ಆನೆ ಮುಟ್ಟುವ ಕುರುಡರಾಗದಿರೋಣ.

ದೊರೆ ಕಿವಿ ಮಂತ್ರಿ ಬಾಯಲ್ಲಿ.

ಸಾವು ಬದುಕಿನ ಲೆಕ್ಕ ಇಡುವವರ ಯಮ ನೋಡಿ ನಕ್ಕ.

ಈ ಬದುಕು ಒಂದು ಹೂವಿನ ಹಾಗೆ. ನಗುವೇ ಆ ಸುಮದ

ಪರಿಮಳವು.

ದುಃಖದಲ್ಲಿ ಸಹಿಸಿ ಕೊಳ್ಳುವುದೇ ವಿವೇಕ. ಹೋರಾಡಿ

ಕುಸಿಯದಿರುವುದೇ  ಶೌರ್ಯ.

ಕಪಟವಿಲ್ಲದ ನಾಸ್ತಿಕ, ವಂಚಕ ಆಸ್ತಿಕನಿಗಿಂತ ಉತ್ತಮನು.

–ಸ್ವಾಮಿ ವಿವೇಕಾನಂದ.

ನಾವು ಅನುಸರಿಸ ಬೇಕಾದ್ದು ಸಂತರ ಚಾರಿತ್ರ್ಯವನ್ನೇ ಹೊರತು

ಚರಿತ್ರೆಯನ್ನಲ್ಲ.

ಬಾಳಿನ ಸೆಲೆಗೆ ನೂರೊಂದು ನೆಲೆ.

ಸಾವು ತರೋ ಸತ್ಯಕ್ಕಿಂತ ಬದುಕು ಕೊಡೋ ಸುಳ್ಳೇ ವಾಸಿ.

ಪ್ರೀತಿ ಎಂಬುದು ಬಾಳಿನ ಕಣ್ಣು ಗಳಂತೆಯೇ; ಅದನ್ನು ಕಳೆದು

ಕೊಂಡದ್ದೇ ಆದರೆ ಬದುಕು ಕುರುಡಾಗುತ್ತದೆ.

ಕಷ್ಟಗಳನ್ನು  ಎದುರಿಸುವಲ್ಲಿ ಒಂದು ನಿಟ್ಟುಸಿರಿಗಿಂತ

ಒಂದು ಮುಗುಳ್ನಗೆಯಲ್ಲಿ   ಪ್ರಚಂಡ ಶಕ್ತಿ ಇದೆ.

ಬೆಂಕಿಗೆ ದಹನ ಶಕ್ತಿ, ಮಂಜಿಗೆ ತಂಪು ಹೇಗೆ ಮುಖ್ಯವೋ

ಮಾನವನಿಗೆ ಪ್ರೇಮವೂ ಅಷ್ಟೇ ಮುಖ್ಯ.

ಮೂಲ:ಸಂಗ್ರಹ.

Diamond.

A diamond symbolizes love and everlasting beauty.

Radiance is at the heart of every diamond. Shape

and facets provide a diamond’s ability to reflect light.

A well-cut diamond maximizes the amount of light

that enters and exits from the top of the stone.

The unit of weight for diamond is carat. All diamonds

are unique with their own individual marks. The visibility

number and size of these marks determine a diamond’s

clarity, grade and value. A diamond’s colour usually refers

to the presence or absence of colour in a white diamond.

The less colour in the diamond, higher the quality.

X 3 diamonds are the certified diamonds by the  International

Gemological Institute  to have excellent polish, excellent

symmetry and excellent cut to produce brilliant sparkle

and shine.

The four ”c”s of diamonds are-caratage, cut, clarity and colour.

Diamond consists of pure carbon and it’s molecular structure

bond that makes it very durable and hard to break. In diamond,

each molecule is connected to 4 others at equal angles in space.

All bonds are of the same strength and there are no weak points.

Hope Diamond is deep blue diamond   and housed in the Smithsonian

National History  Museum in Washington D.C.

Kohinoor diamond is set into the Crown of Queen Elizabeth and

is on display at  the Tower of London.

Source:Collection.

Do you know?

1.An armstrong number is one where the sum of  the

cube of each digit is equal to the number itself.

For eg: consider 153. here the cube of 1=i; cube of 5=125;

and cube of 3=27. the sum of these cubes is 1+125+27=153.

Some other armstrong  numbers are 370,371,407.

2.Reiki(Japanese word)=Universal life giving energy, universal

unconditional love and pure heart energy.

5 principles of Reiki are-Just for today, do not anger.

Do not worry.

Be filled with gratitude.

Devote yourself to your work.

Be kind to people.

Reiki heals diseases, amplifies innate abilities, balances the spirit,

and makes the body healthy.

3.Using digits 1to 9 in ascending order and no more than 3 standard

arithmetic signs(+, x,minus and divide) find an expression

that equals 100.

For eg:123–45–67+89=100(standard signs used are plus and minus)

1+(2×3)–4+(56/7)+89=100(standard signs used are plus, minus and division)

4.Hair test can map movements of a person and trace his location.

