ಕನ್ನಡ ಸೌರಭ .

ಕರ್ನಾಟಕ =ಕರು ನಾಡು . (ಎತ್ತರವಾದ ಭೂಮಿ )

ಕರ್ಣಯೋ ಅಟತಿ ಇತಿ ಕರ್ನಾಃ (ಎಲ್ಲರ ಕಿವಿಗಳಲ್ಲಿ

ನಲಿದಾಡುವ,ಹಿರಿಮೆ ಗರಿಮೆಯುಳ್ಳ ಕೀರ್ತಿಯುತ ಸ್ಥಳ .

”ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿಂ,ಮಳೆಗಳಿಂ,ವನಸ್ಥಳಗಳಿಂ

ಕೊಳಗಳಿಂ,ರತ್ನದ ಅರೆಗಳಿಂ,ಕೆರೆಗಳಿಂ,ಗಿರಿಗಳಿಂ,

ಕರಿಗಳಿಂ,ಶುಕಗಳಿಂ,ಪಿಕಗಳಿಂ, ಆ ದೇಶಂ ಒಪ್ಪಿರ್ದುದು”

ಎಂದು ಕವಿ ವಿರೂಪಾಕ್ಷ ಕರ್ನಾಟಕವನ್ನು ವರ್ಣಿಸಿದ್ದಾನೆ.

ಈ ನಾಡಿನಲ್ಲಿ ಹೂವಿನಲ್ಲಿ ಪರಿಮಳ,ಹಾಲಿನಲ್ಲಿ ರುಚಿ,

ರತ್ನದಲ್ಲಿ ಕಾಂತಿ,ಸಂಗೀತದಲ್ಲಿ ಸಂತೋಷ,ಬೆಳದಿಂಗಳಲ್ಲಿ

ತಂಪು,ಶಬ್ದದಲ್ಲಿ ಅರ್ಥ,ಪ್ರಕೃತಿಯಲ್ಲಿ ಚೆಲುವು,ವಸಂತದಲ್ಲಿ

ಉತ್ಸಾಹ ಬೆರೆತಿರುವಂತೆ ಕರ್ನಾಟಕ-ಸೌಂದರ್ಯ ಈ ಎರಡೂ

ಶಬ್ದಗಳಲ್ಲೂ ಅವಿನಾಭಾವವಾದ ಬಾಂಧವ್ಯ ಅಡಗಿದೆ”

ಎಂದು ಕವಿ ವರ್ಣಿಸಿದ್ದಾನೆ .

ಶ್ರೀರಾಮನಿಗೆ ಪ್ರೀತಿಯಿಂದ ಫಲಗಳನ್ನಿತ್ತು ಸತ್ಕರಿಸಿದ ಶಬರಿ

ಕನ್ನಡಿತಿ.ರಾಮಾಯಣದ ಮಹಾವೀರ ಆಂಜನೇಯ ಕನ್ನಡಿಗ .

ಪಾಂಡವರಿಗೆ ಅಜ್ಞಾತವಾಸ ಸಮಯದಲ್ಲಿ ಆಶ್ರಯವಿತ್ತ

ವಿರಾಟ ರಾಜ ಹಾನಗಲ್ಲಿನವ. ಶ್ರೀ ರಾಮನಿಗೆ ಬೆಂಬಲ

ವಿತ್ತವರು ಕಿಷ್ಕಿಂಧೆಯ ವಾನರರು. ಇವರೆಲ್ಲರೂ ಕನ್ನಡಿಗರು.

ಆರ್ಯ-ದ್ರಾವಿಡರ ಪ್ರಥಮ ಸಮಾಗಮ ಆದದ್ದು ಕರ್ನಾಟಕದಲ್ಲಿ .

ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ

ಕಬ್ಬಿನಂದದಿ,ಅಳಿದ ಉಷ್ಣದ ಹಾಲಿನಂದದಿ ಲಲಿತವೂ, ಮೃದು

ಮಧುರವೂ ಆಗಿದೆ.

