ಕನ್ನಡ ಸೌರಭ.

ಅದ್ಯಾತ್ಮ ಸಂಪದ.

ದೈವ ಎನ್ನುವುದು ತರ್ಕದಿಂದ ಸಾಧಿಸ ಬಹುದಾದದ್ದಲ್ಲ.

ಶ್ರದ್ಧೆ, ಧ್ಯಾನ,ತಪಸ್ಸುಗಳಿಂದ ಅನುಭವಕ್ಕೆ ತಂದುಕೊಳ್ಳಬೇಕಾದ

ಒಂದು ಭಾವಸತ್ಯ. ಒಂದು ವಸ್ತುವನ್ನುಅದಕ್ಕೆ ಹೊಂದದ

ಮಾಪನದಿಂದ ಅಳೆಯ ಹೊರಡುವುದು ಎಂದರೆ ಮೀನು

ಹಿಡಿಯುವ ಬಲೆಯಿಂದ ನೀರು ಎತ್ತಲು ಹೋದಂತೆ.ಭೌತ

ಜಗತ್ತಿಗೂ ಜೀವ ಜಗತ್ತಿಗೂ ನಡುವಿನ ಸಂಬಂಧ ಎಷ್ಟು ನಿಗೂಢ!

ಲೋಕದಲ್ಲಿ ಗಾಳಿ,ನೀರು, ಬೆಳಕು,ಶಾಖ ಇತ್ಯಾದಿ ಗಳಿವೆ.

ಇವುಗಳೆಲ್ಲ ಜೀವ ಪೋಷಕವಾದ ವಸ್ತುಗಳು.ಅವುಗಳನ್ನು

ಬಳಸಲು ಬೇಕಾಗುವ ಅಂಗಾಂಗಗಳು ಮನುಷ್ಯನಲ್ಲಿ ಹೇಳಿ

ಮಾಡಿಸಿದಂತಿವೆ. ಲೋಕದ ವಸ್ತುಗಳನ್ನು ಕಾಣಲು ಕಣ್ಣು,ಶಬ್ದ

ಕೇಳಲು ಕಿವಿ, ಗಾಳಿ ಸೇವಿಸಲು ಮೂಗು,ಶ್ವಾಸ ಕೋಶ ,ಆಹಾರ

ತಿನ್ನಲು ನಾಲಿಗೆ, ರುಚಿ ಗ್ರಂಥಿ ಇವೆ. ಹೀಗೆ ಜಡ-ಜೀವ

ಗಳ ಮಧ್ಯೆ ಏರ್ಪಟ್ಟಿರುವ ಸಂಬಂಧವೂ ಆಕಸ್ಮಿಕವೇ ?

ನಮ್ಮ ಬುದ್ಧಿ ತರ್ಕಗಳಿಗೆ ಗ್ರಹಿಸಲು ಕಷ್ಟ ವಾಗುವ ಈ

ಅರ್ಥವತ್ತಾದ ವ್ಯೂಹ ಯಾವ ಉದ್ದೇಶವನ್ನೂಧ್ವನಿಸು

ವುದಿಲ್ಲವೇ ?

-N.S. ಲಕ್ಷ್ಮೀ ನಾರಾಯಣ ಭಟ್ಟ.

ನಿಮಗೆ ಗೊತ್ತೇ ?

ಬ್ರಹ್ಮನಿಗೆ ಅಜ, ಕವಿ,ವೇದಗರ್ಭ ಎಂದು ಹೆಸರುಗಳಿವೆ.

ರಾಮಾಯಣದ ಪಂಪಾ ನದಿಯೆಂದರೆ ಕರ್ನಾಟಕದ

ತುಂಗಾ-ಭದ್ರಾ ನದಿ. ಅದರ ತೀರದಲ್ಲಿ ಕಿಷ್ಕಿಂಧೆಯೂ

ಋಷ್ಯಮೂಕ ಪರ್ವತವೂ ಇವೆ.

ಆಚಾರ್ಯ ರಜನೀಶ್ ಜನ್ಮ ಸ್ಥಳ -ಮಧ್ಯ ಪ್ರದೇಶದ ಕುಛ್ ವಾಡ.