You are what you eat and drink and that is recorded in your hair.

Variation in hydrogen and oxygen isotopes level or ratio in a person’s

hair  is due to variations in local drinking water. The study also helps

doctors to trace dietary disease.

5.The longest reigning monarch in history was Pepi II who ruled Egypt

for 90 years.(2566BC to 2476BC) The second longest was Francis

Louis XIV, who ruled for 72 years.(1643AD to 1715AD)

6.Author of  ”American Gandhi”–Bernie Meyer is a real life  Gandhi.

He looks like him and follows his ideals. Gandhi’s greatness was said

to be his simplicity and Meyer has it. A Roman  Catholic Priest, Meyer

finds Gandhian teachings similar to that of Jesus.

7.Hagiography–Hagios means holy in Greek. Lives of Christian saints

were compiled and used as moral instructions. Such a biography of

a saint is called a hagiography.

8.T W O X T W O=THREE.(count 5 letters)

1 3 8   X 1 3 8=19044.(count 5 digits)

(letter stands for digits)

9.The Great Wall of China and the dykes in the Netherlands were

the only man-made structures visible from space.

10.Animals’ hearing range starts below 20 hertz and so they can

catch frequency of the seismic disturbances and hence manage

to save themselves. But humans can’t hear anything below 20hertz.

Source:Collection.

Spiritual Corner.

Uncertainty.

The world is of change.Self is of no change.

You have to rely on no-change (Self) and accept the change.(World)

If you are certain that everything is uncertain, then, you are liberated.

Uncertainty about matter, brings certainty about the conciousness.

Certainty about the relative world, creates dullness.

uncertainty about the Self,  creates fear.

Acting in uncertainty  makes life a game, a challenge.

Wallowing in uncertainty is  letting go.

-Sri Sri Ravishankar.

Who am I ?

If someone asks ”Who are you ?’ our response would be ,

”Oh, my name is so and so  and I’m an Indian or I am the

President of this company”etc. All these answers refer to

your self-image or to an object outside your self:-a name,

a place, a circumstance. This process  of identifying with

your self image or the objects of your experience is called

object-referral.

You may identify with your body and say,”this is my body.

This bag of flesh and bones is who I am.” But the body you

call yours, is really the raw material of this universe:-recycled

earth,water and air; and so is the tree  outside your window.

So you can assume  you are physically located in a body, you

are aware of.

No scientific  experiment has ever found a centre of the

skin-encapsulated awareness in any location of the body,

in space or time.

-Deepak Chopra.

Existence.

Life, at the level of senses, represents existence at low level.

The force of Maya(illusion) holds man bound to this level of

existence, where he oscillates  between joy and sorrow, pleasure

and pain and the entire host of the ”pairs of opposites.”

The aim of Yoga is to master the senses so as to be able to

steer them at will from or towards their objects.

Source:Collection.

ಶ್ರೀ ಲಕ್ಷ್ಮಿ.

laxmi41123

”ಲಕ್ಷಯತಿ-ಪಶ್ಯತಿ ಭಕ್ತ ಜನಾನ್ ಇತಿ ಲಕ್ಷ್ಮೀ”

ಇದು ಲಕ್ಷ್ಮೀ ಶಬ್ದದ ವ್ಯುತ್ಪತ್ತಿ.

ಉಪಾಸಕರನ್ನು ಕೃಪಾ ಕಟಾಕ್ಷದಿಂದ ವೀಕ್ಷಿಸುವವಳೇ ಲಕ್ಷ್ಮೀ.

ಶ್ರೀ ಎಂಬುದು ಲಕ್ಷ್ಮಿಯ ನಾಮಾಂತರ. ಪ್ರಭೆ,ಶೋಭೆ,ಕೀರ್ತಿ,

ಕಾಂತಿ,ವಿಭೂತಿ, ಮತಿ,ವರ್ಚಸ್,ತೇಜಸ್,ಸೌಂದರ್ಯ,ವೃದ್ಧಿ,

ಸಿದ್ಧಿ,ಸೌಭಾಗ್ಯ,ಕಮಲ,ಬಿಲ್ವ ವೃಕ್ಷ ಮುಂತಾದುವು ”ಶ್ರೀ ”ಶಬ್ದ

ಕ್ಕಿರುವ ಅರ್ಥಗಳು. ಸಂಪತ್ತೆಂಬುದು ಸಾಮಾನ್ಯ ಅರ್ಥವಾದರೂ

ಐಶ್ವರ್ಯವೆಂಬುದು  ಪ್ರಧಾನ ಅರ್ಥ.