ಹೂಗಳ ಕಂಪು, ಮಾರುತನ ತಂಪು ,ಗಿಡಗಳ ಗುಂಪು,ಕೋಕಿಲಾ

ರಾಗದ ಅಲಂಪು, ನೀರೆಯರ ಪೆಂಪು,ವನಂಗಳ ಸೊಂಪು, ಭೋಗದ

ಗೊತ್ತು ,ಯೋಗಿಗಳ ಬಿತ್ತು,ಭಾರತಾಂಬೆಯ ಮೂಗಿನ ನತ್ತು ,ಕನ್ನಡ

ನಾಡಿದು ವೈಭವಾನ್ವಿತಂ .

ಕನ್ನಡಿಗರ್ ಕುರಿತೋದದೆಯುಂ,ಕಾವ್ಯ ಪ್ರಯೋಗ ಪರಿಣತ ಮತಿ

ಗಳ್ .

ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮಚಂದ್ರನು ಸುಗ್ರೀವ

ನೊಂದಿಗೆ ಮಿತ್ರತ್ವ ಬೆಳೆಸಿದುದು ಇಲ್ಲಿನ ಕಿಷ್ಕಿಂಧೆ ಯಲ್ಲಿಯೇ .

ಹನುಮನುದಿಸಿದ ನಾಡಿದು. ವೀರಶೈವ ಪ್ರವರ್ತಕ ಬಸವಣ್ಣ,

ತ್ರಿಪದಿಗಳ ಪಿತಾಮಹ ಸರ್ವಜ್ಞ,ಜೈನ ಧರ್ಮದ ಪ್ರಮುಖರಾದ

ಅಕ್ಕ ಮಹಾದೇವಿ,ಅಲ್ಲಮ,ದಾಸ ವರೇಣ್ಯರಾದ ಕನಕ,ಪುರಂದರ,

ವಿಜಯದಾಸರಿಗೆ ಜನ್ಮ ನೀಡಿದ ಪುಣ್ಯನೆಲ ಕರ್ನಾಟಕ.

ಆರು ಋತುಗಳು. –

ವಸಂತ ಋತು —ಚೈತ್ರ ,ವೈಶಾಖ.

ಗ್ರೀಷ್ಮ ಋತು —-ಜ್ಯೇಷ್ಠ ,ಆಷಾಢ .

ವರ್ಷ ಋತು —–ಶ್ರಾವಣ,ಭಾದ್ರಪದ .

ಶರದೃತು ——–ಆಶ್ವೀಜ,ಕಾರ್ತಿಕ.

ಹೇಮಂತ ಋತು –ಮಾರ್ಗಶಿರ,ಪುಷ್ಯ .

ಶಿಶಿರ ಋತು——-ಮಾಘ,ಫಾಲ್ಗುಣ.
ಆಧ್ಯಾತ್ಮ ಸೌರಭ .

೧)ಜನರು ತಾವಾಗಿಯೇ ಬದಲಾಗುವ ತನಕ ದೇವರು

ಜನರ ಗುರಿಯನ್ನು ಬದಲಾಯಿಸುವುದಿಲ್ಲ.

-ಕುರಾನ್ .

೨)ಶ್ರೀ ಕೃಷ್ಣನ ಕೈಯಲ್ಲಿ ಕಡೆಗೋಲು ಮತ್ತು ಹಗ್ಗ ಇವೆ.

ಏತಕ್ಕಾಗಿ ? ಶಾಸ್ತ್ರ ಗಳ ಮತ್ತು ಧರ್ಮದ ಬಗ್ಗೆ ವಿಚಾರ

ಮಂಥನವಾಗಲಿ. ಅದರಿಂದ ಹೊರ ಬರುವ ನವನೀತ

ಸಮಾಜದ ಹಿತಕ್ಕಾಗಿ ದೊರೆಯಲಿ ಎಂದೇ ಅದರ ಸಂಕೇತ.