ಕೃತಿ ———————————–ರಚನಾಕಾರ

ತೊರವೆ ರಾಮಾಯಣ —————–ನರಹರಿ(ಕುಮಾರ ವಾಲ್ಮೀಕಿ)

೧೫೦೦ ನೇ ಇಸವಿ- ಇದರಲ್ಲಿ ೫,೦೦೦ ಭಾಮಿನಿ ಷಟ್ಪದಿಗಳಿವೆ

ಕೌಶಿಕ ರಾಮಾಯಣ ——————-ವೆಂಕಮಾತ್ಯ.

ಪಂಪ ರಾಮಾಯಣ(ರಾಮಚಂದ್ರ ಚರಿತ ) —–ನಾಗಚಂದ್ರ (ಅಭಿನವ ಪಂಪ )

ರಘುವಂಶ ——————————ಕಾಳಿದಾಸ.

ಚಂಪೂ ರಾಮಾಯಣ ——————-ಭೋಜರಾಜ.

ರಾಮಾಯಣ ಮಂಜರಿ ———————–ಕ್ಷೇಮೇಂದ್ರ.

ಕಂಬ ರಾಮಾಯಣ ———————ಕಂಬರ್.

ರಾಮ ಚರಿತ ಮಾನಸ ——————–ತುಳಸೀದಾಸ.

ರಾಮಾಯಣ ———————–ಮಂದಾರ ಕೇಶವ ಭಟ್ಟ (ತುಳು)

ರಾಮಾಯಣ ————————ಕೃತ್ತಿವಾಸ (ಬೆಂಗಾಲಿ)

ರಾಮಾಯಣ ———————ರಂಗನಾಥ (ತೆಲುಗು)

ಭಾವಾರ್ಥ ರಾಮಾಯಣ ——–ಏಕನಾಥ (ಮರಾಠಿ)

ಜಿನ ರಾಮಾಯಣ ———–ಚಂದ್ರ ಸಾಗರ ವರ್ಣಿ.

ಪದ್ಮ ಪುರಾಣ ————–ರವಿ ಶೇಷಣ(ಜೈನ ಕವಿ )

ಪಲುಮ (=ಪದ್ಮ )ಚರಿತ (ಪ್ರಾಕೃತ ಭಾಷೆಯಲ್ಲಿದೆ) —————-ವಿಮಲ ಸೂರಿ.

ಸಂಗೀತ ಮಕರಂದ ———————————————–ನಾರದ.

ನುಡಿ ಮುತ್ತು.

ಮೌನದ ಕಿಮ್ಮತ್ತು ಮಾತಿನ ಮೌಲ್ಯಕ್ಕಿಂತ ಹೆಚ್ಚು.

ಲೋಕದಲ್ಲಿದ್ದಾಗ ಎಳನೀರು;

ಲೋಕ ಬಿಟ್ಟಾಗ ಎಳ್ಳು ನೀರು.

ರಾಜ ಮಾರ್ಗವು ಚೆನ್ನಾಗಿಯೇ ಇದ್ದರೂ ಜನರು

ಅಡ್ಡ ದಾರಿಯನ್ನೇ ಅಪೇಕ್ಷಿಸುತ್ತಾರೆ. -ಗಯಟೆ.

ಅನ್ನವಿಲ್ಲದ ಮಂದಿ ಬಡವರೇನಲ್ಲ;

ಚಿನ್ನವಿದ್ದವರೆಲ್ಲ ಸಿರಿವಂತರೇನಲ್ಲ.

-K. S. ನರಸಿಂಹ ಸ್ವಾಮಿ.

ತಮ್ಮನ್ನು ತಿದ್ದಿ ಕೊಂಡವರು ಲೋಕವನ್ನೂ ತಿದ್ದಲು

ಯೋಗ್ಯರಾಗಿರುತ್ತಾರೆ.

ಸ್ವಾಮಿ ವಿವೇಕಾನಂದ.

ಕವಿತೆ.

ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ?

ಸಾಯೋತನಕ ಸಂಸಾರ್ ದೊಳ್ಗೆ ಗುಂಡಾಗುಂಡಿ;

ಹೇರಿ ಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ;

ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ಗುಂಡಿ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s