”ಈಶ್ವರಸ್ಯಭಾವಃ ಐಶ್ವರ್ಯಂ”  ಪರಮಾತ್ಮನ ಅನುಗ್ರಹಕಾರಕ

ವಾದ ಗುಣ ವಿಶೇಷವೇ ”ಶ್ರೀ”(ಬಂಗಾರ ಮತ್ತು ಸಂಪತ್ತು ಆಕೆಯ

ಅನುಗ್ರಹವೆಂಬುದು ಗ್ರಾಹ್ಯ )

ಶ್ರೀ ಸೂಕ್ತದ ಆಶಯ-”ಹಿರಣ್ಯ-ಮಹಾಲಕ್ಷ್ಮಿ”

(ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮಿಯು ನಮಗೆಲ್ಲರಿಗೂ

ಹಿರಣ್ಯವನ್ನು ಸದಾ ಕೊಡಲಿ )

ಶ್ರೀ ಸೂಕ್ತವು ಶ್ರೀಮನ್ನಾರಾಯಣನಿಂದ ಸದಾಕಾಲ

ಅನಪಗಾಮಿನಿಯಾದ (ಜೊತೆಯಲ್ಲೇ ಇರುವ )ಶ್ರೀ

ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು ವರ್ಣಿಸುತ್ತದೆ.

ಹಿರಣ್ಯದ ರಥ ಹಾಗೂ ಚಿನ್ನದ ಆಭರಣಗಳಿಂದ ಶೃಂಗರಿಸಲ್ಪಟ್ಟ

ಗಜ,ತುರಗಾದಿಗಳನ್ನು ಹೊಂದಿರುವ ಹಾಗೂ ಹಿರಣ್ಯದ ಆಭರಣ

ಗಳನ್ನು ಧರಿಸಿರುವ ”ಶ್ರೀ ಲಕ್ಷ್ಮೀ” ಹಿರಣ್ಯದೊಳಗೆ ಇರುವವಳು

ಎಂಬ ಚಿಂತನೆಯು, ಹಿರಣ್ಯಕ್ಕೂ ಲಕ್ಷ್ಮಿಗೂ ಇರುವ ಅವಿನಾಭಾವ

ಸಂಬಂಧವನ್ನು ವರ್ಣಿಸುತ್ತದೆ.

ಲಕ್ಷ್ಮೀ ಸ್ವರೂಪವಾದ ಹಿರಣ್ಯವನ್ನು ಧರಿಸಿದಾಗ ಹಿರಣ್ಯದ ತೇಜಸ್ಸನ್ನು

ನಾವು ಪಡೆಯುತ್ತೇವೆ. ಈ ಆಕರ್ಷಕ ಬಂಗಾರವು  ವ್ಯಕ್ತಿತ್ವಕ್ಕೆ ಮೆರುಗನ್ನು

ನೀಡುತ್ತದೆ.

ಲಕ್ಷ್ಮೀ  ಪವಿತ್ರ, ಪರಿಶುದ್ಧ,ಆಕರ್ಷಣೀಯವಾದ   ಬಂಗಾರದಲ್ಲಿ ಸನ್ನಿಹಿತಳು.

ಲಕ್ಷ್ಮೀ ಚಿನ್ನಕ್ಕೆ ಅಧಿದೇವತೆ. ಪರಿಶುದ್ಧ ಬಂಗಾರ ಧಾರಣೆಯಿಂದ ಪರಿಪಕ್ವವಾದ

ಮನಃ ಸ್ಥಿತಿ. ಆ ಮೂಲಕ ಶಾಂತ ಬದುಕು.

”ನಮಸ್ತೇಸ್ತು ಮಹಾಮಾಯೆ ಶ್ರೀ ಪೀಟೇ ಸುರ ಪೂಜಿತೆ

ಶಂಖ ಚಕ್ರ ಗದಾ ಪದ್ಮ ಹಸ್ತೇ ಮಹಾ ಲಕ್ಷ್ಮೈ ನಮೋ ಸ್ತುತೇ ”

ವಂದೇ ಲಕ್ಷ್ಮೀಂ ಪರಶಿವಮಯೀಂ ಶುದ್ಧ ಜಾಂಬೂನದಾಭಾಂ

ತೇಜೋ ರೂಪಾಂ ಕನಕವಸನಾಮ್ ಸರ್ವ ಭೂಷೋಜ್ವಲಾಂಗೀಂ

ಬೀಜಾಪೂರಂ ಕನಕಕಲಶಂ ಹೇಮಪದ್ಮಂ ದಧಾನಂ

ಆದ್ಯಂ ಶಕ್ತಿಂ ಸಕಲಜನನೀಂ ವಿಷ್ಣು ವಾಮಾಂಕ ಸಂಸ್ಥಾಮ್ ॥

ಯಾ ರಕ್ತಾಂಬುಜ ವಾಸಿನೀ ವಿಲಸಿನೀ

ಚಂಡಾಂಶು ತೆಜಸ್ವಿನೀ ಆರಕ್ತಾ ರುಧಿರಾಂಬರ

ಹರಿಸಖಿ ಯಾ ಶ್ರೀ ಮನೊಹ್ಲಾದಿನೀ

ಯಾ ರತ್ನಾಕರ ಮಂಥನಾತ್ ಪ್ರಘಟಿತಾ

ವಿಷ್ಣೋಶ್ಚಯಾ ಗೇಹಿನೀ ಸಾಮಾಂಪಾತು

ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾಲಯಾ

ಮೂಲ:ಸಂಗ್ರಹ.