೩) ವೇದಗಳು ಪ್ರಭು ಸಮ್ಮಿತ. ಆದುದರಿಂದ ಆಜ್ಞೆ ಮಾಡುತ್ತವೆ.

ಶಾಸ್ತ್ರಗಳು ಸುಹೃತ್ ಸಮ್ಮಿತ. ಸ್ನೇಹಿತನು ಹಿತವನ್ನು

ಉಪದೇಶಿಸುವಂತೆ, ವಿಧಿ,ನಿಷೇಧಗಳಿಂದ ಕೂಡಿದ ವಾಕ್ಯ

ಗಳಿಂದ ಬೆಳಗುತ್ತಿವೆ. ಇವುಗಳಿಗೆ ಧರ್ಮ ಶಾಸ್ತ್ರ ಗಳೆಂದು

ಹೆಸರು. ಇವುಗಳಲ್ಲಿ ಮನು ಸ್ಮೃತಿ ಅಥವಾ ಮಾನವಧರ್ಮ

ಶಾಸ್ತ್ರ ಮುಖ್ಯ ವಾದುವು.

ಲೋಕೋಕ್ತಿ –

೧)ಹೆಣ್ಣಿನಿಂದ ರಾವಣ ಕೆಟ್ಟ;ಮಣ್ಣಿನಿಂದ ಕೌರವ ಕೆಟ್ಟ.

೨)ಹೆಣ್ಣನ್ನು ದೂರದಿಂದ ತರಬೇಕು;ಹಸುವನ್ನು ಹತ್ತಿರ

ದಿಂದ ತರಬೇಕು.

೩)ಅತ್ತೆ ಆಪ್ತಳಲ್ಲ;ಶ್ಯಾನುಭೋಗ ಸ್ನೇಹಿತ ನಲ್ಲ.

೩)ಸೂರ್ಯನ ಬಳಿ ಕತ್ತಲೆಯ ಕೀಟಲೆ ನಡೆದೀತೆ?

೪)ಸಾಯುವ ಕುದುರೆಗೆ ಹುಲ್ಲು ತಿನ್ನಿಸಲು ಕಷ್ಟ ಪಡುವಂತೆ.

೫)ಹುತ್ತದಲ್ಲಿ ಅಡಗಿರುವ ಜಿರಲೆಗಳು ಯಾವಾಗಲೂ ಬಾಯಲ್ಲಿ

ಮಣ್ಣನ್ನು ಹಿಡಿದಿದ್ದರೂ ಅದನ್ನು ತಿನ್ನವು.

೬)ಕಾಳಿಂಗ ಸರ್ಪವಿರುವ ಪೆಟ್ಟಿಗೆಯೊಳಗೆ ಕಪ್ಪೆ ಹೊಕ್ಕಂತೆ.

೭)ಗುಲಗುಂಜಿಯ ಮಾಲೆಯನ್ನು ಮಾಣಿಕ್ಯದ ಸರವೆಂದು

ತೊಟ್ಟು ಕೊಳ್ಳುವಂತೆ.

೮)ಮಾತು ಆಡಿದರೆ ಚುಟುಕಾಗಿ,ಚುರುಕಾಗಿ ಆಡಬೇಕು.

೯)ಗಡಿಯಾರಕ್ಕೆ ನೀಡುವ ಪ್ರಾಧಾನ್ಯ,ಸಮಯಕ್ಕೆ ನೀಡುತ್ತಿಲ್ಲ

ನಾವು.

೧೦)ವ್ಯಕ್ತಿಯ ಜೀವನದಲ್ಲಿ ಘಾಯಗಳು ಸಾಮಾನ್ಯ;ಜೀವನವೇ

ಘಾಯ ಅಂತ ಅನ್ನಿಸಿ ಕೊಂಡರೆ?

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s