ಗಾದೆಗಳು.

ಅರಸ ಅಂಜುಬುರುಕ;ಅಮಾತ್ಯ ಅಳುಮುಂಜಿ.

ಅಗ್ಗದ ಮಾಲು,ಮುಗ್ಗಿದ ಜೋಳ.

ಅಜ್ಜ ಸತ್ತ ಆರು ತಿಂಗಳ ಮೇಲೆ   ಮೊಮ್ಮಗನ ಕಣ್ಣಲ್ಲಿ

ನೀರು ಬಂತಂತೆ.

ಅರುವತ್ತಕ್ಕೆ ಕಾಯಿಲೆ ಬರಬಾರದು;ಇಪ್ಪತ್ತಕ್ಕೆ ಯಜಮಾನಿಕೆ

ಸಿಗಬಾರದು.

ಆನೆಗೆ ಆನೆ ಕಳಕೊಂಡು ಬಾಲಕ್ಕಾಗಿ ಬಡಿದಾಡಿದರು

ಎಂಬಂತೆ.

ಆನೆಯಿಂದ ನಾವು ತಪ್ಪಿಸಿ ಕೊಳ್ಳಬಹುದು;

ಸೊಳ್ಳೆಯಿಂದ ತಪ್ಪಿಸಿಕೊಳ್ಳಲಾರೆವು.

ಅಂಗಾಲಿಗೆ ಹೇಸಿಗೆಯಿಲ್ಲ;ಕರುಳಿಗೆ ನಾಚಿಕೆಯಿಲ್ಲ.

ಕತ್ತಲಲ್ಲಿ ಕರೀಬೆಕ್ಕು ಹುಡುಕಿದಂತೆ.

ಕಾಶಿಗೆ ಹೋಗಿ ಕೊಕ್ಕರೆ ಗರಿ ತಂದಂತೆ.

ಕಾಸೂ ದಂಡ ;ತಲೆಯೂ ಬೋಳು.

ಕುರುಡು ನಾಯಿ ಸಂತೆಗೆ ಬಂದಂತೆ.

ಕೂಡಿಡುವವನು ಕೋಣ;ಅನುಭವಿಸುವವನು ಜಾಣ.

ಕೋಪ ಅರಿಯದವನು ಗಂಡಲ್ಲ;ತಾಳ್ಮೆಇಲ್ಲದವಳು ಹೆಣ್ಣಲ್ಲ.

ಬರಗಾಲದಲ್ಲಿ ಅಧಿಕ ಮಾಸ ಬಂದಂತೆ.

ಬಾಯಲ್ಲಿ ಬೆಣ್ಣೆ; ಕಂಕುಳಲ್ಲಿ ದೊಣ್ಣೆ.

ಮನೇನ ಕಾಯಲಿಕ್ಕೆ ಕಳ್ಳನನ್ನು ಬಿಟ್ಟಂತೆ.

ಮಾತು ಹೊರೋನು ಮೂಟೆ ಹೊರಲಾರ.

ಮುರಿದು ಹೋಗುವ ಬದಲಿಗೆ ಬಾಗುವುದೇ ಲೇಸು.

ಮುಂಗೋಪಿಗಳಿಗೆ ಬುದ್ಧಿ ಮಂದ.

ಸ್ತ್ರೀ ಮೂಲಂ ಜಗತ್ಸರ್ವಂ .

ಸಹವಾಸದಿಂದ ಸನ್ಯಾಸಿ ಕೆಟ್ಟ.

ಸಮುದ್ರರಾಜನ ಜೊತೆ ನೆಂಟಸ್ತನ;ನೀರಿಗೆ ಬಡತನ.

ಸಂತೆಗಾರು ದೊಡ್ಡವನು?

ಸಿಂಹವನ್ನು ಕೆಣಕುವುದೇ ನಾಯಿಗಳ ಬಳಗ .

ಹಾಲಿಲ್ಲ,ಬಟ್ಟಲೆಲ್ಲಾ ಗುಟುಕು ಎಂದಂತೆ.

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ.

ಹೊಟ್ಟೆಯಲ್ಲಿರುವಾಗಲೇ ಪುಟ್ಟ ಎಂದು ಹೆಸರಿಟ್ಟಂತೆ.

ಹೊಸಮನೆಗೆ ಕಾಗೆ ಹೊಕ್ಕಂತೆ.

ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s